IND vs WI: ಇಂದೋರ್​ನಲ್ಲಿ ಅಭಿಷೇಕ್ ಸಿಡಿಲಬ್ಬರದ ಅರ್ಧಶತಕ! ಕೆರಿಬಿಯನ್ಸ್ ವಿರುದ್ಧ ಈ ಸಾಧನೆ ಮಾಡಿದ ಏಕೈಕ ಭಾರತೀಯ | ಕ್ರೀಡಾ ಸುದ್ದಿ | ACTPnews

ಅಭಿಷೇಕ್ ಶರ್ಮಾ


Last Updated:

ಅಭಿಷೇಕ್ ಶರ್ಮಾ 3ನೇ ಟಿ20ಯಲ್ಲಿ ಕೇವಲ 18 ಎಸೆತಗಳಲ್ಲಿ ಅರ್ಧಶತಕ ಪೂರೈಸುವ ಮೂಲಕ, ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ವೇಗವಾಗಿ ಅರ್ಧಶತಕ ಗಳಿಸಿದ ಭಾರತೀಯ ಬ್ಯಾಟರ್ ಎನಿಸಿಕೊಂಡರು.

ಅಭಿಷೇಕ್ ಶರ್ಮಾ
ಅಭಿಷೇಕ್ ಶರ್ಮಾ

ಇಂದೋರ್‌ನ ಹೋಲ್ಕರ್ ಸ್ಟೇಡಿಯಂನಲ್ಲಿ ಭಾರತ ಮತ್ತು ವೆಸ್ಟ್ ಇಂಡೀಸ್ (India vs West Indies) ನಡುವೆ ನಡೆದ ಮೂರನೇ ಟಿ20 ಪಂದ್ಯದಲ್ಲಿ ಭಾರತದ ಆರಂಭಿಕ ಆಟಗಾರ ಅಭಿಷೇಕ್ ಶರ್ಮಾ (Abhishek Sharma) ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶನ ನೀಡಿದ್ದಾರೆ. ಈ ಪಂದ್ಯದಲ್ಲಿ ಅಭಿಷೇಕ್ ಶರ್ಮಾ ಕೇವಲ 18 ಎಸೆತಗಳಲ್ಲಿ ಅರ್ಧಶತಕ ಪೂರೈಸುವ ಮೂಲಕ, ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ವೇಗವಾಗಿ ಅರ್ಧಶತಕ ಗಳಿಸಿದ ಭಾರತೀಯ ಬ್ಯಾಟರ್ ಎನಿಸಿಕೊಂಡರು.

ಕೊಹ್ಲಿ-ಸಂಜು ದಾಖಲೆ ಮುರಿದ ಅಭಿಷೇಕ್

ಈ ಸಾಧನೆಯ ಮೂಲಕ ಅಭಿಷೇಕ್ ಶರ್ಮಾ ಅವರು ವಿರಾಟ್ ಕೊಹ್ಲಿ ಮತ್ತು ಸಂಜು ಸ್ಯಾಮ್ಸನ್ ಅವರ ದಾಖಲೆಗಳನ್ನು ಹಿಂದಿಕ್ಕಿದರು. ಇದಕ್ಕೂ ಮುನ್ನ, ರಾಂಚಿಯಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಎರಡನೇ ಟಿ20 ಪಂದ್ಯದಲ್ಲಿ ಸಂಜು ಸ್ಯಾಮ್ಸನ್ 21 ಎಸೆತಗಳಲ್ಲಿ ಅರ್ಧಶತಕ ಗಳಿಸಿದ್ದರು. ವಿರಾಟ್ ಕೊಹ್ಲಿ ಕೂಡ 2019ರಲ್ಲಿ ವಾಂಖೆಡೆ ಸ್ಟೇಡಿಯಂನಲ್ಲಿ 21 ಎಸೆತಗಳಲ್ಲಿ ಈ ಸಾಧನೆ ಮಾಡಿದ್ದರು. ಅಭಿಷೇಕ್ ಶರ್ಮಾ ಈ ದಿಗ್ಗಜರಿಬ್ಬರನ್ನೂ ಮೀರಿಸಿ ಈ ಪ್ರಭಾವಶಾಲಿ ದಾಖಲೆಯನ್ನು ತಮ್ಮದಾಗಿಸಿಕೊಂಡರು. ಅಲ್ಲದೆ ಚುಟುಕು ಮಾದರಿಯಲ್ಲಿ 20ಕ್ಕಿಂತ ಕಡಿಮೆ ಎಸೆತಗಳಲ್ಲಿ ಅರ್ಧಶತಕ ಸಿಡಿಸಿದ ಭಾರತೀಯ ಎಂಬ ವಿಶೇಷ ದಾಖಲೆಗೂ ಪಾತ್ರರಾದರು.

ವೆಸ್ಟ್ ಇಂಡೀಸ್ ವಿರುದ್ಧ ಭಾರತದ ಪರ ವೇಗದ ಅರ್ಧಶತಕ

18 ಎಸೆತ : ಅಭಿಷೇಕ್ ಶರ್ಮಾ (ಇಂದೋರ್, 2026)

21 ಎಸೆತ : ವಿರಾಟ್ ಕೊಹ್ಲಿ (ಮುಂಬೈ – ವಾಂಖೆಡೆ, 2019)

21 ಎಸೆತ : ಸಂಜು ಸ್ಯಾಮ್ಸನ್ (ರಾಂಚಿ, 2026)

22 ಎಸೆತ : ರೋಹಿತ್ ಶರ್ಮಾ (ಲಾಡರ್‌ಹಿಲ್, 2016)

23 ಎಸೆತ : ರೋಹಿತ್ ಶರ್ಮಾ (ಮುಂಬೈ – ವಾಂಖೆಡೆ, 2019)

23 ಎಸೆತ : ಸೂರ್ಯಕುಮಾರ್ ಯಾದವ್ (ಪ್ರಾವಿಡೆನ್ಸ್, 2023)

ಟಿ20 ಇತಿಹಾಸದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ವೇಗದ ಅರ್ಧಶತಕ

ವಿಶ್ವ ಕ್ರಿಕೆಟ್‌ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ವೇಗದ ಟಿ20 ಅರ್ಧಶತಕದ ದಾಖಲೆಯು ದಕ್ಷಿಣ ಆಫ್ರಿಕಾದ ಕ್ವಿಂಟನ್ ಡಿ ಕಾಕ್ ಹೆಸರಿನಲ್ಲಿದೆ. ಡಿ ಕಾಕ್ ಕೇವಲ 15 ಎಸೆತಗಳಲ್ಲಿ ಈ ಮೈಲಿಗಲ್ಲನ್ನು ತಲುಪಿದ್ದಾರೆ. ಟಿಮ್ ಡೇವಿಡ್ 16 ಎಸೆತಗಳಲ್ಲಿ ಈ ಸಾಧನೆ ಮಾಡಿ 2ನೇ ಸ್ಥಾನದಲ್ಲಿದ್ದಾರೆ. ಇದೀಗ ಅಭಿಷೇಕ್ ಶರ್ಮಾ ಈ ಪಟ್ಟಿಯಲ್ಲಿ ಡೇವಿಡ್ ವಾರ್ನರ್ ಮತ್ತು ಕಾಲಿನ್ ಮನ್ರೋ ಅವರೊಂದಿಗೆ ಜಂಟಿಯಾಗಿ ಮೂರನೇ ಸ್ಥಾನವನ್ನು ಹಂಚಿಕೊಂಡಿದ್ದಾರೆ.

15 ಎಸೆತಗಳು: ಕ್ವಿಂಟನ್ ಡಿ ಕಾಕ್ (ಸೆಂಚೂರಿಯನ್, 2023)

16 ಎಸೆತಗಳು: ಟಿಮ್ ಡೇವಿಡ್ (ಬ್ಯಾಸೆಟೆರೆ, 2025)

18 ಎಸೆತಗಳು: ಡೇವಿಡ್ ವಾರ್ನರ್ (ಸಿಡ್ನಿ, 2010)

18 ಎಸೆತಗಳು: ಕಾಲಿನ್ ಮನ್ರೋ (ಮೌಂಟ್ ಮೌಂಗನುಯಿ, 2018)

18 ಎಸೆತಗಳು: ಅಭಿಷೇಕ್ ಶರ್ಮಾ (ಇಂದೋರ್, 2026)



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed