IPL 2026: ಈ ವರ್ಷ ಐಪಿಎಲ್​​ನಲ್ಲಿ ಮಿಂಚಿದ 5 ವಿದೇಶಿ ಆಟಗಾರರಿವರು! 6 ವರ್ಷಗಳ ಬಳಿಕ ಭಾರತೀಯರ ಕೈತಪ್ಪಿದ ಪರ್ಪಲ್ ಕ್ಯಾಪ್ | ಕ್ರೀಡಾ ಸುದ್ದಿ | ACTPnews

ಐಪಿಎಲ್ 2026


Last Updated:

ಐಪಿಎಲ್ 2026 ಉತ್ಸಾಹದಿಂದ ತುಂಬಿತ್ತು. ಈ ಮೆಗಾ ಟೂರ್ನಿಯಲ್ಲಿ ಅನೇಕ ಆಟಗಾರರು ಮಿಂಚುವ ಮೂಲಕ ರಾತ್ರೋರಾತ್ರಿ ಸ್ಟಾರ್‌ಗಳಾಗಿದ್ದಾರೆ. ಈ ವರ್ಷದ ಐಪಿಎಲ್‌ನಲ್ಲಿ ಎಲ್ಲರ ಗಮನ ಸೆಳೆಯದ 5 ವಿದೇಶಿ ಆಟಗಾರರ ಬಗ್ಗೆ ಮಾಹಿತಿ ಇಲ್ಲಿದೆ ಓದಿ.

ಐಪಿಎಲ್ 2026
ಐಪಿಎಲ್ 2026

ಐಪಿಎಲ್ (IPL) 2026 ರ ಫೈನಲ್ (Final) ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ (GT) ತಂಡವನ್ನು ರಾಯಲ್ ಚಾಲೆಂಜರ್ಸ್​ ಬೆಂಗಳೂರು (RCB) ಸೋಲಿಸಿತು. ಇದರೊಂದಿಗೆ, ಆರ್‌ಸಿಬಿ ಸತತ ಎರಡನೇ ಬಾರಿಗೆ ಟ್ರೋಫಿ (Trophy) ಯನ್ನು ಗೆಲ್ಲುವ ಮೂಲಕ ಇತಿಹಾಸ (History) ಸೃಷ್ಟಿಸಿತು. ಐಪಿಎಲ್ 2026 ರಲ್ಲಿ ಬಹುತೇಕ ಎಲ್ಲಾ ಪ್ರಮುಖ ಪ್ರಶಸ್ತಿಗಳನ್ನು ಭಾರತೀಯ ಆಟಗಾರರು ಗೆದ್ದರು. ಆದರೆ, ಪರ್ಪಲ್ ಕ್ಯಾಪ್ ಮಾತ್ರ ವಿದೇಶಿ ಆಟಗಾರನಿಗೆ ಹೋಯಿತು. ಕಳೆದ 6 ವರ್ಷಗಳಿಂದ ಪರ್ಪಲ್ ಕ್ಯಾಪ್ (Purple cap) ಭಾರತೀಯ ಆಟಗಾರರ ಬಳಿ ಇತ್ತು. ಈ ವರ್ಷದ ಐಪಿಎಲ್‌ನಲ್ಲಿ ಎಲ್ಲರ ಗಮನ ಸೆಳೆಯದ 5 ವಿದೇಶಿ ಆಟಗಾರರು (Players) ಇವರೇ ನೋಡಿ.

ಕೂಪರ್ ಕೊನೊಲಿ- (ಪಂಜಾಬ್ ಕಿಂಗ್ಸ್)

ಆಸ್ಟ್ರೇಲಿಯಾ ತಂಡದ ಯುವ ಸ್ಪೋಟಕ ಬ್ಯಾಟರ್ ಕೂಪರ್ ಕೊನೊಲಿ ಪಂಜಾಬ್ ಕಿಂಗ್ಸ್ ಪರ ತಮ್ಮ ಚೊಚ್ಚಲ ಐಪಿಎಲ್ ಆವೃತ್ತಿಯಲ್ಲಿ ಅದ್ಭುತ ಪ್ರದರ್ಶನ ನೀಡಿದರು. ಪಂಜಾಬ್ ಕಿಂಗ್ಸ್ ಪ್ಲೇಆಫ್ ತಲುಪಲು ವಿಫಲವಾದರೂ, ಕೊನೊಲಿ ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿದರು. 14 ಪಂದ್ಯಗಳಲ್ಲಿ 163 ಸ್ಟ್ರೈಕ್ ರೇಟ್‌ನಲ್ಲಿ 491 ರನ್ ಗಳಿಸಿದರು. ಅವರು ಈ ಆವೃತ್ತಿಯಲ್ಲಿ ಒಂದು ಶತಕ ಮತ್ತು ಎರಡು ಅರ್ಧಶತಕಗಳನ್ನು ಸಿಡಿಸಿದರು.

ಸುನಿಲ್ ನರೈನ್ – (ಕೋಲ್ಕತ್ತಾ ನೈಟ್ ರೈಡರ್ಸ್)

ಐಪಿಎಲ್ 2026 ರಲ್ಲಿ ಬ್ಯಾಟರ್​​ಗಳು ಸಂಪೂರ್ಣವಾಗಿ ಪ್ರಾಬಲ್ಯ ಸಾಧಿಸಿದರು. ಎಲ್ಲಾ ಸ್ಪಿನ್ ಬೌಲರ್‌ಗಳು ವಿಕೆಟ್ ಪಡೆಯಲು ಹೆಣಗಾಡಿದರು. ಆದರೆ, ವೆಸ್ಟ್ ಇಂಡೀಸ್ ಮಾಜಿ ದಿಗ್ಗಜ ಬೌಲರ್ ಸುನಿಲ್ ನರೈನ್ 13 ಪಂದ್ಯಗಳಲ್ಲಿ ಕೇವಲ 6.65 ರ ಎಕಾನಮಿ ದರದೊಂದಿಗೆ 15 ವಿಕೆಟ್‌ಗಳನ್ನು ಕಬಳಿಸಿದರು. ಬೇರೆ ಯಾರಿಗೂ 7.5 ಕ್ಕಿಂತ ಕಡಿಮೆ ಎಕಾನಮಿ ದರವಿರಲಿಲ್ಲ. ಆದಾಗ್ಯೂ, ಕೆಕೆಆರ್ ಪ್ಲೇಆಫ್‌ಗೆ ತಲುಪಲು ವಿಫಲವಾಯಿತು.

ಹೆನ್ರಿಚ್ ಕ್ಲಾಸೆನ್ – (ಸನ್ ರೈಸರ್ಸ್ ಹೈದರಾಬಾದ್)

ಸನ್‌ರೈಸರ್ಸ್ ಹೈದರಾಬಾದ್ ಪರ ಆಡುತ್ತಿರುವ ದಕ್ಷಿಣ ಆಫ್ರಿಕಾದ ಸ್ಪೋಟಕ ಬ್ಯಾಟರ್ ಹೆನ್ರಿಕ್ ಕ್ಲಾಸೆನ್ ಐಪಿಎಲ್ 2026 ರಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದರು. ಕ್ಲಾಸೆನ್ ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿದರು. ಅವರು 15 ಪಂದ್ಯಗಳಲ್ಲಿ 160 ಸ್ಟ್ರೈಕ್ ರೇಟ್‌ನಲ್ಲಿ 624 ರನ್ ಗಳಿಸಿದರು. ಅವರು ಈ ಆವೃತ್ತಿಯಲ್ಲಿ ಅತಿ ಹೆಚ್ಚು ವಿದೇಶಿ ರನ್ ಗಳಿಸಿದ ಆಟಗಾರರಾಗಿದ್ದರು. ಈ ಅವಧಿಯಲ್ಲಿ ಅವರು ಹಲವಾರು ಬಾರಿ ಆರೆಂಜ್ ಕ್ಯಾಪ್ ಅನ್ನು ಸಹ ಹೊಂದಿದ್ದರು. ಅವರು ಐಪಿಎಲ್ 2026 ರಲ್ಲಿ ಒಟ್ಟು ಆರು ಅರ್ಧಶತಕಗಳನ್ನು ಚಚ್ಚಿದರು.

ಜೋಫ್ರಾ ಆರ್ಚರ್ – (ರಾಜಸ್ಥಾನ ರಾಯಲ್ಸ್)

ಐಪಿಎಲ್ 2026 ರಲ್ಲಿ ಇಂಗ್ಲೆಂಡ್ ವೇಗಿ ಜೋಫ್ರಾ ಆರ್ಚರ್ ರಾಜಸ್ಥಾನ್ ರಾಯಲ್ಸ್ ಜೆರ್ಸಿಯಲ್ಲಿ ತಮ್ಮ ಬೌಲಿಂಗ್ ಮೂಲಕ ಎಲ್ಲರನ್ನೂ ಮೆಚ್ಚಿಸಿದರು. ಆರ್ಚರ್ 16 ಪಂದ್ಯಗಳಲ್ಲಿ 22.36 ರ ಸರಾಸರಿಯಲ್ಲಿ 25 ವಿಕೆಟ್‌ಗಳನ್ನು ಕಬಳಿಸಿದರು. ಈ ಆವೃತ್ತಿಯಲ್ಲಿ ಅವರು ಮೂರನೇ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿದ್ದರು. ರಾಜಸ್ಥಾನ ರಾಯಲ್ಸ್ ಎರಡನೇ ಕ್ವಾಲಿಫೈಯರ್ ತಲುಪಲು ಸಹಾಯ ಮಾಡುವಲ್ಲಿ ಆರ್ಚರ್ ಬೌಲಿಂಗ್​ನೊಂದಿಗೆ ಪ್ರಮುಖ ಪಾತ್ರ ವಹಿಸಿದರು.

ಕಗಿಸೊ ರಬಾಡ – (ಗುಜರಾತ್ ಟೈಟಾನ್ಸ್)

ಗುಜರಾತ್ ಟೈಟಾನ್ಸ್ ಪರ ಆಡುತ್ತಿರುವ ವೇಗಿ ಕಗಿಸೊ ರಬಾಡ ಅತ್ಯುತ್ತಮ ಪ್ರದರ್ಶನ ನೀಡಿದರು. ರಬಾಡ ಈ ಆವೃತ್ತಿಯಲ್ಲಿ 17 ಪಂದ್ಯಗಳಲ್ಲಿ 29 ವಿಕೆಟ್‌ಗಳನ್ನು ಕಬಳಿಸಿ ಪ್ರಮುಖ ವಿಕೆಟ್ ಪಡೆದ ಬೌಲರ್ ಆಗಿದ್ದರು. ರಬಾಡ ಅವರ ಬೌಲಿಂಗ್ ಗುಜರಾತ್ ಟೈಟಾನ್ಸ್ ತಂಡವು ಐಪಿಎಲ್ 2026 ರ ಫೈನಲ್ ತಲುಪಲು ಸಹಾಯ ಮಾಡಿತು. 2020 ರ ನಂತರ ವಿದೇಶಿ ಬೌಲರ್ ಐಪಿಎಲ್‌ನಲ್ಲಿ ಪರ್ಪಲ್ ಕ್ಯಾಪ್ ಗೆದ್ದಿರುವುದು ಇದೇ ಮೊದಲು. ಆಗಲೂ ರಬಾಡ ಪ್ರಶಸ್ತಿಯನ್ನು ಗೆದ್ದರು.

ಕಳೆದ ಐದು ವರ್ಷಗಳಲ್ಲಿ ಪರ್ಪಲ್ ಕ್ಯಾಪ್ ಗೆದ್ದವರು

  • 2021: ಹರ್ಷಲ್ ಪಟೇಲ್ (ರಾಯಲ್ ಚಾಲೆಂಜರ್ಸ್ ಬೆಂಗಳೂರು) – 32 ವಿಕೆಟ್‌ಗಳು
  • 2022: ಯುಜುವೇಂದ್ರ ಚಾಹಲ್ (ರಾಜಸ್ಥಾನ್ ರಾಯಲ್ಸ್) – 27 ವಿಕೆಟ್‌ಗಳು
  • 2023: ಮೊಹಮ್ಮದ್ ಶಮಿ (ಗುಜರಾತ್ ಟೈಟಾನ್ಸ್) – 28 ವಿಕೆಟ್‌ಗಳು
  • 2024: ಹರ್ಷಲ್ ಪಟೇಲ್ (ಪಂಜಾಬ್ ಕಿಂಗ್ಸ್) – 24 ವಿಕೆಟ್‌ಗಳು
  • 2025: ಪ್ರಸಿದ್ಧ್ ಕೃಷ್ಣ (ಗುಜರಾತ್ ಟೈಟಾನ್ಸ್) – 25 ವಿಕೆಟ್‌ಗಳು



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed