Last Updated:
ಶ್ರೀಲಂಕಾ ವಿರುದ್ಧದ ಮೂರು ದಿನಗಳ ಅಭ್ಯಾಸ ಪಂದ್ಯಕ್ಕೂ ಮುನ್ನ ಟೀಮ್ ಇಂಡಿಯಾ ಭಾರೀ ಹಿನ್ನಡೆ ಅನುಭವಿಸಿದೆ. ಜಸ್ಪ್ರೀತ್ ಬುಮ್ರಾ ಮತ್ತು ಸಾಯಿ ಸುದರ್ಶನ್ ಬಳಿಕ ಮತ್ತೊಬ್ಬ ಸ್ಟಾರ್ ಆಟಗಾರ ತಂಡದಿಂದ ಹೊರಗುಳಿದಿದ್ದಾರೆ.
ಆಗಸ್ಟ್ 15ರಿಂದ ಶ್ರೀಲಂಕಾ ವಿರುದ್ಧ ಎರಡು ಟೆಸ್ಟ್ ಪಂದ್ಯಗಳ ಸರಣಿ ಆರಂಭವಾಗಲಿದೆ. ಅದಕ್ಕೆ ಮೊದಲು ಟೀಮ್ ಇಂಡಿಯಾ ಇಂದು (ಶುಕ್ರವಾರ, ಆಗಸ್ಟ್ 7) ಶ್ರೀಲಂಕಾ XI ವಿರುದ್ಧ ಮೂರು ದಿನಗಳ ಅಭ್ಯಾಸ ಪಂದ್ಯ ಆಡುತ್ತಿದೆ. ಆದರೆ ನಾಯಕ ಶುಭಮನ್ ಗಿಲ್ ಗಾಯದಿಂದ ಮೊದಲ ದಿನ ಆಡಲು ಸಾಧ್ಯವಾಗಿಲ್ಲ. ಅವರ ಬದಲಿಗೆ ಉಪನಾಯಕ ಕೆಎಲ್ ರಾಹುಲ್ ತಂಡವನ್ನು ಮುನ್ನಡೆಸುತ್ತಿದ್ದಾರೆ.














