Actor: ಟ್ಯಾಕ್ಸಿ ಓಡಿಸಿ ಜೀವನ ಕಟ್ಟಿಕೊಂಡ ಐಶ್ವರ್ಯಾ ರೈ ಸಿನಿಮಾ ನಟ! ಇದು ಹ್ಯಾಂಡ್ಸಮ್ ಹೀರೋನ ಕಣ್ಣೀರಿನ ಕಥೆ | | ACTPnews

ಅಬ್ಬಾಸ್


Last Updated:

Actor : ಅಬ್ಬಾಸ್ ತಮ್ಮ ವೃತ್ತಿಜೀವನದ ಚುಕ್ಕಾಣಿ ಅನುಭವಿಸುತ್ತಿದ್ದ ಸಮಯದಲ್ಲೇ ಇದ್ದಕ್ಕಿದ್ದಂತೆ ಗ್ಲಾಮರ್ ಜಗತ್ತಿನಿಂದ ದೂರವದರು. ಅವರ ಈ ನಿರ್ಧಾರ ಅನೇಕ ಅಭಿಮಾನಿಗಳನ್ನು ಆಶ್ಚರ್ಯಚಕಿತಗೊಳಿಸಿತು.

ಅಬ್ಬಾಸ್
ಅಬ್ಬಾಸ್

ಚಿತ್ರರಂಗ ಹೊರಗಿನಿಂದ ಕಾಣುವಷ್ಟುಕಲರ್ ಫುಲ್ ಆಗಿರಲ್ಲ. ವೈಭವ, ಹೆಸರು, ಹಣ ಈ ಎಲ್ಲಾವುದರ ಹಿಂದೆ ಅನೇಕ ಹೋರಾಟಗಳು, ನೋವುಗಳು ಮತ್ತು ಕಣ್ಣೀರ ಕಥೆಗಳಿರುತ್ತವೆ. ಪರದೆಯ ಮೇಲೆ ನಟರು ಕಾಣಿಸುವ ಅದ್ಭುತ ಗ್ಲಾಮರ್ ಯುವಕರಿಗೆ ಕನಸಿನ ಲೋಕವಾಗಿ ತೋರುವುದಾದರೂ, ನಿಜವಾದ ಬದುಕಿನ ಹಾದಿ ಸಂಪೂರ್ಣವಾಗಿ ವಿಭಿನ್ನವಾಗಿದೆ. ಈ ಸತ್ಯವನ್ನು ತಮ್ಮ ಜೀವನದಲ್ಲಿ ಅನುಭವಿಸಿದ ನಟರಲ್ಲಿ ಅಬ್ಬಾಸ್ ಒಬ್ಬರು. ಒಂದು ಕಾಲದಲ್ಲಿ ದಕ್ಷಿಣ ಚಿತ್ರರಂಗದ ಸ್ಟಾರ್ ನಟರಾಗಿದ್ದ ಈ ನಟನ ಬದುಕು ಇಂದು ಮತ್ತೆ ಚರ್ಚೆಯಲ್ಲಿದೆ.

1990ರ ದಶಕದ ಉತ್ತರಾರ್ಧ ಮತ್ತು 2000ರ ದಶಕದ ಮೊದಲ ವರ್ಷಗಳಲ್ಲಿ ಅಬ್ಬಾಸ್ ತಮಿಳು ಹಾಗೂ ತೆಲುಗು ಚಲನಚಿತ್ರೋದ್ಯಮಗಳಲ್ಲಿನ ಹಾಟ್ ಫೇವರಿಟ್ ಆಗಿದ್ದರು. ಅವರು ತಮ್ಮ ಸ್ಟೈಲಿಶ್ ಲುಕ್, ಅಭಿನಯದ ಮೂಲಕ ಯುವಕರ ಹೃದಯ ಗೆದ್ದರು. ಆ ಕಾಲದಲ್ಲಿ ಅವರ ಹೇರ್ ಸ್ಟೈಲ್ , ಉಡುಪು ಶೈಲಿ ಟ್ರೆಂಡ್‌ಸೆಟರ್ ಆಗಿತ್ತು. ಅನೇಕ ಯುವಕರು ಅಬ್ಬಾಸ್ ಅವರನ್ನು ಫ್ಯಾಷನ್ ಐಕಾನ್ ಎಂದು ಕಂಡಿದ್ದರು.

ಇದನ್ನೂ ಓದಿ: John Vijay: ಕನ್ನಡಕ್ಕೆ ಬಂದ ಬಹು ಭಾಷಾ ನಟ ಜಾನ್ ವಿಜಯ್; ಹಲ್ಕಾ ಡಾನ್ ಅಲ್ಲಿ ಇವರೇ ವಿಲನ್!

ತಮಿಳು ಸಿನಿಮಾದ ಮೂಲಕ ನಾಯಕನಾಗಿ ಗುರುತಿಸಿಕೊಂಡ ಅಬ್ಬಾಸ್, ನಂತರ ತೆಲುಗು ಪ್ರೇಕ್ಷಕರಿಗೂ ಹತ್ತಿರವಾದರು. ಜೊತೆಗೆ ಹಲವು ಲವ್ ಸ್ಟೋರಿ ಮತ್ತು ಫ್ಯಾಮಿಲಿ ಎಂಟರ್‌ಟೈನರ್ ಸಿನಿಮಾಗಳಲ್ಲಿ ನಟಿಸಿ ಜನಪ್ರಿಯತೆ ಹೆಚ್ಚಿಸಿಕೊಂಡರು. ವಿಶೇಷವಾಗಿ ಐಶ್ವರ್ಯಾ ರೈ ಅವರೊಂದಿಗೆ ನಟಿಸಿದ ‘ಪ್ರಿಯುರನು ಪಿಲಿಚಿಂಡಿ’ ಚಿತ್ರವು ಅವರಿಗೆ ಅಪಾರ ಹೆಸರು ತಂದುಕೊಟ್ಟಿತು.

ಅಬ್ಬಾಸ್ ನಂತರ ಕುಟುಂಬದೊಂದಿಗೆ ನ್ಯೂಜಿಲೆಂಡ್‌ಗೆ ತೆರಳಿದರು. ಅಲ್ಲಿ ಬದುಕು ನಡೆಸುವುದು ಅವರಿಗೆ ಸುಲಭವಾಗಲಿಲ್ಲ. ವರದಿಗಳ ಪ್ರಕಾರ, ಅವರು ಜೀವನ ಸಾಗಿಸಲು ಮೆಕ್ಯಾನಿಕ್ ಕೆಲಸದಿಂದ ಆರಂಭಿಸಿ, ಟ್ಯಾಕ್ಸಿ ಓಡಿಸುವವರೆಗೆ ಹಲವು ಕೆಲಸಗಳನ್ನು ಮಾಡಿದ್ದಾರೆ. ಚಿತ್ರರಂಗದ ಸ್ಟಾರ್ ಆಗಿದ್ದ ವ್ಯಕ್ತಿಯೊಬ್ಬರು ಬದುಕಿಗಾಗಿ ಹೋರಾಡಬೇಕಾದ ಆ ಸ್ಥಿತಿಯು ಅಭಿಮಾನಿಗಳನ್ನು ನಿಜಕ್ಕೂ ಬೆರಗುಗೊಳಿಸಿತು.

ಇತ್ತೀಚೆಗೆ ಅಬ್ಬಾಸ್ ಅವರ ಹೊಸ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಒಂದು ಕಾಲದಲ್ಲಿ ಚಾಕೊಲೇಟ್ ಹೀರೋ ಆಗಿ ಕಾಣಿಸಿಕೊಂಡಿದ್ದ ನಟ ಈಗ ಸಂಪೂರ್ಣವಾಗಿ ಬದಲಾಗಿರುವುದನ್ನುನೆಟ್ಟಿಗರು ಗಮನಿಸಿದ್ದಾರೆ. ಈ ಫೋಟೋಗಳು ಅಬ್ಬಾಸ್ ಅವರ ಬದುಕಿನ ಹೋರಾಟದ ಕಥೆಯನ್ನು ಮತ್ತೆ ನೆನಪಿಗೆ ತರುತ್ತಿವೆ.

1996 ರಲ್ಲಿ ಬಿಡುಗಡೆಯಾದ ‘ಕಾತಲ್ ದೇಸಂ’ ಚಿತ್ರದ ಮೂಲಕ ಅಬ್ಬಾಸ್ ತಮಿಳು ಚಿತ್ರರಂಗದಲ್ಲಿ ನಟನಾಗಿ ಪಾದಾರ್ಪಣೆ ಮಾಡಿದರು. ಮೊದಲ ಚಿತ್ರವು ಯಶಸ್ವಿಯಾಯಿತು ಮತ್ತು ಅವರನ್ನು ಪ್ರಸಿದ್ಧಿಯನ್ನಾಗಿ ಮಾಡಿತು. ನಂತರ ಅಬ್ಬಾಸ್ ತೆಲುಗು ಮತ್ತು ಕನ್ನಡ ಚಿತ್ರಗಳಲ್ಲಿ ನಾಯಕನಾಗಿ ಪಾದಾರ್ಪಣೆ ಮಾಡಿದರು. ಅವರು ‘ಜಾಲಿ’, ‘ಆಸೈ ತಂಬಿ’ ಮತ್ತು ‘ಪೂವೇಲಿ’ ನಂತಹ ಚಿತ್ರಗಳಲ್ಲಿ ನಟಿಸಿದ್ದಾರೆ ಮತ್ತು 1999 ರಲ್ಲಿ ಬಿಡುಗಡೆಯಾದ ‘ಪಡೈಯಪ್ಪ’ ಚಿತ್ರದಲ್ಲಿ ರಜನಿಕಾಂತ್ ಅವರೊಂದಿಗೆ ನಟಿಸುವ ಮೂಲಕ ಗಮನ ಸೆಳೆದರು.

ಮುಂದೆ, ಅವರು ಕಮಲ್ ಜೊತೆ ‘ಹೇ ರಾಮ್’, ಅಜಿತ್ ಜೊತೆ ‘ಕಂಡುಕೊಂಡೇನ್ ಕಂಡುಕೊಂಡೇನ್’, ಮಾಧವನ್ ಜೊತೆ ‘ಮಿನ್ನಲೆ’, ಮಮ್ಮುಟ್ಟಿ ಜೊತೆ ‘ಆನಂದಮ್’, ಮತ್ತು ಕಮಲ್ ಜೊತೆ ‘ಬಮ್ಮಲ್ ಕೆ ಸಮ್ಮತಮ್’ ಚಿತ್ರಗಳಲ್ಲಿ ನಟಿಸಿದರು. ಅವರು ಕೊನೆಯದಾಗಿ 2009 ರಲ್ಲಿ ಬಿಡುಗಡೆಯಾದ ‘ಗುರು ಎನ್ ಆಲು’ ಚಿತ್ರದಲ್ಲಿ ನಟಿಸಿದರು. ಆ ನಂತರ ಅವರು ನಟಿಸಲಿಲ್ಲ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed