ರೈಲು ಸಂಖ್ಯೆ 07355 (ಹುಬ್ಬಳ್ಳಿ ಟು ರಾಮೇಶ್ವರಂ): ಭಾನುವಾರ ಸಂಚರಿಸುವ ಈ ರೈಲನ್ನು ಈ ಹಿಂದೆ ಮೇ 31, 2026 ರವರೆಗೆ ಘೋಷಿಸಲಾಗಿತ್ತು. ಈಗ ಇದನ್ನು ಜೂನ್ 7, 2026 ರಿಂದ ಜೂನ್ 28, 2026 ರವರೆಗೆ ಒಟ್ಟು 4 ಹೆಚ್ಚುವರಿ ಟ್ರಿಪ್‌ಗಳಿಗೆ ವಿಸ್ತರಿಸಲಾಗಿದೆ.
ರೈಲು ಸಂಖ್ಯೆ 07313 (ಹುಬ್ಬಳ್ಳಿ ಟು ಕೊಲ್ಲಂ): ಭಾನುವಾರದ ಈ ಸೇವೆಯನ್ನು ಮೇ 31 ರಿಂದ ಜೂನ್ 21, 2026 ರವರೆಗೆ (3 ಹೆಚ್ಚುವರಿ ಟ್ರಿಪ್‌ಗಳು) ವಿಸ್ತರಿಸಲಾಗಿದೆ. ಆದರೆ, ಇಂಜಿನಿಯರಿಂಗ್ ಕಾಮಗಾರಿ ಕಾರಣದಿಂದಾಗಿ ಜೂನ್ 7, 2026 ರಂದು ಈ ರೈಲು ಸೇವೆ ರದ್ದಾಗಿರಲಿದೆ.
ಈ ರೈಲು ಹುಬ್ಬಳ್ಳಿ, ಹಾವೇರಿ, ರಾಣೇಬೆನ್ನೂರು, ಹರಿಹರ, ದಾವಣಗೆರೆ, ಕಡೂರು, ಅರಸೀಕೆರೆ, ತುಮಕೂರು, SMVT ಬೆಂಗಳೂರು, ಕೃಷ್ಣರಾಜಪುರಂ (KJM), ಬಂಗಾರಪೇಟೆ, ಸೇಲಂ, ಈರೋಡ್, ತಿರುಪ್ಪೂರ್, ಕೊಯಂಬತ್ತೂರು, ಪಾಲಕ್ಕಾಡ್, ತೃಶೂರ್, ಆಲುವಾ, ಎರ್ನಾಕುಲಂ ಟೌನ್, ಕೊಟ್ಟಾಯಂ, ಚಂಗನಾಶ್ವೇರಿ, ತಿರುವಲ್ಲಾ, ಚೆಂಗನ್ನೂರು, ಮಾವೇಲಿಕ್ಕರ, ಕಾಯಂಕುಳಂ ಮಾರ್ಗವಾಗಿ ಕೊಲ್ಲಂಗೆ ಪ್ರಯಾಣಿಸಲಿದೆ.
ರೈಲು ಸಂಖ್ಯೆ 07314 (ಕೊಲ್ಲಂ ಟು ಹುಬ್ಬಳ್ಳಿ): ಸೋಮವಾರದ ಈ ಸೇವೆಯನ್ನು ಜೂನ್ 1 ರಿಂದ ಜೂನ್ 22, 2026 ರವರೆಗೆ (3 ಹೆಚ್ಚುವರಿ ಟ್ರಿಪ್‌ಗಳು) ವಿಸ್ತರಿಸಲಾಗಿದೆ. ಆದರೆ, ಜೂನ್ 8, 2026 ರಂದು ಈ ರೈಲು ಸಂಚರಿಸುವುದಿಲ್ಲ.
ಬೆಂಗಳೂರಿನ SMVT ನಿಲ್ದಾಣದಿಂದ ಕೇರಳದ ತಿರುವನಂತಪುರಂಗೆ ಸಂಚರಿಸುವ ಐಟಿ ಮಂದಿಯ ಫೇವರಿಟ್ ರೈಲುಗಳ ಅವಧಿಯನ್ನು ಹೆಚ್ಚುವರಿ ಟ್ರಿಪ್‌ಗಳೊಂದಿಗೆ ವಿಸ್ತರಿಸಲಾಗಿದೆ.
ರೈಲು ಸಂಖ್ಯೆ 06523 (SMVT ಬೆಂಗಳೂರು ಟು ತಿರುವನಂತಪುರಂ): ಸೋಮವಾರದ ಈ ಸೇವೆಯನ್ನು ಜೂನ್ 1 ರಿಂದ ಜೂನ್ 22, 2026 ರವರೆಗೆ (4 ಟ್ರಿಪ್‌ಗಳು) ವಿಸ್ತರಿಸಲಾಗಿದೆ.
ರೈಲು ಸಂಖ್ಯೆ 06524 (ತಿರುವನಂತಪುರಂ ಟು SMVT ಬೆಂಗಳೂರು): ಮಂಗಳವಾರದ ಈ ಸೇವೆಯನ್ನು ಜೂನ್ 2 ರಿಂದ ಜೂನ್ 23, 2026 ರವರೆಗೆ (4 ಟ್ರಿಪ್‌ಗಳು) ಮುಂದುವರಿಸಲಾಗಿದೆ.
ರೈಲು ಸಂಖ್ಯೆ 06547 (SMVT ಬೆಂಗಳೂರು ಟು ತಿರುವನಂತಪುರಂ): ಬುಧವಾರದ ಈ ಸೇವೆಯನ್ನು ಜೂನ್ 3 ರಿಂದ ಜೂನ್ 24, 2026 ರವರೆಗೆ (4 ಟ್ರಿಪ್‌ಗಳು) ವಿಸ್ತರಿಸಲಾಗಿದೆ.
ರೈಲು ಸಂಖ್ಯೆ 06548 (ತಿರುವನಂತಪುರಂ ಟು SMVT ಬೆಂಗಳೂರು): ಗುರುವಾರದ ಈ ಸೇವೆಯನ್ನು ಜೂನ್ 4 ರಿಂದ ಜೂನ್ 25, 2026 ರವರೆಗೆ (4 ಟ್ರಿಪ್‌ಗಳು) ವಿಸ್ತರಣೆ ಮಾಡಲಾಗಿದೆ.
ಈ ರೈಲು SMVT ಬೆಂಗಳೂರು, ಕೃಷ್ಣರಾಜಪುರಂ, ಬಂಗಾರಪೇಟೆ, ಸೇಲಂ ಜಂಕ್ಷನ್, ಈರೋಡ್ ಜಂಕ್ಷನ್, ತಿರುಪ್ಪೂರ್, ಕೊಯಂಬತ್ತೂರು, ಪಾಲಕ್ಕಾಡ್, ತೃಶೂರ್, ಆಲುವಾ, ಎರ್ನಾಕುಲಂ, ಕೊಟ್ಟಾಯಂ, ಚಂಗನಾಶ್ವೇರಿ, ತಿರುವಲ್ಲಾ, ಚೆಂಗನ್ನೂರು, ಕಾಯಂಕುಳಂ ಮತ್ತು ತಿರುವನಂತಪುರಂ ನಾರ್ತ್ (ಕೊಚುವೇಲಿ)ಗೆ ತಲುಪಲಿದೆ.
ರೈಲು ಸಂಖ್ಯೆ 06555 (ಬೆಂಗಳೂರು ಟು ತಿರುವನಂತಪುರಂ): ಜೂನ್ 19 ರಿಂದ 26 ರವರೆಗೆ ವಿಸ್ತರಣೆಯಾಗಿದ್ದರೂ, ಜೂನ್ 5 ಮತ್ತು ಜೂನ್ 12 ರಂದು ಈ ರೈಲು ಸಂಚರಿಸುವುದಿಲ್ಲ. ರೈಲು ಸಂಖ್ಯೆ 06556 (ತಿರುವನಂತಪುರಂ ಟು ಬೆಂಗಳೂರು): ಜೂನ್ 7 ಮತ್ತು ಜೂನ್ 14 ರಂದು ಈ ರೈಲು ಸಂಪೂರ್ಣ ಬಂದ್ ಇರಲಿದೆ.












