Last Updated:
Independence Day: ಸ್ವಾತಂತ್ರ್ಯ ಬಂದು ಎರಡು ದಿನ ಅಂದರೆ 1947, ಆಗಸ್ಟ್ 17ರವರೆಗೂ ಅದೆಷ್ಟೋ ಪಂಜಾಬ್ ಮತ್ತು ಬಂಗಾಳದಲ್ಲಿ ವಾಸಿಸುವ ಲಕ್ಷಾಂತರ ಜನರಿಗೆ, ಒಂದು ನಿರ್ಣಾಯಕ ಪ್ರಶ್ನೆಗೆ ಉತ್ತರಿಸಲಾಗಲಿಲ್ಲ. ಅವರು ಭಾರತದಲ್ಲಿದ್ದಾರೋ ಅಥವಾ ಪಾಕಿಸ್ತಾನದಲ್ಲಿದ್ದಾರೋ ಎಂಬುದೇ ಅವರಿಗೆ ಪ್ರಶ್ನೆಯಾಗಿತ್ತಂತೆ!
ಭಾರತವು (India) ಆಗಸ್ಟ್ 15, 1947 ರಂದು ಸ್ವಾತಂತ್ರ್ಯವನ್ನು (independence) ಪಡೆಯಿತು. ಅಸಂಖ್ಯಾತ ಜನರ ತ್ಯಾಗ, ಬಲಿದಾನ, ಅದೆಷ್ಟೋ ವರ್ಷಗಳ ನಿರಂತರ ಹೋರಾಟದಿಂದ ಭಾರತ ಸ್ವಾತಂತ್ರ್ಯ ಪಡೆಯಿತು. ಅದಕ್ಕೂ ಒಂದು ದಿನ ಮೊದಲು ಅಂದರೆ ಆಗಸ್ಟ್ 14ರಂದು ಪಾಕಿಸ್ತಾನಕ್ಕೆ (Pakistan) ಸ್ವಾತಂತ್ರ್ಯ ಸಿಕ್ಕಿತು. ಆದರೆ ಸ್ವಾತಂತ್ರ್ಯ ಬಂದು ಎರಡು ದಿನ ಅಂದರೆ 1947, ಆಗಸ್ಟ್ 17ರವರೆಗೂ ಅದೆಷ್ಟೋ ಪಂಜಾಬ್ (Punjab) ಮತ್ತು ಬಂಗಾಳದಲ್ಲಿ (Bengal) ವಾಸಿಸುವ ಲಕ್ಷಾಂತರ ಜನರಿಗೆ, ಒಂದು ನಿರ್ಣಾಯಕ ಪ್ರಶ್ನೆಗೆ ಉತ್ತರಿಸಲಾಗಲಿಲ್ಲ. ಅವರು ಭಾರತದಲ್ಲಿದ್ದಾರೋ ಅಥವಾ ಪಾಕಿಸ್ತಾನದಲ್ಲಿದ್ದಾರೋ ಎಂಬುದೇ ಅವರಿಗೆ ಪ್ರಶ್ನೆಯಾಗಿತ್ತಂತೆ. ಅದಕ್ಕೆ ಕಾರಣ ದೇಶದ ಭವಿಷ್ಯವನ್ನು ನಿರ್ಧರಿಸುವ ಗಡಿಯನ್ನು (border) ಆಗಸ್ಟ್ 17 ರವರೆಗೆ ಅಂದರೆ ಸ್ವಾತಂತ್ರ್ಯ ಪಡೆದ ಎರಡು ದಿನಗಳ ನಂತರವೂ ಬಹಿರಂಗಪಡಿಸಿರಲಿಲ್ವಂತೆ!














