Last Updated:
ಹನೂರಿನಲ್ಲಿ ದಟ್ಟ ಕಾಡಲ್ಲಿ ಅರಣ್ಯ ಇಲಾಖೆ ಸಿಬ್ಬಂದಿಯ ಗುಂಡೇಟಿಗೆ ಬಲಿಯಾದ ಮೂವರ ಮೃತರ ಕುಟುಂಬಕ್ಕೆ ತಮಿಳುನಾಡು ಸಿಎಂ ವಿಜಯ್ ಪರಿಹಾರ ಘೋಷಿಸಿದ್ದಾರೆ.
ಬೆಂಗಳೂರು (ಆ.18): ಹನೂರು ಎನ್ಕೌಂಟರ್ನಲ್ಲಿ ಮೃತಪಟ್ಟ ಮೂವರು ಕೂಡ ತಮಿಳರು (Tamilians) ಎಂದು ಗುರುತಿಸುವ ಮೂಲಕ ಘಟನೆಗೆ ಭಾಷೆ ಹಾಗೂ ರಾಜಕೀಯ ಬಣ್ಣ ಕಟ್ಟಲು ತಮಿಳುನಾಡು ಸರ್ಕಾರ ಮುಂದಾಗಿದ್ಯಾ ಅನ್ನೋ ಪ್ರಶ್ನೆ ಮೂಡಿದೆ. ಶೂಟೌಟ್ ಪ್ರಕರಣವನ್ನು ತಮಿಳುನಾಡು ಸಿಎಂ ಕಟುವಾಗಿ ಟೀಕಿಸಿದ್ರು. ಇದೀಗ ರಾಜ್ಯದಲ್ಲಿ ಮೃತಪಟ್ಟವರ ಕುಟುಂಬಕ್ಕೆ ತಮಿಳುನಾಡು ಸರ್ಕಾರ (Tamilnadu Government) ಪರಿಹಾರ ಘೋಷಿಸಿದ್ದು, ಇದು ಕರ್ನಾಟಕ ಸರ್ಕಾರಕ್ಕೆ (Karnataka Government) ಕೊಡ್ತಿರೋ ಕೌಂಟರ್ ಅನ್ನೋ ಚರ್ಚೆ ಕೂಡ ಜೋರಾಗಿದೆ.














