Shiva Rajkumar: ಶಿವಣ್ಣನ 4ನೇ ತಮಿಳು ಚಿತ್ರದ ಫಸ್ಟ್ ಶಾಟ್ ಏನು? ಫೋಟೋ ವೈರಲ್! | | ACTPnews

ಶಿವಣ್ಣನ 4 ನೇ ತಮಿಳು ಚಿತ್ರದ ಫಸ್ಟ್ ಶಾಟ್ ಏನ್ ಗೊತ್ತಾ? ಫೋಟೋ ವೈರಲ್!


Last Updated:

ಶಿವರಾಜ್ ಕುಮಾರ್ ಅಭಿನಯದ 4 ನೇ ತಮಿಳು ಸಿನಿಮಾದ ಶೂಟಿಂಗ್ ಶುರು ಆಗಿದೆ. ಈ ಚಿತ್ರದ ಮೊದಲ ಶಾಟ್‌ನ ಒಂದು ಫೋಟೋ ಹೊರ ಬಂದಿದೆ. ಇದು ಇಡೀ ಚಿತ್ರದ ಒಂದು ಚಿತ್ರಣ ಕಟ್ಟಿಕೊಡುತ್ತದೆ. ಇದರ ವಿವರ ಮುಂದೆ ಇದೆ ಓದಿ.

ಶಿವಣ್ಣನ 4 ನೇ ತಮಿಳು ಚಿತ್ರದ ಫಸ್ಟ್ ಶಾಟ್ ಏನ್ ಗೊತ್ತಾ? ಫೋಟೋ ವೈರಲ್!
ಶಿವಣ್ಣನ 4 ನೇ ತಮಿಳು ಚಿತ್ರದ ಫಸ್ಟ್ ಶಾಟ್ ಏನ್ ಗೊತ್ತಾ? ಫೋಟೋ ವೈರಲ್!

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ (Shiva Rajkumar) ಅಭಿನಯದ 4 ನೇ ತಮಿಳು ಸಿನಿಮಾದ ಕೆಲಸ ಶುರು ಆಗಿದೆ. ಮೇ-1 ರಂದು ಈ ಚಿತ್ರದ ನಾಯಕ ಅಬಿಶಾನ್ ಜೀವಿಂತ್ (Abishan Jeevinth) ಜನ್ಮ ಇತ್ತು. ಈ ದಿನವೇ ಚಿತ್ರದ ಲಾಂಚ್ ಆಗಿದೆ. ಶಿವಣ್ಣ ಕೂಡ ಇದರಲ್ಲಿ ಭಾಗಿ ಆಗಿದ್ದರು. ಮೊದಲ ದೃಶ್ಯವು ಅದ್ಭುತವಾಗಿತ್ತು. ಇದೀಗ ಈ ಚಿತ್ರದ ಒಂದು ದೃಶ್ಯದ ಫೋಟೋ ರಿವೀಲ್ ಆಗಿದೆ. ಇದು ಅಷ್ಟೆ ಇಂಟ್ರಸ್ಟಿಂಗ್ ಆಗಿದೆ. ಇದರಲ್ಲಿ ಶಿವಣ್ಣ (Shivanna) ಇದ್ದಾರೆ. ನಾಯಕ ಅಬಿಶಾನ್ ಜೀವಿಂತ್ (Abishan Jeevinth) ಇದ್ದಾರೆ. ಒಂದು ಪುಟ್ಟ ನಾಯಿ ಮರಿನೂ ಇದೆ. ಈ ಸಿನಿಮಾ ಮತ್ತು ಈ ಫೋಟೋದ ಇನ್ನಷ್ಟು ವಿವರ ಇಲ್ಲಿದೆ ಓದಿ.

ತಮಿಳು ಚಿತ್ರದ ಫಸ್ಟ್ ಶಾಟ್

ಈ ಚಿತ್ರದಲ್ಲಿ ಶಿವಣ್ಣ ಅಪ್ಪನ ರೋಲ್ ಮಾಡಿದ್ದಾರೆ. ಸಿಂಪಲ್ ಪ್ಯಾಂಟ್, ಕಾಲಿಗೆ ಚಪ್ಲಿ, ಕೈಯಲ್ಲಿ ಫೋಲ್ಡಿಂಗ್ ಛತ್ರಿ ಇದೆ. ಹಣೆ ಮೇಲೆ ವಿಭೂತಿ ಇದೆ.
shiva rajkumar abishan jeevinth tamil movie first photo reveal

ತಮಿಳು ಚಿತ್ರದ ಫಸ್ಟ್ ಶಾಟ್

(ಚಿತ್ರ ಕೃಪೆ: ಡ್ರಾಮಾ ಕಂಪನಿ ಇನ್‌ಸ್ಟಾಗ್ರಾಮ್)

ಮನೆ ಬಾಗಿಲಿಗೆ ಶಿವಣ್ಣ ನಿಂತಿದ್ದಾರೆ. ಹಿಂದೆ ಕೆಂಪು ಶರ್ಟ್ ಮತ್ತು ನೀಲಿ ಪ್ಯಾಂಟ್, ಬಿಳಿ ಬೂಟ್ ಧರಿಸಿದ ಮಗನ ಪಾತ್ರಧಾರಿ ಅಬಿಶಾನ್ ಜೀವಿಂತ್ ಇದ್ದಾರೆ.

ಪುಟ್ಟ ನಾಯಿ ಮರಿ…

ಈ ಒಂದು ಫೋಟೋದಲ್ಲಿ ಒಂದು ಇಂಡಿ ಡಾಗ್ ಕೂಡ ಇದೆ. ಇದು ಇನ್ನು ಪುಟ್ಟ ನಾಯಿನೇ ಬಿಡಿ. ಇಷ್ಟೆಲ್ಲ ಚಿತ್ರಣವನ್ನ ಈ ಫೋಟೋ ಕಟ್ಟಿಕೊಡುತ್ತದೆ.

ಈ ಮೂಲಕ ಮಧ್ಯಮ ವರ್ಗದ ಕತೆ ಇರೋ ಚಿತ್ರ ಇದು ಅನ್ನೋದು ತಿಳಿಯುತ್ತದೆ. ಆ ರೀತಿನೇ ಈ ಪಾತ್ರಧಾರಿಗಳ ಲುಕ್ ಮತ್ತು ನಿಂತಿರೋ ಮನೆನೂ ಈ ಒಂದು ಫೀಲ್ ಕೊಡುತ್ತದೆ.

ಮೇ-1 ಚಿತ್ರ ಲಾಂಚ್

ಮೇ-1 ರಂದು ಚಿತ್ರದ ನಾಯಕ ಅಬಿಶಾನ್ ಜೀವಿಂತ್ ಜನ್ಮ ದಿನ ಇತ್ತು. ಈ ದಿನವೇ ಚಿತ್ರ ಶುರು ಆಗಿದೆ. ಈ ಸಮಯದಲ್ಲಿ ಒಂದು ದೃಶ್ಯವನ್ನು ತೆಗೆಯಲಾಗಿದೆ.

shiva rajkumar abishan jeevinth tamil movie first photo reveal

ನಾಯಕನಿಗೆ ಶುಭಾಶಯ

(ಚಿತ್ರ ಕೃಪೆ: ಅಬಿಶಾನ್ ಜೀವಿಂತ್ ಇನ್‌ಸ್ಟಾಗ್ರಾಮ್)

ಅಪ್ಪ ಮತ್ತು ಮಗನ ಆತ್ಮೀಯತೆ, ಚೇಷ್ಠೆ, ಹಾಸ್ಯ, ಆಟಿಟ್ಯೂಡ್ ಎಲ್ಲವೂ ಇಲ್ಲಿ ಕಾಣಿಸುತ್ತದೆ. ಆ ರೀತಿನೇ ಈ ಒಂದು ದೃಶ್ಯ ಇದೆ. ಈ ಚಿತ್ರವನ್ನ ಟೂರಿಸ್ಟ್ ಫ್ಯಾಮಿಲಿಯ ಕೋ ಡೈರೆಕ್ಟರ್ ಗೌತಮ್ ಶಿವರಾಮನ್ ಡೈರೆಕ್ಷನ್ ಮಾಡುತ್ತಿದ್ದಾರೆ. ಇದು ಇವರಿಗೆ ಮೊದಲ ಚಿತ್ರವೇ ಆಗಿದೆ.

ಚಿತ್ರದ ಇತರ ಮಾಹಿತಿ

ಈ ಚಿತ್ರಕ್ಕೆ ಪ್ರಗದೀಶ್ ಪ್ರಭು ಕ್ಯಾಮರಾವರ್ಕ್ ಮಾಡುತ್ತಿದ್ದಾರೆ. ಲಿಯೋ ಜೇಮ್ಸ್ ಈ ಚಿತ್ರಕ್ಕೆ ಸಂಗೀತ ಕೊಡುತ್ತಿದ್ದಾರೆ. ಇದೊಂದು ಅಪ್ಪ ಮತ್ತು ಮಗನ ಎಮೋಷನಲ್ ಸ್ಟೋರಿ ಇರೋ ಚಿತ್ರವಾಗಿದೆ.

ಈ ಚಿತ್ರದಲ್ಲಿ ಯೋಗಲಕ್ಷ್ಮಿ ಮತ್ತು ಶಿವಾನಿ ನಗರಂ ನಾಯಕಿಯರಾಗಿದ್ದಾರೆ. ಇವರ ಈ ಚಿತ್ರದ ಮುಹೂರ್ತ ಚೆನ್ನೈ ಅಲ್ಲಿ ನಡೆದಿದೆ. ರಜನಿಕಾಂತ್ ಪುತ್ರಿನೂ ಈ ಒಂದು ಮುಹೂರ್ತ ಕಾರ್ಯಕ್ರಮಕ್ಕೆ ಬಂದಿದ್ದರು. ಇಡೀ ತಂಡಕ್ಕೆ ಶುಭ ಕೋರಿದ್ದರು.

ನಾಯಕನಿಗೆ ಶುಭಾಶಯ

ಶಿವರಾಜ್ ಕುಮಾರ್ ಅವರು ಇನ್ನೂ ಒಂದು ಕೆಲಸ ಮಾಡಿದರು. ನಾಯಕ ನಟ ಅಬಿಶಾನ್ ಜೀವಿಂತ್ ಜನ್ಮ ದಿನದ ಹಿನ್ನೆಲೆಯಲ್ಲಿ ವಿಶ್ ಮಾಡಿದರು.

ಈ ವಿಷಯ ತಿಳಿದ ಅಬಿಶಾನ್ ಜೀವಿಂತ್ ಧನ್ಯವಾದ ಹೇಳಿದರು. ಇನ್‌ಸ್ಟಾಗ್ರಾಮ್‌ನ ತಮ್ಮ ಸ್ಟೇಟಸ್ ಅಲ್ಲಿಯೇ ಇದನ್ನ ಹೇಳಿದರು. ಚಿತ್ರದಲ್ಲಿ ನಾನು ನಟಿಸುತ್ತೇನೆ ಅಂತ ನಂಬಿಕೇನೆ ಇರಲಿಲ್ಲ.

ಆ ರೀತಿ ಕಲ್ಪನೆ ಕೂಡ ಮಾಡಿರಲಿಲ್ಲ. ಆದರೆ, ನೀವು ತೋರಿದ ಪ್ರೀತಿ, ಗೌರವಕ್ಕೆ ನಾನು ಸದಾ ಧನ್ಯ ಅಂತ ಅಬಿಶಾನ್ ಜೀವಿಂತ್ ಇಂಗ್ಲಿಷ್ ಅಲ್ಲಿ ಬರೆದುಕೊಂಡಿದ್ದಾರೆ ಅಂತ ಹೇಳಬಹುದು.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed