IPL 2026: ಇನ್‌ಸ್ಟಾಗ್ರಾಂನಲ್ಲಿ ಬರೋಬ್ಬರಿ 200 ಪೋಸ್ಟ್‌ ಡಿಲೀಟ್‌ ಮಾಡಿದ ಸ್ಟಾರ್‌ ಆಟಗಾರ! ವಿರಾಟ್‌ ಜೊತೆಗಿನ ರೀಲ್ಸ್‌ ಕೂಡ ಮಾಯ! | ಕ್ರೀಡಾ ಸುದ್ದಿ | ACTPnews

News18


Last Updated:

IPL 2026: ಐಪಿಎಲ್ ಮೈದಾನದಲ್ಲಿ ಬೌಲಿಂಗ್‌ಗಿಂತ ಹೆಚ್ಚಾಗಿ ವಿವಾದಗಳ ಮೂಲಕವೇ ಸದ್ದು ಮಾಡಿದ ಭಾರತದ ಸ್ಟಾರ್ ವೇಗಿ ಅರ್ಶದೀಪ್ ಸಿಂಗ್ ಈಗ ಅಚ್ಚರಿಯ ನಿರ್ಧಾರವೊಂದನ್ನು ತೆಗೆದುಕೊಂಡಿದ್ದಾರೆ. ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಿಂದ ಬರೋಬ್ಬರಿ 200ಕ್ಕೂ ಹೆಚ್ಚು ಪೋಸ್ಟ್‌ಗಳನ್ನು ಡಿಲೀಟ್ ಮಾಡಿ, ಫ್ಯಾನ್ಸ್‌ಗೆ ದೊಡ್ಡ ಶಾಕ್ ಕೊಟ್ಟಿದ್ದಾರೆ!

News18
News18

ಐಪಿಎಲ್ 2026ರ ಸೀಸನ್ ಮುಗಿಯುತ್ತಿದ್ದಂತೆ, ಪಂಜಾಬ್ ಕಿಂಗ್ಸ್ (Punjab Kings) ತಂಡದ ಸ್ಟಾರ್ ಬೌಲರ್ ಅರ್ಶದೀಪ್ ಸಿಂಗ್ ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್ (Instagram) ಖಾತೆಯಲ್ಲಿ ಭಾರಿ ಬದಲಾವಣೆಗಳನ್ನು ಮಾಡಿಕೊಂಡಿದ್ದಾರೆ. ಈ ಹಿಂದೆ 250ಕ್ಕೂ ಹೆಚ್ಚು ಪೋಸ್ಟ್‌ಗಳನ್ನು ಹೊಂದಿದ್ದ ಅವರ ಖಾತೆಯಲ್ಲಿ, ಈಗ ಕೇವಲ 40 ಪೋಸ್ಟ್‌ಗಳು ಮಾತ್ರ ಕಾಣುತ್ತಿವೆ. ವಿರಾಟ್ ಕೊಹ್ಲಿಯವರೊಂದಿಗಿನ ಫೋಟೋ ಸೇರಿದಂತೆ ಹಳೆಯ ನೆನಪಿನ ಅನೇಕ ಪೋಸ್ಟ್‌ಗಳನ್ನು ಡಿಲೀಟ್ ಅಥವಾ ಆರ್ಕೈವ್ (Archive) ಮಾಡಿರುವುದು ಎಲ್ಲೆಡೆ ಚರ್ಚೆಗೆ ಗ್ರಾಸವಾಗಿದೆ.

ವಿವಾದಗಳ ಸುಳಿಯಲ್ಲಿ ಅರ್ಶದೀಪ್

ಈ ಬಾರಿಯ ಐಪಿಎಲ್‌ನಲ್ಲಿ ಅರ್ಶದೀಪ್ ತಮ್ಮ ಆಟಕ್ಕಿಂತ ಹೆಚ್ಚಾಗಿ ವಿವಾದಗಳಿಗೇ ಸುದ್ದಿಯಾಗಿದ್ದರು. ಅದರಲ್ಲೂ ಮುಖ್ಯವಾಗಿ ಮುಂಬೈ ಇಂಡಿಯನ್ಸ್ ಆಟಗಾರ ತಿಲಕ್ ವರ್ಮಾ ಅವರ ವಿರುದ್ಧದ ಹೇಳಿಕೆ ಮತ್ತು ತಂಡದ ಸಹ ಆಟಗಾರ ಪ್ರಿಯಾಂಶ್ ಆರ್ಯ ಅವರನ್ನು ಕಾಲೆಳೆದ ವಿಷಯಗಳಲ್ಲಿ ಅರ್ಶದೀಪ್ ಮೇಲೆ ಭಾರಿ ಟೀಕೆಗಳು ವ್ಯಕ್ತವಾಗಿದ್ದವು. ಈ ಎಲ್ಲಾ ವಿವಾದಗಳ ಬೆನ್ನಲ್ಲೇ ಈಗ ತನ್ನ ಇನ್‌ಸ್ಟಾ ಖಾತೆಯನ್ನು ‘ಕ್ಲೀನ್’ ಮಾಡುತ್ತಿರುವುದು ಅನೇಕ ಅನುಮಾನಗಳಿಗೆ ಕಾರಣವಾಗಿದೆ.

ತಿಲಕ್ ವರ್ಮಾ ಮೇಲಿನ ಟೀಕೆ ಮತ್ತು ವರ್ಣಭೇದ ಆರೋಪ

ವಿವಾದಕ್ಕೆ ಮೂಲ ಕಾರಣವಾಗಿದ್ದು ಇನ್‌ಸ್ಟಾಗ್ರಾಮ್ ಸ್ಟೋರಿಯೊಂದು. ತಿಲಕ್ ವರ್ಮಾ ಅವರನ್ನು ‘ಕರಿಯ’ ಅಥವಾ ‘ಡಾರ್ಕ್’ (Dark) ಎಂದು ಸಂಬೋಧಿಸಿ, ಬೆಳ್ಳಗೆ ಕಾಣಲು ಸನ್‌ಸ್ಕ್ರೀನ್ ಬಳಸುವಿರಾ ಎಂದು ಲೇವಡಿ ಮಾಡಿದ್ದು ದೊಡ್ಡ ಕೋಲಾಹಲ ಸೃಷ್ಟಿಸಿತ್ತು. ಪಂಜಾಬ್ ಕಿಂಗ್ಸ್ ತಂಡದ ಈ ವೇಗಿ ವರ್ಣಭೇದ ನೀತಿಯಲ್ಲಿ (Racism) ತೊಡಗಿದ್ದಾರೆ ಎಂದು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದರು. ಈ ವಿವಾದ ಈಗ ಅವರ ಸೋಶಿಯಲ್ ಮೀಡಿಯಾ ಹಿಸ್ಟರಿಯನ್ನೇ ಅಳಿಸಿ ಹಾಕುವ ಹಂತಕ್ಕೆ ತಂದು ನಿಲ್ಲಿಸಿದೆಯಾ ಎಂಬ ಪ್ರಶ್ನೆ ಎದ್ದಿದೆ.

ಮೈದಾನದಲ್ಲಿ ಅರ್ಶದೀಪ್ ಪ್ರದರ್ಶನ ಹೇಗಿತ್ತು?

ವಿವಾದಗಳ ನಡುವೆಯೂ ಅರ್ಶದೀಪ್ ಪಂಜಾಬ್ ಕಿಂಗ್ಸ್ ಪರ 14 ವಿಕೆಟ್ ಕಬಳಿಸಿ ತಂಡದಲ್ಲಿ ಅಗ್ರಸ್ಥಾನದಲ್ಲಿದ್ದರು. ಆದರೆ, 10.4ರ ಎಕಾನಮಿ (Economy) ರೇಟ್‌ನಲ್ಲಿ ರನ್ ಬಿಟ್ಟುಕೊಟ್ಟಿದ್ದು ಅವರ ಬೌಲಿಂಗ್‌ನಲ್ಲಿನ ಏರಿಳಿತವನ್ನು ತೋರಿಸುತ್ತದೆ. ಕಳೆದ ವರ್ಷ ರನ್ನರ್‌ಅಪ್ ಆಗಿದ್ದ ಪಂಜಾಬ್ ಕಿಂಗ್ಸ್, ಈ ಬಾರಿ ಸತತ ಗೆಲುವು-ಸೋಲುಗಳ ನಡುವೆ ಕೇವಲ 1 ಅಂಕದ ಅಂತರದಲ್ಲಿ ಪ್ಲೇಆಫ್ ರೇಸ್‌ನಿಂದ ಹೊರಬಿದ್ದಿದ್ದು ತಂಡಕ್ಕೆ ಮತ್ತು ಆಟಗಾರರಿಗೆ ದೊಡ್ಡ ನಿರಾಸೆ ಮೂಡಿಸಿದೆ.

ಮೌನದ ಹಿಂದಿನ ಮರ್ಮವೇನು?

ಪೋಸ್ಟ್‌ಗಳನ್ನು ಡಿಲೀಟ್ ಮಾಡಿದ ವಿಷಯದ ಬಗ್ಗೆ ಅರ್ಶದೀಪ್ ಸಿಂಗ್ ಆಗಲಿ ಅಥವಾ ಪಂಜಾಬ್ ಕಿಂಗ್ಸ್ ಫ್ರಾಂಚೈಸಿ ಆಗಲಿ ಇದುವರೆಗೆ ಯಾವುದೇ ಅಧಿಕೃತ ಸ್ಪಷ್ಟನೆ ನೀಡಿಲ್ಲ. ತಪ್ಪುಗಳನ್ನು ಅಳಿಸಿ ಹೊಸ ಆರಂಭ ಮಾಡಬೇಕೆಂಬ ಉದ್ದೇಶದಿಂದ ಹೀಗೆ ಮಾಡಿದ್ದಾರೋ ಅಥವಾ ಟ್ರೋಲ್ ಮಾಡುತ್ತಿರುವವರ ಕಾಟ ತಡೆಯಲಾರದೆ ಈ ನಿರ್ಧಾರ ತೆಗೆದುಕೊಂಡಿದ್ದಾರೋ ಎಂಬುದು ಈಗಿನ ಮಿಲಿಯನ್ ಡಾಲರ್ ಪ್ರಶ್ನೆ. ಈ ಸೈಲೆಂಟ್ ನಿರ್ಧಾರದ ಹಿಂದಿನ ಸತ್ಯ ಏನೆಂಬುದನ್ನು ಕಾದು ನೋಡಬೇಕಿದೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed