Hrithik Roshan Sister: ಹೃತಿಕ್‌ ರೋಷನ್‌ ಸಹೋದರಿ ತಮ್ಮ ಕಾಯಿಲೆಗಳನ್ನು ಹೇಗೆ ನಿವಾರಿಸಿಕೊಳ್ತಿದ್ದಾರೆ ಗೊತ್ತಾ? | Hrithik Roshan Sister Sunaina Roshan talks about her switch from junk to healthy food fatty liver disease jaundice | ಲೈಫ್‌ಸ್ಟೈಲ್ | ACTPnews

Hrithik Roshan Sister: ಹೃತಿಕ್‌ ರೋಷನ್‌ ಸಹೋದರಿ ತಮ್ಮ ಕಾಯಿಲೆಗಳನ್ನು ಹೇಗೆ ನಿವಾರಿಸಿಕೊಳ್ತಿದ್ದಾರೆ ಗೊತ್ತಾ? | Hrithik Roshan Sister Sunaina Roshan talks about her switch from junk to healthy food fatty liver disease jaundice | ಲೈಫ್‌ಸ್ಟೈಲ್


ಅದೇ ರೀತಿ ಅವರ ಸಹೋದರಿ ಸುನೈನಾ ರೋಷನ್ ಸಹ ತಮ್ಮ ದಿನಚರಿಯಲ್ಲಿ ಆರೋಗ್ಯಕರ ಬದಲಾವಣೆಯನ್ನು ಮಾಡಿಕೊಂಡು ಆರೋಗ್ಯವನ್ನು ತಮ್ಮ ಹತೋಟಿಗೆ ತಂದುಕೊಳ್ಳುವ ಮೂಲಕ ಹಲವರಿಗೆ ಸ್ಪೂರ್ತಿಯಾಗಿದ್ದಾರೆ.

ತೀರಾ ಕೆಟ್ಟ ಆಹಾರ ಪದ್ಧತಿಯಲ್ಲಿದ್ದ ಸುನೈನಾ, ಈಗ ಒಳ್ಳೆ ಆಹಾರದ ಮೂಲಕ ಒಳ್ಳೆ ಲೈಫ್‌ಸ್ಟೈಲ್‌ಗೆ ಮರಳಿದ್ದಾರೆ. ಈ ಬಗ್ಗೆ ಅವರೇ ತಮ್ಮ ಇನ್ಸ್ಟಾಗ್ರಾಮ್‌ ವಿಡಿಯೋದಲ್ಲಿ ಹಂಚಿಕೊಂಡಿದ್ದಾರೆ.

ಕಾಮಾಲೆ ಕಾಯಿಲೆ ಕಲಿಸಿತು ಆರೋಗ್ಯಕರ ಜೀವನದ ಪಾಠ

ಇವರು ಉತ್ತಮ ಜೀವನಶೈಲಿಗೆ ಮರಳಲು ಕಾರಣವಾಗಿದ್ದು, ಇವರಿಗೆ ಬಂದ ಜಾಂಡೀಸ್. ಹೌದು ಜಾಂಡೀಸ್‌ ಬರುತ್ತಿದ್ದಂತೆ ಸುನೈನಾ ಅವರಿಗೆ ಗ್ರೇಡ್ 3 ಕೊಬ್ಬಿನ ಪಿತ್ತಜನಕಾಂಗದ ಕಾಯಿಲೆ ಕೂಡ ಉಲ್ಪಣಗೊಂಡಿತು.

ಆಗ ಇದಕ್ಕಿರುವ ಒಂದೇ ಒಂದು ಪರಿಹಾರ ಹೆಲ್ದಿ ಲೈಫ್‌ಸ್ಟೈಲ್‌ ಎಂದು ತಿಳಿದ ಸುನೈನಾ ಜಂಕ್‌ನಿಂದ ಆರೋಗ್ಯಕರ ಆಹಾರದತ್ತ ಪ್ರಯಾಣ ಬೆಳೆಸಿದರು.

ಜಂಕ್‌ನಿಂದ ಆರೋಗ್ಯಕರ ಆಹಾರದತ್ತ ಸುನೈನಾ ಪಯಣ

ಸುನೈನಾ ಅವರು ವಿಡಿಯೋದಲ್ಲಿ ಪಿಜ್ಜಾದಿಂದ ಬರ್ಗರ್‌ಗಳವರೆಗೆ ಬಹಳಷ್ಟು ಜಂಕ್ ಫುಡ್‌ಗಳನ್ನು ಸೇವಿಸುತ್ತಿದ್ದೆ ಎಂದು ಹೇಳಿದ್ದಾರೆ. ಆರೋಗ್ಯಕರ ಊಟ ಮಾಡುವುದೇ ಕಡಿಮೆ ಆಗಿತ್ತು. ಆದರೆ ನನಗೆ ಬಂದ ಕಾಮಾಲೆ ನನ್ನ ಎಲ್ಲಾ ದೃಷ್ಟಿಕೋನವನ್ನು ಬದಲಾಯಿಸಿತು ಎಂದಿದ್ದಾರೆ.

ಕಾಮಾಲೆ ಮತ್ತು ಕೊಬ್ಬಿನ ಪಿತ್ತಜನಕಾಂಗದ ಕಾಯಿಲೆ

ಕಾಮಾಲೆಗೂ, ಕೊಬ್ಬಿನ ಪಿತ್ತಜನಕಾಂಗದ ಕಾಯಿಲೆಗೂ ನಿಕಟ ಸಂಬಂಧ ಇದೆ ಅಂತಾ ಹಲವು ಅಧ್ಯಯನಗಳು ಹೇಳಿವೆ. ಸುನೈನಾ ವಿಚಾರದಲ್ಲಿ ಆಗಿದ್ದು ಇದೆ.

ಕೊಬ್ಬಿನ ಪಿತ್ತಜನಕಾಂಗದ ಕಾಯಿಲೆ ಇರೋರಿಗೆ ಹುರಿದ ಮತ್ತು ಮಸಾಲೆಯುಕ್ತ ಆಹಾರ ಪದಾರ್ಥಗಳಿಂದ ದೂರವಿರಲು ವೈದ್ಯರು ಶಿಫಾರಸು ಮಾಡುತ್ತಾರೆ.

ಈ ವೇಳೆ ಸುನೈನಾ ಆರೋಗ್ಯ ಕಾಪಾಡಿಕೊಳ್ಳೋದಕ್ಕಿಂತ ಹೆಚ್ಚಿನದಿಲ್ಲ ಎಂದು ಎಲ್ಲಾ ಜಂಕ್‌ ಫುಡ್‌ಗೆ ಗುಡ್‌ಬಾಯ್‌ ಹೇಳಿ ಆರೋಗ್ಯಕರ ಊಟಕ್ಕೆ ಆದ್ಯತೆ ನೀಡಿದರು.

ಇತ್ತೀಚಿನ ಪಾಡ್‌ಕಾಸ್ಟ್‌ನಲ್ಲಿ, ಸುನೈನಾ ತನ್ನ ಗ್ರೇಡ್ 3 ಫ್ಯಾಟಿ ಲಿವರ್ ಕಾಯಿಲೆಯ ವಿರುದ್ಧ ಹೋರಾಡಿ ಅದನ್ನು ಪರಿಹರಿಸಿಕೊಂಡಿದ್ದೆ ತನ್ನ ದೊಡ್ಡ ಸಾಧನೆಗಳಲ್ಲಿ ಒಂದಾಗಿದೆ ಎಂದು ಉಲ್ಲೇಖಿಸಿದ್ದಾರೆ.

ಆದರೆ ಸುನೈನಾ ಅವರು ಇನ್ನೂ ಕೂಡ ಗ್ರೇಡ್ ಒನ್ ಕೊಬ್ಬಿನ ಪಿತ್ತಜನಕಾಂಗದ ಕಾಯಿಲೆಯನ್ನು ಹೊಂದಿದ್ದು, ಅದನ್ನು ಹಿಮ್ಮೆಟ್ಟಿಸುವುದು ನನ್ನ ಮುಂದಿನ ಗುರಿ. ಅದನ್ನು ನಿವಾರಿಸಿಕೊಳ್ಳಲು ನಾನು ಇನ್ನೂ ನನ್ನ ಲೈಫ್‌ಸ್ಟೈಲ್‌ ಅನ್ನು ಸುಧಾರಿಸಿಕೊಳ್ಳಬೇಕು ಎಂದಿದ್ದಾರೆ.

“ಜಂಕ್‌ನಿಂದ ಆರೋಗ್ಯಕರ ಆಹಾರದ ಹಾದಿಯು ಸುಲಭದ ಕೆಲಸವಲ್ಲ. ಆದರೆ ಈ ಪ್ರಯಾಣದಲ್ಲಿ ಎಂದೂ ನಾವು ನಿಲ್ಲಬಾರದು. ಆರೋಗ್ಯ ಕೈ ಮೀರಿ ಹೋಗುವವರೆಗೂ ಕಾಯಬೇಡಿ, ಅನಾರೋಗ್ಯ ಅಥವಾ ಭಯವು ನಿಮ್ಮನ್ನು ತಡೆಹಿಡಿಯಲು ಬಿಡಬೇಡಿ. ನಿಮ್ಮ ದೇಹ ನಿಮ್ಮ ಮಾತು ಕೇಳುತ್ತದೆ” ಎಂದು ನೆನಪಿಡಿ ಅಂತಾ ಸಲಹೆ ನೀಡಿದ್ದಾರೆ.

ಸುನೈನಾಗೆ ಇತ್ತು ಗರ್ಭಕಂಠದ ಕ್ಯಾನ್ಸರ್

ಸುನೈನಾ ಇತ್ತೀಚೆಗಷ್ಟೇ ಗರ್ಭಕಂಠದ ಕ್ಯಾನ್ಸರ್ ಇತ್ತು ಎಂಬುದನ್ನು ಸಹ ಬಹಿರಂಗಪಡಿಸಿದ್ದಾರೆ. ತನ್ನ ತಂದೆ ರಾಕೇಶ್ ರೋಷನ್‌ನೊಂದಿಗೆ ಸಹ-ನಿರ್ಮಾಪಕನಾಗಿ ತನ್ನ ಮೊದಲ ಯೋಜನೆಯಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಈ ಕಾಯಿಲೆ ಇರೋದು ಪತ್ತೆಯಾಯಿತು ಎಂದು ಪಾಡ್‌ಕಾಸ್ಟ್‌ನಲ್ಲಿ ತಿಳಿಸಿದ್ದರು.

ನನ್ನ ಪೀರಿಯಡ್ಸ್‌ ವೇಳೆ ರಕ್ತ ಹೆಪ್ಪುಗಟ್ಟುವಿಕೆಯನ್ನು ಗಮನಿಸಿದ ಸೂನೈನಾ ತಕ್ಷಣ ಪರೀಕ್ಷೆ ಮಾಡಿಸಿಕೊಂಡರು. ಬೇಗನೇ ಈ ಕಾಯಿಲೆ ಪತ್ತೆಯಾದ್ದರಿಂದ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ ಹೃತಿಕ್‌ ರೋಷನ್‌ ಸಹೋದರಿ ಸುನೈನಾ ರೋಷನ್.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed