Last Updated:
ಐಪಿಎಲ್ 2027 ಆವೃತ್ತಿಗೆ ಎಲ್ಲಾ ಫ್ರಾಂಚೈಸಿ ತಂಡಗಳು ಭರ್ಜರಿ ತಯಾರಿ ನಡೆಸುತ್ತಿವೆ. ಇದರ ನಡುವೆ ಎರಡು ತಂಡಗಳ ನಡುವೆ ಐಪಿಎಲ್ನ ಅತಿದೊಡ್ಡ ಟ್ರೇಡ್ ಡೀಲ್ ಬಗ್ಗೆ ಮಾತುಕತೆ ಜೋರಾಗಿದೆ.
ಐಪಿಎಲ್ (IPL) 2026 ಸೀಸನ್ ಮುಗಿದಂದಿನಿಂದ ಹಾರ್ದಿಕ್ ಪಾಂಡ್ಯ (Hardik Pandya) ಮುಂಬೈ ಇಂಡಿಯನ್ಸ್ (Mumbai Indians) ತೊರೆಯುತ್ತಾರೆ ಎಂಬ ಸುದ್ದಿ ಸುದ್ದಿ ಓಡಾಡುತ್ತಲೇ ಇದೆ. ಕಳೆದು ತಿಂಗಳು ರಿಷಭ್ ಪಂತ್ (Rishabh Pant )ಮತ್ತು ಕುಲದೀಪ್ ಯಾದವ್ (Kuldeep Yadav) ಅವರ ಟ್ರೇಡ್ (Trade) ಆಗಿದೆ. ಈಗ ಮತ್ತೆ ಹಾರ್ದಿಕ್ ಪಾಂಡ್ಯ ಟ್ರೇಡ್ ವಿಚಾರ ಸದ್ದು ಮಾಡುತ್ತಿದೆ. ಮುಂಬೈ ಇಂಡಿಯನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ (CSK) ನಡುವೆ ದೊಡ್ಡ ಟ್ರೇಡ್ ಡೀಲ್ ನಡೆಯುತ್ತಿದೆ ಎಂದು ವರದಿಗಳು ಬಂದಿವೆ.
ಹಿಂದೂಸ್ತಾನ್ ಟೈಮ್ಸ್ ವರದಿಯ ಪ್ರಕಾರ, ಚೆನ್ನೈ ಸೂಪರ್ ಕಿಂಗ್ಸ್ ತಂಡ ಹಾರ್ದಿಕ್ ಪಾಂಡ್ಯನನ್ನು ಸಹಿ ಮಾಡಲು ಬಯಸುತ್ತಿದೆ ಎಂದು ಹೇಳಲಾಗುತ್ತಿದೆ. ಮುಂಬೈ ಇಂಡಿಯನ್ಸ್ ತಂಡವು ಇದಕ್ಕೆ ಬದಲಾಗಿ ಇಬ್ಬರು ಸ್ಟಾರ್ ಆಟಗಾರರು ಮತ್ತು ಹೆಚ್ಚುವರಿ ಹಣವನ್ನು ಕೇಳಿದೆ. ಸಿಎಸ್ಕೆ ತಂಡವೂ ಇದಕ್ಕೆ ಪ್ರತಿಕ್ರಿಯೆ ನೀಡಿದೆ. ಈ ಕುರಿತು ಫುಲ್ ಡೀಟೇಲ್ಸ್ ಇಲ್ಲಿದೆ ಓದಿ.
ಮುಂಬೈ ಇಂಡಿಯನ್ಸ್ ತಂಡ ಹಾರ್ದಿಕ್ ಪಾಂಡ್ಯ ಬದಲು ಬೇರೆ ದೊಡ್ಡ ಆಟಗಾರನನ್ನು ತೆಗೆದುಕೊಳ್ಳಲು ಯೋಚಿಸುತ್ತಿದೆ. ಶಿವಂ ದುಬೆ ಮತ್ತು ಯುವ ಆಟಗಾರ ಆಯುಷ್ ಮ್ಹಾತ್ರೆ ಅವರನ್ನು ತಮ್ಮ ತಂಡಕ್ಕೆ ಸೇರಿಸಿಕೊಳ್ಳಲು ಮುಂಬೈ ಪ್ಲಾನ್ ಮಾಡಿಕೊಂಡಿದೆ. ಆಯುಷ್ 2026ರ ಐಪಿಎಲ್ನಲ್ಲಿ ತುಂಬಾ ಚೆನ್ನಾಗಿ ಆಡಿದ್ದರು. ಚೆನ್ನೈ ಸೂಪರ್ ಕಿಂಗ್ಸ್ ಆಯುಷ್ ಮ್ಹಾತ್ರೆಯನ್ನು ಭವಿಷ್ಯದ ಸ್ಟಾರ್ ಆಟಗಾರನೆಂದು ನೋಡುತ್ತದೆ. ಹೀಗಾಗಿ ಆಯುಷ್ ಅವರನ್ನು ಬೇರೆ ತಂಡಕ್ಕೆ ಕೊಡಲು ಸಿಎಸ್ಕೆ ಬಯಸುವುದಿಲ್ಲ ಎಂದು ವರದಿಯಾಗಿದೆ.
ಚೆನ್ನೈ ಸೂಪರ್ ಕಿಂಗ್ಸ್ ತಂಡವು ಶಿವಂ ದುಬೆ ಜೊತೆಗೆ ದಕ್ಷಿಣ ಆಫ್ರಿಕಾದ ಸ್ಟಾರ್ ಬ್ಯಾಟರ್ ಡೆವಾಲ್ಡ್ ಬ್ರೆವಿಸ್ ಅವರನ್ನು ಆಫರ್ ಮಾಡಿದೆ. ಜೊತೆಗೆ 10 ಕೋಟಿ ರೂಪಾಯಿ ನಗದು ಕೂಡ ನೀಡಲು ಮುಂದಾಗಿದೆ. ಈ ಒಪ್ಪಂದ ಆದರೆ, ಪಾಂಡ್ಯ ಅವರ ಟ್ರೇಡ್ 20 ಕೋಟಿ ಅಥವಾ ಅದಕ್ಕಿಂತ ಹೆಚ್ಚು ಆಗುತ್ತದೆ. ಇನ್ನೂ ಯಾವುದೇ ತಂಡವೂ ಟ್ರೇಡ್ ಒಪ್ಪಂದವನ್ನು ಪೂರ್ಣಗೊಳಿಸಿಲ್ಲ.
ಚೆನ್ನೈ ಸೂಪರ್ ಕಿಂಗ್ಸ್ ಮಾತ್ರವಲ್ಲ, ಎಲ್ಎಸ್ಜಿ ಮತ್ತು ಕೆಕೆಆರ್ ಸೇರಿದಂತೆ ಬೇರೆ ಹಲವು ತಂಡಗಳು ಹಾರ್ದಿಕ್ ಪಾಂಡ್ಯ ಅವರನ್ನು ತಮ್ಮ ತಂಡಕ್ಕೆ ಸೇರಿಸಿಕೊಳ್ಳಲು ಬಯಸುತ್ತಿವೆ. ಆಂಡ್ರೆ ರಸೆಲ್ ನಿವೃತ್ತರಾದ ನಂತರ, ಕೋಲ್ಕತ್ತಾ ನೈಟ್ ರೈಡರ್ಸ್ಗೆ ಕೊನೆಯ ಓವರ್ಗಳಲ್ಲಿ ಬ್ಯಾಟಿಂಗ್ ಮಾಡಿ ಮುಗಿಸುವ ಮತ್ತು ವೇಗವಾಗಿ ಬೌಲಿಂಗ್ ಮಾಡುವ ಆಲ್ರೌಂಡರ್ ಬೇಕಾಗಿದೆ.
ಕೆಕೆಆರ್ ತಂಡಕ್ಕೆ ನಾಯಕನೂ ಬೇಕು. ಹಾರ್ದಿಕ್ ಪಾಂಡ್ಯ ಈ ಎರಡೂ ಕೆಲಸಗಳನ್ನು ಚೆನ್ನಾಗಿ ಮಾಡಬಲ್ಲರು. ವರದಿಗಳ ಪ್ರಕಾರ ಕೆಕೆಆರ್ ಅವರೊಂದಿಗೆ ಟ್ರೇಡ್ ಮಾಡಲೂ ಸಿದ್ಧವಿದೆ. ಪಾಂಡ್ಯ ಯಾವ ತಂಡಕ್ಕೆ ಹೋಗುತ್ತಾರೆ ಎಂಬುದನ್ನು ಕಾದು ನೋಡಬೇಕಾಗಿದೆ.














