IPL 2027: ರಹಾನೆ ಔಟ್, 2027ಕ್ಕೆ ಕೆಕೆಆರ್​​​ಗೆ ಟೀಮ್ ಇಂಡಿಯಾದ ಈ ಸ್ಫೋಟಕ ಆಟಗಾರ ಕ್ಯಾಪ್ಟನ್ | ಕ್ರೀಡಾ ಸುದ್ದಿ | ACTPnews

ಕೆಕೆಆರ್


Last Updated:

ಐಪಿಎಲ್ 2026 ರಲ್ಲಿ ಕಳಪೆ ಪ್ರದರ್ಶನ ನೀಡಿದ ನಂತರ, ಕೋಲ್ಕತ್ತಾ ನೈಟ್ ರೈಡರ್ಸ್ ನಾಯಕತ್ವ ಬದಲಾವಣೆಯನ್ನು ಬಯಸುತ್ತಿದೆ. ಕೆಕೆಆರ್ ಫ್ರಾಂಚೈಸಿ ಹೊಸ ಆವೃತ್ತಿಗೂ ಮುಂಚಿತವಾಗಿ ನಾಯಕ ಅಜಿಂಕ್ಯ ರಹಾನೆಯನ್ನು ಬಿಡುಗಡೆ ಮಾಡಲಿದೆ ಎಂದು ವರದಿಯಾಗಿದೆ.

ಕೆಕೆಆರ್
ಕೆಕೆಆರ್

ಐಪಿಎಲ್ 2026 ರ ಅಂತ್ಯದ ನಂತರ, ಎಲ್ಲಾ ಫ್ರಾಂಚೈಸಿಗಳು ಮುಂದಿನ ಆವೃತ್ತಿಗೆ ಸಿದ್ಧತೆಗಳನ್ನು ಪ್ರಾರಂಭಿಸಿವೆ. ಐಪಿಎಲ್ 2027 ರ ಟ್ರೇಡ್ ವಿಂಡೋ ತೆರೆದಂತೆ, ಆಟಗಾರರು ಮತ್ತು ನಾಯಕತ್ವದಲ್ಲಿನ ಬದಲಾವಣೆಗಳ ಕುರಿತು ಚರ್ಚೆಗಳು ತೀವ್ರಗೊಂಡಿವೆ. ಕೆಲವು ಪ್ರಮುಖ ಆಟಗಾರರು ತಂಡಗಳನ್ನು ಬದಲಾಯಿಸುತ್ತಾರೆ ಎಂಬುದರ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಚರ್ಚೆ ನಡೆಯುತ್ತಿದೆ. ಇತ್ತೀಚೆಗೆ, ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ನಡುವೆ ಮmಮಹತ್ವ ಟ್ರೇಡ್ ಡೀಲ್ ನಡೆಯಿತು. ಇದರಲ್ಲಿ ರಿಷಭ್ ಪಂತ್ ಡೆಲ್ಲಿಗೆ ಮರಳಿದರೆ, ಕುಲದೀಪ್ ಯಾದವ್ ಲಕ್ನೋ ತಂಡವನ್ನು ಸೇರಿಕೊಂಡರು.

ಈ ಮಹತ್ವದ ಟ್ರೇಡ್ ಡೀಕ್ ನಡುವೆ ಕೋಲ್ಕತ್ತಾ ನೈಟ್ ರೈಡರ್ಸ್ (KKR) ತಂಡದ ಬಗ್ಗೆ ಮಹತ್ವದ ಸುದ್ದಿ ಹೊರಬಿದ್ದಿದೆ. ಕೆಕೆಆರ್ ಫ್ರಾಂಚೈಸಿ ನಾಯಕತ್ವ ಬದಲಾವಣೆಯನ್ನು ಬಯಸುತ್ತಿದೆ. ಐಪಿಎಲ್ 2027 ರ ಆವೃತ್ತಿಗೂ ಮೊದಲು ಅಜಿಂಕ್ಯ ರಹಾನೆ ಬದಲಿಗೆ ಟೀಮ್ ಇಂಡಿಯಾದ ಈ ಸ್ಫೋಟಕ ಆಟಗಾರ ಕ್ಯಾಪ್ಟನ್ ಮಾಡಲು ಮುಂದಾಗಿದೆ ಎಂದು ಹೇಳಲಾಗುತ್ತಿದೆ.

ಸ್ಫೋಟಕ ಆಟಗಾರನಿಗೆ ನಾಯಕತ್ವದ ಜವಾಬ್ದಾರಿ

ಐಪಿಎಲ್ ನಿಯಮಗಳ ಪ್ರಕಾರ, ಎಲ್ಲಾ ಫ್ರಾಂಚೈಸಿಗಳು ನವೆಂಬರ್ 15 ರೊಳಗೆ ತಮ್ಮ ಉಳಿಸಿಕೊಂಡ ಮತ್ತು ಬಿಡುಗಡೆ ಮಾಡಿದ ಆಟಗಾರರನ್ನು ಪಟ್ಟಿ ರಿಲೀಸ್ ಮಾಡಬೇಕು. ಈ ಬಾರಿ ಕೆಕೆಆರ್ ಅಜಿಂಕ್ಯ ರಹಾನೆ ಅವರನ್ನು ಬಿಡುಗಡೆ ಮಾಡುವುದು ಸೇರಿದಂತೆ ಕೆಲವು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಬಹುದು ಎಂದು ನಂಬಲಾಗಿದೆ. ಅಂತಹ ಪರಿಸ್ಥಿತಿಯಲ್ಲಿ, ತಂಡದ ದೀರ್ಘಕಾಲದ ಸದಸ್ಯರಾಗಿರುವ ರಿಂಕು ಸಿಂಗ್ ಅವರಿಗೆ ನಾಯಕತ್ವವನ್ನು ನೀಡಬಹುದು ಎಂದು ಇಂಡಿಯನ್ ಸ್ಪೋರ್ಟ್ ನೆಟ್​ವರ್ಕ್​ ವರದಿ ಮಾಡಿದೆ.

ರಹಾನೆ ನಾಯಕತ್ವದಲ್ಲಿ ಸಿಗದ ಯಶಸ್ಸು

ಶ್ರೇಯಸ್ ಅಯ್ಯರ್ ನಾಯಕತ್ವದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ 2024 ರ ಐಪಿಎಲ್ ಪ್ರಶಸ್ತಿಯನ್ನು ಗೆದ್ದುಕೊಂಡಿತು. ಇದಾದ ನಂತರ ಮುಂದಿನ ವರ್ಷ, ಫ್ರಾಂಚೈಸಿ ಶ್ರೇಯಸ್ ಅವರನ್ನು ಬಿಡುಗಡೆ ಮಾಡಿತು. ಅಯ್ಯರ್ ಪಂಜಾಬ್ ಕಿಂಗ್ಸ್ ಸೇರಿದರು. ಬಳಿಕ, ಕೆಕೆಆರ್ ನಾಯಕತ್ವವನ್ನು ಅನುಭವಿ ಬ್ಯಾಟ್ಸ್‌ಮನ್ ಅಜಿಂಕ್ಯ ರಹಾನೆಗೆ ಹಸ್ತಾಂತರಿಸಿತು.

ರಹಾನೆ ನಾಯಕತ್ವದಲ್ಲಿ ಕೆಕೆಆರ್ ಸತತ ಎರಡು ಆವೃತ್ತಿಗಳಲ್ಲಿ ಪ್ಲೇಆಫ್ ತಲುಪಲು ವಿಫಲವಾಯಿತು. ಈಗ ಕೆಕೆಆರ್ ಫ್ರಾಂಚೈಸಿ ಮೇಲೆ ಕಣ್ಣಿಟ್ಟು ಹೊಸ ನಾಯಕನನ್ನು ಹುಡುಕುತ್ತಿರುವಂತೆ ತೋರುತ್ತಿದೆ. ವರದಿಗಳು ನಿಜವಾಗಿದ್ದರೆ, ರಿಂಕು ಸಿಂಗ್ ಐಪಿಎಲ್ 2027 ರಲ್ಲಿ ಮೊದಲ ಬಾರಿಗೆ ಕೆಕೆಆರ್ ನಾಯಕತ್ವ ವಹಿಸಿಕೊಳ್ಳುವುದನ್ನು ಕಾಣಬಹುದು.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed