Last Updated:
ಜಿಂಬಾಬ್ವೆ ಪ್ರವಾಸಕ್ಕೆ ಹೋಗುವ ಮುನ್ನ ಭಾರತ ತಂಡಕ್ಕೆ ದೊಡ್ಡ ಹಿನ್ನಡೆ ಆಗಿದೆ. ಪ್ರಮುಖ ಸ್ಪಿನ್ನರ್ ವರುಣ್ ಚಕ್ರವರ್ತಿ ಟಿ20 ಸರಣಿಯಿಂದ ಹೊರಗುಳಿದಿದ್ದಾರೆ.
ಭಾರತ (India) ಮತ್ತು ಇಂಗ್ಲೆಂಡ್ (England) ನಡುವಿನ ಟಿ20 ಸರಣಿ ಇತ್ತೀಚೆಗೆ ಮುಗಿದಿದೆ. ಈಗ ಟೀಮ್ ಇಂಡಿಯಾ ಅಭಿಮಾನಿಗಳಿಗೆ ಶಾಕಿಂಗ್ ಸುದ್ದಿ ಬಂದಿದೆ. ಜಿಂಬಾಬ್ವೆ (Zimbabwe) ವಿರುದ್ಧದ ಟಿ20 ಸರಣಿಯಿಂದ ಸ್ಟಾರ್ ಸ್ಪಿನ್ನರ್ ವರುಣ್ ಚಕ್ರವರ್ತಿ (Varun Chakravarthy) ಹೊರಗುಳಿದಿದ್ದಾರೆ. ಕೆಲವು ದಿನಗಳ ಹಿಂದೆ ಬಿಸಿಸಿಐ (BCCI) ಜಿಂಬಾಬ್ವೆ ಪ್ರವಾಸಕ್ಕೆ ತಂಡವನ್ನು ಘೋಷಿಸಿದ್ದು, ಅದರಲ್ಲಿ ವರುಣ್ ಸಹ ಇದ್ದರು. ಆದರೆ ಈಗ ಅವರು ಸರಣಿಯಲ್ಲಿ ಆಡಲು ಸಾಧ್ಯವಿಲ್ಲ ಎಂದು ವರದಿಯಾಗಿದೆ. ಅವರ ಸ್ಥಾನದಲ್ಲಿ ಫ್ಲಾಫ್ ಆಟಗಾರನಿಗೆ ಮತ್ತೆ ಚಾನ್ಸ್ ನೀಡಲಾಗಿದೆ.
ಲೆಗ್ ಸ್ಪಿನ್ನರ್ ವರುಣ್ ಚಕ್ರವರ್ತಿ ಅವರು ಮಂಡಿಯ ಗಾಯದಿಂದಾಗಿ ಭಾರತ-ಜಿಂಬಾಬ್ವೆ ನಡುವಿನ ಮೂರು ಟಿ20 ಪಂದ್ಯಗಳ ಸರಣಿಯಿಂದ ಹೊರಗುಳಿದ್ದಾರೆ. ಇತ್ತೀಚೆಗೆ ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯ ಸಂದರ್ಭದಲ್ಲಿ ವರುಣ್ ಚಕ್ರವರ್ತಿ ಗಾಯಗೊಂಡರು.
ಆರಂಭದಲ್ಲಿ ಅವರು ಸಕಾಲದಲ್ಲಿ ಫಿಟ್ ಆಗುತ್ತಾರೆ ಎಂದು ಭಾವಿಸಲಾಗಿತ್ತು. ಆದರೆ ಪೂರ್ಣ ಫಿಟ್ನೆಸ್ ಕೊರತೆಯಿಂದಾಗಿ ಅವರನ್ನು ಜಿಂಬಾಬ್ವೆ ಪ್ರವಾಸದಿಂದ ಹೊರಗಿಡಲಾಗಿದೆ. ಭಾರತ ಮತ್ತು ಜಿಂಬಾಬ್ವೆ ನಡುವಿನ ಮೂರು ಪಂದ್ಯಗಳ ಟಿ20 ಸರಣಿಯು ಜುಲೈ 23ರಂದು ಪ್ರಾರಂಭವಾಗುತ್ತದೆ.
ಸ್ಪೋರ್ಟ್ಸ್ಸ್ಟಾರ್ ವರದಿ ಪ್ರಕಾರ, ಬಿಸಿಸಿಐ ರವಿ ಬಿಷ್ಣೋಯ್ ಅವರನ್ನು ವರುಣ್ ಚಕ್ರವರ್ತಿ ಅವರ ಬದಲಿಗೆ ತಂಡಕ್ಕೆ ಸೇರಿಸಿದೆ. ರವಿ ಬಿಷ್ಣೋಯ್ ಇಂಗ್ಲೆಂಡ್ ಮತ್ತು ಐರ್ಲೆಂಡ್ ಪ್ರವಾಸದಲ್ಲಿ ಭಾಗವಹಿಸಿದ್ದರು. ಆದರೆ ಅವರ ಪ್ರದರ್ಶನ ತುಂಬಾ ಸಾಮಾನ್ಯವಾಗಿತ್ತು. ಆದ್ದರಿಂದ ಜಿಂಬಾಬ್ವೆ ವಿರುದ್ಧದ ಟಿ20 ಸರಣಿಯಲ್ಲಿ ಅವರನ್ನು ಮೊದಲು ತಂಡಕ್ಕೆ ಸೇರಿಸಿರಲಿಲ್ಲ. ಈಗ ವರುಣ್ ಚಕ್ರವರ್ತಿಯನ್ನು ಹೊರಗಿಡಲಾಗಿರುವುದರಿಂದ, ರವಿ ಬಿಷ್ಣೋಯ್ ಜಿಂಬಾಬ್ವೆ ವಿರುದ್ಧದ ಟೀಮ್ ಇಂಡಿಯಾ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಬಿಸಿಸಿಐ ಶೀಘ್ರದಲ್ಲೇ ಇದನ್ನು ಅಧಿಕೃತವಾಗಿ ಘೋಷಿಸಲಿದೆ.
ಶ್ರೇಯಸ್ ಅಯ್ಯರ್ (ನಾಯಕ), ವೈಭವ್ ಸೂರ್ಯವಂಶಿ, ಅಭಿಷೇಕ್ ಶರ್ಮಾ, ತಿಲಕ್ ವರ್ಮಾ (ಉಪನಾಯಕ), ಇಶಾನ್ ಕಿಶನ್ (ವಿಕೆಟ್ ಕೀಪರ್), ಶಿವಂ ದುಬೆ, ಸೂರ್ಯಾಂಶ್ ಶೆಡ್ಗೆ, ರಿಂಕು ಸಿಂಗ್, ಹರ್ಷ್ ದುಬೆ, ವರುಣ್ ಚಕ್ರವರ್ತಿ, ಪ್ರಿನ್ಸ್ ಯಾದವ್, ಯಶ್ ಠಾಕುರ್, ಅಶೋಕ್ ಶರ್ಮಾ, ಮಯಂಕ್ ಯಾದವ್, ಪ್ರಬ್ಸಿಮ್ರಾನ್ ಸಿಂಗ್.
ಭಾರತದ ಜಿಂಬಾಬ್ವೆ ಪ್ರವಾಸ ವೇಳಾಪಟ್ಟಿ
- ಮೊದಲ ಟಿ20ಐ – ಜುಲೈ 23, ಹರಾರೆ
- ಎರಡನೇ ಟಿ20ಐ – ಜುಲೈ 25, ಹರಾರೆ
- ಮೂರನೇ ಟಿ20ಐ – ಜುಲೈ 26, ಹರಾರೆ














