IPL: ‘ನೋ ಇಂಪ್ಯಾಕ್ಟ್ ಪ್ಲೇಯರ್, ಓರ್ವ ಬೌಲರ್ಗೆ 5 ಓವರ್’; ಪವರ್ ಪ್ಲೇನಲ್ಲಿ ಸಚಿನ್ ಮಾಸ್ಟರ್ ಪ್ಲ್ಯಾನ್! | ಕ್ರೀಡಾ ಸುದ್ದಿ | ACTPnews

ಸಾಂದರ್ಭಿಕ ಚಿತ್ರ


Last Updated:

ಸಚಿನ್ ತೆಂಡೂಲ್ಕರ್ IPL ಇಂಪ್ಯಾಕ್ಟ್ ಪ್ಲೇಯರ್ ರೂಲ್ ರದ್ದು, ಪವರ್ ಪ್ಲೇ 4 ಓವರ್, ಬೌಲಿಂಗ್ ಪವರ್ ಪ್ಲೇ, ಓರ್ವ ಬೌಲರ್ಗೆ 5 ಓವರ್ ಅವಕಾಶ ನೀಡಿ ಸಮತೋಲನ ತರುವಂತೆ ಸಲಹೆ ನೀಡಿದ್ದಾರೆ.

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಇಂಡಿಯನ್ ಪ್ರಿಮಿಯರ್ ಲೀಗ್ (IPL 2026) ಅಂದರೆ ಜಗತ್ತಿನಾದ್ಯಂತ ಕ್ರೇಜ್ ಪಡೆದುಕೊಂಡಿದೆ. 2008ರಲ್ಲಿ ಆರಂಭವಾದ ಈ ಟೂರ್ನಿ ಇದುವರೆಗೂ 19 ಆವೃತ್ತಿಗಳನ್ನು ಯಶಸ್ವಿಯಾಗಿ ಪೂರ್ಣಗೊಂಡಿದೆ. ಐಪಿಎಲ್ ಆರಂಭವಾದ ಸಮಯದಿಂದಲೂ ಆಟದ ನಿಯಮಗಳಲ್ಲಿ (Cricket Rules) ಹಲವು ಬದಲಾವಣೆಗಳು ಆಗುತ್ತಿದೆ. ಹಲವರು ಈ ಮಾರ್ಪಾಡುಗಳಿಗೆ ಸಮ್ಮತಿ ಸೂಚಿಸಿದ್ರು, ಕೆಲವು ನಿಯಮಗಳ ಬಗ್ಗೆ ಮಾತ್ರ ಬೇಸರ ವ್ಯಕ್ತಪಡಿಸಿದ್ದಾರೆ. ಈಗ ಮಾಸ್ಟರ್ ಬ್ಲಾಸ್ಟರ್ ಸಚಿನ್ (Sachin Tendulkar) ಅವರು ಕೂಡ ಐಪಿಎಲ್ ನಿಯಮಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಸಲಿಗೆ ಸಚಿನ್ ಹೇಳಿದ್ದೇನು?

ಇಂಡಿಯನ್ ಪ್ರೀಮಿಯರ್ ಲೀಗ್ ಅನ್ನೋದು ಬ್ಯಾಟರ್ ಗಳ ಸಾಮ್ರಾಜ್ಯವಾಗಿದೆ. ಭಾರೀ ಸಿಕ್ಸರ್ಸ್, ಬೌಂಡರಿಗಳೊಂದಿಗೆ ವಿಜೃಂಭಿಸಿದರೆ, ಈ ಮಾದರಿಯಲ್ಲಿ ಬೌಲ್ ಮಾಡುವ ಬೌಲರ್ ಗಳು ಭಾರೀ ಒತ್ತಡಕ್ಕೆ ಒಳಗಾಗುತ್ತಿದ್ದಾರೆ. ಇದರೊಂದಿಗೆ 2023ರಲ್ಲಿ ಜಾರಿ ಮಾಡಿದ ಇಂಪ್ಯಾಕ್ಟ್ ಪ್ಲೇಯರ್ ರೂಲ್ ಬೌಲರ್ ಗಳಿಗೆ ಶಾಪವಾಗಿ ಬದಲಾಗಿದೆ. ಈ ಬಗ್ಗೆ ಈಗಾಗಲೇ ಹಲವು ಹಿರಿಯ ಆಟಗಾರರು ಬೇಸರ ವ್ಯಕ್ತಪಡಿಸಿದ್ದಾರೆ. ಈಗ ಸಚಿನ್ ಕೂಡ ಈ ಬಗ್ಗೆ ಬೇಸರ ವ್ಯಕ್ತಪಡಿಸಿದ್ದು, ಕೂಡಲೇ ಈ ನಿಯಮವನ್ನು ತೆಗೆದು ಹಾಕಲು ಸಲಹೆ ನೀಡಿದ್ದಾರೆ. ಅಲ್ಲದೇ ಬೌಲರ್ ಗಳಿಗೆ ಅನುಕೂಲ ಆಗುವಂತೆ ಕೆಲವು ಬದಲಾವಣೆಗಳನ್ನು ಮಾಡಲು ಕ್ರಾಂತಿಕಾರಿ ಬದಲಾವಣೆಗಳನ್ನು ಸೂಚಿಸಿದ್ದಾರೆ.

ಇಂಪ್ಯಾಕ್ಟ್ ಪ್ಲೇಯರ್ ನಿಯಮ ಬೇಡ: ಖಾಸಗಿ ಸುದ್ದಿ ವಾಹಿನಿವೊಂದರ ಪ್ರಶಸ್ತಿ ಸಮಾರಂಭದಲ್ಲಿ ಭಾಗಿಯಾಗಿದ್ದ ಸಚಿನ್ ತೆಂಡೂಲ್ಕರ್, ಇಂಪ್ಯಾಕ್ಟ್ ಪ್ಲೇಯರ್ ನಿಯಮದಿಂದ ಆಟದ ಸಮತೋಲಕ್ಕೆ ಹೊಡೆತ ಬೀಳುತ್ತಿದೆ ಎಂದು ಹೇಳಿದ್ದಾರೆ. ‘ನನ್ನ ವೈಯುಕ್ತಿಕ ಅಭಿಪ್ರಾಯದಂತೆ ಈ ರೂಲ್ ತೆಗೆದು ಹಾಕಬೇಕು. ಟಿ20ಯಲ್ಲಿ ಆಡೋದು ಕೇವಲ 20 ಓವರ್, ಈಗಾಗಲೇ ಬೌಲರ್ ಗಳ ಮೇಲೆ ತೀವ್ರ ಸವಾಲುಗಳು ಎದುರಾಗುತ್ತಿದೆ. ಇಂತಹ ಸಂದರ್ಭದಲ್ಲಿ ತಂಡಗಳು ಓರ್ವ ಬ್ಯಾಟರ್ ಅನ್ನು ಹೆಚ್ಚಾಗಿ ತಂಡಕ್ಕೆ ಸೇರಿಸಿಕೊಳ್ಳುವುದು ಬ್ಯಾಟಿಂಗ್ ಅರ್ಡರ್​ಗೆ ಬಲ ಕೊಟ್ಟರೂ ಬೌಲರ್ ಗಳನ್ನು ಒತ್ತಡಕ್ಕೆ ಸಿಲುಕಿಸುತ್ತದೆ’ ಎಂದು ಸಚಿನ್ ಹೇಳಿದ್ದಾರೆ.

ಸಚಿನ್ ಮಾಸ್ಟರ್ ಪ್ಲ್ಯಾನ್

ಸದ್ಯ ಐಪಿಎಲ್ ನಲ್ಲಿ ನೀಡುತ್ತಿರುವ 6 ಓವರ್ ಗಳ ಪವರ್ ಪ್ಲೇ ಸ್ಥಾನದಲ್ಲಿ ಸಚಿನ್ ಒಂದು ಅದ್ಭುತವಾದ ಬದಲಾವಣೆ ಮಾಡಲು ಹೇಳಿದ್ದಾರೆ. ಇದರಂತೆ ಪವರ್ ಪ್ಲೇ ಓವರ್ ಗಳನ್ನು 4ಕ್ಕೆ ಕಡಿಮೆ ಮಾಡಿ, ಸದ್ಯ ಇರುವ 30 ಅಡಿ ಸರ್ಕಲ್ ಹೊರಗೆ ಇಬ್ಬರು ಪ್ಲೇಯರ್ ಗಳಿಗೆ ಅವಕಾಶ ನೀಡಬಹುದು. ಉಳಿದ ಎರಡು ಓವರ್ ಗಳನ್ನು ಬೌಲಿಂಗ್ ಪವರ್ ಪ್ಲೇ ಆಗಿ ಗುರುತಿಸಬೇಕು. ಈ ಎರಡು ಓವರ್ ಗಳಲ್ಲಿ ಫೀಲ್ಡಿಂಗ್ ಮಾಡುತ್ತಿರುವ ತಂಡದ ನಾಯಕ ಯಾವಾಗ ಬೇಕಾದರೂ, ಯಾವುದೇ ಸ್ಥಾನದಲ್ಲಿ ಆದರೂ ಫೀಲ್ಡರ್ ಗಳನ್ನು ನಿಲ್ಲಿಸಿಕೊಳ್ಳಲು ಅವಕಾಶ ನೀಡಬೇಕು. ಇದರಂತೆ ಎರಡು ಫೀಲ್ಡರ್ ಗಳೊಂದಿಗೆ ಮತ್ತೋರ್ವ ಫೀಲ್ಡರ್ ಗೆ (30 ಯಾರ್ಡ್ ಸರ್ಕಲ್ ನಿಂದ ಹೊರಗೆ ಮೂವರು ಫೀಲ್ಡರ್ಗಳು) ಹೆಚ್ಚುವರಿಯಾಗಿ ಅವಕಾಶ ನೀಡಬೇಕು. ಇದರಿಂದ ಫೀಲ್ಡಿಂಗ್ ತಂಡದ ಆಟಕ್ಕೆ ಬ್ರೇಕ್ ಹಾಕುತ್ತದೆ ಮತ್ತು ಪಂದ್ಯದ ಮೇಲೆ ಹಿಡಿತ ಸಾಧಿಸಲು ಅನುವು ಮಾಡಿಕೊಡುತ್ತದೆ ಎಂದು ಸಚಿನ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಓರ್ವ ಬೌಲರ್ಗೆ ಐದು ಓವರ್

ಸಾಮಾನ್ಯವಾಗಿ ಟಿ20 ಪಂದ್ಯದಲ್ಲಿ ಓರ್ವ ಬೌಲರ್ಗೆ ಗರಿಷ್ಠ 4 ಓವರ್ ಬೌಲ್ ಮಾಡಲು ಅವಕಾಶ ನೀಡಲಾಗುತ್ತದೆ. ಆದರೆ ಇಲ್ಲಿ ಸಚಿನ್ ಒಂದು ಅದ್ಭುತ ಬದಲಾವಣೆಯನ್ನು ಸೂಚಿಸಿದ್ದಾರೆ. ‘ಟಾಪ್ ಅರ್ಡರ್ ಬೌಲರ್ ಗಳು ಅಗತ್ಯವಾದರೆ ಹೇಗೆ 20 ಓವರ್ ಸಂಪೂರ್ಣವಾಗಿ ಬ್ಯಾಟಿಂಗ್ ಮಾಡಲು ಅವಕಾಶ ಇದೆಯೋ ಅದೇ ರೀತಿ ಬೌಲರ್ ಗಳಿಗೂ ಒಂದು ಅವಕಾಶ ಇರ್ಬೇಕು? ಆದ್ದರಿಂದ ಇನ್ನಿಂಗ್ಸ್ ಒಂದರಲ್ಲಿ ಓರ್ವ ಬೌಲರ್ ಗೆ ಐದು ಓವರ್ ಬೌಲಿಂಗ್ ಮಾಡುವ ಅವಕಾಶ ಕೊಡಬೇಕು’ ಎಂದು ಸಚಿನ್ ಹೇಳಿದ್ದಾರೆ.

ಐಪಿಎಲ್ 2026 (ಸಂಗ್ರಹ ಚಿತ್ರ)
ಸಚಿನ್ ಅವರು ಹೇಳಿದ್ದು ಎಷ್ಟು ಸರಿ?

ಸಚಿನ್ ಅವರು ಸೂಚಿಸಿರುವ ಬದಲಾವಣೆಗಳು ಕ್ರಿಕೆಟ್ ಪ್ರಪಂಚದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ. ನಿಜ ಹೇಳಬೇಕು ಎಂದರೇ, ಇಂಪ್ಯಾಕ್ಟ್ ಪ್ಲೇಯರ್ ನಿಯಮ ಬಂದ ಬಳಿಕ ಐಪಿಎಲ್ ನಲ್ಲಿ 250 ಪ್ಲಸ್ ಸ್ಕೋರ್ ಮಾಡೋದು ಸಾಮಾನ್ಯ ಸಂಗತಿಯಾಗಿದೆ. 8ನೇ ಕ್ರಮಾಂಕದಲ್ಲಿಯೂ ಬ್ಯಾಟರ್ ಬಂದು ಸಿಕ್ಸರ್ ಗಳ ಮಳೆಯನ್ನು ಸುರಿಸುವ ಅವಕಾಶವಿದೆ. ಇದರಿಂದ ಬೌಲರ್ ಗಳಿಗೆ ಸಾಕಷ್ಟು ಒತ್ತಡ ಆಗುತ್ತಿದೆ.

ಸಚಿನ್ ಹೇಳಿದಂತೆ, ಓರ್ವ ಬೌಲರ್ಗೆ ಐದು ಓವರ್ ಹಾಕಲು ಅವಕಾಶ ನೀಡಿದರೆ ತಂಡದ ಪ್ರಮುಖ ಬೌಲರ್ ಓರ್ವನನ್ನು ಡೆತ್ ಓವರ್ ಗಳಲ್ಲಿ ಅಥವಾ ಪವರ್ ಪ್ಲೇ ನಲ್ಲಿ ಮತ್ತಷ್ಟು ಸಮರ್ಥವಾಗಿ ಬಳಸಿಕೊಳ್ಳಬಹುದು. ಅದೇ ರೀತಿ ಪವರ್ ಪ್ಲೇ ಅನ್ನು ಇಬ್ಭಾಗ ಮಾಡುವುದರಿಂದ ಕ್ಯಾಪ್ಟನ್ ಗಳಿಗೆ ಹೊಸ ತಂತ್ರ ಮಾಡಿಕೊಳ್ಳಲು ಅವಕಾಶ ಸಿಗುತ್ತದೆ. ಇದು ಕೇವಲ ಬೌಂಡರಿ, ಸಿಕ್ಸರ್ ಗಳೊಂದಿಗೆ ಒನ್ ಸೈಡ್ ಗೇಮ್ ಆಗದಂತೆ ಬ್ಯಾಟಿಂಗ್ ಮತ್ತು ಬೌಲರ್ ಗಳ ನಡುವಿನ ಹೋರಾಟದಂತೆ ಮತ್ತಷ್ಟು ರೋಚಕವಾಗಿ ಆಟ ಪ್ರೇಕ್ಷಕರಿಗೆ ಕಾಣುತ್ತದೆ.

ಇದನ್ನೂ ಓದಿ: Poori Tips: ಹಿಟ್ಟಿಗೆ 2 ಸ್ಪೂನ್ ಈ ಪದಾರ್ಥವನ್ನು ಮಿಕ್ಸ್ ಮಾಡಿ; ಹೋಟೆಲ್ ಸ್ಟೈಲ್ ಪೂರಿಗಳು ಸಿದ್ಧ!

ಕ್ರಿಕೆಟ್ ನಲ್ಲಿ ಯಾವಾಗಲೂ ಬ್ಯಾಟರ್ ಗಳಿಗೆ ಮಾತ್ರವಲ್ಲದೇ, ಬೌಲರ್ ಗಳಿಗೂ ಸಮಾನ ಅವಕಾಶ ಸಿಗಬೇಕು ಎಂಬುವುದು ಸಚಿನ್ ಅವರ ಆಶಯವಾಗಿದೆ. ಐಪಿಎಲ್ ಮತ್ತು ಬಿಸಿಸಿಐ ಈ ಬಗ್ಗೆ ಆರ್ಥಿಕವಾಗಿ ಮಾತ್ರ ನೋಡದೇ, ಆಟದ ಸಹಜತೆಯನ್ನು ಜೀವಂತವಾಗಿ ಇರುವಂತೆ ಮಾಡಲು ಇಂತಹ ಸಲಹೆಗಳನ್ನು ಪರಿಶೀಲನೆ ಮಾಡಬೇಕು. ಒಂದೊಮ್ಮೆ ಈ ಬದಲಾವಣೆಗಳು ಜಾರಿಯಾದರೆ, ಐಪಿಎಲ್ ಕ್ರೇಜ್ ಮತ್ತಷ್ಟು ಹೆಚ್ಚಾಗೋದು ಖಚಿತ ಎಂದು ಕ್ರಿಕೆಟ್ ವಿಶ್ಲೇಷಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed