IMD Rain Forecast: ಮುಂದಿನ 7 ದಿನ ಕರ್ನಾಟಕದಲ್ಲಿ ಭಾರಿ ಮಳೆ ಇಲ್ಲ; ಈ ಜಿಲ್ಲೆಗಳಲ್ಲಿ ಒಣ ಹವೆ, ಬಿಸಿಲಿನ ಎಚ್ಚರಿಕೆ | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews

News18


Last Updated:

IMD ಮುನ್ಸೂಚನೆಯ ಪ್ರಕಾರ ಜುಲೈ 15ರಿಂದ 20ರವರೆಗೆ ಕರ್ನಾಟಕದಲ್ಲಿ ವ್ಯಾಪಕ ಭಾರಿ ಮಳೆಯ ಸಾಧ್ಯತೆ ಇಲ್ಲ. ಹಲವು ಒಳನಾಡು ಜಿಲ್ಲೆಗಳಲ್ಲಿ ಒಣ ಹವೆ ಮುಂದುವರಿಯಲಿದ್ದು, ಕಲಬುರಗಿ, ರಾಯಚೂರು ಹಾಗೂ ಯಾದಗಿರಿಯಲ್ಲಿ ಬಿಸಿ ಮತ್ತು ಆರ್ದ್ರ ವಾತಾವರಣ ಇರಲಿದೆ. ಕೆಲವೆಡೆ ಬಿರುಗಾಳಿಯ ಸಾಧ್ಯತೆಯೂ ಇದೆ.

News18
News18

ಮಳೆಗಾಲ ಶುರುವಾಗಿದೆ. ರಾಜ್ಯಾದ್ಯಂತ ಧಾರಾಕಾರ ಮಳೆಯಾಗಬಹುದು ಎಂದು ಹಲವರು ನಿರೀಕ್ಷಿಸುತ್ತಿದ್ದಾರೆ. ಆದರೆ ಭಾರತೀಯ ಹವಾಮಾನ ಇಲಾಖೆ (IMD) ಬಿಡುಗಡೆ ಮಾಡಿರುವ ಮುಂದಿನ ಏಳು ದಿನಗಳ ಮುನ್ಸೂಚನೆ ಬೇರೆ ಚಿತ್ರಣವನ್ನು ನೀಡಿದೆ. ಬಹುತೇಕ ಜಿಲ್ಲೆಗಳಲ್ಲಿ ಜುಲೈ 15ರಿಂದ 20ರವರೆಗೆ ಭಾರಿ ಮಳೆಯ ಸಾಧ್ಯತೆ ಇಲ್ಲ ಎಂದು ಇಲಾಖೆ ತಿಳಿಸಿದೆ.

ಮುಂದಿನ ಒಂದು ವಾರ ವಿಜಯಪುರ, ಕೊಪ್ಪಳ, ಬಳ್ಳಾರಿ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಮೈಸೂರು, ಮಂಡ್ಯ, ತುಮಕೂರು, ಕೋಲಾರ, ದಾವಣಗೆರೆ, ರಾಮನಗರ ಹಾಗೂ ಚಿತ್ರದುರ್ಗ ಸೇರಿದಂತೆ ಹಲವು ಒಳನಾಡು ಜಿಲ್ಲೆಗಳಲ್ಲಿ ಒಣ ಹವೆ (Dry Weather) ಮುಂದುವರಿಯುವ ಸಾಧ್ಯತೆ ಇದೆ. ಮಳೆಗಾಗಿ ಕಾಯುತ್ತಿರುವ ರೈತರು ಹಾಗೂ ಸಾರ್ವಜನಿಕರಿಗೆ ಈ ಮುನ್ಸೂಚನೆ ನಿರಾಸೆ ಮೂಡಿಸಬಹುದಾದರೂ, ಮುಂದಿನ ಕೃಷಿ ಚಟುವಟಿಕೆಗಳನ್ನು ಯೋಜಿಸಲು ಇದು ಪ್ರಮುಖ ಮಾಹಿತಿ

ಮಳೆಗಾಲದಲ್ಲೇ ಬಿಸಿಲಿನ ಎಚ್ಚರಿಕೆ! ಇಲ್ಲೇ ಮತ್ತೊಂದು ಪ್ರಮುಖ ಬೆಳವಣಿಗೆ ಇದೆ. ಕಲಬುರಗಿ, ರಾಯಚೂರು ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಜುಲೈ 15ರಂದು ಬಿಸಿ ಹಾಗೂ ಆರ್ದ್ರ (Hot and Humid) ವಾತಾವರಣ ಇರಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಮಳೆಗಾಲದಲ್ಲೇ ಈ ರೀತಿಯ ಹವಾಮಾನ ಕಂಡುಬರುವ ಸಾಧ್ಯತೆ ಇರುವುದರಿಂದ ಜನರು ಅಗತ್ಯ ಮುನ್ನೆಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ. ಮಲೆನಾಡಿನಲ್ಲಿ ಮಳೆಯ ಪರಿಸ್ಥಿತಿ ಹೇಗಿರಲಿದೆ ಗೊತ್ತೇ? ಮಲೆನಾಡಿನಲ್ಲೂ ಈ ಬಾರಿ ಭಾರಿ ಮಳೆಯ ಮುನ್ಸೂಚನೆ ಇಲ್ಲ.

ಚಿಕ್ಕಮಗಳೂರು, ಹಾಸನ, ಕೊಡಗು ಹಾಗೂ ಶಿವಮೊಗ್ಗ ಜಿಲ್ಲೆಗಳಲ್ಲಿ ಹಗುರದಿಂದ ಸಾಧಾರಣ ಮಳೆ (Light to Moderate Rain) ಅಲ್ಲಲ್ಲಿ ಮಾತ್ರ ಸುರಿಯುವ ಸಾಧ್ಯತೆ ಇದೆ. ಇನ್ನು ಹಾವೇರಿ ಮತ್ತು ವಿಜಯನಗರ ಜಿಲ್ಲೆಗಳಲ್ಲಿಯೂ ಒಣ ಹವೆ ಮುಂದುವರಿಯುವ ನಿರೀಕ್ಷೆಯಿದೆ. ಬಿರುಗಾಳಿಯ ಎಚ್ಚರಿಕೆ ಮಾತ್ರ ಮುಂದುವರಿಕೆ ಮಳೆ ಕಡಿಮೆಯಿದ್ದರೂ ಗಾಳಿಯ ಅಬ್ಬರ ಮಾತ್ರ ಕಡಿಮೆಯಾಗುವುದಿಲ್ಲ.

ತಂಪಾದ ವಾತಾವರಣಕ್ಕೆ ಹೆಸರಾಗಿದ್ದ ಸಿಲಿಕಾನ್ ಸಿಟಿ ಬೆಂಗಳೂರಿನ ಜನತೆಗೆ ಹವಾಮಾನ ಇಲಾಖೆಯು ಅಚ್ಚರಿಯ ವರದಿಯೊಂದನ್ನು ನೀಡಿದ್ದು, ಜುಲೈ ತಿಂಗಳಿನ ಮಳೆಗಾಲದಲ್ಲಿಯೂ ಬಿಸಿಲಿನ ಝಳ ಕಾಡಲಿದೆ. ವರದಿಯ ಪ್ರಕಾರ, ಮುಂದಿನ ಐದು ದಿನಗಳ ಕಾಲ ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗಳಲ್ಲಿ ಮಳೆಯ ಸುಳಿವೇ ಇಲ್ಲದೆ ಸಂಪೂರ್ಣ ಒಣ ಹವೆ ಇರಲಿದ್ದು, ಜುಲೈ 15ರಂದು ಗರಿಷ್ಠ ತಾಪಮಾನ ವಾಡಿಕೆಗಿಂತ 3-4 ಡಿಗ್ರಿ ಸೆಲ್ಸಿಯಸ್‌ನಷ್ಟು (33°C ಗರಿಷ್ಠ, 21°C ಕನಿಷ್ಠ) ಹೆಚ್ಚಾಗುವ ಜೊತೆಗೆ ಆಕಾಶವು ನಿರ್ಮಲವಾಗಿರಲಿದೆ.

ತದನಂತರ ಜುಲೈ 16 ರಿಂದ 18ರವರೆಗೆ ಭಾಗಶಃ ಮೋಡಕವಿದ ವಾತಾವರಣವಿದ್ದರೂ ಸೆಕೆ ಕಡಿಮೆಯಾಗುವುದಿಲ್ಲ (ಗರಿಷ್ಠ 32°C ಹಾಗೂ ಕನಿಷ್ಠ 21-22°C ಇರಲಿದೆ). ಈ ಬಿಸಿಲಿನ ತಾಪದ ಜೊತೆಗೆ, ಜುಲೈ 15 ರಿಂದ 18ರವರೆಗೆ ಸತತ ಐದು ದಿನಗಳ ಕಾಲ ನಗರದಾದ್ಯಂತ ಗಂಟೆಗೆ 30 ರಿಂದ 40 ಕಿ.ಮೀ ವೇಗದಲ್ಲಿ ಭಾರಿ ಬಿರುಗಾಳಿ ಬೀಸುವ ಎಚ್ಚರಿಕೆಯನ್ನು ನೀಡಲಾಗಿದ್ದು, “ನಮ್ಮೂರೇ ನಮಗೆ ಎಸಿ” ಎಂದುಕೊಳ್ಳುತ್ತಿದ್ದ ಬೆಂಗಳೂರಿಗರು ಈಗ ದಿಢೀರ್ ಹವಾಮಾನ ಬದಲಾವಣೆಯ ಸೆಕೆಗೆ ಬೆವರಬೇಕಾದ ಅನಿವಾರ್ಯತೆ ಎದುರಾಗಿದೆ.

ಜುಲೈ 15ರಿಂದ 20ರವರೆಗೆ ರಾಜ್ಯದ ಕೆಲವೆಡೆ ಗಂಟೆಗೆ 30ರಿಂದ 40 ಕಿಲೋಮೀಟರ್ ವೇಗದಲ್ಲಿ ಬಿರುಗಾಳಿ ಬೀಸುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ರೈತರು, ಪ್ರಯಾಣಿಕರು ಗಮನಿಸಬೇಕಾದ ಮಾಹಿತಿ ಮುಂದಿನ ವಾರ ಭಾರಿ ಮಳೆಯ ನಿರೀಕ್ಷೆಯಲ್ಲಿದ್ದ ರೈತರು, ಕೃಷಿ ಚಟುವಟಿಕೆಗಳನ್ನು ಈ ಮುನ್ಸೂಚನೆಗೆ ಅನುಗುಣವಾಗಿ ಯೋಜಿಸಿಕೊಳ್ಳುವುದು ಸೂಕ್ತ. ಅದೇ ರೀತಿ ಬಿರುಗಾಳಿಯ ಸಾಧ್ಯತೆ ಇರುವುದರಿಂದ ಹೊರಾಂಗಣ ಕೆಲಸಗಳು ಮತ್ತು ಪ್ರಯಾಣದ ವೇಳೆ ಅಗತ್ಯ ಮುನ್ನೆಚ್ಚರಿಕೆ ವಹಿಸುವುದು ಒಳಿತು



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed