IND vs AFG: ಇಶಾನ್​ ಕಿಶನ್-ಗಿಲ್​ ಸ್ಫೋಟಕ ಶತಕ! ಅಫ್ಘಾನ್​​ಗೆ ಬೃಹತ್ ಗುರಿ ನೀಡಿದ ಟೀಮ್ ಇಂಡಿಯಾ | ಕ್ರೀಡಾ ಸುದ್ದಿ | ACTPnews

ಇಶಾನ್ ಕಿಶನ್- ಶುಭ್​ಮನ್ ಗಿಲ್


Last Updated:

ಟಾಸ್ ಗೆದ್ದ ಅಫ್ಘಾನಿಸ್ತಾನ ಭಾರತವನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿತು. ಬ್ಯಾಟಿಂಗ್ ಮಾಡಿದ ಟೀಮ್ ಇಂಡಿಯಾ 49.5 ಓವರ್​ಗಳಲ್ಲಿ 402 ರನ್​ಗಳಿಸಿ ಆಲೌಟ್ ಆಗಿದೆ. ನಾಯಕ ಶುಭ್​ಮನ್ ಗಿಲ್ (154) ಹಾಗೂ ಇಶಾನ್ ಕಿಶನ್​ (125) ಶತಕ ಸಿಡಿಸಿ ಬೃಹತ್ ಮೊತ್ತಕ್ಕೆ ಕಾರಣರಾದರು.

ಇಶಾನ್ ಕಿಶನ್- ಶುಭ್​ಮನ್ ಗಿಲ್
ಇಶಾನ್ ಕಿಶನ್- ಶುಭ್​ಮನ್ ಗಿಲ್

ಲಖನೌನ ಏಕಾನಾ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಭಾರತ ಮತ್ತು ಅಫ್ಘಾನಿಸ್ತಾನ ನಡುವಿನ ಎರಡನೇ ಏಕದಿನ ಪಂದ್ಯದಲ್ಲಿ ಭಾರತ ತಂಡದ ಬ್ಯಾಟ್ಸ್​​ಮನ್​​​ಗಳು ರನ್​​​ಗಳ ಮಳೆ ಸುರಿಸಿದ್ದಾರೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಅಫ್ಘಾನಿಸ್ತಾನ ಭಾರತವನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿತು. ಬ್ಯಾಟಿಂಗ್ ಮಾಡಿದ ಟೀಮ್ ಇಂಡಿಯಾ 49.5 ಓವರ್​ಗಳಲ್ಲಿ 402 ರನ್​ಗಳಿಸಿ ಆಲೌಟ್ ಆಗಿದೆ. ನಾಯಕ ಶುಬ್​ಮನ್ ಗಿಲ್ (154) ಹಾಗೂ ಇಶಾನ್ ಕಿಶನ್​ (125) ಶತಕ ಸಿಡಿಸಿ ಬೃಹತ್ ಮೊತ್ತಕ್ಕೆ ಕಾರಣರಾದರು.

ಟಾಸ್ ಸೋತು ಬ್ಯಾಟಿಂಗ್​​ಗೆ ಇಳಿದಿದ್ದ ಭಾರತ ತಂಡ 2ನೇ ಓವರ್​​ನಲ್ಲೇ ಯಶಸ್ವಿ ಜೈಶ್ವಾಲ್ (4) ವಿಕೆಟ್ ಕಳೆದಕೊಂಡಿತು. ವಿರಾಟ್ ಬದಲಿಗೆ ತಂಡ ಸೇರಿದ್ದ ಜೈಸ್ವಾಲ್ ನಿರೀಕ್ಷಿತ ಪ್ರದರ್ಶನ್ ತೋರಲು ಸಾಧ್ಯವಾಗದೇ ಒಂದಂಕಿ ಮೊತ್ತಕ್ಕೆ ವಿಕೆಟ್ ಒಪ್ಪಿಸಿ ನಿರಾಶೆ ಮೂಡಿಸಿದರು. ಆದರೆ ನಂತರ ಒಂದಾದ ನಾಯಕ ಗಿಲ್ ಹಾಗೂ ರೋಹಿತ್ ಶರ್ಮಾ 2ನೇ ವಿಕೆಟ್ ಜೊತೆಯಾಟದಲ್ಲಿ 87 ರನ್​ಗಳ ಜೊತೆಯಾಟ ನೀಡಿ ಇನ್ನಿಂಗ್ಸ್​ಗೆ ಚೇತರಿಕೆ ನೀಡಿದರು. ರೋಹಿತ್ ಶರ್ಮಾ 39 ಎಸೆತಗಳಲ್ಲಿ 6 ಬೌಂಡರಿ, 2 ಸಿಕ್ಸರ್​ ಸಹಿತ 48 ರನ್​ಗಳಿಸಿ ರಶೀದ್ ಖಾನ್​ಗೆ ವಿಕೆಟ್ ಒಪ್ಪಿಸಿದರು.

ದ್ವಿಶತಕದ ಜೊತೆಯಾಟ ನೀಡಿದ ಇಶಾನ್-ಗಿಲ್

4ನೇ ಕ್ರಮಾಂಕದಲ್ಲಿ ಬಂದ ಇಶಾನ್ ಕಿಶನ್ ನಾಯಕ ಗಿಲ್ ಜೊತೆಗೂಡಿ ಅಫ್ಘಾನ್ ಬೌಲರ್​ಗಳನ್ನ ಬೆಂಡೆತ್ತಿದರು. ಈ ಜೋಡಿ 3ನೇ ವಿಕೆಟ್ ಜೊತೆಯಾಟದಲ್ಲಿ ಕೇವಲ 141 ಎಸೆತಗಳಲ್ಲಿ ಬರೋಬ್ಬರಿ 224 ರನ್​ಗಳ ಜೊತೆಯಾಟ ನೀಡಿದರು.  ಇಶಾನ್ ಕಿಶನ್ 71 ಎಸೆತಗಳಲ್ಲಿ ಶತಕ ಸಿಡಿಸಿದರು. ಇವರಿಬ್ಬರು ಬ್ಯಾಟಿಂಗ್ ಮಾಡುತ್ತಿದ್ದ ವೇಳೆ ಭಾರತ 460-470 ರನ್​ ಗಳಿಸುವ ಸಾಧ್ಯತೆ ತೋರುತ್ತಿತ್ತು. ಆದರೆ ಇಶಾನ್ ಕಿಶನ್ 37ನೇ ಓವರ್​ನಲ್ಲಿ ವಿಕೆಟ್ ಒಪ್ಪಿಸಿದರು. ಒಟ್ಟಾರೆ ಇಶಾನ್ ಕಿಶನ್ 77 ಎಸೆತಗಳಲ್ಲಿ 11 ಬೌಂಡರಿ, 7 ಸಿಕ್ಸರ್ ಸೇರಿದಂತೆ 125 ರನ್​ಗಳಿಸಿ ಔಟ್ ಆದರು.

154 ರನ್​ ಸಿಡಿಸಿದ ಗಿಲ್

2ನೇ ಓವರ್​​ನಲ್ಲೇ ಕ್ರೀಸ್​ಗೆ ಬಂದ ಗಿಲ್ ಅದ್ಭುತ ಬ್ಯಾಟಿಂಗ್ ಪ್ರದರ್ಶನ ತೋರಿದರು. ಮೊದಲಿಗೆ ರೋಹಿತ್ ಜೊತೆಗೆ 87 ರನ್​ಗಳ ಜೊತೆಯಾಟ ನೀಡಿದ ಅವರು, ನಂತರ ಇಶಾನ್ ಜೊತೆಗೂಡಿ 200ಕ್ಕಿಂತಲೂ ಹೆಚ್ಚಿನ ಜೊತೆಯಾಟ ನೀಡಿದರು.  ನಂತರ ಶ್ರೇಯಸ್ ಅಯ್ಯರ್  ಜೊತೆಗೂಡಿದ ಗಿಲ್ 40 ರನ್​ ಸೇರಿಸಿ ಔಟ್ ಆದರು. ಗಿಲ್ 110 ಎಸೆತಗಳಲ್ಲಿ 22 ಬೌಂಡರಿ, 2 ಸಿಕ್ಸರ್​ಗಳ ನೆರವಿನಿಂದ 154 ರನ್​ ಸಿಡಿಸಿ ಖರೋಟೆಗೆ ವಿಕೆಟ್ ಒಪ್ಪಿಸಿದರು. ಗಿಲ್ ವಿಕೆಟ್ ಬೀಳುತ್ತಿದ್ದಂತೆ ಭಾರತ ತಂಡದ ಬ್ಯಾಟರ್​ಗಳ ಪೆವಿಲಿಯನ್ ಪರೇಡ್ ನಡೆಯಿತು.

ಕೆಎಲ್ ರಾಹುಲ್ ಕೂಡ ಅದೇ ಓವರ್​ನ ನಂತರದ ಎಸೆತದಲ್ಲೇ  ಡಕ್ ಔಟ್ ಆದರೆ, 11 ರನ್​ಗಳ ಅಂತರದಲ್ಲಿ ಶ್ರೇಯಸ್ ಅಯ್ಯರ್ (26) ಕೂಡ  ಖರೋಟೆಗೆ 4ನೇ ಬಲಿಯಾದರು.  ವಾಷಿಂಗ್ಟನ್ ಸುಂದರ್  19,  ಗುರ್ನೂರ್ ಬ್ರಾರ್ 3, ಅರ್ಷದೀಪ್ ಸಿಂಗ್ 3, ಪ್ರಿನ್ಸ್ ಯಾದವ್ 5 ರನ್​ಗಳಿಸಿ ಔಟ್ ಆದರು. ಕುಲ್ದೀಪ್ ಯಾದವ್ ಅಜೇಯ 3 ರನ್​ಗಳಿಸಿದರು.

ಅಫ್ಘಾನಿಸ್ತಾನ ತಂಡದ ಪರ ಖರೋಟೆ 76ಕ್ಕೆ4 ಹಾಗೂ ರಶೀದ್ ಖಾನ್ 48ಕ್ಕೆ3,  ಮೊಹಮ್ಮದ್ ಸಲೀಮ್ ಸಫಿ 75ಕ್ಕೆ1, ಅಲ್ಲಾ ಘಜನ್​ಫರ್ 69ಕ್ಕೆ1 ವಿಕೆಟ್ ಪಡೆದರು.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed