Honeymoon Tragedy: ಹನಿಮೂನ್‌ಗೆ ಬಂದಿದ್ದ ನವವಧು ಸಾವು! ಶಾಕ್‌ನಲ್ಲಿ ನವವರ, ಅಷ್ಟಕ್ಕೂ ಅಲ್ಲಿ ಆಗಿದ್ದೇನು? | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews

News18


Last Updated:

Honeymoon Death: ಮದುವೆಯಾಗಿ ಹೊಸ ಜೀವನ ಆರಂಭಿಸಿದ ಖುಷಿಯಲ್ಲಿ ಹನಿಮೂನ್‌ಗೆ ಮಸ್ಸೂರಿಗೆ ಬಂದಿದ್ದ ದೆಹಲಿಯ ಟೆಕ್ಕಿ ದಂಪತಿಯ ಕನಸಿನ ಪ್ರವಾಸ ಕಣ್ಣೀರಿನಲ್ಲಿ ಕೊನೆಗೊಂಡಿದೆ. ಮಸ್ಸೂರಿ-ಧನೌಲ್ಟಿ ರಸ್ತೆಯ ಹೋಂಸ್ಟೇಯಲ್ಲಿ ತಂಗಿದ್ದ 27 ವರ್ಷದ ನವವಿವಾಹಿತೆ ಪಿ. ರಾಧಾ ಗಾಯತ್ರಿ ಬೆಳಗ್ಗೆ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ. ಆ ಕುರಿತ ವರದಿ ಇಲ್ಲಿದೆ.

News18
News18

ಡೆಹ್ರಾಡೂನ್ (ಉತ್ತರಖಂಡ): ಮದುವೆಯಾಗಿ (Marriage) ಹೊಸ ಜೀವನ ಆರಂಭಿಸಿದ ಖುಷಿಯಲ್ಲಿ ಹನಿಮೂನ್‌ಗೆ (Honeymoon) ಬಂದಿದ್ದ ಟೆಕ್ಕಿ ದಂಪತಿಯ (Couple) ಕನಸಿನ ಪ್ರವಾಸ ಕಣ್ಣೀರಿನಲ್ಲಿ ಕೊನೆಗೊಂಡಿದೆ. ಹೌದು, ಮಸ್ಸೂರಿಯ ಹೋಂಸ್ಟೇಯಲ್ಲಿ ತಂಗಿದ್ದ 27 ವರ್ಷದ ನವವಿವಾಹಿತೆ ಪಿ. ರಾಧಾ ಗಾಯತ್ರಿ (P.Radha Gayathri) ಬೆಳಗ್ಗೆ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ (Death) ಎನ್ನಲಾಗಿದೆ. ಆ ಕುರಿತ ವರದಿ ಇಲ್ಲಿದೆ.

ಏನಿದು ಘಟನೆ?

ಮೃತ ಪಿ. ರಾಧಾ ಗಾಯತ್ರಿ ಅವರು ದೆಹಲಿಯ ಕಿಡ್ವಾಯಿ ನಗರದ ನಿವಾಸಿಯಾಗಿದ್ದು, ಗುರುಗ್ರಾಮ್‌ನ ಐಟಿ ಕಂಪನಿಯೊಂದರಲ್ಲಿ ಉದ್ಯೋಗಿಯಾಗಿದ್ದರು. ಅವರ ಪತಿ ಸೌಮ್ಯ ಶ್ರೀಚರಣ್ ಪುಣೆಯಲ್ಲಿ ಸಾಫ್ಟ್‌ವೇರ್ ಉದ್ಯೋಗಿಯಾಗಿದ್ದಾರೆ. ಮೂಲತಃ ವಿಶಾಖಪಟ್ಟಣಂನವರಾದ ಈ ದಂಪತಿ ನವೆಂಬರ್ 2025ರಲ್ಲಿ ವಿವಾಹವಾಗಿದ್ದರು.

ಇದನ್ನೂ ಓದಿ: Crime News: 13 ವರ್ಷದ ಬಾಲಕಿಯನ್ನು ಕಾರ್‌ನಲ್ಲಿ ಕಿಡ್ನ್ಯಾಪ್ ಮಾಡಿ ಗ್ಯಾಂಗ್ ರೇಪ್! ಬೆಚ್ಚಿ ಬಿದ್ದ ಪೊಲೀಸರು

ಅದರಂತೆ, ದಂಪತಿಗಳು ಜೂನ್ 13 ರಂದು ದೆಹಲಿಯಿಂದ ಪ್ರವಾಸ ಆರಂಭಿಸಿದ್ದು, ಮೊದಲು ಋಷಿಕೇಶಕ್ಕೆ ಭೇಟಿ ನೀಡಿದ್ದರು. ನಂತರ ಶನಿವಾರ ರಾತ್ರಿ ಸುಮಾರು 11:30ರ ಸುಮಾರಿಗೆ ಮಸ್ಸೂರಿ-ಧನೌಲ್ಟಿ ರಸ್ತೆಯಲ್ಲಿರುವ ಹೋಂಸ್ಟೇ ಒಂದಕ್ಕೆ ಬಂದಿದ್ದರು. ಆದರೆ, ಸೋಮವಾರ ಬೆಳಿಗ್ಗೆ ಗಾಯತ್ರಿ ಅವರು ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಮೂಗಿನಿಂದ ರಕ್ತಸ್ರಾವವಾಗುತ್ತಿತ್ತು ಎಂದು ಪತಿ ಪೊಲೀಸರಿಗೆ ತಿಳಿಸಿದ್ದಾರೆ. ವೈದ್ಯಕೀಯ ತಂಡ ಪರಿಶೀಲಿಸಿದಾಗ ಅವರು ಮೃತಪಟ್ಟಿರುವುದು ದೃಢಪಟ್ಟಿದೆ.

ಇದನ್ನೂ ಓದಿ: Crime News: ಒಂದೇ ಕುಟುಂಬದ ಮೂವರು ವೃದ್ಧರನ್ನು ಕೊಂದು ದುಷ್ಕರ್ಮಿಗಳು! ಬೆಚ್ಚಿ ಬೀಳಿಸುತ್ತೆ ಕೃತ್ಯ

ಮುಂದುವರೆದು, ಪೊಲೀಸ್ ತನಿಖೆಯ ವೇಳೆ ಘಟನಾ ಸ್ಥಳದಲ್ಲಿ ಕೆಲವು ಸಂಶಯಾಸ್ಪದ ಕುರುಹುಗಳು ಕಂಡುಬಂದಿವೆ. ಅದರಂತೆ, ಮೃತದೇಹವು ಕೋಣೆಯ ನೆಲದ ಮೇಲೆ ಬೆತ್ತಲೆ ಸ್ಥಿತಿಯಲ್ಲಿ ಪತ್ತೆಯಾಗಿದೆ. ಇದರೊಂದಿಗೆ, ಹಾಸಿಗೆಯ ಮೇಲೆ ರಕ್ತದ ಕಲೆಗಳು ಕಂಡುಬಂದಿವೆ. ಜೊತೆಗೆ ಕೋಣೆಯಲ್ಲಿ ಎರಡು ಖಾಲಿ ಮದ್ಯದ ಬಾಟಲಿಗಳು ಮತ್ತು ಆಹಾರ ಪದಾರ್ಥಗಳು ದೊರೆತಿವೆ. ಏತನ್ಮಧ್ಯೆ, ಪತಿ ಶ್ರೀಚರಣ್ ಅವರು ಪೊಲೀಸರಿಗೆ ನೀಡಿದ ಹೇಳಿಕೆಯ ಪ್ರಕಾರ, “ದಂಪತಿಗಳು ತಡರಾತ್ರಿ ಎಣ್ಣೆ ಪಾರ್ಟಿ ಮಾಡಿ ಸುಮಾರು 3:30ರ ವೇಳೆಗೆ ಮಲಗಿದ್ದರು. ಬೆಳಿಗ್ಗೆ ಎದ್ದಾಗ ಪತ್ನಿ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದುದನ್ನು ಕಂಡು ಹೋಂಸ್ಟೇ ಸಿಬ್ಬಂದಿಗೆ ವಿಷಯ ತಿಳಿಸಿದ್ದಾಗಿ” ಹೇಳಿದ್ದಾರೆ.

ಇನ್ನು, ಮಸ್ಸೂರಿ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ವಿಧಿವಿಜ್ಞಾನ ಪ್ರಯೋಗಾಲಯದ ತಂಡ ಸಾಕ್ಷ್ಯಗಳನ್ನು ಸಂಗ್ರಹಿಸಿದೆ. ಇದರೊಂದಿಗೆ, ಮರಣೋತ್ತರ ಪರೀಕ್ಷೆಗಾಗಿ ಮೃತದೇಹವನ್ನು ಡೆಹ್ರಾಡೂನ್‌ನ ಕೊರೊನೇಷನ್ ಆಸ್ಪತ್ರೆಗೆ ರವಾನಿಸಲಾಗಿದೆ. ಮರಣೋತ್ತರ ಪರೀಕ್ಷೆಯ ವರದಿ ಬಂದ ನಂತರವೇ ಸಾವಿಗೆ ನಿಖರವಾದ ಕಾರಣ ತಿಳಿಯಲಿದೆ ಎಂದು ಪೊಲೀಸರು ಹೇಳಿದ್ದಾರೆ. ಸದ್ಯಕ್ಕೆ ಪತಿ ಶ್ರೀಚರಣ್ ಮತ್ತು ಹೋಂಸ್ಟೇ ಸಿಬ್ಬಂದಿಯನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed