Last Updated:
ಇಂಪ್ಯಾಕ್ಟ್ ಪ್ಲೇಯರ್ ನಿಯಮದ ಜೊತೆಗೆ, ಬಿಸಿಸಿಐ ಹಲವಾರು ಇತರ ಐಪಿಎಲ್-ಸಂಬಂಧಿತ ವಿಷಯಗಳ ಕುರಿತು ಫ್ರಾಂಚೈಸಿ ಅಭಿಪ್ರಾಯಗಳನ್ನು ಪಡೆಯುತ್ತಿದೆ. ಇಂಪ್ಯಾಕ್ಟ್ ಪ್ಲೇಯರ್ ನಿಯಮವನ್ನು ಉಳಿಸಿಕೊಳ್ಳುವ ಅಥವಾ ರದ್ದುಗೊಳಿಸುವ ನಿರ್ಧಾರವು ಫ್ರಾಂಚೈಸಿಗಳು ಒದಗಿಸಿದ ಪ್ರತಿಕ್ರಿಯೆಯನ್ನು ಆಧರಿಸಿದೆ.
ಐಪಿಎಲ್ನಲ್ಲಿ (IPL 2026) ‘ಇಂಪ್ಯಾಕ್ಟ್ ಪ್ಲೇಯರ್’ (Impact Player) ನಿಯಮದ ಕುರಿತು ಬಿಸಿಸಿಐ ಮಹತ್ವದ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆ ಇದೆ. ಈಗಾಗಲೇ ಈ ನಿಯಮದ ಕುರಿತು ಅಪಸ್ವರಗಳು ಎದ್ದಿವೆ. ಹಾಗಾಗಿ ಇದನ್ನ ಮುಂದುವರಿಸಬೇಕೆ ಅಥವಾ ನಿಲ್ಲಿಸಬೇಕೆ ಎಂದು ತೀರ್ಮಾನಿಸಲು ಬಿಸಿಸಿಐ ಎಲ್ಲಾ 10 ಫ್ರಾಂಚೈಸಿಗಳಿಂದ ಹೊಸ ಅಭಿಪ್ರಾಯಗಳನ್ನು ಕೋರಿದೆ. ಐಪಿಎಲ್ 2026 ರ ನಂತರ ನಿಯಮವನ್ನು ಪರಿಶೀಲಿಸಲಾಗುವುದು ಎಂದು ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ಈ ಹಿಂದೆ ಹೇಳಿದ್ದ ಬೆನ್ನಲ್ಲೇ ಮಂಡಳಿಯ ಈ ಕ್ರಮ ಬಂದಿದೆ.














