IND A vs SL A: ಸಾಯಿ ಸುದರ್ಶನ್ ಶತಕದ ಅಬ್ಬರ, ಮಿಂಚಿದ ಜುರೆಲ್-ರಶೀದ್! ಮೊದಲ ದಿನವೇ ಭಾರತ ಎ ಬೃಹತ್ ಮೊತ್ತ | ಕ್ರೀಡಾ ಸುದ್ದಿ | ACTPnews

ಶತಕ ಸಿಡಿಸಿದ ಸಾಯಿ ಸುದರ್ಶನ್


Last Updated:

ಭಾರತ ಎ ತಂಡವು ತನ್ನ ಮೊದಲ ಇನ್ನಿಂಗ್ಸ್‌ನಲ್ಲಿ 86 ಓವರ್‌ಗಳಲ್ಲಿ 4 ವಿಕೆಟ್‌ ಕಳೆದುಕೊಂಡು 333 ರನ್ ಗಳ ಬೃಹತ್ ಮೊತ್ತ ಕಲೆಹಾಕಿದೆ. ನಾಯಕ ಧ್ರವ್​ ಜುರೆಲ್ ಹಾಗೂ ಶೇಕ್ ರಶೀದ್ ಕೂಡ ಅರ್ಧಶತಕ ಸಿಡಿಸಿ ಗಮನ ಸೆಳೆದರು.

ಶತಕ ಸಿಡಿಸಿದ ಸಾಯಿ ಸುದರ್ಶನ್
ಶತಕ ಸಿಡಿಸಿದ ಸಾಯಿ ಸುದರ್ಶನ್

ಶ್ರೀಲಂಕಾ ಎ ವಿರುದ್ಧದ (India A vs Sri Lanka A) ಅನಧಿಕೃತ ಟೆಸ್ಟ್ ಪಂದ್ಯದಲ್ಲಿ ಭಾರತ ಎ ತಂಡದ ಆರಂಭಿಕ ಆಟಗಾರ ಸಾಯಿ ಸುದರ್ಶನ್ (132) (Sai Sudarshan) ಶತಕ ಬಾರಿಸಿ ಅಬ್ಬರಿಸಿದ್ದಾರೆ. ಮೊದಲ ದಿನದಾಟದ ಅಂತ್ಯದ ವೇಳೆಗೆ, ಭಾರತ ಎ ತಂಡವು ತನ್ನ ಮೊದಲ ಇನ್ನಿಂಗ್ಸ್‌ನಲ್ಲಿ 86 ಓವರ್‌ಗಳಲ್ಲಿ 4 ವಿಕೆಟ್‌ ಕಳೆದುಕೊಂಡು 333 ರನ್ ಗಳ ಬೃಹತ್ ಮೊತ್ತ ಕಲೆಹಾಕಿದೆ. ನಾಯಕ ಧ್ರುವ್​ ಜುರೆಲ್ ಹಾಗೂ ಶೇಕ್ ರಶೀದ್ ಕೂಡ ಅರ್ಧಶತಕ ಸಿಡಿಸಿ ಗಮನ ಸೆಳೆದರು. ಆದರೆ ಕನ್ನಡಿಗ ದೇವದತ್ ಪಡಿಕ್ಕಲ್ ಹಾಗೂ ಗಾಯಕ್ವಾಡ್​​​ ಅಲ್ಪಮೊತ್ತಕ್ಕೆ ವಿಕೆಟ್ ಒಪ್ಪಿಸಿ ನಿರಾಶೆ ಅನುಭವಿಸಿದರು.

ಉತ್ತಮ ಆರಂಭ ಪಡೆದ ಭಾರತ

ಟಾಸ್​ ಗೆದ್ದು ಬ್ಯಾಟಿಂಗ್ ಮಾಡಿದ ಭಾರತ ತಂಡ ಭರ್ಜರಿ ಆರಂಭ ಪಡೆದುಕೊಂಡಿತು. ಆರಂಭಿಕರಾದ ಸಾಯಿ ಸುದರ್ಶನ್ ಮತ್ತು ಆಯುಷ್ ಪಾಂಡೆ (25) ಮೊದಲ ವಿಕೆಟ್‌ಗೆ 82 ರನ್ ಸೇರಿಸುವ ಮೂಲಕ ಅದ್ಭುತ ಆರಂಭ ನೀಡಿದರು. ದಿಲುನ್ ಸುದೀರಾ 25 ರನ್​ಗಳಿಸಿದ್ದ ಆಯುಷ್ ಪಾಂಡೆಯನ್ನು ಔಟ್ ಮಾಡಿದರು. ಆದರೆ 3ನೇ ಕ್ರಮಾಂಕದಲ್ಲಿ ಬಂದ ಕನ್ನಡಿಗ ಪಡಿಕ್ಕಲ್ 7 ಎಸೆತಗಳಲ್ಲಿ 12 ರನ್​ಗಳಿಸಿ ವಿಕೆಟ್ ಒಪ್ಪಿಸಿದರು.

ಶತಕ ಸಿಡಿಸಿದ ಸುದರ್ಶನ್

ಈ ಹಂತದಲ್ಲಿ ಸಾಯಿ ಸುದರ್ಶನ್ ಜೊತೆಗೂಡಿದ ರುತುರಾಜ್ ಗಾಯಕ್ವಾಡ್ ಜೊತೆಗೆ ಇನ್ನಿಂಗ್ಸ್ ಅನ್ನು ಮುಂದಕ್ಕೆ ಕೊಂಡೊಯ್ದರು. ಇಬ್ಬರೂ ಎಚ್ಚರಿಕೆಯಿಂದ ಆಡಿದ್ದರಿಂದ ಸ್ಕೋರಿಂಗ್ ವೇಗ ತಗ್ಗಿತು. ಈ ಜೋಡಿ ಮೂರನೇ ವಿಕೆಟ್‌ಗೆ 90 ರನ್ ಸೇರಿಸಿದರು. ರುತುರಾಜ್ (22) ರವಿಂದುಗೆ ಎಲ್ಬಿಡಬ್ಲ್ಯೂ ಆಗಿ ಔಟ್ ಆದರು. ನಂತರ ಧ್ರುವ್ ಜುರೆಲ್ ಕ್ರೀಸ್‌ಗೆ ಬಂದರು. ಜುರೆಲ್ ಜೊತೆ 35 ರನ್​ ಸೇರಿಸಿದರು. 175 ಎಸೆತಗಳಲ್ಲಿ 19 ಬೌಂಡರಿಗಳ ನೆರವಿನಿಂದ 132 ರನ್​ಗಳಿಸಿ ಸುದರ್ಶನ್ ಚಮಿಕಾ ಗುಣಶೇಖರಗೆ ವಿಕೆಟ್ ಒಪ್ಪಿಸಿದರು.

ಶತಕದ ಜೊತೆಯಾಟ ನೀಡಿದ ಕ್ಯಾಪ್ಟನ್

ಸಾಯಿ ಸುದರ್ಶನ್ ವಿಕೆಟ್ ನಂತರ ನಾಯಕ ಧ್ರುವ್ ಜುರೆಲ್ (138 ಎಸೆತಗಳಲ್ಲಿ 5 ಬೌಂಡರಿಗಳೊಂದಿಗೆ 68 ರನ್) ಮತ್ತು ಯುವ ಪ್ರತಿಭೆ ಶೇಕ್ ರಶೀದ್ (92 ಎಸೆತಗಳಲ್ಲಿ 4 ಬೌಂಡರಿಗಳೊಂದಿಗೆ 53 ರನ್) ಮುರಿಯದ 5ನೇ ವಿಕೆಟ್ ಜೊತೆಯಾಟದಲ್ಲಿ 116 ರನ್​ ಸೇರಿಸಿ ಮೈದಾನದಲ್ಲಿದ್ದಾರೆ.

ಶ್ರೀಲಂಕಾ ಎ ಬೌಲರ್‌ಗಳಲ್ಲಿ, ಸುದೀರಾ ಎರಡು ವಿಕೆಟ್ ಪಡೆದರೆ, ಚಮಿಕಾ ಗುಣಶೇಖರ ಮತ್ತು ರವಿಂದು ಫರ್ನಾಂಡೊ ತಲಾ ಒಂದು ವಿಕೆಟ್ ಪಡೆದರು.

ತ್ರಿಕೋನ ಸರಣಿ ಗೆದ್ದಿದ್ದ ಭಾರತ

ಈ ಟೆಸ್ಟ್ ಸರಣಿಗೂ ಮುನ್ನ ಭಾರತ ತಂಡ ಅಫ್ಘಾನಿಸ್ತಾನ ಹಾಗೂ ಶ್ರೀಲಂಕಾ ತಂಡಗಳ ವಿರುದ್ಧದ ತ್ರಿಕೋನ ಸರಣಿಯಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ವೈಭವ್ ಸೂರ್ಯವಂಶಿ ಫೈನಲ್​​​ನಲ್ಲಿ 29 ಎಸೆತಗಳಲ್ಲಿ 94 ರನ್​ ಚಚ್ಚಿದ್ದರು. ಆ ಸರಣಿಯಲ್ಲಿ ತಿಲಕ್ ಭಾರತ ತಂಡವನ್ನ ಮುನ್ನಡೆಸಿದ್ದರು. ಇದೀಗ ಧ್ರುವ್ ಜುರೆಲ್ ಟೆಸ್ಟ್ ತಂಡದ ನಾಯಕನಾಗಿ ಆಡುತ್ತಿದ್ದಾರೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed