Hemanth Rao: ಕನ್ನಡದ ಬಾಂಡ್ ಡೈರೆಕ್ಟರ್ ಮೀಟ್ ಆಗಿದ್ದ ಹೇಮಂತ್ ರಾವ್, ಭಗವಾನ್ ಹೇಳಿದ ಆ ಕತೆ ಹೇಗಿತ್ತು? | | ACTPnews

ಕನ್ನಡದ ಬಾಂಡ್ ಡೈರೆಕ್ಟರ್ ಮೀಟ್ ಆಗಿದ್ದ ಹೇಮಂತ್ ರಾವ್!


Last Updated:

ಡೈರೆಕ್ಟರ್ ಹೇಮಂತ್ ರಾವ್ ಅವರು ಕನ್ನಡದ ಬಾಂಡ್ ಸಿನಿಮಾ ಡೈರೆಕ್ಟರ್ ಭಗವಾನ್ ಅವರನ್ನ ಮೀಟ್ ಆಗಿದ್ದರು. ರಾಜ್‌ಗಾಗಿಯೇ ಮಾಡಿದ್ದ ಆ ಒಂದು ಕತೆಯನ್ನು ಕೇಳಿದ್ದರು. ಮುಂದೇನಾಯಿತು ಅನ್ನೋದು ಇಲ್ಲಿದೆ ಓದಿ.

ಕನ್ನಡದ ಬಾಂಡ್ ಡೈರೆಕ್ಟರ್ ಮೀಟ್ ಆಗಿದ್ದ ಹೇಮಂತ್ ರಾವ್!
ಕನ್ನಡದ ಬಾಂಡ್ ಡೈರೆಕ್ಟರ್ ಮೀಟ್ ಆಗಿದ್ದ ಹೇಮಂತ್ ರಾವ್!

ಡೈರೆಕ್ಟರ್ ಹೇಮಂತ್ ರಾವ್ (Hemanth Rao) ಅವರಿಗೆ ಬಾಂಡ್‌ ಸಿನಿಮಾಗಳು ಅಂದ್ರೆ ತುಂಬಾನೆ ಇಷ್ಟ ಆಗುತ್ತವೆ. ಬಾಂಡ್ ರೂಪದಲ್ಲಿ ಇವರು ಮೊದಲು ರಾಜಕುಮಾರ್ (Rajkumar) ಅವರನ್ನೆ ನೋಡಿದ್ದರು. ರಾಜಕುಮಾರ್ ಅವರ ಗೋವಾದಲ್ಲಿ ಸಿಐಡಿ 999, ಜೇಡರ ಬಲೆ, ಆಪರೇಷನ್ ಡೈಮಂಡ್ ರಾಕೆಟ್ ಚಿತ್ರಗಳನ್ನ ನೋಡಿದ್ದಾರೆ. ಆದರೆ, ಇವರು ಇಂಗ್ಲಿಷ್ ಬಾಂಡ್ ಸಿನಿಮಾಗಳನ್ನ ನೋಡಿದ್ಮೇಲೇನೆ ಇವರಿಗೆ ಕನ್ನಡದ ಬಾಂಡ್ ಸಿನಿಮಾಗಳನ್ನ ಇಲ್ಲಿಂದಲೇ ಸ್ಪೂರ್ತಿ ಪಡೆದು ಮಾಡಿದ್ದಾರೆ ಅಂತ ಗೊತ್ತಾಗಿದೆ. ಆದರೆ, ಇವರಲ್ಲಿ ಬಾಂಡ್ ಸಿನಿಮಾಗಳ (Bond Movies) ಬಗ್ಗೆ ಸಿಕ್ಕಾಪಟ್ಟೆ ಆಸಕ್ತಿನೂ ಇದೆ. ಅಂದಿನ ಸಿಐಡಿ 999 ಚಿತ್ರವನ್ನ ಈ ಕಾಲಕ್ಕೂ ಮಾಡ್ಬೇಕು ಅಂತಲೂ ಕತೆ ಮಾಡಿದ್ದರು. ಬಾಂಡ್ ಸಿನಿಮಾಗಳ ಡೈರೆಕ್ಟರ್ ಭಗವಾನ್ ಅವರನ್ನು ಮೀಟ್ ಆಗಿದ್ದರು. ಆಗ ಏನಾಯಿತು ಅನ್ನೋದನ್ನು ಹೇಮಂತ್ ರಾವ್ (Hemanth Rao) ಹೇಳಿಕೊಂಡಿದ್ದಾರೆ. ಅದರ ವಿವರ ಇಲ್ಲಿದೆ ಓದಿ.

ಡೈರೆಕ್ಟರ್ ಭಗವಾನ್ ಹೇಳಿದ ಕತೆ…

ಡೈರೆಕ್ಟರ್ ಭಗವಾನ್ ಅವರನ್ನ ಹೇಮಂತ್ ರಾವ್ ಮೀಟ್ ಆಗಿದ್ದರು. ರಾಜಕುಮಾರ್ ಅವರಿಗೆ ಮಾಡಿದ್ದ ಆ ಕತೆ ಅಷ್ಟೆ ಚೆನ್ನಾಗಿತ್ತು. ತುಂಬಾನೆ ಶ್ರದ್ಧೆಯಿಂದಲೇ ಭಗವಾನ್ ಆ ಕತೆ ಮಾಡಿದ್ದರು.
Director Hemanth Rao heard the Bond story from Director Bhagavan before Operation Dream Theatre

ಭಗವಾನ್ ಹೇಳಿದ ಆ ಕತೆ ಹೇಗಿತ್ತು ಗೊತ್ತಾ?

(ಚಿತ್ರ ಕೃಪೆ: ಹೇಮಂತ್ ರಾವ್ ಇನ್‌ಸ್ಟಾಗ್ರಾಮ್)

ಹೇಮಂತ್ ಬಂದಾಗ ಅದನ್ನ ಹೇಳಿದರು. ಈ ಒಂದು ಕತೆಯಲ್ಲಿ ವಿಮಾನ ಬರೋದೆಲ್ಲ ಯೋಚನೆ ಮಾಡಿದ್ದರು. ಸಬ್‌ಮರೀನ್‌ ಕೂಡ ಪ್ಲಾನ್ ಮಾಡಿದ್ದರು. ತುಂಬಾನೆ ಫ್ಯಾಷಿನೇಟ್ ಆಗಿಯೇ ಮಾಡಿದ್ದರು. ಅಷ್ಟೆ ಪ್ರೀತಿಯಿಂದಲೇ ಇಡೀ ಕತೆಯನ್ನ ಮಗುವಿಗೆ ಹೇಳುವ ರೀತಿನೇ ಭಗವಾನ್ ಅವರು ಹೇಮಂತ್‌ ಅವರಿಗೆ ಹೇಳಿದ್ದರು.

ಅಪ್ಪು ಹೇಳಿದ್ದಕ್ಕೆ ಮೀಟ್

ಹೇಮಂತ್ ಅವರು ಭಗವಾನ್ ಅವರನ್ನ ಮೀಟ್ ಆಗೋಕೆ ಕಾರಣ ಕೂಡ ಇತ್ತು. ಒಮ್ಮೆ ಪುನೀತ್ ಅವರಿಗೆ ಹೇಮಂತ್ ರಾವ್ ಅವರು ಒಂದು ಕತೆ ಮಾಡಿದ್ದರು. ಅನಂತ್ ನಾಗ್ ಅವರು ಇಲ್ಲಿ ಮೆಂಟರ್‌ ಆಗಿರುತ್ತಾರೆ. ಪುನೀತ್ ಇಲ್ಲಿ ಲೀಡ್ ಅಲ್ಲಿಯೇ ಇರ್ತಾರೆ.

ಹಾಗೆ ಇದು ಬಾಂಡ್ ಚಿತ್ರವೇ ಆಗಿತ್ತು. ಗೋವಾದಲ್ಲಿ ಸಿಐಡಿ 999 ಚಿತ್ರದ ಇಂದಿನ ವರ್ಶನ್ ಕತೆ ಇದಾಗಿತ್ತು. ಆದರೆ, ಇದು ಕಾರ್ಯರೂಪಕ್ಕೆ ಬರಲೇ ಇಲ್ಲ. ಆದರೆ, ಪುನೀತ್ ಆಗ ಒಂದು ಮಾತು ಹೇಳಿದ್ದರು. ಅಪ್ಪನಿಗಾಗಿಯೇ ಭಗವಾನ್ ಸರ್ ಒಂದು ಬಾಂಡ್ ಕತೆ ಮಾಡಿದ್ದಾರೆ. ಅದನ್ನ ಒಮ್ಮೆ ಕೇಳಿ ಅಂತಲೇ ಹೇಳಿದ್ದರು.

Director Hemanth Rao heard the Bond story from Director Bhagavan before Operation Dream Theatre

ಅಪ್ಪು ಹೇಳಿದ್ದಕ್ಕೆ ಮೀಟ್

(ಚಿತ್ರ ಕೃಪೆ: ವೈಶಾಕ್ ಜೆ.ಫಿಲ್ಮ್ಸ್‌ ಸಂದರ್ಶನದ ವಿಡಿಯೋ)

ಅದಕ್ಕೇನೆ ಹೇಮಂತ್ ಅವರು ಭಗವಾನ್ ಅವರನ್ನ ಮೀಟ್ ಆಗಿದ್ದರು. ರಾಜ್‌ಕುಮಾರ್ ಅವರಿಗಾಗಿಯೇ ಮಾಡಿದ್ದ ಬಾಂಡ್ ಕಥೆ ಕೇಳಿದ್ದರು. ಆದರೆ, ಹೇಮಂತ್ ಈಗ ಮಾಡಿರೋ 666 ಆಪರೇಷನ್ ಡ್ರೀಮ್ ಥಿಯೇಟರ್ ಚಿತ್ರ ಆಗಿನ ಸಿನಿಮಾ ತರವೇ ಇದೆ. ಆದರೆ, ಇದು ಸ್ಟೇಟ್ ಸಬ್ಜೆಕ್ಟ್ ಅಲ್ಲ ಅಂತ ಹೇಳಿಕೊಂಡಿದ್ದಾರೆ.

ಟೀಸರ್ ನೋಡಿದರೆ ಗೊತ್ತಾಗುತ್ತೆ

666 ಚಿತ್ರದ ಟೀಸರ್ ಜುಲೈ-3 ರಂದು ರಿಲೀಸ್ ಆಗುತ್ತದೆ. ಆಗ ಇದು ಸ್ಟ್ರೇಟ್ ಸಬ್ಜೆಕ್ಟ್ ಅಲ್ಲ ಅಂತ ಗೊತ್ತಾಗುತ್ತದೆ. ಆದರೆ, ಇದು ರಾಜಕುಮಾರ್ ಅವರ ಸಿನಿಮಾಗಳ ರೀತಿನೇ ಇರುತ್ತದೆ ಅಂತಲೂ ಹೇಮಂತ್ ಹೇಳಿಕೊಂಡಿದ್ದಾರೆ.

ರಾಜಕುಮಾರ್ ಅವರ ಬಾಂಡ್ ಸಿನಿಮಾಗಳನ್ನ ನೋಡಿದಾಗ ತಮಗೆ ಅದೆಷ್ಟು ಖುಷಿ ಆಗ್ತಾ ಇತ್ತು ಅನ್ನೋದನ್ನು ಇಲ್ಲಿ ಹೇಳಿಕೊಂಡಿದ್ದಾರೆ. ಒಟ್ಟಾರೆ, ರಾಜಕುಮಾರ್ ಅವರ ಬಾಂಡ್‌ ಸಿನಿಮಾಗಳ ಸ್ಪೂರ್ತಿ ಇವರ 666 ಆಪರೇಷನ್ ಡ್ರೀಮ್ ಥಿಯೇಟರ್ ಅಲ್ಲಿದೆ ಅಂತ ಹೇಳಬಹುದು.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed