Last Updated:
ಲಾರ್ಡ್ಸ್ನಲ್ಲಿ ನಡೆಯಲಿರುವ ಟೆಸ್ಟ್ ಪಂದ್ಯದ ಬಗ್ಗೆ ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಮುಖ್ಯ ಕೋಚ್ ಅಮೋಲ್ ಮಜುಂದಾರ್ ಉತ್ಸುಕರಾಗಿರುವುದಾಗಿ ತಿಳಿಸಿದ್ದಾರೆ. ಈ ಪಂದ್ಯಕ್ಕೂ ಮುನ್ನ ನಡೆದ ಪತ್ರಿಕಾಗೋಷ್ಠಿಯಲ್ಲಿ, ನಮ್ಮ ಹುಡುಗಿಯರು ಈ ಅವಕಾಶಕ್ಕಾಗಿ ಕಾತರದಿಂದ ಕಾಯುತ್ತಿದ್ದಾರೆ ಎಂದು ಮಜುಂದಾರ್ ಹೇಳಿದರು.
ಲಾರ್ಡ್ಸ್ ಕ್ರಿಕೆಟ್ ಮೈದಾನವನ್ನು (Lord’s Cricket Ground) ಕ್ರಿಕೆಟ್ನ ಮೆಕ್ಕಾ ಎಂದು ಕರೆಯಲಾಗುತ್ತದೆ. ಜಗತ್ತಿನ ಪ್ರತಿಯೊಬ್ಬ ಕ್ರಿಕೆಟಿಗನು ಒಮ್ಮೆಯಾದರೂ ಈ ಮೈದಾನದಲ್ಲಿ ಆಡುವ ಕನಸು ಕಾಣುತ್ತಾನೆ, ಆದರೆ ಎಲ್ಲರಿಗೂ ಅವಕಾಶ ಸಿಗುವುದಿಲ್ಲ. ಮಹಿಳಾ ಕ್ರಿಕೆಟಿಗರಿಗೂ (Women’s Cricketer) ಈ ಕನಸು ಇದ್ದೇ ಇರುತ್ತದೆ. ಆದರೆ ಈಗ, 142 ವರ್ಷಗಳಲ್ಲಿ ಮೊದಲ ಬಾರಿಗೆ, ಲಾರ್ಡ್ಸ್ನಲ್ಲಿ ಭಾರತೀಯ ಮಹಿಳಾ ಕ್ರಿಕೆಟ್ (India women’s Team) ತಂಡಕ್ಕೆ ಇತಿಹಾಸ ಸೃಷ್ಟಿಸುವ ಅವಕಾಶ ಸಿಕ್ಕಿದೆ. ಜುಲೈ 10 ರಂದು, ಭಾರತ ಮತ್ತು ಇಂಗ್ಲೆಂಡ್ (India vs England) ಮಹಿಳಾ ತಂಡಗಳು ನಡುವೆ ಲಾರ್ಡ್ಸ್ನಲ್ಲಿ ಏಕೈಕ ಟೆಸ್ಟ್ ಪಂದ್ಯಕ್ಕಾಗಿ ಮೈದಾನಕ್ಕೆ ಇಳಿಯಲಿವೆ. ಮಹಿಳಾ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಲಾರ್ಡ್ಸ್ ಮೈದಾನದಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯ ಇದಾಗಿದೆ. ಲಾರ್ಡ್ಸ್ನಲ್ಲಿ ನಡೆಯುವ ಈ ಐತಿಹಾಸಿಕ ಟೆಸ್ಟ್ ಪಂದ್ಯಕ್ಕಾಗಿ ಭಾರತ ಮತ್ತು ಇಂಗ್ಲೆಂಡ್ ಎರಡೂ ದೇಶಗಳು ಉತ್ಸುಕವಾಗಿವೆ.
ಲಾರ್ಡ್ಸ್ನಲ್ಲಿ ನಡೆಯಲಿರುವ ಟೆಸ್ಟ್ ಪಂದ್ಯದ ಬಗ್ಗೆ ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಮುಖ್ಯ ಕೋಚ್ ಅಮೋಲ್ ಮಜುಂದಾರ್ ಉತ್ಸುಕರಾಗಿರುವುದಾಗಿ ತಿಳಿಸಿದ್ದಾರೆ. ಈ ಪಂದ್ಯಕ್ಕೂ ಮುನ್ನ ನಡೆದ ಪತ್ರಿಕಾಗೋಷ್ಠಿಯಲ್ಲಿ, ನಮ್ಮ ಹುಡುಗಿಯರು ಈ ಅವಕಾಶಕ್ಕಾಗಿ ಕಾತರದಿಂದ ಕಾಯುತ್ತಿದ್ದಾರೆ ಎಂದು ಮಜುಂದಾರ್ ಹೇಳಿದರು. ಇತ್ತೀಚೆಗೆ ಮುಕ್ತಾಯಗೊಂಡ ಟಿ20 ವಿಶ್ವಕಪ್ಗೂ ಮುಂಚೆಯೇ ಅವರು ಅದರ ಬಗ್ಗೆ ಮಾತನಾಡಲು ಪ್ರಾರಂಭಿಸಿದ್ದಾರೆ ಎಂದು ಅವರು ಹೇಳಿದ್ದಾರೆ.
“ಟೆಸ್ಟ್ ಪಂದ್ಯ ಆಡುವುದು ಯಾವುದೇ ಭಾರತೀಯ ಕ್ರಿಕೆಟಿಗರಿಗೆ ಕನಸಾಗಿರುತ್ತದೆ ಮತ್ತು ಲಾರ್ಡ್ಸ್ನಲ್ಲಿ ಆಡುವುದು ಒಂದು ದೊಡ್ಡ ಸಾಧನೆಯಾಗಿದೆ. ನಾಳೆ ಬಿಳಿ ಜೆರ್ಸಿ ಧರಿಸುವ ಪ್ರತಿಯೊಬ್ಬ ಆಟಗಾರ್ತಿಗೂ ಇದರ ಬಗ್ಗೆ ಹೆಮ್ಮೆ ಪಡುತ್ತಾರೆ ಎಂದು ನನಗೆ ಖಾತ್ರಿಯಿದೆ” ಎಂದು ಅವರು ಮಜುಂದಾರ್ ಹೇಳಿದ್ದಾರೆ.
ಟಿ20 ವಿಶ್ವಕಪ್ನಿಂದ ನಿರಾಶಾದಾಯಕವಾಗಿ ಪ್ರದರ್ಶನದ ನಂತರ, ಭಾರತ ತಂಡವು ರೆಡ್ ಬಾಲ್ ಪಂದ್ಯಕ್ಕಾಗಿ ಕ್ರಿಕೆಟ್ ಮೈದಾನದಲ್ಲಿ ತರಬೇತಿ ನಡೆಸಿದ್ದಾರೆ. ಭಾರತವು ಈ ವರ್ಷದ ಮಾರ್ಚ್ನಲ್ಲಿ ಕೊನೆಯ ಬಾರಿಗೆ ಟೆಸ್ಟ್ ಪಂದ್ಯವನ್ನು ಆಡಿತು, ಕಳೆದ ವರ್ಷ ಯಾವುದೇ ಪಂದ್ಯವನ್ನು ಆಡಿರಲಿಲ್ಲ. ಭಾರತ ತಂಡ 1976ರಿಂದ ಇಲ್ಲಿಯವರೆಗೆ 42 ಟೆಸ್ಟ್ ಪಂದ್ಯಗಳನ್ನಾಡಿದ್ದು, 8 ಗೆಲುವು, 7 ಸೋಲು ಹಾಗೂ 27 ಪಂದ್ಯಗಳಲ್ಲಿ ಡ್ರಾ ಮಾಡಿಕೊಂಡಿದೆ.













