Last Updated:
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಟೀಮ್ ಇಂಡಿಯಾ 20 ಓವರ್ಗಳಲ್ಲಿ 7 ವಿಕೆಟ್ ಕಳೆದುಕೊಂಡು 190 ರನ್ಗಳಿಸಿತ್ತು. ನಂತರ ಚೇಸಿಂಗ್ ಆರಂಭಿಸಿದ ಇಂಗ್ಲೆಂಡ್ 19 ಓವರ್ಗಳಲ್ಲಿ 6 ವಿಕೆಟ್ ಕಳೆದುಕೊಂಡು ಗುರಿ ತಲುಪಿತು.
22 ವರ್ಷದ ಯುವ ಆಟಗಾರ ಜೇಕಬ್ ಬೆಥೆಲ್ ಸಿಡಿಸಿದ ಅಜೇಯ ಅರ್ಧಶತಕದ ನೆರವಿನಿಂದ ಭಾರತದ ವಿರುದ್ಧದ 2ನೇ ಟಿ20 ಪಂದ್ಯದಲ್ಲಿ ಅತಿಥೇಯ ಇಂಗ್ಲೆಂಡ್ ತಂಡ 4 ವಿಕೆಟ್ಗಳ ಭರ್ಜರಿ ಜಯ ಸಾಧಿಸಿ ಸರಣಿಯಲ್ಲಿ ಶುಭಾರಂಭ ಮಾಡಿದೆ. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಟೀಮ್ ಇಂಡಿಯಾ 20 ಓವರ್ಗಳಲ್ಲಿ 7 ವಿಕೆಟ್ ಕಳೆದುಕೊಂಡು 190 ರನ್ಗಳಿಸಿತ್ತು. ನಂತರ ಚೇಸಿಂಗ್ ಆರಂಭಿಸಿದ ಇಂಗ್ಲೆಂಡ್ 19 ಓವರ್ಗಳಲ್ಲಿ 6 ವಿಕೆಟ್ ಕಳೆದುಕೊಂಡು ಗುರಿ ತಲುಪಿತು.
191 ರನ್ಗಳ ಸವಾಲಿನ ಗುರಿ ಬೆನ್ನಟ್ಟಿದ ಇಂಗ್ಲೆಂಡ್ ತಂಡ ನಿರೀಕ್ಷಿತ ಆರಂಭ ಪಡೆಯಲು ವಿಫಲವಾಯಿತು. ಆರಂಭಿಕರಾದ ಫಿಲ್ ಸಾಲ್ಟ್ ಹಾಗೂ ಜೋಸ್ ಬಟ್ಲರ್ ಅರ್ಷದೀಪ್ ಎಸೆದ ಮೊದಲ ಓವರ್ನಲ್ಲಿಯೇ ಡಕ್ ಔಟ್ ಆದರು. ಇಂಗ್ಲೆಂಡ್ ಖಾತೆ ತೆರೆಯುವ ಮುನ್ನವೇ 2 ವಿಕೆಟ್ ಕಳೆದುಕೊಂಡಿತ್ತು. ಆದರೆ 3ನೇ ವಿಕೆಟ್ ಜೊತೆಯಾಟದಲ್ಲಿ ಒಂದಾದ ನಾಯಕ ಹ್ಯಾರಿ ಬ್ರೂಕ್ ಹಾಗೂ ಜೇಕಬ್ ಬೆಥೆಲ್ ಕೇವಲ 24 ಎಸೆತಗಳಲ್ಲಿ 50 ರನ್ಗಳ ಜೊತೆಯಾಟ ನಡೆಸಿ ಇಂಗ್ಲೆಂಡ್ಗೆ ಕಮ್ಬ್ಯಾಕ್ ನೀಡಿದರು.
ಹ್ಯಾರಿ ಬ್ರೂಕ್ 15 ಎಸೆತಗಳಲ್ಲಿ 4 ಬೌಂಡರಿ, 3 ಸಿಕ್ಸರ್ಗಳ ಸಹಿತ 39 ರನ್ಗಳಿಸಿ 5ನೇ ಓವರ್ನಲ್ಲಿ ವಿಕೆಟ್ ಒಪ್ಪಿಸಿದರು. ಆ ನಂತರ ಬಂದ ಟಾಮ್ ಬ್ಯಾಂಟನ್ 4ನೇ ಜೊತೆಯಾಟದಲ್ಲಿ ಬೆಥೆಲ್ ಜೊತೆಗೂಡಿ 67 ರನ್ಗಳ ಮಹತ್ವದ ಜೊತೆಯಾಟ ನಡೆಸಿದರು. ಈ ಹಂತದಲ್ಲಿ ತಮ್ಮ ಸೆಕೆಂಡ್ ಸ್ಪೆಲ್ ಮಾಡಲು ಬಂದ ಅರ್ಷದೀಪ್ 32 ಎಸೆತಗಳಲ್ಲಿ 39 ರನ್ಗಳಿಸಿದ್ದ ಬ್ಯಾಂಟನ್ ವಿಕೆಟ್ ಪಡೆದು ಪಂದ್ಯವನ್ನ ಭಾರತದ ಕಡೆಗೆ ವಾಲಿಸಿದರು.
ಇಂಗ್ಲೆಂಡ್ 15.2 ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡು 132 ರನ್ಗಳಿಸಿತ್ತು. ಈ ಸಂದರ್ಭದಲ್ಲಿ ಇಂಗ್ಲೆಂಡ್ಗೆ 28 ಎಸೆತಗಳಲ್ಲಿ 59 ರನ್ಗಳ ಅಗತ್ಯವಿತ್ತು. 16ನೇ ಓವರ್ ಅಂತ್ಯವಾದಾಗ 4 ಓವರ್ಗಳಲ್ಲಿ 49 ರನ್ಗಳ ಅಗತ್ಯವಿತ್ತು. ಆದರೆ 17ನೇ ಓವರ್ ಎಸೆಯಲು ಬಂದ ರವಿ ಬಿಷ್ಣೋಯ್ ಭಾರತಕ್ಕೆ ವಿಲನ್ ಆದರು. ಆ ಓವರ್ನಲ್ಲಿ 2 ನೋ ಬಾಲ್ ಎಸೆದರು. ಪರಿಣಾಮ ಫ್ರಿ ಹಿಟ್ನಲ್ಲಿ ಬೆಥೆಲ್ 2 ಸಿಕ್ಸರ್ ಸಿಡಿಸಿದರು. ಒಟ್ಟಾರೆ ಆ ಓವರ್ನಲ್ಲಿ 3 ಸಿಕ್ಸರ್, 1 ಬೌಂಡರಿ, 2 ಟೂಡಿ ಸೇರಿ ಬರೋಬ್ಬರಿ 29 ರನ್ ಬಿಟ್ಟುಕೊಟ್ಟರು. 4 ಓವರ್ಗಳಲ್ಲಿ 49 ರನ್ಗಳ ಅಗತ್ಯವಿತ್ತು ಇಂಗ್ಲೆಂಡ್ಗೆ ಕೊನೆಯ 3 ಓವರ್ಗಳಲ್ಲಿ ಕೇವಲ 20 ರನ್ಗಳು ಮಾತ್ರ ಉಳಿದುಕೊಂಡಿತು.
ಆದರೆ ಇಂಗ್ಲೆಂಡ್ 19 ಓವರ್ನಲ್ಲೇ ಚೇಸಿಂಗ್ ಮುಗಿಸಿತು. ತಂಡದ ಮೊತ್ತ ಕೇವಲ 1ಕ್ಕೆ2 ಇದ್ದಾಗ ಮೊದಲ ಓವರ್ನಲ್ಲಿ ಕ್ರೀಸ್ಗೆ ಬಂದ ಬೆಥೆಲ್ ಆಕರ್ಷಕ ಬ್ಯಾಟಿಂಗ್ ಮಾಡಿ ಪಂದ್ಯವನ್ನ ಭಾರತದ ಕೈಯಿಂದ ಕಸಿದುಕೊಂಡರು. 46 ಎಸೆತಗಳನ್ನಾಡಿದ ಬೆಥೆಲ್ ತಲಾ 5 ಬೌಂಡರಿ, 5 ಸಿಕ್ಸರ್ಗಳ ಸಹಿತ ಅಜೇಯ 76 ರನ್ಗಳಿಸಿ ಗೆಲುವಿನ ರೂವಾರಿಯಾದರು. ವಿಲ್ ಜಾಕ್ಸ್ 9, ಸ್ಯಾಮ್ ಕರ್ರನ್ 7 ಹಾಗೂ ಜೋಫ್ರಾ ಆರ್ಚರ್ ಅಜೇಯ 10 ರನ್ಗಳಿಸಿದರು.
ಭಾರತದ ಪರ ಅರ್ಷದೀಪ್ ಸಿಂಗ್ 40ಕ್ಕೆ3 ವಿಕೆಟ್ ಪಡೆದರೆ, ಅಕ್ಷರ್ ಪಟೇಲ್ 20ಕ್ಕೆ1, ವರುಣ್ ಚಕ್ರವರ್ತಿ 37ಕ್ಕೆ1, ಹರ್ಷಿತ್ ರಾಣಾ 30ಕ್ಕೆ1 ವಿಕೆಟ್ ಪಡೆದರು. ರವಿ ಬಿಷ್ಣೋಯ್ 4 ಓವರ್ಗಳಲ್ಲಿ 60 ರನ್ ಬಿಟ್ಟುಕೊಟ್ಟು ದುಬಾರಿಯಾದರಲ್ಲದೆ, ಸೋಲಿಗೂ ಕಾರಣರಾದರು.
Jul 04, 2026 10:57 PM IST













