Last Updated:
ಮಕ್ಕಳು ಬೇಕು ಅನ್ನೋ ಆಸೆ ಎಲ್ಲಾ ದಂಪತಿಗಳಲ್ಲೂ ಇರುತ್ತೆ. ಇದಕ್ಕೆ ವಯಸ್ಸಿನ ಮಿತಿಯೂ ಇರಲ್ಲ. ಹೀಗೆ ಇಲ್ಲೊಂದು ದಂಪತಿ ತಮ್ಮ 57 ವರ್ಷಗಳ ಸಂಸಾರಕ್ಕೆ ಮಕ್ಕಳನ್ನು ಬರಮಾಡಿಕೊಂಡಿದ್ದಾರೆ. ಮಹಿಳೆಯೊಬ್ಬರು 74 ವರ್ಷಕ್ಕೆ ಅವಳಿ ಹೆಣ್ಣುಮಕ್ಕಳಿಗೆ ಜನ್ಮ ನೀಡಿದ್ದಾರೆ.
ಮಕ್ಕಳಾಗಿಲ್ಲ ಅನ್ನೋ ಕೊರಗು ಅದೆಷ್ಟೋ ದಂಪತಿಗಳಿಗೆ (Couple) ಇರುತ್ತೆ. ಇಲ್ಲೂ ಕೂಡ ಅಂಥದ್ಧೇ ಒಂದು ದಂಪತಿ ಮಕ್ಕಳಾಗಿಲ್ಲ ಎಂದು ಕೊರಗುತ್ತಿದ್ದರು. ಆದರೆ ಇದೀಗ ಪವಾಡ ಎಂಬಂತೆ 74 ವರ್ಷದ ಮಹಿಳೆಯೊಬ್ಬರಿಗೆ ಅವಳಿ ಹೆಣ್ಣು ಮಕ್ಕಳು (Twins Girl Baby) ಜನಿಸಿದ್ದಾರೆ. ಆಂಧ್ರಪ್ರದೇಶದ 74 ವರ್ಷದ ಮಹಿಳೆಯೊಬ್ಬರು ಮಕ್ಕಳನ್ನು ಹೊಂದುವ ಆಶಯದೊಂದಿಗೆ ದಶಕಗಳ ಕಾಲ ಕಳೆದ ನಂತರ 2019ರಲ್ಲಿ ಐವಿಎಫ್ (IVF) ಮೂಲಕ ಅವಳಿ ಹೆಣ್ಣು ಮಕ್ಕಳ ತಾಯಿಯಾಗಿದ್ದಾರೆ.














