Last Updated:
ಈ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ ಮಾಡಿದ ಭಾರತ ತಂಡದ ಬ್ಯಾಟ್ಸ್ಮನ್ಗಳು ರನ್ಗಳ ಮಳೆಯನ್ನೇ ಸುರಿಸಿದರು. ನಾಯಕ ಶುಬ್ಮನ್ ಗಿಲ್ (154) ಹಾಗೂ ಇಶಾನ್ ಕಿಶನ್ (125) ಸಿಡಿಸಿದ ಶತಕಗಳ ನೆರವಿನಿಂದ ಭಾರತ ತಂಡ 49.5 ಓವರ್ಗಳಲ್ಲಿ 402 ರನ್ಗಳಿಸಿತ್ತು. ಇದಕ್ಕೆ ಉತ್ತರವಾಗಿ ಅಫ್ಘಾನಿಸ್ತಾನ ತಂಡ 44.3 ಓವರ್ಗಳಲ್ಲಿ 232 ರನ್ಗಳಿಗೆ ಆಲೌಟ್ ಆಯಿತು.
ಲಖನೌನ ಏಕಾನಾ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ 2ನೇ ಏಕದಿನ ಪಂದ್ಯದಲ್ಲಿ ಟೀಮ್ ಇಂಡಿಯಾ ಭರ್ಜರಿ ಪ್ರದರ್ಶನ ತೋರಿ ಅಫ್ಘಾನಿಸ್ತಾನ ವಿರುದ್ಧ 170 ರನ್ಗಳ ಜಯ ಸಾಧಿಸಿದೆ. ಈ ಬೃಹತ್ ಗೆಲುವಿನೊಂದಿಗೆ ಇನ್ನೂ ಒಂದು ಪಂದ್ಯ ಇರುವಂತೆಯೇ ಏಕದಿನ ಸರಣಿಯನ್ನ ತನ್ನದಾಗಿಸಿಕೊಂಡಿದೆ. ಈ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ ಮಾಡಿದ ಭಾರತ ತಂಡದ ಬ್ಯಾಟ್ಸ್ಮನ್ಗಳು ರನ್ಗಳ ಮಳೆಯನ್ನೇ ಸುರಿಸಿದರು. ನಾಯಕ ಶುಬ್ಮನ್ ಗಿಲ್ (154) ಹಾಗೂ ಇಶಾನ್ ಕಿಶನ್ (125) ಸಿಡಿಸಿದ ಶತಕಗಳ ನೆರವಿನಿಂದ ಭಾರತ ತಂಡ 49.5 ಓವರ್ಗಳಲ್ಲಿ 402 ರನ್ಗಳಿಸಿತ್ತು. ಇದಕ್ಕೆ ಉತ್ತರವಾಗಿ ಅಫ್ಘಾನಿಸ್ತಾನ ತಂಡ 44.3 ಓವರ್ಗಳಲ್ಲಿ 232 ರನ್ಗಳಿಗೆ ಆಲೌಟ್ ಆಗುವ ಮೂಲಕ ಸೋಲೊಪ್ಪಿಕೊಂಡಿತು.
403 ರನ್ಗಳ ಬೃಹತ್ ಗುರಿ ಬೆನ್ನಟ್ಟಿದ ಅಫ್ಘಾನಿಸ್ತಾನ ತಂಡ ಮೊದಲ ವಿಕೆಟ್ಗೆ 52 ರನ್ಗಳ ಜೊತೆಯಾಟ ನಡೆಸಿತು. ಕಳೆದ ಪಂದ್ಯದಲ್ಲಿ ಸ್ಫೋಟಕ ಶತಕ ಸಿಡಿಸಿದ್ದ ರಹಮಾನುಲ್ಲಾ ಗುರ್ಬಾಜ್ ಇಂದು 33 ಎಸೆತಗಳಲ್ಲಿ 7 ಬೌಂಡರಿ, 1 ಸಿಕ್ಸರ್ ಸಹಿತ 41 ರನ್ಗಳಿಸಿ ಗುರ್ನೂರ್ ಬ್ರಾರ್ಗೆ ವಿಕೆಟ್ ಒಪ್ಪಿಸಿದರು. ಮತ್ತೊಬ್ಬ ಆರಂಭಿಕ ಬ್ಯಾಟರ್ ಇಬ್ರಾಹಿಂ ಜದ್ರಾನ್ 31 ಎಸೆತಗಳಲ್ಲಿ 3 ಬೌಂಡರಿಗಳ ಸಹಿತ 21 ರನ್ಗಳಿಸಿ ಅರ್ಷದೀಪ್ ಸಿಂಗ್ಗೆ ವಿಕೆಟ್ ನೀಡಿದರು.
ಈ ಹಂತದಲ್ಲಿ ಒಂದಾದ ರಹಮತ್ ಶಾ ಹಾಗೂ ಸೇದಿಕುಲ್ಲಾ ಅಟಲ್ 3ನೇ ವಿಕೆಟ್ ಜೊತೆಯಾಟದಲ್ಲಿ 57 ರನ್ ಸೇರಿಸಿದರು. 50 ಎಸೆತಗಳಲ್ಲಿ 42 ರನ್ಗಳಿಸಿದ್ದ ಅಟಲ್ ವಿಕೆಟ್ ಬೀಳುತ್ತಿದ್ದಂತೆ ಅಫ್ಘಾನಿಸ್ತಾನ ತಂಡದ ಕುಸಿತ ಆರಂಭವಾಯಿತು. ದರ್ವೀಸ್ ರಸೂಲಿ 6 ರನ್ಗಳಿಸಿ ರಿಟೈರ್ಡ್ ಹರ್ಟ್ ಆಗಿ ಪೆವಿಲಿಯನ್ ಸೇರಿಕೊಂಡರು. ನಂತರ ಬಂದ ನಾಯಕ ಶಾಹಿದಿ ಕೇವಲ 4 ರನ್, ಖರೋಟೆ 6, ರಶೀದ್ ಖಾನ್ 12, ಅಲ್ಲಾ ಘಜನ್ಫರ್ 1, ಮೊಹಮ್ಮದ್ ಸಲೀಮ್ 9 ರನ್ಗಳಿಸಿ ನಿರ್ಗಮಿಸಿದರು.
4ನೇ ಕ್ರಮಾಂಕದಲ್ಲಿ ಕಣಕ್ಕಿಳಿದಿದ್ದ ರಹಮತ್ ಶಾ89 ಎಸೆತಗಳಲ್ಲಿ 8 ಬೌಂಡರಿಗಳ ಸಹಿತ 79 ರನ್ಗಳಿಸಿ ಕೊನೆಯ ಬ್ಯಾಟರ್ ಆಗಿ ಔಟ್ ಆದರು. ಇವರ ಸಾಹಸದಿಂದ ಅಫ್ಘಾನಿಸ್ತಾನ ತಂಡ 200ರ ಗಡಿ ದಾಟಿ ಸೋಲಿನ ಅಂತರವನ್ನ ತಗ್ಗಿಸಿಕೊಂಡಿತು.
ಭಾರತದ ಪರ ಗುರ್ನೂರ್ ಬ್ರಾರ್ 60ಕ್ಕೆ3, ಅರ್ಷದೀಪ್ ಸಿಂಗ್ 45ಕ್ಕೆ3, ಪದಾರ್ಪಣೆ ವೇಗಿ ಪ್ರಿನ್ಸ್ ಯಾದವ್ 57ಕ್ಕೆ2 ಹಾಗೂ ವಾಷಿಂಗ್ಟನ್ ಸುಂದರ್ 24 ರನ್ ನೀಡಿ 1 ವಿಕೆಟ್ ಪಡೆದು ಗೆಲುವಿನ ರೂವಾರಿಯಾದರು. ಭಾರತ ತಂಡ 170 ರನ್ಗಳಿಂದ 2ನೇ ಪಂದ್ಯ ಗೆದ್ದು ಇನ್ನೂ ಒಂದು ಪಂದ್ಯ ಇರುವಂತೆಯೆ ಸರಣಿ ತನ್ನದಾಗಿಸಿಕೊಂಡಿತು. ಇದು ಗಿಲ್ ನೇತೃತ್ವದಲ್ಲಿ ಮೊದಲ ಏಕದಿನ ಸರಣಿ ಗೆಲುವಾಗಿದೆ.
ಇದಕ್ಕೂ ಮುನ್ನ ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ 49.5 ಓವರ್ಗಳಲ್ಲಿ 402 ರನ್ಗಳಿಸಿ ಆಲೌಟ್ ಆಗಿತ್ತು. ನಾಯಕ ಶುಭ್ಮನ್ ಗಿಲ್ (110 ಎಸೆತಗಳಲ್ಲಿ 22 ಬೌಂಡರಿ ಮತ್ತು 2 ಸಿಕ್ಸರ್) 154 ರನ್ ಮತ್ತು ಇಶಾನ್ ಕಿಶನ್ (79 ಎಸೆತಗಳಲ್ಲಿ 14 ಬೌಂಡರಿ ಮತ್ತು 7 ಸಿಕ್ಸರ್) 125 ರನ್ ಗಳ ನೆರವಿನಿಂದ ಭಾರತ 49.5 ಓವರ್ಗಳಲ್ಲಿ 402 ರನ್ ಗಳ ಬೃಹತ್ ಮೊತ್ತ ದಾಖಲಿಸಿತು. ಇವರಿಬ್ಬರಿಗೆ ಸಾಥ್ ನೀಡಿದ ರೋಹಿತ್ ಶರ್ಮಾ 48 ರನ್ ಹಾಗೂ ಶ್ರೇಯಸ್ ಅಯ್ಯರ್ 26 ರನ್ಗಳಿಸಿದರು.
ಎರಡೂ ತಂಡಗಳ ನಡುವಿನ ಕೊನೆಯ ಪಂದ್ಯ ಶನಿವಾರ ಚೆನ್ನೈ ಎಂ ಚಿದಂಬರಂ ಮೈದಾನದಲ್ಲಿ ನಡೆಯಲಿದೆ.
ಭಾರತ ತಂಡ ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಅತಿ ಹೆಚ್ಚು ಬಾರಿ 400 ಅಥವಾ ಅದಕ್ಕಿಂತ ಹೆಚ್ಚು ರನ್ ಗಳಿಸಿದ ತಂಡ ಎಂಬ ದಾಖಲೆಯನ್ನು ದಕ್ಷಿಣ ಆಫ್ರಿಕಾ ತಂಡದ ಜೊತೆಗೆ ಹಂಚಿಕೊಂಡಿದೆ. ದಕ್ಷಿಣ ಆಫ್ರಿಕಾ ಏಕದಿನ ಕ್ರಿಕೆಟ್ನಲ್ಲಿ 8 ಬಾರಿ 400+ ರನ್ ಗಳಿಸಿದೆ. ಟೀಮ್ ಇಂಡಿಯಾ ತನ್ನ 8ನೇ 400+ ಸ್ಕೋರ್ ನೊಂದಿಗೆ ಈ ದಾಖಲೆಯನ್ನು ಸರಿಗಟ್ಟಿದೆ. ಇಂಗ್ಲೆಂಡ್ 7 ಬಾರಿ ಮತ್ತು ಆಸ್ಟ್ರೇಲಿಯಾ (3 ಬಾರಿ) ಈ ಪಟ್ಟಿಯಲ್ಲಿ ನಂತರದ ಸ್ಥಾನದಲ್ಲಿವೆ.













