INDW vs ENGW Test: ಸ್ಮೃತಿ ಮಂಧಾನ ‘ತ್ರಿಶತಕ’! ಮಹಿಳಾ ಕ್ರಿಕೆಟ್​​​​ನಲ್ಲಿ ಈ ಸಾಧನೆ ಮಾಡಿದ ಅತ್ಯಂತ ಕಿರಿಯ ಕ್ರಿಕೆಟರ್ | ಕ್ರೀಡಾ ಸುದ್ದಿ | ACTPnews

ಸ್ಮೃತಿ ಮಂಧಾನ


Last Updated:

29 ವರ್ಷದ ಮಂಧಾನ ಪ್ರತಿಷ್ಠಿತ ಲಾರ್ಡ್ಸ್ ಕ್ರಿಕೆಟ್ ಮೈದಾನದಲ್ಲಿ ಇಂಗ್ಲೆಂಡ್ ವಿರುದ್ಧದ ಏಕೈಕ ಟೆಸ್ಟ್ ಪಂದ್ಯದ ಸಮಯದಲ್ಲಿ ಮೈದಾನಕ್ಕಿಳಿಯುವ ಮೂಲಕ ಈ ಸಾಧನೆ ಮಾಡಿದ್ದಾರೆ. ಈ ಮೈಲಿಗಲ್ಲು ತಲುಪಿದ ಒಟ್ಟಾರೆ 12ನೇ ಮಹಿಳಾ ಕ್ರಿಕೆಟಿಗರಾಗಿದ್ದಾರೆ.

ಸ್ಮೃತಿ ಮಂಧಾನ
ಸ್ಮೃತಿ ಮಂಧಾನ

ಟೀಮ್ ಇಂಡಿಯಾ ಉಪನಾಯಕಿ ಸ್ಮೃತಿ ಮಂಧಾನ (Smriti Mandhana) ಅಂತಾರಾಷ್ಟ್ರೀಯ ಕ್ರಿಕೆಟ್​​​ನಲ್ಲಿ ಇತಿಹಾಸ ನಿರ್ಮಿಸಿದ್ದಾರೆ. ಮಹಿಳಾ ಕ್ರಿಕೆಟ್‌ನಲ್ಲಿ (Women’s Cricket) 300 ಅಂತರರಾಷ್ಟ್ರೀಯ ಪಂದ್ಯಗಳ ಮೈಲಿಗಲ್ಲು ತಲುಪಿದ ಅತ್ಯಂತ ಕಿರಿಯ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. 29 ವರ್ಷದ ಮಂಧಾನ ಪ್ರತಿಷ್ಠಿತ ಲಾರ್ಡ್ಸ್ ಕ್ರಿಕೆಟ್ ಮೈದಾನದಲ್ಲಿ ಇಂಗ್ಲೆಂಡ್ ವಿರುದ್ಧದ ಏಕೈಕ ಟೆಸ್ಟ್ ಪಂದ್ಯದ ಸಮಯದಲ್ಲಿ ಮೈದಾನಕ್ಕಿಳಿಯುವ ಮೂಲಕ ಈ ಸಾಧನೆ ಮಾಡಿದ್ದಾರೆ. ಈ ಮೈಲಿಗಲ್ಲು ತಲುಪಿದ ಒಟ್ಟಾರೆ 12ನೇ ಮಹಿಳಾ ಕ್ರಿಕೆಟಿಗರಾಗಿದ್ದಾರೆ.

ಪಂದ್ಯ ಪ್ರಾರಂಭವಾಗುವ ಮೊದಲು ದಾಖಲೆಯ ಬಗ್ಗೆ ಮಾತನಾಡುತ್ತಾ, ಸ್ಮೃತಿ ಮಂಧಾನ ಸಂತೋಷವನ್ನು ವ್ಯಕ್ತಪಡಿಸಿದ್ದಾರೆ. ಹಿಂದಿನ ರಾತ್ರಿಯಷ್ಟೇ ಈ ದಾಖಲೆಯ ಬಗ್ಗೆ ತನಗೆ ತಿಳಿದಿತ್ತು ಎಂದು ಅವರು ಬಹಿರಂಗಪಡಿಸಿದರು. ಇದೇ ಸಂದರ್ಭದಲ್ಲಿ ಲಾರ್ಡ್ಸ್‌ನಲ್ಲಿ 2017ರ ಮಹಿಳಾ ಏಕದಿನ ವಿಶ್ವಕಪ್ ಫೈನಲ್‌ನಲ್ಲಿ ಆಡಿದ್ದನ್ನು ಮತ್ತು ಆ ಸವಾಲಿನ ಪಂದ್ಯಾವಳಿಯ ನಂತರ ತನ್ನ ಭವಿಷ್ಯದ ಸುತ್ತಲಿನ ಅನಿಶ್ಚಿತತೆಯನ್ನು ಅವರು ನೆನಪಿಸಿಕೊಂಡರು.

ಮತ್ತೆ ಅವಕಾಶ ಸಿಗುತ್ತದೆಯೇ ಎಂಬ ಭಯವಿತ್ತು

” ನಾನು ನನ್ನ 300 ನೇ ಅಂತರರಾಷ್ಟ್ರೀಯ ಪಂದ್ಯವನ್ನು ಆಡಲಿದ್ದೇನೆ ಎಂದು ನಿನ್ನೆ ರಾತ್ರಿಯಷ್ಟೇ ನನಗೆ ತಿಳಿಯಿತು. ಒಬ್ಬ ಕ್ರಿಕೆಟರ್​ ಆಗಿ, ಸಾಮಾನ್ಯವಾಗಿ ಎಲ್ಲಾ ಸ್ವರೂಪಗಳಲ್ಲಿ ಎಷ್ಟು ಪಂದ್ಯಗಳನ್ನು ಆಡಲಾಗಿದೆ ಎಂದು ಯಾರೂ ಲೆಕ್ಕ ಹಾಕುವುದಿಲ್ಲ. ಲಾರ್ಡ್ಸ್‌ನಲ್ಲಿ ನಡೆದ 2017 ರ ವಿಶ್ವಕಪ್ ಫೈನಲ್ ನನಗೆ ಇನ್ನೂ ನೆನಪಿದೆ. ಆ ವಿಶ್ವಕಪ್‌ನಲ್ಲಿ ನಾನು ಉತ್ತಮ ಪ್ರದರ್ಶನ ನೀಡಲಿಲ್ಲ. ಆ ಸಮಯದಲ್ಲಿ, ನನಗೆ ಮತ್ತೆ ಟೀಮ್ ಇಂಡಿಯಾ ಪರ ಆಡುವ ಅವಕಾಶ ಸಿಗುತ್ತದೆಯೇ ಎಂದು ಆಲೋಚಿಸುತ್ತಿದ್ದೆ. ಆ ಕಠಿಣ ಪರಿಸ್ಥಿತಿಯಿಂದ ಚೇತರಿಸಿಕೊಂಡು ಲಾರ್ಡ್ಸ್‌ನಲ್ಲಿ ನನ್ನ 300ನೇ ಅಂತರರಾಷ್ಟ್ರೀಯ ಪಂದ್ಯವನ್ನು ಆಡುವುದು ನಿಜಕ್ಕೂ ವಿಶೇಷವಾಗಿದೆ. ಇದಕ್ಕಿಂತ ಉತ್ತಮವಾದದ್ದು ಯಾವುದೂ ಇಲ್ಲ” ಎಂದರು.

ಸೆಮಿಫೈನಲ್ ಪ್ರವೇಶಿಸುವ ಅವಕಾಶ ಕಳೆದುಕೊಂಡೆವು

ಲಾರ್ಡ್ಸ್‌ನಲ್ಲಿಯೇ ನಮಗೆ ಟಿ20 ವಿಶ್ವಕಪ್ ಸೆಮಿಫೈನಲ್ ತಲುಪುವ ಅವಕಾಶ ಸಿಕ್ಕಿತ್ತು. ಆದರೆ ನಮಗೆ ಆ ಅವಕಾಶವನ್ನು ಬಳಸಿಕೊಳ್ಳಲು ಸಾಧ್ಯವಾಗಲಿಲ್ಲ. ಆದರೆ, ಇದು ಕ್ರಿಕೆಟ್, ನಾವು ಮುಂದುವರಿಯಲೇಬೇಕು. ನೀವು ಶತಕ ಗಳಿಸಿದರೂ ಅಥವಾ ಶೂನ್ಯ ಗಳಿಸಿದರೂ, ನೀವು ಮೈದಾನಕ್ಕೆ ಕಾಲಿಟ್ಟಾಗಲೆಲ್ಲಾ ಶೂನ್ಯದಿಂದ ಪ್ರಾರಂಭಿಸಬೇಕು. ಎಲ್ಲಾ ತಂಡಕ್ಕೂ ಇದು ಅನ್ವಯಿಸುತ್ತದೆ. ಒಳ್ಳೆಯ ದಿನಗಳು ಮತ್ತು ಕೆಟ್ಟ ದಿನಗಳು ಇರುತ್ತವೆ. ಆದರೆ ನಾವು ಯಾವಾಗಲೂ ದೇಶಕ್ಕಾಗಿ ನಮ್ಮ ಅತ್ಯುತ್ತಮ ಪ್ರದರ್ಶನ ನೀಡಲು ಶ್ರಮಿಸುತ್ತೇವೆ. ನಮ್ಮ ತಂಡವು ಈ ಏಕೈಕ ಟೆಸ್ಟ್‌ಗೆ ಸಂಪೂರ್ಣವಾಗಿ ಸಿದ್ಧವಾಗಿದೆ” ಎಂದು ಸ್ಮೃತಿ ಮಂಧಾನ ಹೇಳಿದ್ದಾರೆ.

ಇಂಗ್ಲೆಂಡ್ ಈ ಪಂದ್ಯದಲ್ಲಿ ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದೆ. ಟಿ20 ನಂಬರ್ 1 ಬೌಲರ್ ಆಗಿರುವ ಯುವ ಪ್ರತಿಭೆ ಶ್ರೀಚರಣಿ ಭಾರತ ಪರ ಪದಾರ್ಪಣೆ ಮಾಡಿದರು. ಯಸ್ತಿಕಾ ಭಾಟಿಯಾ ಕೂಡ ಟೆಸ್ಟ್ ತಂಡಕ್ಕೆ ಮರಳಿದರು. ಈ ಪಂದ್ಯದಲ್ಲಿ ಸ್ಮೃತಿ ಮಂಧಾನ 83 ರನ್​ಗಳಿಸಿ ಶತಕ ಮಿಸ್ ಮಾಡಿಕೊಂಡರು.108 ಎಸೆತಗಳಲ್ಲಿ 11 ಬೌಂಡರಿ, 1 ಸಿಕ್ಸರ್ ಸಿಡಿಸಿದರು. ಯಸ್ತಿಕಾ ಭಾಟಿಯಾ 12, ಜೆಮೀಮಾ ರೋಡ್ರಿಗಸ್ 35, ಹರ್ಮನ್​ಪ್ರೀತ್ ಕೌರ್ 58 ರನ್​ಗಳಿಸಿ ಔಟ್ ಆಗಿದ್ದಾರೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed