‘ಗಾಡ್ ಆಫ್ ಕ್ರಿಕೆಟ್’ ಎಂದೇ ಕರೆಯಲ್ಪಡುವ ಸಚಿನ್ ತೆಂಡೂಲ್ಕರ್ ಹಲವಾರು ವಿಶ್ವದಾಖಲೆಗಳನ್ನ ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ. ಭಾರತ vs ಶ್ರೀಲಂಕಾ ಟೆಸ್ಟ್ ಸರಣಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದವರಲ್ಲಿಯೂ ಅವರೇ ಅಗ್ರಸ್ಥಾನದಲ್ಲಿದ್ದಾರೆ. ‘ಮಾಸ್ಟರ್ ಬ್ಲಾಸ್ಟರ್’ ಈ ಎರಡು ರಾಷ್ಟ್ರಗಳ ನಡುವಿನ ಟೆಸ್ಟ್ ಸರಣಿಯಲ್ಲಿ ಅತಿ ಹೆಚ್ಚು ಪಂದ್ಯಗಳನ್ನು (25) ಆಡಿದ್ದಾರೆ, 36 ಬಾರಿ ಬ್ಯಾಟಿಂಗ್ ಮಾಡುವ ಅವಕಾಶವನ್ನು ಪಡೆದಿದ್ದಾರೆ. ಸಚಿನ್ ಶ್ರೀಲಂಕಾ ವಿರುದ್ಧ 60.45 ಸರಾಸರಿಯಲ್ಲಿ 1,995 ರನ್ ಗಳಿಸಿದ್ದಾರೆ, ಇದರಲ್ಲಿ 9 ಶತಕಗಳು ಮತ್ತು 6 ಅರ್ಧಶತಕಗಳು ಸೇರಿವೆ.
ಭಾರತ vs ಶ್ರೀಲಂಕಾ ಟೆಸ್ಟ್ ಸರಣಿಯಲ್ಲಿ ಸಚಿನ್ ತೆಂಡೂಲ್ಕರ್ ಅವರ ರನ್ ದಾಖಲೆಯ ಹತ್ತಿರ ಯಾರಾದರೂ ಬಂದಿದ್ದರೆ, ಅದು ಶ್ರೀಲಂಕಾದ ಮಾಜಿ ನಾಯಕ ಮಹೇಲ ಜಯವರ್ಧನೆ. ಭಾರತದ ವಿರುದ್ಧದ 18 ಪಂದ್ಯಗಳಲ್ಲಿ 28 ಇನ್ನಿಂಗ್ಸ್ಗಳಲ್ಲಿ 1,822 ರನ್ ಗಳಿಸಿದ್ದಾರೆ, ಇದರಲ್ಲಿ 6 ಶತಕಗಳು ಮತ್ತು 8 ಅರ್ಧಶತಕಗಳಿವೆ. ಈ ಅವಧಿಯಲ್ಲಿ ಅವರು 67.48 ಸರಾಸರಿಯನ್ನು ಕಾಯ್ದುಕೊಂಡಿದ್ದರು.
ಶ್ರೀಲಂಕಾ ವಿರುದ್ಧ ಬ್ಯಾಟಿಂಗ್ ಮಾಡುವುದಕ್ಕೆ ಇಷ್ಟ ಪಡುವ ಭಾರತೀಯ ಯಾರಾದರೂ ಇದ್ದರೆ ಅಂದರೆ, ಅದುವೇ ‘ಮುಲ್ತಾನ್ನ ಸುಲ್ತಾನ್’ ವೀರೇಂದ್ರ ಸೆಹ್ವಾಗ್. ಭಾರತ – ಶ್ರೀಲಂಕಾ ಟೆಸ್ಟ್ ಸರಣಿಯಲ್ಲಿ ಅವರು ಟಾಪ್ 10 ರನ್ ಗಳಿಸಿದವರಲ್ಲಿ ಅತ್ಯಧಿಕ ಬ್ಯಾಟಿಂಗ್ ಸರಾಸರಿಯನ್ನು ಹೊಂದಿದ್ದಾರೆ. ಶ್ರೀಲಂಕಾ ವಿರುದ್ಧ ಸೆಹ್ವಾಗ್ ಕೇವಲ 11 ಪಂದ್ಯಗಳನ್ನು ಆಡಿದ್ದಾರೆ, 18 ಇನ್ನಿಂಗ್ಸ್ಗಳಲ್ಲಿ 72.88 ಸರಾಸರಿಯಲ್ಲಿ 1,239 ರನ್ ಗಳಿಸಿದ್ದಾರೆ. ಒಟ್ಟು ರನ್ಗಳ ವಿಷಯದಲ್ಲಿ ಸೆಹ್ವಾಗ್ 6 ನೇ ಸ್ಥಾನದಲ್ಲಿದ್ದರೆ, ಬ್ಯಾಟಿಂಗ್ ಸರಾಸರಿಯಲ್ಲಿ ಅವರು ನಂಬರ್ ಒನ್ ಆಗಿದ್ದಾರೆ.
ಭಾರತದ ಮಾಜಿ ನಾಯಕ ವಿರಾಟ್ ಕೊಹ್ಲಿ ಕೂಡ ಈ ಪಟ್ಟಿಯಲ್ಲಿದ್ದಾರೆ. ‘ಕಿಂಗ್ ಕೊಹ್ಲಿ’ ತಮ್ಮ ಟೆಸ್ಟ್ ವೃತ್ತಿಜೀವನದಲ್ಲಿ ಏಳು ದ್ವಿಶತಕಗಳನ್ನು ಗಳಿಸಿದ್ದಾರೆ, ಅದರಲ್ಲಿ ಎರಡು ಶ್ರೀಲಂಕಾ ವಿರುದ್ಧ ಬಂದಿವು. ಶ್ರೀಲಂಕಾ ಅವರ ನೆಚ್ಚಿನ ಎದುರಾಳಿಗಳಲ್ಲಿ ಒಂದಾಗಿದೆ ಎಂದು ಹೇಳುವುದು ನ್ಯಾಯೋಚಿತವಾಗಿರುತ್ತದೆ. ಅವರು 11 ಪಂದ್ಯಗಳಲ್ಲಿ 67.81 ಸರಾಸರಿಯಲ್ಲಿ 1,085 ರನ್ ಗಳಿಸಿದ್ದಾರೆ, ಪಟ್ಟಿಯಲ್ಲಿ ಎಂಟನೇ ಸ್ಥಾನದಲ್ಲಿದ್ದಾರೆ.
ಅವರಲ್ಲದೆ, ಟಾಪ್ 10 ಪಟ್ಟಿಯಲ್ಲಿ ಶ್ರೀಲಂಕಾದ ಕುಮಾರ್ ಸಂಗಕ್ಕಾರ, ಡಿ ಸಿಲ್ವಾ ಮತ್ತು ಏಂಜೆಲೊ ಮ್ಯಾಥ್ಯೂಸ್ ಭಾರತದ ರಾಹುಲ್ ದ್ರಾವಿಡ್, ಮೊಹಮ್ಮದ್ ಅಜರುದ್ದೀನ್ ಮತ್ತು ಸೌರವ್ ಗಂಗೂಲಿ ಅವರಂತಹ ಭಾರತೀಯ ದಂತಕಥೆಗಳ ಹೆಸರುಗಳಿವೆ.
ಸಚಿನ್ ತೆಂಡೂಲ್ಕರ್- 1995 ರನ್ಸ್
ಮಹೇಲ ಜಯವರ್ಧನೆ- 1822 ರನ್ಸ್
ರಾಹುಲ್ ದ್ರಾವಿಡ್- 1508 ರನ್ಸ್
ಕುಮಾರ್ ಸಂಗಕ್ಕಾರ -1352 ರನ್ಸ್
ಡಿ ಸಿಲ್ವ -1252 ರನ್ಸ್
ವೀರೇಂದ್ರ ಸೆಹ್ವಾಗ್ -1239 ರನ್ಸ್
ಮೊಹಮ್ಮದ್ ಅಜರುದ್ದೀನ್- 1215 ರನ್ಸ್
ವಿರಾಟ್ ಕೊಹ್ಲಿ- 1085 ರನ್ಸ್
ಸೌರವ್ ಗಂಗೂಲಿ -1064 ರನ್ಸ್
ಏಂಜೆಲೊ ಮ್ಯಾಥ್ಯೂಸ್- 1051 ರನ್ಸ್













