INDW vs SAW: ದಕ್ಷಿಣ ಆಫ್ರಿಕಾಗೆ ರೋಚಕ ಗೆಲುವು ತಂದುಕೊಟ್ಟ ಕಾಪ್​ ಆಲ್​ರೌಂಡ್ ಪ್ರದರ್ಶನ! ಟಿ20 ವಿಶ್ವಕಪ್​​​ನಲ್ಲಿ ಭಾರತಕ್ಕೆ ಮೊದಲು ಸೋಲು | ಕ್ರೀಡಾ ಸುದ್ದಿ | ACTPnews

ಭಾರತ ತಂಡಕ್ಕೆ ಸೋಲುಣಿಸಿದ ದಕ್ಷಿಣ ಆಫ್ರಿಕಾ ಮಹಿಳಾ ತಂಡ


Last Updated:

ಸೆಮಿಫೈನಲ್ ಪ್ರವೇಶಕ್ಕೆ ನಿರ್ಣಾಯಕವಾಗಿದ್ದ ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ 20 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು 158 ರನ್ ಗಳಿಸಿತು. 159 ರನ್​ಗಳ ಗುರಿಯನ್ನ ಬೆನ್ನಟ್ಟಿದ ಆಫ್ರಿಕಾ ತಂಡ ಇನ್ನೂ 5 ಎಸೆತ ಇರುವಂತೆ ಗೆಲುವು ಸಾಧಿಸಿತು.

ಭಾರತ ತಂಡಕ್ಕೆ ಸೋಲುಣಿಸಿದ ದಕ್ಷಿಣ ಆಫ್ರಿಕಾ ಮಹಿಳಾ ತಂಡ
ಭಾರತ ತಂಡಕ್ಕೆ ಸೋಲುಣಿಸಿದ ದಕ್ಷಿಣ ಆಫ್ರಿಕಾ ಮಹಿಳಾ ತಂಡ

ಐಸಿಸಿ ಮಹಿಳಾ ಟಿ20 ವಿಶ್ವಕಪ್‌ನ 18ನೇ ಗ್ರೂಪ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ (India vs South Africa Women) ವಿರುದ್ಧ ಭಾರತ ಮಹಿಳಾ ತಂಡ 6 ವಿಕೆಟ್‌ಗಳಿಂದ ಸೋಲು ಕಂಡಿದೆ. ಸೆಮಿಫೈನಲ್ ಪ್ರವೇಶಕ್ಕೆ ನಿರ್ಣಾಯಕವಾಗಿದ್ದ ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ 20 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು 158 ರನ್ ಗಳಿಸಿತು. 159 ರನ್‌ಗಳ ಗುರಿಯನ್ನ ಬೆನ್ನಟ್ಟಿದ ಆಫ್ರಿಕಾ ತಂಡವು ಮರಿಝಾನ್ ಕಾಪ್ ಅವರ ಸ್ಪೋಟಕ ಬ್ಯಾಟಿಂಗ್ ಪ್ರದರ್ಶನದ (ಅಜೇಯ 81 ರನ್ಸ್) ಬಲದಿಂದ 19.1 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು 161 ರನ್ ಗಳಿಸಿ ಗೆಲುವು ಸಾಧಿಸಿತು. ಇದು ದಕ್ಷಿಣ ಆಫ್ರಿಕಾಗೆ 2ನೇ ಗೆಲುವಾಗಿದೆ.

ಮರಿಝಾನ್ ಕಾಪ್ ಏಕಾಂಗಿ ಹೋರಾಟ

159 ರನ್‌ಗಳ ಸವಾಲಿನ ಗುರಿ ಬೆನ್ನತ್ತಿದ ದಕ್ಷಿಣ ಆಫ್ರಿಕಾ ತಂಡಕ್ಕೆ ಭಾರತದ ಬೌಲರ್‌ಗಳು ಆರಂಭಿಕ ಆಘಾತ ನೀಡಿದರು. ಭಾರತದ ಯುವ ಬೌಲರ್ ಎನ್. ಶ್ರೀ ಚರಣಿ  3 ವಿಕೆಟ್ ಪಡೆದು ಆಫ್ರಿಕಾ ಬ್ಯಾಟರ್‌ಗಳಿಗೆ ನಡುಕ ಹುಟ್ಟಿಸಿದರು. ನಿಧಾನಗತಿ ಆರಂಭ ಪಡೆದಿದ್ದ ದಕ್ಷಿಣ ಆಫ್ರಿಕಾಗೆ 6ನೇ ಓವರ್​​ನಲ್ಲಿ ಚರಣಿ ಡಬಲ್ ಶಾಕ್ ಕೊಟ್ಟರು. ನಾಯಕಿ ಲಾರಾ ವೋಲ್ವಾರ್ಟ್​ (20, 21 ಎಸೆತ) ಹಾಗೂ ಅನ್ನೇರಿ ಡರ್ಕ್ಸೆನ್ ರನ್ನ ಒಂದೇ ಓವರ್​​ನಲ್ಲಿ ಪೆವಿಲಿಯನ್ ಸೇರಿಸಿದರು.

97 ರನ್​ಗಳ  ಜೊತೆಯಾಟ

ನಂತರ ಒಂದಾದ  ತಾಜ್ಮಿನ್ ಬ್ರಿಟ್ಸ್  ಹಾಗೂ ಕಾಪ್​  ಈ ಆಘಾತದಿಂದ ಚೇತರಿಸಿಕೊಳ್ಳಲು ಸಮಯ ತೆಗೆದುಕೊಂಡರು. ಮೊದಲ 10 ಓವರ್​​ಗಳ ಆಟ ಮುಗಿದಾಗ ಹರಿಣಪಡೆ ಕೇವಲ 59 ರನ್​ಗಳಿಸಿತ್ತು. ಆದರೆ ಅಲ್ಲಿಂದ ಬೌಂಡರಿಗಳನ್ನ ಕದಿಯುತ್ತಾ ಸಾಗಿದ ಈ ಜೋಡಿ 4ನೇ ವಿಕೆಟ್ ಜೊತೆಯಾಟದಲ್ಲಿ 97 ರನ್​ ಸೇರಿಸಿದರು.

ಪಂದ್ಯ ಕಸಿದುಕೊಂಡ ಕಾಪ್

ಆರಂಭಿಕ ಆಟಗಾರ್ತಿ ತಾಜ್ಮಿನ್ ಬ್ರಿಟ್ಸ್  32 ಎಸೆತಗಳಲ್ಲಿ 2 ಬೌಂಡರಿ, 1 ಸಿಕ್ಸರ್ ಸಹಿತ 40 ರನ್ ಗಳಿಸಿದರು. ಶಫಾಲಿ ವರ್ಮಾ ಈ ಅಪಾಯಕಾರಿ ಜೋಡಿಯನ್ನ ಬೇರ್ಪಡಿಸಿದರು. ನಂತರ ಬಂದ ನಡೀನ್ ಡಿ ಕ್ಲರ್ಕ್ 5 ರನ್​ಗಳಿಸಿ ಶ್ರೀಚರಿಗೆ 3ನೇ ಬಲಿಯಾದರು. ಆದರೆ ಮರಿಝಾನ್ ಕಾಪ್ ಪಂದ್ಯದ ಚಿತ್ರಣವನ್ನೇ ಬದಲಿಸಿದರು.   ಕೇವಲ 45 ಎಸೆತಗಳಲ್ಲಿ 7 ಬೌಂಡರಿ ಹಾಗೂ 4 ಭರ್ಜರಿ ಸಿಕ್ಸರ್‌ಗಳ ನೆರವಿನಿಂದ ಅಜೇಯ 81 ರನ್ ಚಚ್ಚಿದರು.

ಬ್ರಿಟ್ಸ್​​ ವಿಕೆಟ್ ಬಿದ್ದಾಗ ಗೆಲುವು ಭಾರತದ ಫಾಲಾಗಬಹುದು ಎಂದೇ ನಿರೀಕ್ಷಿಸಲಾಗಿತ್ತು. ಆದರೆ ಕಾಪ್​ ಅದಕ್ಕೆ ಅವಕಾಶ ಕೊಡಲಿಲ್ಲ. 15ನೇ ಓವರ್​​ನಲ್ಲಿ ಅರುಂದತಿ ರೆಡ್ಡಿ ಬೌಲಿಂಗ್​​​ನಲ್ಲಿ 16 ರನ್​ ಸಿಡಿಸುವ ಮೂಲಕ ಪಂದ್ಯವನ್ನ ತಮ್ಮ ತಂಡದತ್ತಾ ತಿರುಗಿಸಿದರು. ಕೊನೆಯ 3 ಓವರ್​​ನಲ್ಲಿ ಗೆಲ್ಲಲು 29 ರನ್​ಗಳ ಅಗತ್ಯವಿತ್ತು. 18ನೇ ಓವರ್​​ನಲ್ಲಿ 11, 19ನೇ ಓವರ್​​ನಲ್ಲಿ 16 ರನ್​ ಸಿಡಿಸಿ ಗೆಲುವು ಖಚಿತಪಡಿಸಿಕೊಂಡರು. ಕೊನೆಯ ಓವರ್​​ನ ಮೊದಲ ಎಸೆತದಲ್ಲಿ  ಟ್ರಿಯಾನ್ ಬೌಂಡರಿ ಸಿಡಿಸಿ ಹರಿಣಪಡೆಗೆ ಗೆಲುವು ತಂದಿಕೊಟ್ಟರು.

ಇದು ಅವರ ಟಿ20 ಅಂತಾರಾಷ್ಟ್ರೀಯ ವೃತ್ತಿಜೀವನದ ಗರಿಷ್ಠ ಸ್ಕೋರ್ ಆಗಿದೆ. ಕೊನೆಯ ಓವರ್‌ನಲ್ಲಿ ಗೆಲುವಿಗೆ 2 ರನ್ ಬೇಕಿದ್ದಾಗ ಸಿಕ್ಸರ್ ಸಿಡಿಸುವ ಮೂಲಕ ಕಾಪ್ 19.1 ಓವರ್‌ಗಳಲ್ಲೇ ದಕ್ಷಿಣ ಆಫ್ರಿಕಾ ತಂಡಕ್ಕೆ 161/4 ರನ್ ತಂದುಕೊಟ್ಟು ರೋಚಕ ಜಯ ತಂದಿತ್ತರು.

ಭಾರತದ ಹಾದಿ ಕಠಿಣ

ಭಾರತ ತಂಡ ಆಡಿರುವ ಮೂರು ಪಂದ್ಯಗಳಲ್ಲಿ 2 ಗೆಲುವು ಹಾಗೂ 1 ಸೋಲಿನ ಸಹಿತ 4 ಅಂಕಗಳೊಂದಿಗೆ 2ನೇ ಸ್ಥಾನದಲ್ಲಿದೆ. ಆದರೆ ಮುಂದಿನ ಎರಡು ಪಂದ್ಯಗಳಲ್ಲಿ ಆಸ್ಟ್ರೇಲಿಯಾ ಹಾಗೂ ಬಾಂಗ್ಲಾದೇಶದ ವಿರುದ್ಧ ಆಡಲಿದೆ. ಬಾಂಗ್ಲಾದೇಶದ ವಿರುದ್ಧ ಗೆದ್ದರೂ, ಆಸ್ಟ್ರೇಲಿಯಾ ವಿರುದ್ಧ ಗೆಲುವು ಕಷ್ಟವಾಗಲಿದೆ. ಆಸ್ಟ್ರೇಲಿಯಾ ಎ ಗುಂಪಿನಲ್ಲಿ ಅಗ್ರಸ್ಥಾನ ಪಡೆಯುವುದು ಬಹುತೇಕ ಖಚಿತ, ಆದರೆ 2ನೇ ಸ್ಥಾನಕ್ಕೆ ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವೆ ಪೈಪೋಟಿ ಇರಲಿದೆ. ಹರಿಣ ಪಡೆ ತನ್ನ ಮುಂದಿನ 2 ಪಂದ್ಯಗಳಲ್ಲಿ ನೆದರ್ಲ್ಯಾಂಡ್ಸ್ ಹಾಗೂ ಬಾಂಗ್ಲಾದೇಶ ತಂಡಗಳನ್ನ ಎದುರಿಸಲಿದೆ.

ಕನ್ನಡ ಸುದ್ದಿ/ ನ್ಯೂಸ್/ಕ್ರೀಡೆ/

INDW vs SAW: ದಕ್ಷಿಣ ಆಫ್ರಿಕಾಗೆ ರೋಚಕ ಗೆಲುವು ತಂದುಕೊಟ್ಟ ಕಾಪ್​ ಆಲ್​ರೌಂಡ್ ಪ್ರದರ್ಶನ! ಟಿ20 ವಿಶ್ವಕಪ್​​​ನಲ್ಲಿ ಭಾರತಕ್ಕೆ ಮೊದಲು ಸೋಲು



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed