Last Updated:
ಹಾರ್ದಿಕ್ ಪಾಂಡ್ಯ ಮಾನಸಿಕ ಒತ್ತಡ, ಕಳಪೆ ಪ್ರದರ್ಶನದ ನಡುವೆ ಮುಂಬೈ ಇಂಡಿಯನ್ಸ್ ತೊರೆಯಲು ನಿರ್ಧಾರ, ಪ್ಲೇಆಫ್ ರೇಸ್ ವಿಫಲದ ನಂತರ ಪರಸ್ಪರ ಬೇರ್ಪಡಲು ಒಪ್ಪಂದ
ಹಾರ್ದಿಕ್ ಪಾಂಡ್ಯ (Hardik Pandya) ಮುಂಬೈ ಇಂಡಿಯನ್ಸ್ (MI) ತಂಡದಿಂದ ಹೊರನಡೆಯಲು ನಿರ್ಧರಿಸಿದ್ದಾರೆ. ಶೀಘ್ರದಲ್ಲೇ ಮುಂಬೈ ಇಂಡಿಯನ್ಸ್ ಜೊತೆಗಿನ ಹಾರ್ದಿಕ್ ಪಾಂಡ್ಯ ಅವರ ಸಂಬಂಧ (Relationship) ಅಂತ್ಯವಾಗಲಿದೆ ಎಂಬ ಚರ್ಚೆ (Discussion) ನಡೆಯುತ್ತಿದೆ. ಇದರ ನಡುವೆ ಮುಂಬೈ ಇಂಡಿಯನ್ಸ್ ಜೊತೆ ಪಾಂಡ್ಯ ಅವರ ಭವಿಷ್ಯದ ಬಗ್ಗೆ ಶಾಕಿಂಗ್ (Shocking) ಸಂಗತಿಯೊಂದು ಬಹಿರಂಗವಾಗಿದೆ. ಐಪಿಎಲ್ 2026 ರ ಸಮಯದಲ್ಲಿ ಹಾರ್ದಿಕ್ ಪಾಂಡ್ಯ ಮುಂಬೈ ಇಂಡಿಯನ್ಸ್ ತಂಡದ ಮ್ಯಾನೇಜ್ಮೆಂಟ್ಗೆ ಫ್ರಾಂಚೈಸಿ (Franchise) ತೊರೆಯುವುದಾಗಿ ತಿಳಿಸಿದ್ದರು ಎಂದು ವರದಿಯಾಗಿದೆ. ಇದರ ಹಿಂದಿನ ಪ್ರಮುಖ ಕಾರಣವೂ ಬಹಿರಂಗವಾಗಿದೆ.
ಪಿಟಿಐ ವರದಿಯ ಪ್ರಕಾರ, ಹಾರ್ದಿಕ್ ಪಾಂಡ್ಯ ಮುಂಬೈ ಇಂಡಿಯನ್ಸ್ ತಂಡವನ್ನು ತೊರೆಯಲು ನಿರ್ಧರಿಸಿದ್ದಾರೆ. ಮುಂಬೈ ಇಂಡಿಯನ್ಸ್ ಪ್ಲೇಆಫ್ ರೇಸ್ನಿಂದ ಹೊರಬಿದ್ದ ನಂತರ, ಹಾರ್ದಿಕ್ ಪಾಂಡ್ಯ ಮತ್ತು ಮುಂಬೈ ಇಂಡಿಯನ್ಸ್ ಮಾತುಕತೆ ನಡೆಸಿ ಪರಸ್ಪರ ಬೇರ್ಪಡಲು ನಿರ್ಧರಿಸಿದ್ದಾರೆ. ವರದಿಗಳ ಪ್ರಕಾರ ಇಬ್ಬರೂ ಬೇರೆಯಾಗಿದ್ದಾರೆ.
ಮುಂಬೈ ತಂಡದ ಕಳಪೆ ಪ್ರದರ್ಶನದಿಂದ ಹಾರ್ದಿಕ್ ಪಾಂಡ್ಯ ಅತೃಪ್ತರಾಗಿದ್ದರು ಮಾತ್ರವಲ್ಲ. ಮಾನಸಿಕ ಒತ್ತಡದಿಂದ ಅವರು ತೊಂದರೆಗೀಡಾಗಿದ್ದರು. ಡ್ರೆಸ್ಸಿಂಗ್ ರೂಮ್ ವಾತಾವರಣವು ಅವರ ಮೇಲೆ ಮಾನಸಿಕವಾಗಿ ಪರಿಣಾಮ ಬೀರುತ್ತಿತ್ತು ಎಂದು ವರದಿಗಳು ಹೇಳಿವೆ.
ಐಪಿಎಲ್ 2024 ರಲ್ಲಿ ಹಾರ್ದಿಕ್ ಪಾಂಡ್ಯ ಅವರನ್ನು ಇದ್ದಕ್ಕಿದ್ದಂತೆ ಮುಂಬೈ ಇಂಡಿಯನ್ಸ್ ತಂಡದ ನಾಯಕರನ್ನಾಗಿ ನೇಮಿಸಲಾಯಿತು. ರೋಹಿತ್ ಶರ್ಮಾ ಅವರನ್ನು ನಾಯಕತ್ವದಿಂದ ತೆಗೆದುಹಾಕಲಾಯಿತು. ಇದರಿಂದ ರೋಹಿತ್ ಶರ್ಮಾ ಅಭಿಮಾನಿಗಳು ಕೋಪಗೊಂಡಿದ್ದರು. ರೋಹಿತ್ ಶರ್ಮಾ ಮುಂಬೈ ಇಂಡಿಯನ್ಸ್ ನಾಯಕತ್ವದಿಂದ ಕೆಳಗಿಳಿದ ಬಳಿಕ ಹಾರ್ದಿಕ್ ಅವರನ್ನು ಬಹಳಷ್ಟು ಟ್ರೋಲ್ ಕೂಡ ಮಾಡಲಾಯಿತು.
ಹಾರ್ದಿಕ್ ಪಾಂಡ್ಯ ನಾಯಕನಾದ ಬಳಿಕ ಮುಂಬೈ ಇಂಡಿಯನ್ಸ್ಗೆ 2024 ರ ಐಪಿಎಲ್ ಕಳಪೆ ಆವೃತ್ತಿಯಾಗಿತ್ತು. ಐಪಿಎಲ್ 2025 ರಲ್ಲಿ, ಮುಂಬೈ ಕ್ವಾಲಿಫೈಯರ್-2 ಅನ್ನು ತಲುಪಿತು. ಆದರೆ 2026 ರ ಐಪಿಎಲ್ನಲ್ಲಿ ಒಂಬತ್ತನೇ ಸ್ಥಾನ ಗಳಿಸಿತು. ಹಾರ್ದಿಕ್ ಅವರ ಎರಡನೇ ಅವಧಿಯು ಮುಂಬೈ ಜೊತೆಗಿನ ಮರೆಯಲಾಗದ ಕಹಿ ಅನುಭವವಾಗಿತ್ತು.
ಹಾರ್ದಿಕ್ ಪಾಂಡ್ಯ ಐಪಿಎಲ್ 2026 ರಲ್ಲಿ ಮುಂಬೈ ಇಂಡಿಯನ್ಸ್ ಪರ ನಿರೀಕ್ಷಿತ ಪರಿಣಾಮವನ್ನು ಬೀರಲು ವಿಫಲರಾದರು. 10 ಐಪಿಎಲ್ ಪಂದ್ಯಗಳಲ್ಲಿ ಹಾರ್ದಿಕ್ ಪಾಂಡ್ಯ 22.88 ಸರಾಸರಿ ಮತ್ತು 138.25 ಸ್ಟ್ರೈಕ್ ರೇಟ್ನಲ್ಲಿ 206 ರನ್ ಗಳಿಸಿದರು. ಅವರು ಬೌಲಿಂಗ್ನಲ್ಲಿಯೂ 64.75 ಸರಾಸರಿಯಲ್ಲಿ ಕೇವಲ ನಾಲ್ಕು ವಿಕೆಟ್ಗಳನ್ನು ಪಡೆದರು.













