IND vs WI: ಭಾರತದ ವಿರುದ್ಧ T20 ಮತ್ತು ODI ಸರಣಿಗೆ ಬಲಿಷ್ಠ ತಂಡ ಘೋಷಿಸಿದ ವೆಸ್ಟ್ ಇಂಡೀಸ್‌ | ಕ್ರೀಡಾ ಸುದ್ದಿ | ACTPnews

IND vs WI: ಭಾರತದ ವಿರುದ್ಧ T20 ಮತ್ತು ODI ಸರಣಿಗೆ ಬಲಿಷ್ಠ ತಂಡ ಘೋಷಿಸಿದ ವೆಸ್ಟ್ ಇಂಡೀಸ್‌ | ಕ್ರೀಡಾ ಸುದ್ದಿ


ಹೆಟ್ಮಾಯರ್ ಏಕದಿನದಿಂದ ಔಟ್

ಇತ್ತೀಚೆಗೆ ಮುಕ್ತಾಯಗೊಂಡ ಕೆರಿಬಿಯನ್ ಟಿ20 ಲೀಗ್‌ನಲ್ಲಿ ಸತತವಾಗಿ ಆಡಿದ್ದರಿಂದ ಹೆಟ್ಮಾಯರ್ ಅವರಿಗೆ ಸೆಪ್ಟೆಂಬರ್ 27 ರಿಂದ ಆರಂಭವಾಗುವ ಏಕದಿನ (ODI) ಸರಣಿಯಿಂದ ವಿಶ್ರಾಂತಿ ನೀಡಲಾಗಿದೆ. ಆದರೆ ಅವರು ನೇರವಾಗಿ ಅಕ್ಟೋಬರ್ 6 ರಂದು ಟಿ20 ಸರಣಿಗೆ ವೆಸ್ಟ್ ಇಂಡೀಸ್ ತಂಡಕ್ಕೆ ಸೇರಿಸಿಕೊಳ್ಳಲಿದ್ದಾರೆ. ಹೆಟ್ಮಾಯರ್ ಪ್ರಸ್ತುತ ಅದ್ಭುತ ಫಾರ್ಮ್‌ನಲ್ಲಿದ್ದು, ಕೆರಿಬಿಯನ್ ಲೀಗ್​ನ ಒಂದೇ ಸೀಸನ್‌ನಲ್ಲಿ ಎರಡು ಭರ್ಜರಿ ಶತಕಗಳನ್ನು ( ಸಿಡಿಸಿ ಅಬ್ಬರಿಸಿದ್ದರು.

CPLನಲ್ಲಿ ಮಿಂಚಿದ ಆಟಗಾರನಿಗೆ ಚಾನ್ಸ್

CPLನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ ಗಮನ ಸೆಳೆದ ಯುವ ಆರಂಭಿಕ ಆಟಗಾರ ಕಾಮಿಲ್ ಪೂರನ್, ಮೊದಲ ಬಾರಿಗೆ T20 ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಬಲಗೈ ಬ್ಯಾಟರ್ ಆಗಿರುವ ಇವರು, ಎಂಟು ಇನ್ನಿಂಗ್ಸ್‌ಗಳಲ್ಲಿ 39 ರ ಸರಾಸರಿ ಮತ್ತು 159.64 ರ ಸ್ಟ್ರೈಕ್ ರೇಟ್‌ನೊಂದಿಗೆ ಒಟ್ಟು 273 ರನ್ ಗಳಿಸಿದ್ದರು. ಈ ಪ್ರದರ್ಶನವು ಅವರಿಗೆ ವೆಸ್ಟ್ ಇಂಡೀಸ್ T20 ತಂಡದಲ್ಲಿ ಸ್ಥಾನವನ್ನು ಖಾತ್ರಿಪಡಿಸಿದೆ.

ವೆಸ್ಟ್ ಇಂಡೀಸ್ ಮಂಡಳಿಯು ಅವರನ್ನು 2028ರ T20 ವಿಶ್ವಕಪ್ ಯೋಜನೆಗಳಲ್ಲಿ ಪರಿಗಣಿಸಿದೆ. ಈ ಹಿಂದೆ ಭಾರತದಲ್ಲಿ ನಡೆದ T20 ವಿಶ್ವಕಪ್‌ನಲ್ಲಿ ಆಡಿದ್ದ ಕ್ವಿಂಟನ್ ಸ್ಯಾಂಪ್ಸನ್ ಕೂಡ T20 ತಂಡಕ್ಕೆ ಮರಳಿದ್ದಾರೆ.

ಬಲಿಷ್ಠ ತಂಡ ಕಟ್ಟುವ ಗುರಿ

ಈ ಸರಣಿಗಾಗಿ ಆಲ್‌ರೌಂಡರ್ ಜೇಸನ್ ಹೋಲ್ಡರ್ ಅವರಿಗೆ ವಿಶ್ರಾಂತಿ ನೀಡಲಾಗಿದೆ. ತಂಡದ ದೀರ್ಘಕಾಲೀನ ಗುರಿಗಳನ್ನು ಗಮನದಲ್ಲಿಟ್ಟುಕೊಂಡು T20 ತಂಡವನ್ನು ಆಯ್ಕೆ ಮಾಡಲಾಗಿದೆ ಎಂದು ಮುಖ್ಯ ಕೋಚ್ ಡ್ಯಾರೆನ್ ಸಾಮಿ ತಿಳಿಸಿದ್ದಾರೆ. ” ಶ್ರೀಲಂಕಾ ವಿರುದ್ಧದ ಸರಣಿ ಗೆಲುವಿನಿಂದ ಪಡೆದ ವೇಗವನ್ನು ನಾವು ಮುಂದುವರಿಸಲು ಬಯಸುತ್ತೇವೆ. ಮುಂಬರುವ T20 ವಿಶ್ವಕಪ್‌ಗಾಗಿ ಬಲಿಷ್ಠ ತಂಡವನ್ನು ರೂಪಿಸುವುದು ನಮ್ಮ ಗುರಿಯಾಗಿದೆ.

ವಿಶ್ವ ಚಾಂಪಿಯನ್‌ ಭಾರತವನ್ನ ಅವರ ತವರು ನೆಲದಲ್ಲಿ ಎದುರಿಸುವುದು ದೊಡ್ಡ ಸವಾಲು. ಆದರೆ ಇದು ವೈಯಕ್ತಿಕ ಮತ್ತು ಸಾಮೂಹಿಕ ಸುಧಾರಣೆಗೆ ಉತ್ತಮ ಅವಕಾಶವಾಗಿರುತ್ತದೆ ” ಎಂದು ಸಾಮಿ ಹೇಳಿದರು.

ಭಾರತ ಪ್ರವಾಸಕ್ಕಾಗಿ ವೆಸ್ಟ್ ಇಂಡೀಸ್ ತಂಡಗಳು

ವೆಸ್ಟ್ ಇಂಡೀಸ್ ಏಕದಿನ ತಂಡ: ಶಾಯ್ ಹೋಪ್ (ನಾಯಕ), ಜುವೆಲ್ ಆಂಡ್ರ್ಯೂ, ಜಾನ್ ಕ್ಯಾಂಪ್‌ಬೆಲ್, ಕೇಸಿ ಕಾರ್ಟಿ, ರೋಸ್ಟನ್ ಚೇಸ್, ಮ್ಯಾಥ್ಯೂ ಫೋರ್ಡ್, ಜಸ್ಟಿನ್ ಗ್ರೀವ್ಸ್, ಅಮೀರ್ ಜಂಗೂ, ಅಲ್ಜಾರಿ ಜೋಸೆಫ್, ಶಮಾರ್ ಜೋಸೆಫ್, ವಿಟೆಲ್ ಲಾಸ್, ಗುಡಕೇಶ್ ಮೋಟಿ, ಕೀಮೋ ಪಾಲ್, ಶೆರ್ಫೇನ್ ರುದರ್‌ಫೋರ್ಡ್, ಜೇಡನ್ ಸೀಲ್ಸ್.

ವೆಸ್ಟ್ ಇಂಡೀಸ್ ಟಿ20 ತಂಡ: ಶಾಯ್ ಹೋಪ್ (ನಾಯಕ), ಜುವೆಲ್ ಆಂಡ್ರ್ಯೂ, ರೋಸ್ಟನ್ ಚೇಸ್, ಮ್ಯಾಥ್ಯೂ ಫೋರ್ಡ್, ಶಿಮ್ರಾನ್ ಹೆಟ್ಮೈರ್, ಅಕೀಲ್ ಹೊಸೈನ್, ಶಮಾರ್ ಜೋಸೆಫ್, ಗುಡಕೇಶ್ ಮೋಟಿ, ಕೀಮೋ ಪಾಲ್, ಕಾಮಿಲ್ ಪೂರನ್, ರೋವ್‌ಮನ್ ಪೊವೆಲ್, ಶೆರ್ಫೇನ್ ರುದರ್‌ಫೋರ್ಡ್, ಕ್ವೆಂಟಿನ್ ಸ್ಯಾಮ್ಸನ್, ಶಮರ್ ಸ್ಪ್ರಿಂಗರ್, ರೊಮಾರಿಯೊ ಸ್ಯಾಂಪ್ಸನ್.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed