“ನಾವು ಟಾಸ್ ಗೆದ್ದರೆ ಮೊದಲು ಬೌಲಿಂಗ್ ಮಾಡಲು ಬಯಸಿದ್ದೆವು. ಈ ಪಂದ್ಯಕ್ಕೂ ಮುನ್ನ ನಮ್ಮ ತಂಡದಲ್ಲಿರುವ ಅನೇಕ ಆಟಗಾರರಿಗೆ ಸಾಕಷ್ಟು ವಿಶ್ರಾಂತಿ ಸಿಕ್ಕಿದೆ. ಕೆಲವರು ಟಿ20 ಆಡಿ ಬಂದಿದ್ದಾರೆ. ಸ್ವತಃ ನನಗೆ ಅಭ್ಯಾಸ ಮಾಡಲು ಸಮಯ ಸಿಕ್ಕಿತು. ನಾವು ಎರಡು ದಿನ ಮುಂಚಿತವಾಗಿ ಇಲ್ಲಿಗೆ ಬಂದು ಸ್ಥಳೀಯ ಪರಿಸ್ಥಿತಿಗಳಿಗೆ ಅನುಗುಣವಾಗಿ ತಯಾರಿ ನಡೆಸಿದ್ದೇವೆ. 2027ರ ಏಕದಿನ ವಿಶ್ವಕಪ್ ಅನ್ನು ಗಮನದಲ್ಲಿಟ್ಟುಕೊಂಡು ಈ ಸರಣಿ ನಮಗೆ ನಿರ್ಣಾಯಕವಾಗಿದೆ, ಏಕೆಂದರೆ ಇಲ್ಲಿನ ಪರಿಸ್ಥಿತಿಗಳು ದಕ್ಷಿಣ ಆಫ್ರಿಕಾದ ಪಿಚ್‌ಗಳಂತೆಯೇ ಇರುತ್ತವೆ” ಎಂದು ಗಿಲ್ ತಿಳಿಸಿದರು.
ವಿಶ್ವಕಪ್ ಗಮನದಲ್ಲಿಟ್ಟುಕೊಂಡು, ನಾವು ವಿವಿಧ ಸಂಯೋಜನೆಗಳನ್ನು ಪ್ರಯತ್ನಿಸಲು ಬಯಸುತ್ತೇವೆ. ಈ ಸ್ವರೂಪದಲ್ಲಿ ಅನುಭವದ ಕೊರತೆಯಿರುವ ಆಟಗಾರರಿಗೆ ನಾವು ಅವಕಾಶಗಳನ್ನು ನೀಡಲು ಬಯಸುತ್ತೇವೆ. ವಿರಾಟ್, ರೋಹಿತ್, ಕೆಎಲ್ ರಾಹುಲ್ ಮತ್ತು ಬುಮ್ರಾ ಕಮ್ಬ್ಯಾಕ್ನಿಂದ ತಂಡವು ಬಲಗೊಂಡಿದೆ. ಅವರ ಅನುಭವವು ಅಮೂಲ್ಯವಾಗಿರುತ್ತದೆ ಎಂದು ಗಿಲ್ ತಿಳಿಸಿದರು.
ತಂಡದ ಸಂಯೋಜನೆ ಬಗ್ಗೆ ಮಾತನಾಡುತ್ತಾ “ನಾವು ನಾಲ್ವರು ವೇಗಿಗಳು, ಸ್ಪಿನ್ ಆಲ್‌ರೌಂಡರ್‌ಗಳಾದ ಅಕ್ಷರ್ ಪಟೇಲ್ ಮತ್ತು ವಾಷಿಂಗ್ಟನ್ ಸುಂದರ್ ಮತ್ತು ಶಿವಂ ದುಬೆ ಅವರನ್ನು ಒಳಗೊಂಡ ತಂಡವನ್ನು ಕಣಕ್ಕಿಳಿಸುತ್ತಿದ್ದೇವೆ” ಎಂದು ಶುಭಮನ್ ಗಿಲ್ ಹೇಳಿದರು.
ಬ್ಯಾಟಿಂಗ್ ಆಳವನ್ನು ಹೆಚ್ಚಿಸಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಆದರೆ ಕ್ರಿಕೆಟ್ ತಜ್ಞರ ಪ್ರಕಾರ ಮತ್ತೆ ಭಾರತ ಕಾಂಬಿನೇಷನ್ನಲ್ಲಿ ಎಡವಿದೆ ಎಂದು ಕಮೆಂಟ್ ಮಾಡುತ್ತಿದ್ದಾರೆ. ಕಾರಣವೆಂದರೆ ತಂಡದಲ್ಲಿ ಒಬ್ಬನೇ ಒಬ್ಬ ತಜ್ಞ ಸ್ಪಿನ್ನರ್ ಇಲ್ಲ. ಇಂಗ್ಲೆಂಡ್ ಸೇರಿದಂತೆ ವಿದೇಶಿ ವಿಕೆಟ್ಗಳಲ್ಲಿ ಪರಿಣಾಮಕಾರಿ ಬೌಲರ್ ಆಗಿರುವ ಕುಲದೀಪ್ ಯಾದವ್ ಅವರನ್ನು ಕಡೆಗಣಿಸಿರುವುದು ದೊಡ್ಡ ಪ್ರಮಾದ ಎಂದು ಅಭಿಮಾನಿಗಳು ಕೂಡ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.
ಟಿ20 ಸರಣಿಯಲ್ಲಿ ಸತತವಾಗಿ ವಿಫಲರಾಗಿದ್ದ ವಾಷಿಂಗ್ಟನ್ ಸುಂದರ್ರನ್ನ ಮತ್ತೆ ಏಕದಿನ ಸರಣಿಗೂ ಆಯ್ಕೆ ಮಾಡಿಕೊಂಡಿರುವುದು ಅಚ್ಚರಿಗೆ ಕಾರಣವಾಗಿದೆ. ತಂಡದಲ್ಲಿ ಅಕ್ಷರ್ ಪಟೇಲ್ ಇದ್ದರೂ ಆಲ್ರೌಂಡರ್ ಆಗಿರುವ ಸುಂದರ್ಗೆ ಅವಕಾಶ ಕೊಟ್ಟಿರುವುದು ನಿಜಕ್ಕೂ ದೊಡ್ಡ ಪ್ರಶ್ನೆಯಾಗಿದೆ.
ಇಂಗ್ಲೆಂಡ್: ಜಾಕೋಬ್ ಬೆಥೆಲ್, ಬೆನ್ ಡಕೆಟ್, ಜೋ ರೂಟ್, ಹ್ಯಾರಿ ಬ್ರೂಕ್ (ನಾಯಕ), ಜೋಸ್ ಬಟ್ಲರ್ (ವಿಕೆಟ್ ಕೀಪರ್), ಸ್ಯಾಮ್ ಕರನ್, ವಿಲ್ ಜ್ಯಾಕ್ಸ್, ಜೋಫ್ರಾ ಆರ್ಚರ್, ಲಿಯಾಮ್ ಡಾಸನ್, ಜೋಶ್ ಟಂಗ್, ಆದಿಲ್ ರಶೀದ್.
ಭಾರತ: ರೋಹಿತ್ ಶರ್ಮಾ, ಶುಭಮನ್ ಗಿಲ್ (ನಾಯಕ), ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ವಾಷಿಂಗ್ಟನ್ ಸುಂದರ್, ಶಿವಂ ದುಬೆ, ಅಕ್ಷರ್ ಪಟೇಲ್, ಗುರ್ನೂರ್ ಬ್ರಾರ್, ಜಸ್ಪ್ರೀತ್ ಬುಮ್ರಾ, ಪ್ರಸಿದ್ಧ್ ಕೃಷ್ಣ.













