IND A vs SL A: ಶ್ರೀಲಂಕಾ ಧೂಳೀಪಟ ಮಾಡಿದ ವೈಭವ್! ತ್ರಿಕೋನ ಸರಣಿ ಫೈನಲ್​​ನಲ್ಲಿ ಬೃಹತ್ ಮೊತ್ತ ದಾಖಲಿಸಿದ ಭಾರತ | ಕ್ರೀಡಾ ಸುದ್ದಿ | ACTPnews

ವೈಭವ್ ಸೂರ್ಯವಂಶಿ


Last Updated:

ತ್ರಿಕೋನ ಸರಣಿಯ ಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಟೀಮ್ ಇಂಡಿಯಾ ವೈಭವ್ ಸೂರ್ಯವಂಶಿ (29 ಎಸೆತಗಳಲ್ಲಿ 94), ನಾಯಕ ತಿಲಕ್ ವರ್ಮಾ (90 ಎಸೆತಗಳಲ್ಲಿ 67) ಸಿಡಿಸಿದ ಅರ್ಧಶತಕಗಳ ನೆರವಿನಿಂದ 377 ರನ್​​ಗಳ ಬೃಹತ್ ಮೊತ್ತ ದಾಖಲಿಸಿದೆ.

ವೈಭವ್ ಸೂರ್ಯವಂಶಿ
ವೈಭವ್ ಸೂರ್ಯವಂಶಿ

ಡಂಬುಲ್ಲಾದಲ್ಲಿ ನಡೆಯುತ್ತಿರುವ ಭಾರತ ಎ ಮತ್ತು ಶ್ರೀಲಂಕಾ ಎ ನಡುವಿನ ತ್ರಿಕೋನ ಏಕದಿನ ಸರಣಿಯ ಫೈನಲ್ ಪಂದ್ಯದಲ್ಲಿ ಭಾರತ ಬೃಹತ್ ಮೊತ್ತ ದಾಖಲಿಸಿದೆ. ಈ ಪ್ರಶಸ್ತಿ ಪಂದ್ಯದಲ್ಲಿ, ಶ್ರೀಲಂಕಾ ನಾಯಕ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡರು. ಮೊದಲು ಬ್ಯಾಟಿಂಗ್ ಮಾಡಿದ ಟೀಮ್ ಇಂಡಿಯಾ ವೈಭವ್ ಸೂರ್ಯವಂಶಿ (29 ಎಸೆತಗಳಲ್ಲಿ 94), ನಾಯಕ ತಿಲಕ್ ವರ್ಮಾ (90 ಎಸೆತಗಳಲ್ಲಿ 67) ಸಿಡಿಸಿದ ಅರ್ಧಶತಕಗಳ ನೆರವಿನಿಂದ 370 ರನ್​​ಗಳ ಬೃಹತ್ ಮೊತ್ತ ದಾಖಲಿಸಿದೆ.

ಟಾಸ್​ ಸೋತು ಬ್ಯಾಟಿಂಗ್ ಆರಂಭಿಸಿದ ಭಾರತದ ಪರ ವೈಭವ್ ಸೂರ್ಯವಂಶಿ ಮತ್ತು ಪ್ರಿಯಾಂಶ ಆರ್ಯ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶನ ತೋರಿದರು. ಈ ಜೋಡಿ ಮೊದಲ ವಿಕೆಟ್‌ಗೆ 132 ರನ್ ಸೇರಿಸಿತು. ಟಿ20ಯಂತೆ ಬ್ಯಾಟಿಂಗ್ ಮಾಡಿದ ವೈಭವ್ ಸೂರ್ಯವಂಶಿ ಕೇವಲ 29 ಎಸೆತಗಳಲ್ಲಿ 94 ರನ್ ಗಳಿಸಿ ಕೇವಲ 6 ರನ್​ಗಳಿಂದ ಶತಕ ಮಿಸ್ ಮಾಡಿಕೊಂಡರು. ಅವರ ಇನ್ನಿಂಗ್ಸ್​​ನಲ್ಲಿ 10 ಬೌಂಡರಿ ಮತ್ತು 8 ಸಿಕ್ಸರ್‌ಗಳಿದ್ದವು. ವೈಭವ್ ಮೊಹಮ್ಮದ್ ಶಿರಾಜ್​ ಎಸೆದ 3ನೇ ಓವರ್​​​ನಲ್ಲೇ 26 ರನ್ ಗಳಿಸಿ ಕೇವಲ 11 ಎಸೆತಗಳಲ್ಲಿ ಅರ್ಧಶತಕ ತಲುಪುವ ಮೂಲಕ ವಿಶ್ವ ದಾಖಲೆ ನಿರ್ಮಿಸಿದರು.

ಇವರಿಗೆ ಸಾಥ್ ಕೊಟ್ಟ ಪ್ರಿಯಾಂಶ್ 29 ಎಸೆತಗಳಲ್ಲಿ 6 ಬೌಂಡರಿ, 1 ಸಿಕ್ಸರ್​ ಸಹಿತ 39 ರನ್​ಗಳಿಸಿ ಔಟ್ ಆದರು. ಇವರಿಬ್ಬರ ವಿಕೆಟ್ ಪತನದ ನಂತರ ಭಾರತದ ರನ್​ಗತಿಗೆ ಕಡಿವಾಣ ಬಿದ್ದಿತು. ಉಪನಾಯಕ ರುತುರಾಜ್ ಗಾಯಕ್ವಾಡ್ ಹಾಗೂ ತಿಲಕ್ ವರ್ಮಾ 3ನೇ ವಿಕೆಟ್ ಜೊತೆಯಾಟದಲ್ಲಿ 106 ಎಸೆತಗಳನ್ನಾಡಿ 84 ರನ್​ ಸೇರಿಸಿದರು. ಗಾಯಕ್ವಾಡ್ 51 ಎಸೆತಗಳಲ್ಲಿ 2 ಬೌಂಡರಿ, 1 ಸಿಕ್ಸರ್ ಸಹಿತ 40 ರನ್​ಗಳಿಸಿ ಔಟ್ ಆದರು. ನಂತರ ತಿಲಕ್ ವರ್ಮಾ ಹಾಗೂ ಕುಮಾರ್ ಕುಶಾಗ್ರ 4ನೇ ವಿಕೆಟ್​​ಗೆ 63 ರನ್​ ಸೇರಿಸಿದರು. ಕುಶಾಗ್ರ 39 ಎಸೆತಗಳಲ್ಲಿ 36 ರನ್​ಗಳಿಸಿ ಔಟ್ ಆದರು.

ತಿಲಕ್ ವರ್ಮಾ 90 ಎಸೆತಗಳನ್ನಾಡಿ 4 ಬೌಂಡರಿ, 1 ಸಿಕ್ಸರ್ ಸಹಿತ 67 ರನ್​ಗಳಿಸಿ ಕುಶಾಗ್ರ ಔಟ್ ಆದ ಮುಂದಿನ ಓವರ್​​ನಲ್ಲೇ ಔಟ್ ಆದರು. ಆ ನಂತರ ಭಾರತ ತಂಡದಿಂದ ದೊಡ್ಡ ಜೊತೆಯಾಟ ಬರಲಿಲ್ಲ. ಬಂದ ಬ್ಯಾಟರ್​​ಗಳೆಲ್ಲಾ ಅಲ್ಪಮೊತ್ತಕ್ಕೆ ವಿಕೆಟ್ ಒಪ್ಪಿಸಿದರು. ಸೂರ್ಯಾಂಶ್ ಶೆಡ್ಗೆ 2, ನಿಶಾಂತ್ ಸಿಂಧು 16, ವಿಪ್ರಜ್ ನಿಗಮ್ 27 ರನ್​​ಗಳಿಸಿ ಔಟ್ ಆದರು. ಕೊನೆಯ ಎರಡು ಓವರ್​ಗಳಲ್ಲಿ ಅಬ್ಬರಿಸಿದ ಅನುಕುಲ್ ರಾಯ್ 15 ಎಸೆತಗಳಲ್ಲಿ 1 ಬೌಂಡರಿ, 4 ಸಿಕ್ಸರ್​ಗಳ ಸಹಿತ 39 ರನ್​ಗಳಿಸಿ ತಂಡದ ಮೊತ್ತವನ್ನ 370ರ ಗಡಿ ದಾಟಿಸಿದರು.

ಶ್ರೀಲಂಕಾ ಎ ಪರ ರವಿಂದು ಫರ್ನಾಂಡೊ 72ಕ್ಕೆ2, ವನುಜಾ ಸಹಾನ್ 39ಕ್ಕೆ2, ಕುಗುದಾಸ್ ಮಾತುಲನ್ 82ಕ್ಕೆ1, ದುಲಜ್ ಸಮುದಿತಾ 54ಕ್ಕೆ1, ಸಹಾನ್ ಅರಾಚಿಗೆ 35ಕ್ಕೆ1, ಮೊಹಮ್ಮದ್ ಶಿರಾಜ್ 56ಕ್ಕೆ1 ವಿಕೆಟ್ ಪಡೆದರು.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed