Last Updated:
ಭಾರತ ತಂಡವು 2026ರ ಹಾಕಿ ವಿಶ್ವಕಪ್ನಲ್ಲಿ ಶುಭಾರಂಭ ಮಾಡಿದೆ. ವೇಲ್ಸ್ ವಿರುದ್ಧ ಗೆದ್ದು ಭಾರತ ತನ್ನ ಅಭಿಯಾನವನ್ನು ಆರಂಭಿಸಿದೆ. ಈ ಪಂದ್ಯದೊಂದಿಗೆ ಭಾರತ ಇತಿಹಾಸ ಸೃಷ್ಟಿಸಿದೆ.
2026ರ ಪುರುಷರ ಹಾಕಿ (Hockey) ವಿಶ್ವಕಪ್ (World Cup) ಅದ್ದೂರಿಯಾಗಿ ಶುರುವಾಗಿದೆ. ಹಾಕಿ ವಿಶ್ವಕಪ್ ಟೂರ್ನಿ ನೆದರ್ಲ್ಯಾಂಡ್ಸ್(Netherlands)ನ ಆಮ್ಸ್ಟೆಲ್ವೀನ್ ನಗರದ ವ್ಯಾಗ್ನರ್ ಕ್ರೀಡಾಂಗಣದಲ್ಲಿ ನಡೆಯುತ್ತಿದೆ. ಬೆಲ್ಜಿಯಂ (Belgium) ಮತ್ತು ನೆದರ್ಲ್ಯಾಂಡ್ಸ್ ಜಂಟಿಯಾಗಿ ಹಾಕಿ ವಿಶ್ವಕಪ್ನನ್ನು ಆಯೋಜಿಸಿವೆ. ಜಗತ್ತೆಲ್ಲಾ ಹಾಕಿ ವಿಶ್ವಕಪ್ ಮೇಲೆ ಕಣ್ಣಿಟ್ಟಿದೆ. ಭಾರತ (India) ಮತ್ತು ಪಾಕಿಸ್ತಾನ(Pakistan)ವೂ ಟೂರ್ನಿಯಲ್ಲಿ ಭಾಗವಹಿಸುತ್ತಿವೆ. ವೇಲ್ಸ್ (Wales) ವಿರುದ್ಧದ ಮೊದಲ ಪಂದ್ಯದಲ್ಲಿ ಭಾರತ ತಂಡ ಇತಿಹಾಸ ಸೃಷ್ಟಿಸಿದೆ. ಟೀಮ್ ಇಂಡಿಯಾ ಇದುವರೆಗೆ ಯಾರೂ ಮಾಡದ ಸಾಧನೆ ಮಾಡಿದೆ. ಈ ದಿನ ಭಾರತ ತಂಡವು ಭರ್ಜರಿ ಗೆಲುವನ್ನೂ ಸಾಧಿಸಿತು.














