Jagannath Swamy: ಟಿಕೆಟ್ ಪಡೆದು ಟ್ರೈನ್​ನಲ್ಲಿ ಜರ್ನಿ ಮಾಡಿದ ‘ಜಗನ್ನಾಥ ಸ್ವಾಮಿ’! ಭಕ್ತನ ಮನೆಗೆ ದೇವರ ಸ್ಪೆಷಲ್ ಪಯಣ | ಜ್ಯೋತಿಷ್ಯ | ACTPnews

News18


Last Updated:

ರಥಯಾತ್ರೆಗೆ ಅಂತಲೇ ಸ್ಪೆಷಲ್ ಆಗಿ ರೆಡಿ ಮಾಡಿರೋ ಈ ಮೂರ್ತಿಯ ಲೋಕಲ್ ಟ್ರೈನ್ ಜರ್ನಿ ಈಗ ಎಲ್ಲರ ಗಮನ ಸೆಳೆಯುತ್ತಿದ್ದು, ಫೋಟೋ ಹಾಗೂ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗ್ತಿವೆ.

News18
News18

ಜಗನ್ನಾಥ ಸ್ವಾಮಿ (ಮೂರ್ತಿ) ರಥಯಾತ್ರೆಗೂ ಮುನ್ನ ರಥ ಏರೋ ಬದಲು ಟಿಕೆಟ್ (Ticket) ಪಡೆದು ಟ್ರೈನ್‌ನಲ್ಲಿ (Train) ಟ್ರಾವೆಲ್ ಮಾಡಿರೋ ಘಟನೆ ಪಶ್ಚಿಮ ಬಂಗಾಳದಲ್ಲಿ (West Bengal) ನಡೆದಿದೆ. ನಾರ್ಮಲ್ ಪ್ಯಾಸೆಂಜರ್ ತರಾನೇ ದೇವರೂ ಕೂಡ ಟಿಕೆಟ್ ತಗೊಂಡು ಟ್ರೈನ್​ನಲ್ಲಿ ಕೂತು ಭಕ್ತನ (Devotee) ಮನೆಗೆ ಹೋಗಿದ್ದಾನೆ. ಹೌದು, ಜಗನ್ನಾಥ ಸ್ವಾಮಿಯ ಈ ಡಿಫರೆಂಟ್ ಜರ್ನಿ ನೋಡಿದ ಜನ ಫುಲ್​ ಖುಷಿಯಾಗಿದ್ದಾರೆ. ರಥಯಾತ್ರೆ ಹತ್ತಿರ ಬರ್ತಿರೋ ಟೈಮ್‌ನಲ್ಲೇ, ನದಿಯಾ ಜಿಲ್ಲೆಯ ಶಾಂತಿಪುರದಿಂದ ಕೋಲ್ಕತ್ತಾದ ಜಾದವ್‌ಪುರಕ್ಕೆ ಹೋಗೋ ಲೋಕಲ್ ಟ್ರೈನ್‌ನಲ್ಲಿ ಭಗವಂತನ ಈ ಸ್ಪೆಷಲ್ ಜರ್ನಿ ಸಾಗಿದೆ.

ಟ್ರೈನ್​ನಲ್ಲಿ ಜಗನ್ನಾಥ ಸ್ವಾಮಿ

ಜಾದವ್‌ಪುರದಲ್ಲಿರೋ ಭಕ್ತನೊಬ್ಬ ಶಾಂತಿಪುರದಿಂದ ತನ್ನ ಮನೆಗೆ ಸುಮಾರು ನಾಲ್ಕು ಅಡಿ ಎತ್ತರದ, ಜಗನ್ನಾಥ ದೇವನ ಮೂರ್ತಿಯನ್ನು ಟ್ರೈನ್ ಮೂಲಕ ಶಿಫ್ಟ್ ಮಾಡಿದ್ದಾನೆ. ಕಾಮನ್ ಆಗಿ ದೇವರ ಮೂರ್ತಿಗಳನ್ನ ಸಾಗಿಸೋಕೆ ಕಾರು, ಟ್ರಕ್ ಅಥವಾ ಟೆಂಪೋಗಳನ್ನ ರೆಂಟ್‌ಗೆ ತಗೋತಾರೆ. ಆದ್ರೆ, ಇಲ್ಲಿ ವಿಐಪಿ ವಾಹನಗಳ ಬದಲು, ನಮ್ಮ ನಿಮ್ಮಂತೆ ಟಿಕೆಟ್ ತಗೊಂಡು ಲೋಕಲ್ ಟ್ರೈನ್‌ನಲ್ಲೇ ಜರ್ನಿ ಮಾಡಿದ್ದು ಎಲ್ಲರ ಹುಬ್ಬೇರಿಸುವಂತೆ ಮಾಡಿದೆ. ದೇವರಿಗಂತಾನೇ ಸಪರೇಟ್ ಆಗಿ ಟಿಕೆಟ್ ತಗೊಂಡು, ನಾರ್ಮಲ್ ಪ್ಯಾಸೆಂಜರ್ ತರ ಸೀಟ್ ಮೇಲೆ ಕೂರಿಸಲಾಗಿತ್ತು.

ದೇವಾಲಯವಾದ ಟ್ರೈನ್ ಬೋಗಿ!

ದೇವರನ್ನು ನೋಡಿ ಅಲ್ಲಿದ್ದ ಜನ ಫುಲ್ ಥ್ರಿಲ್ ಆಗಿದ್ದಾರೆ. ಸೆಕ್ಯೂರಿಟಿ ಗಾರ್ಡ್‌ಗಳು ಹಾಗೂ ಟ್ರಾವೆಲ್ ಮಾಡ್ತಿದ್ದ ನೂರಾರು ಜನ ತಮ್ಮ ಸೀಟಿನಿಂದ ಎದ್ದು ಕೈಮುಗಿದು ‘ಜೈ ಜಗನ್ನಾಥ’ ಅಂತಾ ಭಕ್ತಿಯಿಂದ ದೇವರಿಗೆ ನಮಸ್ಕರಿಸಿದ್ದಾರೆ ಎಂದು ನ್ಯೂಸ್​18 ಬೆಂಗಾಲಿಯಲ್ಲಿ ವರದಿ ಮಾಡಲಾಗಿದೆ. ಆ ಮೊಮೆಂಟ್‌ನಲ್ಲಿ ಟ್ರೈನ್ ಬೋಗಿನೇ ಒಂದು ದೇವಸ್ಥಾನದ ತರ ಕಂಪ್ಲೀಟ್ ಭಕ್ತಿಮಯವಾಗಿ ಬದಲಾಗಿತ್ತು ಅಂದ್ರೆ ತಪ್ಪಾಗಲ್ಲ.

ಶಾಂತಿಪುರ ತನ್ನ ಮಣ್ಣಿನ ಕಲಾಕೃತಿಗಳು ಮತ್ತು ಮೂರ್ತಿಗಳ ತಯಾರಿಕೆಗೆ ಮೊದಲಿಂದಲೂ ಸಖತ್ ಫೇಮಸ್. ಇಲ್ಲಿ ರೆಡಿಯಾಗೋ ಕಾಳಿ, ದುರ್ಗಾ, ಸರಸ್ವತಿ ಅಥವಾ ಜಗದ್ಧಾತ್ರಿ ಮೂರ್ತಿಗಳು ರಾಜ್ಯದ ಮೂಲೆ ಮೂಲೆಗೂ ಹೋಗುತ್ತವೆ. ಈಗ ಆ ಅದ್ಭುತ ಮೂರ್ತಿಗಳ ಲಿಸ್ಟ್‌ಗೆ ಸಾಕ್ಷಾತ್ ಜಗನ್ನಾಥ ಸ್ವಾಮಿಯ ಮೂರ್ತಿ ಕೂಡ ಸೇರಿಕೊಂಡಿದೆ.

ಸ್ಪೆಷಲ್​ ಆಗಿ ಮೂರ್ತಿ ಮಾಡಿಸಿದ ಭಕ್ತ

ಸೋಶಿಯಲ್ ಮೀಡಿಯಾದಲ್ಲಿ ಶಾಂತಿಪುರದ ಮಣ್ಣಿನ ಕಲಾಕೃತಿಗಳ ವಿಡಿಯೋ, ಫೋಟೋಸ್ ನೋಡಿ ಫುಲ್ ಇಂಪ್ರೆಸ್ ಆಗಿದ್ದ ಜಾದವ್‌ಪುರದ ಭಕ್ತನೊಬ್ಬ, ಈ ಜಗನ್ನಾಥನ ಮೂರ್ತಿ ಮಾಡಿಕೊಡೋಕೆ ಆರ್ಡರ್ ಕೊಟ್ಟಿದ್ರು. ತಮಗೆ ಗೊತ್ತಿರೋರ ಮೂಲಕ ಶಿಲ್ಪಿ ಸೌರಜ್ ಅವರಿಗೆ ಆರ್ಡರ್ ನೀಡಲಾಗಿತ್ತು. ಇದಕ್ಕೂ ಮುನ್ನ ಸಣ್ಣ ಜಗನ್ನಾಥನ ಮೂರ್ತಿಗಳನ್ನ ಇಲ್ಲಿ ಮಾಡಲಾಗುತ್ತಿತ್ತು, ಆದ್ರೆ ಈ ಬಾರಿ ಸ್ಪೆಷಲ್ ಆಗಿ ರಥಯಾತ್ರೆಗೆ ಅಂತಲೇ ನಾಲ್ಕು ಅಡಿ ಎತ್ತರದ ಮೂರ್ತಿ ಮಾಡಿಸಲಾಗಿದೆ.

ಸೋಶಿಯಲ್​ ಮೀಡಿಯಾದಲ್ಲಿ ವೈರಲ್​

ಅದರಂತೆ ಮೂರ್ತಿ ಸಖತ್ ಅಟ್ರಾಕ್ಟಿವ್ ಆಗಿ ರೆಡಿಯಾದ ಮೇಲೆ, ಲೋಕಲ್ ಟ್ರೈನ್ ಮೂಲಕಾನೇ ಮೂರ್ತಿನ ಆ ಭಕ್ತನ ಮನೆಗೆ ತಲುಪಿಸಲಾಗಿದೆ. ರಥಯಾತ್ರೆಗೆ ಅಂತಲೇ ಸ್ಪೆಷಲ್ ಆಗಿ ರೆಡಿ ಮಾಡಿರೋ ಈ ಮೂರ್ತಿಯ ಲೋಕಲ್ ಟ್ರೈನ್ ಜರ್ನಿ ಈಗ ಎಲ್ಲರ ಗಮನ ಸೆಳೆಯುತ್ತಿದ್ದು, ಫೋಟೋ ಹಾಗೂ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗ್ತಿವೆ. ಕಾಮನ್ ಆಗಿ ವಿಐಪಿಗಳು ಪಬ್ಲಿಕ್ ಟ್ರಾನ್ಸ್‌ಪೋರ್ಟ್‌ನಲ್ಲಿ ಟ್ರಾವೆಲ್ ಮಾಡಿದ್ರೆನೇ ದೊಡ್ಡ ನ್ಯೂಸ್ ಆಗುತ್ತೆ. ಆದ್ರೆ ಇಲ್ಲಿ ಜಗತ್ತನ್ನೇ ಕಾಯೋ ಭಗವಂತನೇ ಸ್ವತಃ ಲೋಕಲ್ ಟ್ರೈನ್‌ನಲ್ಲಿ ಟಿಕೆಟ್ ತಗೊಂಡು ಟ್ರಾವೆಲ್ ಮಾಡಿರೋದು ಜನರ ಭಕ್ತಿನ ಮತ್ತಷ್ಟು ಹೆಚ್ಚಿಸಿದೆ.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports