India vs Sri Lanka: ಮಾನವ್ ಸುತಾರ್ ಅಲ್ಲ, ಆ ಇಬ್ಬರೇ ನಮ್ಮ ಸೋಲಿಗೆ ಕಾರಣ; ಶ್ರೀಲಂಕಾ ನಾಯಕ ಅಚ್ಚರಿ ಹೇಳಿಕೆ | ಕ್ರೀಡಾ ಸುದ್ದಿ | ACTPnews

ಭಾರತ vs ಶ್ರೀಲಂಕಾ


Last Updated:

ಗಾಲೆಯಲ್ಲಿ ನಾಲ್ಕನೇ ಇನ್ನಿಂಗ್ಸ್‌ನಲ್ಲಿ ಬ್ಯಾಟಿಂಗ್ ಮಾಡುವುದು ಸುಲಭವಲ್ಲ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ಆದರೆ, ಕೆಎಲ್ ರಾಹುಲ್ ಮತ್ತು ದೇವದತ್ ಪಡಿಕ್ಕಲ್ ಮೊದಲ ಇನ್ನಿಂಗ್ಸ್​​ನಲ್ಲಿ ತಮ್ಮ ಆರಂಭವನ್ನು ದೊಡ್ಡ ಸ್ಕೋರ್‌ಗಳಾಗಿ ಪರಿವರ್ತಿಸಿದರು, ಇದರಿಂದಾಗಿ ನಾವು ಒತ್ತಡಕ್ಕೆ ಒಳಗಾದೆವು ಎಂದು ಧನಂಜಯ ತಿಳಿಸಿದ್ದಾರೆ.

ಭಾರತ vs ಶ್ರೀಲಂಕಾ
ಭಾರತ vs ಶ್ರೀಲಂಕಾ

ಗಾಲೆಯಲ್ಲಿ ಮಂಗಳವಾರ ಮುಕ್ತಾಯಗೊಂಡ ಮೊದಲ ಟೆಸ್ಟ್ ಪಂದ್ಯದ ಐದನೇ ಹಾಗೂ ಅಂತಿಮ ದಿನದಂದು ಭಾರತ ತಂಡವು 165 ರನ್‌ಗಳ ಭರ್ಜರಿ ಜಯ ಸಾಧಿಸಿದೆ. ಈ ಮೂಲಕ ಶ್ರೀಲಂಕಾ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ಎಡಗೈ ಸ್ಪಿನ್ನರ್ ಮಾನವ್ ಸುತಾರ್ ತಮ್ಮ ಟೆಸ್ಟ್ ವೃತ್ತಿಜೀವನದ ಅದ್ಭುತ ಆರಂಭವನ್ನು ಮುಂದುವರಿಸಿದ್ದು, ಎರಡನೇ ಇನಿಂಗ್ಸ್‌ನಲ್ಲಿ 23.4 ಓವರ್‌ಗಳಲ್ಲಿ 55 ರನ್‌ ನೀಡಿ 6 ವಿಕೆಟ್‌ ಉರುಳಿಸಿದರು. ಇದರಿಂದಾಗಿ 372 ರನ್‌ಗಳ ಗುರಿ ಬೆನ್ನಟ್ಟಿದ ಶ್ರೀಲಂಕಾ ತಂಡ 77.4 ಓವರ್‌ಗಳಲ್ಲಿ 206 ರನ್‌ಗಳಿಗೆ ಆಲೌಟ್ ಆಯಿತು. ಈ ಪಂದ್ಯದ ನಂತರ ಮಾತನಾಡಿದ ಶ್ರೀಲಂಕಾದ ನಾಯಕ ತಮ್ಮ ಸೋಲಿಗೆ ಕೆಎಲ್ ರಾಹುಲ್-ದೇವದತ್ ಪಡಿಕ್ಕಲ್ ಕಾರಣ ಎಂದು ತಿಳಿಸಿದ್ದಾರೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed