Last Updated:
ಮಂಗಳವಾರ ರಾತ್ರಿ ನಡೆದ ಪಂದ್ಯದಲ್ಲಿ 202ರನ್‌ಗಳ ಗುರಿ ಬೆನ್ನಟ್ಟಿದ ಭಾರತ ತಂಡ ಟೀಮ್ ಇಂಡಿಯಾ 125 ರನ್‌ಗಳ ಹೀನಾಯ ಸೋಲನ್ನು ಅನುಭವಿಸಿತು. ಬೃಹತ್ ಗುರಿಯನ್ನು ಬೆನ್ನಟ್ಟಿದ ಟೀಮ್ ಇಂಡಿಯಾ ಕೇವಲ 76 ರನ್‌ಗಳಿಗೆ ಆಲೌಟ್ ಆಯಿತು. ಇದು ಟಿ20 ಕ್ರಿಕೆಟ್ ಇತಿಹಾಸದಲ್ಲಿ ಟೀಮ್ ಇಂಡಿಯಾದ ಅತ್ಯಂತ ಹೀನಾಯ ಸೋಲಾಗಿದೆ.
ಮಂಗಳವಾರ ಇಂಗ್ಲೆಂಡ್ ವಿರುದ್ಧ ನಡೆದ 5 ಪಂದ್ಯಗಳ ಟಿ20 ಸರಣಿಯ (T20 Series) 3ನೇ ಪಂದ್ಯದಲ್ಲಿ ಟೀಮ್ ಇಂಡಿಯಾ 125 ರನ್‌ಗಳ ಅಂತರದಿಂದ ಸೋಲು ಕಂಡಿತು. ಈ ಪಂದ್ಯದಲ್ಲಿ ಭಾರತ ತಂಡ (Team India) ಹಲವಾರು ಬ್ಲಂಡರ್ಗಳನ್ನ ಮಾಡಿತು. ಆರ್ಸಿಬಿ ಮೆಂಟರ್ ಹಾಗೂ ಮಾಜಿ ಕ್ರಿಕೆಟಿಗ ದಿನೇಶ್ ಕಾರ್ತಿಕ್ (Dinesh Kartik) ಕೆಲವೊಂದು ತಪ್ಪುಗಳನ್ನ ಗುರುತಿಸಿ ಟೀಮ್ ಇಂಡಿಯಾ ಆಡಳಿತ ಮಂಡಳಿಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಪವರ್‌ಪ್ಲೇ ಸಮಯದಲ್ಲಿ ಟೈಲ್-ಎಂಡರ್ ಹರ್ಷಿತ್ ರಾಣಾ ಅವರನ್ನು ಬ್ಯಾಟಿಂಗ್ ಮಾಡಲು ಕಳುಹಿಸುವ ನಿರ್ಧಾರವನ್ನು ಕಟುವಾಗಿ ಟೀಕಿಸಿದರು. ಎಡ-ಬಲ ಬ್ಯಾಟಿಂಗ್ ಸಂಯೋಜನೆಯನ್ನು ಕಾಯ್ದುಕೊಳ್ಳಲು ಹರ್ಷಿತ್ ರಾಣಾ ಅವರನ್ನು ಆರಂಭಿಕ ಓವರ್ಗಳಲ್ಲೇ ಬ್ಯಾಟಿಂಗ್ ಕಳುಹಿಸುವುದು ಸರಿಯಾದ ಕ್ರಮವಲ್ಲ ಎಂದು ಕಾರ್ತಿಕ್ ಅಭಿಪ್ರಾಯಪಟ್ಟಿದ್ದಾರೆ.
ಮಂಗಳವಾರ ರಾತ್ರಿ ನಡೆದ ಪಂದ್ಯದಲ್ಲಿ 202ರನ್‌ಗಳ ಗುರಿ ಬೆನ್ನಟ್ಟಿದ ಭಾರತ ತಂಡ ಟೀಮ್ ಇಂಡಿಯಾ 125 ರನ್‌ಗಳ ಹೀನಾಯ ಸೋಲನ್ನು ಅನುಭವಿಸಿತು. ಬೃಹತ್ ಗುರಿಯನ್ನು ಬೆನ್ನಟ್ಟಿದ ಟೀಮ್ ಇಂಡಿಯಾ ಕೇವಲ 76 ರನ್‌ಗಳಿಗೆ ಆಲೌಟ್ ಆಯಿತು. ಇದು ಟಿ20 ಕ್ರಿಕೆಟ್ ಇತಿಹಾಸದಲ್ಲಿ ಟೀಮ್ ಇಂಡಿಯಾದ ಅತ್ಯಂತ ಹೀನಾಯ ಸೋಲಾಗಿದೆ.
ಪವರ್‌ಪ್ಲೇ ಸಮಯದಲ್ಲಿಯೇ ಟೀಮ್ ಇಂಡಿಯಾ ಐದು ನಿರ್ಣಾಯಕ ವಿಕೆಟ್‌ಗಳನ್ನು ಕಳೆದುಕೊಂಡಿತ್ತು. ಅಭಿಷೇಕ್ ಶರ್ಮಾ, ವೈಭವ್ ಸೂರ್ಯವಂಶಿ, ಇಶಾನ್ ಕಿಶನ್, ಶ್ರೇಯಸ್ ಅಯ್ಯರ್ ಮತ್ತು ಅಕ್ಷರ್ ಪಟೇಲ್ ಮೊದಲ 5 ಓವರ್ಗಳಲ್ಲೇ ವಿಕೆಟ್ ಒಪ್ಪಿಸಿದರು. ಪರಿಣಾಮವಾಗಿ, ತಂಡದ ಆಡಳಿತ ಮಂಡಳಿ ಶಿವಂ ದುಬೆ ಬದಲಿಗೆ ಹರ್ಷಿತ್ ರಾಣಾ ಅವರನ್ನು ಬ್ಯಾಟಿಂಗ್ ಮಾಡಲು ಕಳುಹಿಸಿತು. ಪಂದ್ಯದ ಬಗ್ಗೆ ಕಾಮೆಂಟ್ ಮಾಡುತ್ತಿದ್ದ ದಿನೇಶ್ ಕಾರ್ತಿಕ್, ಹರ್ಷಿತ್ ರಾಣಾ ಬ್ಯಾಟಿಂಗ್ ಮಾಡಲು ಬಂದಿರುವುದನ್ನು ನೋಡಿ ಆಶ್ಚರ್ಯ ವ್ಯಕ್ತಪಡಿಸಿದರು. ಕಾಮೆಂಟರಿ ಸಮಯದಲ್ಲಿ ಅವರು ತಮ್ಮ ಹತಾಶೆಯನ್ನು ವ್ಯಕ್ತಪಡಿಸಿದರು, ಇಂತಹ ವಿಚಿತ್ರ ತಂತ್ರದ ಹಿಂದಿನ ತರ್ಕವನ್ನು ಪ್ರಶ್ನಿಸಿದರು.
” ಹರ್ಷಿತ್ ರಾಣಾ, ಶಿವಂ ದುಬೆಗಿಂತ ಮೊದಲು ಬ್ಯಾಟಿಂಗ್ ಮಾಡಲು ಬಂದಿದ್ದಾರಾ? ಏನ್ ನನ್ನನ್ನು ತಮಾಷೆ ಮಾಡುತ್ತಿದ್ದೀರಾ? ದೇಶೀಯ ಕ್ರಿಕೆಟ್‌ನಲ್ಲಿಯೂ ಸಹ ಪವರ್‌ಪ್ಲೇನಲ್ಲಿ ಹರ್ಷಿತ್ ರಾಣಾ ಬ್ಯಾಟಿಂಗ್ ಮಾಡುವುದನ್ನು ನಾನು ಎಂದಿಗೂ ನೋಡಿಲ್ಲ. ಎಡ-ಬಲ ಬ್ಯಾಟಿಂಗ್ ಸಂಯೋಜನೆಯು ಒಂದು ನಿರ್ದಿಷ್ಟ ಮಟ್ಟಿಗೆ ಮಾತ್ರ ಉಪಯುಕ್ತವಾಗಿದೆ. ಶಿವಂ ದುಬೆಗಿಂತ ಮೊದಲು ಹರ್ಷಿತ್ ರಾಣಾ ಅವರನ್ನು ಬ್ಯಾಟಿಂಗ್ ಮಾಡಲು ಕಳುಹಿಸುವುದು ಸರಿಯಾದ ಕ್ರಮವಲ್ಲ” ಎಂದು ಕಾರ್ತಿಕ್ ಹತಾಶೆಯಿಂದ ಹೇಳಿದರು. ಮ್ಯಾನೇಜ್ಮೆಂಟ್ನ ಈ ತಂತ್ರವು ಭಾರತಕ್ಕೆ ತಿರುಗುಬಾಣವಾಯಿತು. ಹರ್ಷಿತ್ ರಾಣಾ (9) ಮತ್ತು ಶಿವಂ ದುಬೆ (2) ಇಬ್ಬರೂ ಒಂದಂಕಿ ಮೊತ್ತಕ್ಕೆ ವಿಕೆಟ್ ಒಪ್ಪಿಸಿದರು.
ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ ತಂಡವು ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್‌ಗೆ 201 ರನ್ ಗಳಿಸಿತು. ಫಿಲ್ ಸಾಲ್ಟ್ ಅರ್ಧಶತಕ (44 ಎಸೆತಗಳಲ್ಲಿ 70, 7 ಬೌಂಡರಿ ಮತ್ತು 3 ಸಿಕ್ಸರ್‌ಗಳು ಸೇರಿದಂತೆ) ಗಳಿಸಿದರು. ಕೊನೆಯಲ್ಲಿ ಮಿಂಚಿದ ಸ್ಯಾಮ್ ಕರನ್ 24 ಎಸೆತಗಳಲ್ಲಿ 4 ಬೌಂಡರಿಗಳೊಂದಿಗೆ ಅಜೇಯ 41 ರನ್ಗಳಿಸಿದರು. ಭಾರತೀಯ ಬೌಲರ್‌ಗಳಲ್ಲಿ ಪ್ರಿನ್ಸ್ ಯಾದವ್ 30ಕ್ಕೆ2 ಮತ್ತು ಹರ್ಷಿತ್ ರಾಣಾ 40ಕ್ಕೆ2 ವಿಕೆಟ್ ಪಡೆದರೆ, ಅಕ್ಷರ್ ಪಟೇಲ್ ಒಂದು ವಿಕೆಟ್ ಪಡೆದರು.
ಇಂಗ್ಲೆಂಡ್ ಪರ, ಜೋಫ್ರಾ ಆರ್ಚರ್ ಮೂರು 29ಕ್ಕೆ3 ವಿಕೆಟ್ ಪಡೆದರೆ, ಜೋಶ್ ಟಂಗ್ 28ಕ್ಕೆ4 ವಿಕೆಟ್ ಪಡೆದರು. ಈ ಇಬ್ಬರ ಮಾರಕದಾಳಿಗೆ ತತ್ತರಿಸಿದ ಭಾರತ ತಂಡ ಯಾವುದೇ ಹಂತದಲ್ಲೂ ಚೇತರಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಆದಿಲ್ ರಶೀದ್ (2/14) ಎರಡು ವಿಕೆಟ್ ಪಡೆದರೆ, ವಿಲ್ ಜ್ಯಾಕ್ಸ್ (1/5) ಒಂದು ವಿಕೆಟ್ ಪಡೆದರು.
India vs England: ದೇಶಿ ಕ್ರಿಕೆಟ್ನಲ್ಲೂ ನೋಡಿಲ್ಲ? ಪವರ್‌ಪ್ಲೇನಲ್ಲಿ ದುಬೆ ಬದಲಿಗೆ ತಮ್ಮಿಷ್ಟದ ಬ್ಯಾಟರ್ ಕಳುಹಿಸಿದ ಗಂಭೀರ್ ವಿರುದ್ಧ ಕಾರ್ತಿಕ್ ಗರಂ













