Last Updated:
ಶ್ರೀಲಂಕಾ ವಿರುದ್ಧ ಕೊಲಂಬೊ ಟೆಸ್ಟ್ನಲ್ಲಿ ರಿಷಭ್ ಪಂತ್ ಭರ್ಜರಿ ದಾಖಲೆ ಮಾಡಿದರು. ಟೆಸ್ಟ್ ಕ್ರಿಕೆಟ್ನಲ್ಲಿ ಆಸ್ಟ್ರೇಲಿಯಾದ ಲೆಜೆಂಡರಿ ಪ್ಲೇಯರ್ ಮಾಡಿದ ಅತಿಹೆಚ್ಚು ಸಿಕ್ಸರ್ಗಳ ದಾಖಲೆಯನ್ನು ರಿಷಭ್ ಪಂತ್ ಮುರಿದರು.
ಭಾರತ (India) ಮತ್ತು ಶ್ರೀಲಂಕಾ (Sri Lanka) ನಡುವಿನ ಕೊಲಂಬೊ (Colombo) ಟೆಸ್ಟ್(Test)ನಲ್ಲಿ ರಿಷಭ್ ಪಂತ್ (Rishabh Pant) ತಮ್ಮ ಆಕ್ರಮಣಕಾರಿ ಬ್ಯಾಟಿಂಗ್ನಿಂದ ದೊಡ್ಡ ದಾಖಲೆ ಮುರಿದರು. ಪಂತ್ ಟೆಸ್ಟ್ ಕ್ರಿಕೆಟ್ನಲ್ಲಿ ಸಿಕ್ಸರ್ಗಳಿಗೆ (Sixes) ಹೆಸರುವಾಸಿ. ಎರಡನೇ ದಿನ ಅವರು ಆಸ್ಟ್ರೇಲಿಯಾದ ಆಡಮ್ ಗಿಲ್ಕ್ರಿಸ್ಟ್ (Adam Gilchrist) ಅವರ ದಾಖಲೆಯನ್ನು ಪಂತ್ ಮುರಿದರು. ಟೆಸ್ಟ್ನಲ್ಲಿ ಅತಿ ಹೆಚ್ಚು ಸಿಕ್ಸರ್ ಹೊಡೆದವರ ಪಟ್ಟಿಯಲ್ಲಿ ಪಂತ್ ಟಾಪ್ 3 ರಲ್ಲಿ ಸ್ಥಾನ ಪಡೆದರು.














