Last Updated:
ಈ ಗ್ರೂಪ್ ಟೂರ್ ಸೆಪ್ಟೆಂಬರ್ 6 ರಂದು ದೆಹಲಿಯಿಂದ ಹೊರಟು ಸೆಪ್ಟೆಂಬರ್ 15 ರಂದು ವಾಪಸ್ ಬರುತ್ತದೆ. ಈ ಅವಧಿಯಲ್ಲಿ ಪ್ರಯಾಣಿಕರಿಗೆ ಜಪಾನ್ನ ಹಲವು ಪ್ರಸಿದ್ಧ ನಗರಗಳು ಮತ್ತು ಪ್ರವಾಸಿ ತಾಣಗಳನ್ನು ಹತ್ತಿರದಿಂದ ಕಣ್ತುಂಬಿಕೊಳ್ಳುವ ಅವಕಾಶ ಸಿಗಲಿದೆ.
ನೀವು ಬಹಳ ದಿನಗಳಿಂದ ಜಪಾನ್ಗೆ (Japan) ಭೇಟಿ ನೀಡುವ ಕನಸು ಕಾಣುತ್ತಿದ್ದರೆ, ನಿಮಗೊಂದು ಗುಡ್ ನ್ಯೂಸ್ ಇಲ್ಲಿದೆ. ಇಂಡಿಯನ್ ರೈಲ್ವೆ ಕ್ಯಾಟರಿಂಗ್ ಅಂಡ್ ಟೂರಿಸಮ್ ಕಾರ್ಪೊರೇಷನ್ (IRCTC) ಭಾರತೀಯ ಪ್ರಯಾಣಿಕರಿಗಾಗಿ 10 ದಿನಗಳು ಮತ್ತು 9 ರಾತ್ರಿಗಳ ಜಪಾನ್ ಪ್ರವಾಸ ಪ್ಯಾಕೇಜ್ (Japan Tour Package) ಅನ್ನು ಬಿಡುಗಡೆ ಮಾಡಿದೆ. ಈ ಗ್ರೂಪ್ ಟೂರ್ ಸೆಪ್ಟೆಂಬರ್ 6 ರಂದು ದೆಹಲಿಯಿಂದ ಹೊರಟು ಸೆಪ್ಟೆಂಬರ್ 15 ರಂದು ವಾಪಸ್ ಬರುತ್ತದೆ. ಈ ಅವಧಿಯಲ್ಲಿ ಪ್ರಯಾಣಿಕರಿಗೆ ಜಪಾನ್ನ ಹಲವು ಪ್ರಸಿದ್ಧ ನಗರಗಳು ಮತ್ತು ಪ್ರವಾಸಿ ತಾಣಗಳನ್ನು ಹತ್ತಿರದಿಂದ ಕಣ್ತುಂಬಿಕೊಳ್ಳುವ ಅವಕಾಶ ಸಿಗಲಿದೆ.














