Last Updated:
Influencer Death: ಥೈಲ್ಯಾಂಡ್ ಎಸ್ಟೇಟ್ನಲ್ಲಿ ಫಿಟ್ನೆಸ್ ಇನ್ಫ್ಲುಯೆನ್ಸರ್ ಮರ್ಫಿ ಅವರು ಮೃತಪಟ್ಟಿರುವ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.
ಅಮೆರಿಕದ ಫಿಟ್ನೆಸ್ ಇನ್ಫ್ಲುಯೆನ್ಸರ್ (Fitness Influencer) ಕಾನರ್ ಮರ್ಫಿ ಥೈಲ್ಯಾಂಡ್ನ ಐಷಾರಾಮಿ ಎಸ್ಟೇಟ್ನಲ್ಲಿರುವ ನದಿಯಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಅವರು 32 ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಯೂಟ್ಯೂಬರ್ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ ಎಂದು ಥಾಯ್ ಅಧಿಕಾರಿಗಳು ತಿಳಿಸಿದ್ದಾರೆ. ಆದರೂ ಅವರ ಸಾವಿನ ಕುರಿತಾಗಿ ತನಿಖೆಗಳು ನಡೆಯುತ್ತಿವೆ.
ಫಿಟ್ನೆಸ್ ಅವರು ಫಿಟ್ನೆಸ್ ಕಂಟೆಂಟ್ ಮತ್ತು ಹಾಸ್ಯಮಯ ತಮಾಷೆಯ ವೀಡಿಯೊಗಳಿಗೆ ಹೆಸರುವಾಸಿಯಾಗಿದ್ದರು. ಮರ್ಫಿ, ಜುಲೈ 7, ಮಂಗಳವಾರ ಸಮುತ್ ಪ್ರಕಾನ್ ಪ್ರಾಂತ್ಯದ ಬ್ಯಾಂಗ್ ಫಿಲಿ ಜಿಲ್ಲೆಯಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ ಎಂದು ವರದಿಯಾಗಿದೆ. ಅಧಿಕಾರಿಗಳ ಪ್ರಕಾರ, ಅವರು ಬಾಡಿಗೆಗೆ ಪಡೆದಿದ್ದ ಮನೆಯ ಬಳಿ ನದಿ ಅಂಚಿನಿಂದ ಸುಮಾರು 20 ಮೀಟರ್ ದೂರದಲ್ಲಿ ಅವರ ಶವ ಪತ್ತೆಯಾಗಿದೆ.
ಇಂಟರ್ನ್ಯಾಷನಲ್ ಬ್ಯುಸಿನೆಸ್ ಟೈಮ್ಸ್ ವರದಿಯ ಪ್ರಕಾರ, ವಿದೇಶಿ ಪ್ರಜೆಯೊಬ್ಬರು ವಸತಿ ಎಸ್ಟೇಟ್ ಒಳಗೆ ಅಸಭ್ಯವಾಗಿ ವರ್ತಿಸುತ್ತಿದ್ದಾರೆ ಎಂಬ ವರದಿಗಳು ಬಂದಿದ್ದವು. ಅದಾದ ನಂತರ ಮಧ್ಯಾಹ್ನ 3 ಗಂಟೆ ಸುಮಾರಿಗೆ ಪೊಲೀಸರಿಗೆ ಮೊದಲು ಮಾಹಿತಿ ನೀಡಲಾಯಿತು.
ಅಧಿಕಾರಿಗಳು ಸ್ಥಳಕ್ಕೆ ಬಂದರು. ಆದರೆ ಆರಂಭದಲ್ಲಿ ಮರ್ಫಿಯನ್ನು ಪತ್ತೆ ಮಾಡಲು ಸಾಧ್ಯವಾಗಲಿಲ್ಲ. ಥಾಯ್ ಮಾಧ್ಯಮ ವರದಿಗಳ ಪ್ರಕಾರ, ಯುವಕ ಹತ್ತಿರದ ನದಿಗೆ ಹೋಗುವ ಮೊದಲು ಪ್ರಾಪರ್ಟಿ ಸುತ್ತ ಬಣ್ಣ ಎರಚುವ ಮೂಲಕ ತಾನಿದ್ದ ಬಾಡಿಗೆ ಮನೆಯನ್ನು ಹಾಳು ಮಾಡಿದ್ದ ಎಂದು ಆರೋಪಿಸಲಾಗಿದೆ.
ಸ್ಥಳೀಯ ನಿವಾಸಿಯೊಬ್ಬರು ರೆಕಾರ್ಡ್ ಮಾಡಿದ್ದ ವೀಡಿಯೊ ದೃಶ್ಯಾವಳಿಗಳನ್ನು ಅಧಿಕಾರಿಗಳು ನಂತರ ವಶಪಡಿಸಿಕೊಂಡರು. ಅದರಲ್ಲಿ ಮರ್ಫಿ ನೀರಿಗೆ ಇಳಿಯುವ ಮೊದಲು ಅಸಭ್ಯವಾಗಿ ವರ್ತಿಸುತ್ತಿದ್ದರು ಎಂದು ತೋರಿಸಲಾಗಿದೆ. ಪ್ರತ್ಯಕ್ಷದರ್ಶಿಗಳು ತನಿಖಾಧಿಕಾರಿಗಳಿಗೆ ತಿಳಿಸಿದ್ದು, ಮರ್ಫಿ ದಣಿದಂತೆ ಕಾಣುತ್ತಿದ್ದರು ಎಂದಿದ್ದಾರೆ.
ನದಿ ಸುಮಾರು 10 ಮೀಟರ್ ಆಳದಲ್ಲಿದೆ ಎಂದು ನಂಬಲಾಗಿರುವುದರಿಂದ, ಪಕ್ಕದಲ್ಲಿದ್ದವರು ಅವರನ್ನು ರಕ್ಷಿಸಲು ಸಾಧ್ಯವಾಗಲಿಲ್ಲ. ಅವರ ಸಾವಿನ ಸುದ್ದಿಯನ್ನು ಮೊದಲು ಥೈಲ್ಯಾಂಡ್ನಲ್ಲಿ ವಾಸಿಸುವ ಮತ್ತು ಈ ಹಿಂದೆ ಮರ್ಫಿಯೊಂದಿಗೆ ಕಂಟೆಂಟ್ ಕ್ರಿಯೇಟ್ ಮಾಡಿದ್ದ ಕಂಟೆಂಟ್ ಕ್ರಿಯೇಟರ್ ಟೋನಿ ಹ್ಯೂಜ್ ಶೇರ್ ಮಾಡಿದ್ದಾರೆ.
ಹ್ಯೂಜ್ ಪ್ರಕಾರ, ಘಟನೆ ನಡೆಯುವ ಕೇವಲ 10 ರಿಂದ 11 ದಿನಗಳ ಮೊದಲು ಅವರು ಒಟ್ಟಿಗೆ ಶೂಟಿಂಗ್ ಮಾಡಿದ್ದರು ಎನ್ನಲಾಗಿದೆ.
ಮರ್ಫಿಯ 22 ವರ್ಷದ ಗೆಳತಿ ತನಿಖಾಧಿಕಾರಿಗಳಿಗೆ ಆತ ಡ್ರಗ್ಸ್ ಸೇವಿಸುವುದನ್ನು ತಾನು ಎಂದಿಗೂ ನೋಡಿಲ್ಲ ಎಂದು ಹೇಳಿದ್ದಾಳೆ ಎಂದು ವರದಿಯಾಗಿದೆ. ಅವನು ಇತ್ತೀಚೆಗೆ ಅಸಾಮಾನ್ಯವಾಗಿ ವರ್ತಿಸುತ್ತಿದ್ದ, ಕೋಪ ಮಾಡಿಕೊಳ್ಳುತ್ತಿದ್ದ ಎಂದು ಆಕೆ ಹೇಳಿದ್ದಾಳೆ.
ಆನ್ಲೈನ್ನಲ್ಲಿ, ಮರ್ಫಿ ತಮ್ಮ ಫಿಟ್ನೆಸ್ ಕಂಟೆಂಟ್ ಮೂಲಕ ಭಾರಿ ಫಾಲೋವರ್ಸ್ನ ಗಳಿಸಿದ್ದರು. ಅವರು ಮೊದಲು ತಮ್ಮ ವೈರಲ್ “ನಕಲಿ ಶರ್ಟ್” ತಮಾಷೆ ವೀಡಿಯೊಗಳಿಂದ ಜನಪ್ರಿಯತೆಯನ್ನು ಗಳಿಸಿದರು. ನಂತರ ಫಿಟ್ನೆಸ್ ಮತ್ತು ಲುಕ್ ಬಗ್ಗೆ ವಿಡಿಯೋಸ್ ಮಾಡಿದರು.
Bangalore [Bangalore],Bangalore,Karnataka













