Last Updated:
ಭಾರತ ಮತ್ತು ಪಾಕಿಸ್ತಾನ ಮಹಿಳಾ ತಂಡಗಳು ಎಡ್ಜ್ ಬಾಸ್ಟನ್ ನಲ್ಲಿ ನಡೆಯುತ್ತಿರುವ ಮಹಿಳಾ ಟಿ 20 ವಿಶ್ವಕಪ್ 2026 ರಲ್ಲಿ ಮುಖಾಮುಖಿಯಾಗಿವೆ. ಟೀಂ ಇಂಡಿಯಾ ನಾಯಕಿ ಹರ್ಮನ್ ಪ್ರೀತ್ ಕೌರ್ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದ್ದಾರೆ.
ಭಾರತ ಮತ್ತು ಪಾಕಿಸ್ತಾನ ಮಹಿಳಾ ತಂಡಗಳು ಎಡ್ಜ್ ಬಾಸ್ಟನ್ ನಲ್ಲಿ ನಡೆಯುತ್ತಿರುವ ಮಹಿಳಾ ಟಿ 20 ವಿಶ್ವಕಪ್ 2026 ರಲ್ಲಿ ಮುಖಾಮುಖಿಯಾಗಿವೆ. ಟೀಂ ಇಂಡಿಯಾ ನಾಯಕಿ ಹರ್ಮನ್ ಪ್ರೀತ್ ಕೌರ್ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದ್ದಾರೆ. ಹಿಂದಿನ ಟೂರ್ನಿಗಳಂತೆ ಭಾರತ ನಾಯಕಿ ಮತ್ತೊಮ್ಮೆ ಪಾಕಿಸ್ತಾನದ ನಾಯಕಿ ಫಾತಿಮಾ ಸನಾ ಜೊತೆ ಕೈಕುಲುಕಿಲ್ಲ. ಏಷ್ಯಾಕಪ್ನಿಂದಲೂ ಇದು ಹೀಗೆ ಮುಂದುವರಿದುಕೊಂಡು ಬರುತ್ತಿದೆ. ಭಾರತ-ಪಾಕಿಸ್ತಾನ ತಂಡಗಳು ಯಾವುದೇ ವಯೋಮಾನದ ಟೂರ್ನಿ ನಡೆದರೂ ನಾಯಕರು ಹ್ಯಾಂಡ್ಶೇಕ್ ಮಾಡುವ ಪ್ರೋಟೋಕಾಲ್ಗಳನ್ನ ಅನುಸರಿಸುತ್ತಿಲ್ಲ.
ಪಾಕಿಸ್ತಾನದ ಮಹಿಳಾ ಪ್ಲೇಯಿಂಗ್ XI: ಗುಲ್ ಫಿರೋಜಾ, ಮುನೀಬಾ ಅಲಿ (ವಿಕೀ), ಆಯೇಶಾ ಜಾಫರ್, ಸೈರಾ ಜಬೀನ್, ನತಾಲಿಯಾ ಪರ್ವೈಜ್, ಅಲಿಯಾ ರಿಯಾಜ್, ಫಾತಿಮಾ ಸನಾ (ನಾಯಕ), ರಮೀನ್ ಶಮೀಮ್, ನಶ್ರಾ ಸಂಧು, ಸಾದಿಯಾ ಇಕ್ಬಾಲ್, ತಸ್ಮಿಯಾ ರುಬಾಬ್
ಭಾರತ ಮಹಿಳಾ ಪ್ಲೇಯಿಂಗ್ XI: ಸ್ಮೃತಿ ಮಂಧಾನ , ಶಫಾಲಿ ವರ್ಮಾ, ಜೆಮಿಮಾ ರಾಡ್ರಿಗಸ್, ಹರ್ಮನ್ಪ್ರೀತ್ ಕೌರ್ (ನಾಯಕ), ರಿಚಾ ಘೋಷ್ (ವಿಕೆ), ದೀಪ್ತಿ ಶರ್ಮಾ, ಭಾರತಿ ಫುಲ್ಮಾಲಿ, ಶ್ರೀ ಚರಣಿ, ಕ್ರಾಂತಿ ಗೌಡ್, ಶ್ರೇಯಾಂಕಾ ಪಾಟೀಲ್, ಅರುಂಧತಿ ರೆಡ್ಡಿ
IND-W vs PAK-W: ಪಾಕಿಸ್ತಾನ ವಿರುದ್ಧ ಟಾಸ್ ಗೆದ್ದ ಭಾರತ ತಂಡದಿಂದ ಬ್ಯಾಟಿಂಗ್ ಆಯ್ಕೆ! ವಿಶ್ವಕಪ್ನ ಮೊದಲ ಪಂದ್ಯದಲ್ಲಿ ಕನ್ನಡತಿಗೆ ಚಾನ್ಸ್













