India Tour of Ireland 2026: ಕೊನೆಗೂ ಹಠ ಸಾಧಿಸಿ ಗೆದ್ದ ಕೋಚ್ ಗಂಭೀರ್; ಆದರೆ ಟೀಂ ಇಂಡಿಯಾಗೆ ಹೀನಾಯ ಸೋಲು! | ಕ್ರೀಡಾ ಸುದ್ದಿ | ACTPnews

ಕೋಚ್ ಗೌತಮ್ ಗಂಭೀರ್


Last Updated:

ಈ ಗೆಲುವಿನೊಂದಿಗೆ ಎರಡು ಪಂದ್ಯಗಳ ಟಿ20 ಸರಣಿಯಲ್ಲಿ 1-0 ಯೊಂದಿಗೆ ಮುನ್ನಡೆ ಪಡೆದುಕೊಂಡಿದ್ದಾರೆ. ಸರಣಿಯ ಕೊನೆಯ ಪಂದ್ಯ ನಾಳೆ ಅಂದರೆ ಜೂನ್ 28ರ ಭಾನುವಾರದಂದು ನಡೆಯಲಿದೆ.

ಕೋಚ್ ಗೌತಮ್ ಗಂಭೀರ್
ಕೋಚ್ ಗೌತಮ್ ಗಂಭೀರ್

ಟೀಂ ಇಂಡಿಯಾ (Team India) ಹೆಡ್ ಕೋಚ್ ಗೌತಮ್ ಗಂಭೀರ್ (Gautam Gambhir) ತಮ್ಮ ಹಠ ಸಾಧಿಸಿ ಗೆಲುವು ಪಡೆದುಕೊಂಡಿದ್ದಾರೆ. ಟೀಂ ಇಂಡಿಯಾ ವಂಡರ್ ಕಿಡ್ ವೈಭವ್ ಸೂರ್ಯವಂಶಿ (Vaibhav Suryavanshi) ಅವರಿಗೆ ಮೊದಲ ಪಂದ್ಯದಲ್ಲಿ ಬೆಂಚ್‌ಗೆ ಸೀಮಿತ ಮಾಡಿದ್ದಾರೆ. 14 ವರ್ಷದ ಯುವಕನಿಗಾಗಿ ತಂಡದಲ್ಲಿ ಉತ್ತಮ ಪ್ರದರ್ಶನ ನೀಡುತ್ತಿರುವ ಆಟಗಾರರನ್ನು ಡ್ರಾಪ್ ಮಾಡೋದಿಲ್ಲ ಎಂದು ಪರೋಕ್ಷವಾಗಿ (IRE vs IND T20) ಹೇಳಿದ್ದರು. ತಂಡದ ವಂಡರ್ ಕಿಡ್, ಯುವ ಸೆನ್ಸೇಷನ್ ಆದರೂ ತಮ್ಮ ಎದುರು ಸಾಮಾನ್ಯ ಆಟಗಾರ ಮಾತ್ರ ಎಂದು ಸ್ಪಷ್ಟಪಡಿಸಿದ್ದಾರೆ.

ಗಂಭೀರ್ ಅವರ ಈ ನಡೆಯಿಂದ ಅಂತರಾಷ್ಟ್ರೀಯ ಕ್ರಿಕೆಟ್​​ಗೆ ಪಾದಾರ್ಪಣೆ ಮಾಡಬೇಕಿದ್ದ ವೈಭವ್ ಸೂರ್ಯವಂಶಿ ಡ್ರಿಂಕ್ಸ್ ಬಾಯ್ ಆಗಿ ಕೆಲಸ ಮಾಡಿದ್ದರು. ರವಿ ಬಿಷ್ಣೋಯಿ ಅವರ ಜೊತೆ ಡ್ರಿಂಕ್ಸ್ ಕ್ಯಾರಿ ಮಾಡುತ್ತಾ ಕ್ಯಾಮೆರಾ ಕಣ್ಣಿಗೆ ಕಾಣಿಸಿಕೊಂಡರು. ಇದನ್ನು ನೋಡಿದ ಫ್ಯಾನ್ಸ್ ಬೇಸರ ವ್ಯಕ್ತಪಡಿಸಿ ಕಾಮೆಂಟ್ ಮಾಡುತ್ತಿದ್ದಾರೆ. 15 ವರ್ಷದ ಯುವಕನೊಂದಿಗೆ ವಾಟರ್ ಬಾಯ್ ಮಾಡೋದು ಎಷ್ಟು ಸರಿ ಅಂತ ಕೆಲವರು ಪ್ರತಿಕ್ರಿಯೆ ನೀಡಿದ್ದಾರೆ. ಯುವ ಆಟಗಾರನಿಗೆ ಐರ್ಲೆಂಡ್ ತಂಡ ವಿರುದ್ಧ ಅವಕಾಶ ನೀಡಿದ್ದರೆ ಏನಾಗುತ್ತೆ ಅಂತ ಗಂಭೀರ್ ವಿರುದ್ಧ ವಿಮರ್ಶೆಗಳ ಮಳೆಯನ್ನೇ ಸುರಿಸುತ್ತಿದ್ದಾರೆ.

ಪಂದ್ಯ ಆರಂಭಕ್ಕೂ ಮುನ್ನ ವೈಭವ್ ಪಾದಾರ್ಪಣೆ ಮಾಡುತ್ತಾರೆ ಎಂಬ ಹೈಪ್ ಸೃಷ್ಟಿಯಾಗಿತ್ತು. ಅಭಿಮಾನಿಗಳು ಕೂಡ ಇದನ್ನೇ ಭಾವಿಸಿದ್ದರು. ಆದರೆ ಗಂಭೀರ್ ಅವರ ನಡೆಯನ್ನು ಅರಿತುಕೊಂಡಿದ್ದ ಮಾಜಿ ಆಟಗಾರರು ಮಾತ್ರ ವೈಭವ್ ಸೂರ್ಯವಂಶಿ ಪಾದಾರ್ಪಣೆ ಮಾಡೋದು ತಡವಾಗುತ್ತದೆ ಎಂದು ಹೇಳಿದರು. ಇದಕ್ಕೆ ತಕ್ಕಂತೆಯೇ ಬ್ಯಾಟಿಂಗ್ ಕೋಚ್ ಕೂಡ ವೈಭವ್ ಆಡುತ್ತಿಲ್ಲ ಎಂದು ಸುಳಿವು ನೀಡಿದ್ದರು.

ಇಷ್ಟೆಲ್ಲಾ ಆದ ಬಳಿಕವೂ ವೈಭವ್ ಅವಕಾಶ ಸಿಗುತ್ತಾ ಅಂತ ಅಭಿಮಾನಿಗಳು ಕಾದು ಕುಳಿತಿದ್ದರು. ಆದರೆ ಶುಕ್ರವಾರ ಐರ್ಲೆಂಡ್ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ವೈಭವ್‌ಗೆ ಅವಕಾಶ ಇಲ್ಲದಿರೋದು ಅಭಿಮಾನಿಗಳಿಗೆ ನಿರಾಸೆ ಮೂಡಿಸಿತ್ತು. ಐಪಿಎಲ್ 2026ರ ಆವೃತ್ತಿಯಲ್ಲಿ 776 ರನ್ ಗಳೊಂದಿಗೆ ಟಾಪ್ ಸ್ಕೋರರ್ ಆಗಿ ಹೊರಹೊಮ್ಮಿದ್ದರು. ಆದರೂ ವೈಭವ್ ಅವರಿಗೆ ಅವಕಾಶ ಸಿಗಲಿಲ್ಲ ಎಂಬ ನಿರಾಸೆ ಅಭಿಮಾನಿಗಳಲ್ಲಿದೆ.

ಸದ್ಯ ತಂಡದಲ್ಲಿ ಸ್ಥಾನ ಪಡೆದುಕೊಂಡಿರುವ ಆಟಗಾರರಲ್ಲಿ ವೈಭವ್ ಗಿಂತ ಉತ್ತಮವಾಗಿ ಆಟಗಾರರು ಯಾರು ಎಂದು ಹಲವರು ಪ್ರಶ್ನಿಸುತ್ತಿದ್ದಾರೆ. ಆಯ್ಕೆ ಸಮಿತಿ ವೈಭವ್ ಅವರನ್ನು ಆಯ್ಕೆ ಮಾಡಿಕೊಂಡು ಐರ್ಲೆಂಡ್‌ಗೆ ಕಳುಹಿಸಿದರೂ, ಕೋಚ್ ಗಂಭೀರ್ ಮಾತ್ರ ಆತನ ಪಾದಾರ್ಪಣೆಯನ್ನು ತಡ ಮಾಡುತ್ತಿದ್ದಾರೆ ಎಂದು ಅಭಿಮಾನಿಗಳು ಆರೋಪಿಸುತ್ತಿದ್ದಾರೆ.

ಒಂದು ಕಡೆ ಪಂದ್ಯದಲ್ಲಿ ವೈಭವ್ ಅವರಿಗೆ ಅವಕಾಶ ನೀಡಿದರೆ ಟೀಂ ಇಂಡಿಯಾಗೆ ಏನಾದರೂ ನಷ್ಟ ಆಗುತ್ತಿತ್ತಾ? ಎಂದು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಈ ಪಂದ್ಯದಲ್ಲಿ ವೈಭವ್ ಸೂರ್ಯವಂಶಿ ಕಣಕ್ಕೆ ಇಳಿದಿದ್ದರೆ 15 ವರ್ಷ 91 ದಿನಗಳ ವಯಸ್ಸಿನಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್ ಆಡಿದ ಮೊದಲ ಭಾರತದ ಕ್ರಿಕೆಟರ್ ಆಗಿ ಇತಿಹಾಸ ನಿರ್ಮಾಣ ಆಗುತ್ತಿತ್ತು. ಇದರೊಂದಿಗೆ ಸಚಿನ್ ಅವರ ದಾಖಲೆ ಕೂಡ ಬ್ರೇಕ್ ಆಗುತ್ತಿತ್ತು. ಕನಿಷ್ಠ ಎರಡನೇ ಪಂದ್ಯದಲ್ಲಿ ಆದರೂ ವೈಭವ್ ಅವರಿಗೆ ಅವಕಾಶ ಸಿಗಬೇಕು ಎಂದು ಬಯಸುತ್ತಿದ್ದಾರೆ. ವೈಭವ್ ಸೂರ್ಯವಂಶಿ ಅವರಿಗೆ ಅವಕಾಶ ನೀಡುವ ಬಗ್ಗೆ ನಿಮ್ಮ ಏನು ಅಂತ ಕಾಮೆಂಟ್ ಮಾಡಿ.

ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಐರ್ಲೆಂಡ್ ನಿಗದಿತ 20 ಓವರ್ ಗಳಲ್ಲಿ 9 ವಿಕೆಟ್ ಕಳೆದುಕೊಂಡು 182 ರನ್ ಗಳಿಸಿತು. ಕ್ಯಾಪ್ಟನ್ ಲೋರ್ಕನ್ ಟಕರ್ (36 ಎಸೆತಗಳಲ್ಲಿ 5 ಬೌಂಡರಿ 2 ಸಿಕ್ಸರ್ ಗಳೊಂದಿಗೆ 50 ರನ್) ಅರ್ಧ ಶತಕ ಗಳಿಸಿದರೆ, ಗ್ಯಾರೆತ್ ಡೆಲನಿ (32 ಎಸೆತಗಳಲ್ಲಿ 3 ಬೌಂಡರಿ, 3 ಸಿಕ್ಸರ್ ಗಳೊಂದಿಗೆ 49 ರನ್) ಗಳಿಸಿ ಅರ್ಧ ಶತಕ ಗಳಿಸುವ ಅವಕಾಶವನ್ನು ಮಿಸ್ ಮಾಡಿಕೊಂಡಿದ್ದಾರೆ. ಭಾರತದ ಪರ ಹರ್ಷಿತ್ ರಾಣಾ (3/24), ಅರ್ಷದೀಪ್ ಸಿಂಗ್ (2/28), ಅಕ್ಷರ್ ಪಟೇಲ್ (2/33) ವಿಕೆಟ್ ಪಡೆದುಕೊಂಡಿದ್ದರು.

ಇದನ್ನೂ ಓದಿ: T20I WC Semifinal Scenarios: ಅಸ್ಟ್ರೇಲಿಯಾ ವಿರುದ್ಧ ಗೆದ್ದರೂ ಭಾರತದ ಕೈಯಲ್ಲಿಲ್ಲ ಸೆಮಿಫೈನಲ್ ಚಾನ್ಸ್! ಆ ತಂಡದ ಗೆಲುವಿನ ಅಂತರದಲ್ಲಿದೆ ಭಾರತದ ಕನಸು

ಆ ಬಳಿಕ ಬ್ಯಾಟಿಂಗ್ ಮಾಡಿದ 18.5 ಓವರ್ ಗಳಲ್ಲಿ 148 ರನ್ ಗಳೊಂದಿಗೆ ಆಲೌಟ್ ಆಗಿ ಹೀನಾಯ ಸೋಲು ಅನುಭವಿಸಿದ್ದರು. ಅಭಿಷೇಕ್ ಶರ್ಮಾ (20 ಎಸೆತಗಳಲ್ಲಿ 7 ಬೌಂಡರಿ, 2 ಸಿಕ್ಸರ್ ಗಳೊಂದಿಗೆ 49 ರನ್), ಶಿವಮ್ ದುಬೆ (14 ಎಸೆತಗಳಲ್ಲಿ ಬೌಂಡರಿ, 2 ಸಿಕ್ಸರ್ ಗಳೊಂದಿಗೆ 25 ರನ್) ಗಳಿಸಿದರೆ, ಉಳಿದ ಬ್ಯಾಟರ್ ಗಳು ವಿಫಲರಾದರು. ಈ ಪಂದ್ಯಕ್ಕೂ ಮುನ್ನ ಭಾರತದ ವಿರುದ್ಧ ಆಡಿದ್ದ 8 ಪಂದ್ಯಗಳಲ್ಲಿ ಐರ್ಲೆಂಡ್ ಒಂದು ಪಂದ್ಯದಲ್ಲೂ ಗೆಲುವು ಪಡೆದುಕೊಂಡಿಲ್ಲ. ಈ ಗೆಲುವಿನೊಂದಿಗೆ ಎರಡು ಪಂದ್ಯಗಳ ಟಿ20 ಸರಣಿಯಲ್ಲಿ 1-0 ಯೊಂದಿಗೆ ಮುನ್ನಡೆ ಪಡೆದುಕೊಂಡಿದ್ದಾರೆ. ಸರಣಿಯ ಕೊನೆಯ ಪಂದ್ಯ ನಾಳೆ ಅಂದರೆ ಜೂನ್ 28ರ ಭಾನುವಾರದಂದು ನಡೆಯಲಿದೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed