Halli Mestru Heroine: ರವಿಚಂದ್ರನ್ ಬಳಿ ಕ್ಷಮೆ ಕೇಳಿದ ‘ಹಳ್ಳಿ ಮೇಷ್ಟ್ರು’ ನಟಿ! ಬಿಂದಿಯಾ ಈಗ ಹೇಗಿದ್ದಾರೆ ಗೊತ್ತಾ? | | ACTPnews

ಹಳ್ಳಿ ಮೇಷ್ಟ್ರು ಬಿಂದಿಯಾ ಕ್ರೇಜಿ ಸ್ಟಾರ್‌ಗೆ ಈಗ ಕ್ಷಮೆ ಕೇಳಿದ್ಯಾಕೆ?


Last Updated:

ಹಳ್ಳಿ ಮೇಷ್ಟ್ರು ಚಿತ್ರದ ನಾಯಕಿ ಬಿಂದಿಯಾ ಈಗ ಹೇಗಿದ್ದಾರೆ? ಇವರಿಗೆ ಈಗ ಅದೆಷ್ಟು ವಯಸ್ಸು? ಬಿಂದಿಯಾ ರವಿಚಂದ್ರನ್ ಅವರಿಗೆ ಈಗ ಕ್ಷಮೆ ಕೇಳಿರೋದು ಯಾಕೆ? ಈ ಎಲ್ಲ ವಿಷಯದ ಒಂದಷ್ಟು ಮಾಹಿತಿ ಇಲ್ಲಿದೆ ಓದಿ.

ಹಳ್ಳಿ ಮೇಷ್ಟ್ರು ಬಿಂದಿಯಾ ಕ್ರೇಜಿ ಸ್ಟಾರ್‌ಗೆ ಈಗ ಕ್ಷಮೆ ಕೇಳಿದ್ಯಾಕೆ?
ಹಳ್ಳಿ ಮೇಷ್ಟ್ರು ಬಿಂದಿಯಾ ಕ್ರೇಜಿ ಸ್ಟಾರ್‌ಗೆ ಈಗ ಕ್ಷಮೆ ಕೇಳಿದ್ಯಾಕೆ?

ಹಳ್ಳಿ ಮೇಷ್ಟ್ರು ಚಿತ್ರ (Halli Mestru Movie) ಬಂದು 33 ವರ್ಷ ಆಗಿದೆ. ಇಷ್ಟು ವರ್ಷ ಆದ್ಮೇಲೆ ಈ ಚಿತ್ರದ ಬಗ್ಗೆ ನಟಿ ಬಿಂದಿಯಾ (Bindiya) ಮಾತನಾಡಿದ್ದಾರೆ. ಚಿತ್ರದ ತಮ್ಮ ಫೇವರಿಟ್ ಹಾಡು (Favorite Song) ಯಾವುದು ಅಂತಲೂ ಹೇಳಿಕೊಂಡಿದ್ದಾರೆ. ತಮಗೆ ಬಿಂದಿಯಾ ಅಂತ ಹೆಸರು ಇಟ್ಟವರು ಯಾರು? ಸೆಲೆಕ್ಷನ್ ಆಗಿರೋದು ಹೇಗೆ? ಈ ಹಳ್ಳಿ ಮೇಷ್ಟ್ರು ಚಿತ್ರವನ್ನ (Halli Mestru Movie) ಒಪ್ಪುವುದಕ್ಕೆ ಯಾರು ಕಾರಣ? ಈ ತರದ ಎಲ್ಲ ವಿಷಯಗಳನ್ನ ಬಿಂದಿಯಾ ಹಂಚಿಕೊಂಡಿದ್ದಾರೆ. ರವಿಚಂದ್ರನ್ ಅವರಿಗೆ ಕ್ಷಮೆ ಕೂಡ ಕೇಳಿದ್ದಾರೆ.? ಇವರ ಮುಕ್ತ ಮಾತುಗಳ ಸಂಪೂರ್ಣ ವಿವರ ಇಲ್ಲಿದೆ ಓದಿ.

ರವಿಚಂದ್ರನ್ ಕ್ಷಮೆ ಕೇಳಿದ ಬಿಂದಾ

ಹಳ್ಳಿ ಮೇಷ್ಟ್ರು ಚಿತ್ರ ಬಂದು 33 ವರ್ಷ ಆಗಿದೆ. ಇಷ್ಟು ವರ್ಷ ಆದ್ಮೇಲೆ ಬಿಂದಿಯಾ ಕ್ಷಮೆ ಕೇಳಿದ್ದಾರೆ. ತಮ್ಮಿಂದ ರವಿಚಂದ್ರನ್ ಅವರಿಗೆ ಕೆಟ್ಟ ಹೆಸರು ಬಂತು.
Ravichandran Halli Meshtru Bindiya Share Unknown Facts of Movies

ಕ್ರೇಜಿ ಸ್ಟಾರ್‌ಗೆ ಈಗ ಕ್ಷಮೆ ಕೇಳಿದ್ಯಾಕೆ?

ಆದರೆ, ಆ ದಿನ ನಾನು ಹೇಳಿರೋದು ಒಂದು. ಬರೆದಿರೋದು ಮತ್ತೊಂದು ಆಗಿತ್ತು. ಇದರಿಂದ ಕೇಸ್ ಮತ್ತು ಕೋರ್ಟ್ ಈ ತರದ ಸಮಸ್ಯೆ ಎಲ್ಲ ಆಯಿತು. ಕೋರ್ಟ್‌ ಅಲ್ಲಿ ನಾನು ರವಿಚಂದ್ರನ್ ಅವರನ್ನ ನೋಡ್ತಾ ಇದ್ದೆ.ಆದರೆ, ಮಾತನಾಡಿರಲಿಲ್ಲ. ನನ್ನಿಂದ ಅವರಿಗೆ ತೊಂದರೆ ಆಗಿದೆ. ನಾನು ಅವರಿಗೆ ಕ್ಷಮೆ ಕೇಳುತ್ತೇನೆ ಅಂತಲೇ ನಟಿ ಬಿಂದಿಯಾ ಕ್ಷಮೆ ಕೂಡ ಕೇಳಿದ್ದಾರೆ. ಒಮ್ಮೆ ರವಿಚಂದ್ರನ್ ಅವರನ್ನ ಭೇಟಿ ಆಗ್ಬೇಕು ಅಂತಲೂ ಹೇಳಿಕೊಂಡಿದ್ದಾರೆ.

ಅಮ್ಮನ ರೋಲ್ ಕೊಟ್ರು ಓಕೆ

ರವಿಚಂದ್ರನ್ ಅವರ ಚಿತ್ರದಲ್ಲಿ ನಾನು ಮತ್ತೆ ನಟಿಸೋಕೆ ಇಷ್ಟಪಡ್ತೀನಿ. ನನಗೆ ಈಗ 53 ವರ್ಷ ಆಗಿದೆ. 28 ವರ್ಷದ ಮಗ ಕೂಡ ಇದ್ದಾನೆ. ಈಗ ನಾನು ಅಜ್ಜಿ ಅಥವಾ ಅಮ್ಮನ ರೋಲ್ ಕೊಟ್ಟರು ಅಭಿನಯಿಸುವೆ ಅಂತಲೂ ಬಿಂದಿಯಾ ಹೇಳಿದ್ದಾರೆ.

ರವಿಚಂದ್ರನ್ ಅವರು ತಮ್ಮ ಹಳ್ಳಿ ಮೇಷ್ಟ್ರು ಚಿತ್ರಕ್ಕೆ ನಾಯಕಿ ಹುಡುಕಾಟದಲ್ಲಿದ್ದರು. ಜೂಹಿ ಚಾವ್ಲಾ ಅವರನ್ನು ಮೀಟ್ ಆಗಿದ್ದರು. ಹಾಗೆ ನನ್ನ ಕೂಡ ಭೇಟಿ ಆದರು ಎಂದಿದ್ದಾರೆ.

ಆ ದಿನ ನಾನು ಸಿಂಪಲ್ ಆಗಿಯೇ ಹೋದೆ

ರವಿಚಂದ್ರನ್ ಅವರನ್ನ ಮೀಟ್ ಆಗೋಕೆ ನಾನು ಸಿಂಪಲ್ ಆಗಯೇ ಹೋಗಿದ್ದೆ. ರವಿಚಂದ್ರನ್ ಅವರಿಗೆ ನನ್ನ ಈ ಸಿಂಪ್ಲಿಸಿಟಿನೇ ಇಷ್ಟ ಆಗಿತ್ತು. ಹಳ್ಳಿ ಮೇಷ್ಟ್ರು ಚಿತ್ರದ ಪಾತ್ರಕ್ಕೆ ಅವರಿಗೆ ಇದೇ ಬೇಕಿತ್ತು.

ಆದರೆ, ನಾನು ಈ ಚಿತ್ರವನ್ನ ಒಪ್ಪಲು ಒಂದು ಕಾರಣವೂ ಇದೆ. ಅದು ನನ್ನ ಫೇವರಿಟ್ ನಟಿಯ ರೀಮೇಕ್ ಚಿತ್ರ ಇದು ಅನ್ನೋದೇ ಆಗಿದೆ. ನನಗೆ ಶ್ರೀದೇವಿ ಅಂದ್ರೆ ತುಂಬಾನೆ ಇಷ್ಟ ಆಗುತ್ತಾರೆ. ಇವರ ಮಾಸ್ಟರ್‌ಜಿ ಚಿತ್ರದ ರೀಮೇಕ್ ಚಿತ್ರ ಇದಾಗಿತ್ತು. ಅದಕ್ಕೆ ಹಳ್ಳಿ ಮೇಷ್ಟ್ರು ಚಿತ್ರ ಒಪ್ಪಿದೆ ಅಂತಲೂ ಬಿಂದಿಯಾ ಹೇಳಿದ್ದಾರೆ.

Ravichandran Halli Meshtru Bindiya Share Unknown Facts of Movies

ಬಿಂದಿಯಾ ಅಂತ ಹೆಸರು ಇಟ್ಟವರು ಯಾರು
ಬಿಂದಿಯಾ ಅಂತ ಹೆಸರು ಇಟ್ಟವರು ಯಾರು

ರವಿಚಂದ್ರನ್ ಅವರೇ ಈ ಹೆಸರನ್ನ ಇಟ್ಟರು. ಬಾಲಿವುಡ್ ನಟಿ ಬಿಂದಿಯಾ ಗೋಸ್ವಾಮಿ ತರವೇ ನೀವು ಕಾಣಿಸುತ್ತೀರಾ, ಮಾತಿನ ಶೈಲಿ ಕೂಡ ಹಾಗೆ ಇದೆ.

ಹಾಗಾಗಿಯೇ ನಿಮಗೆ ಬಿಂದಿಯಾ ಅಂತ ಇಡುತ್ತೇನೆ ಅಂತಲೇ ಹೇಳಿದರು. ಆದರೆ, ಬಿಂದಿಯಾ ಅವರ ಮೂಲಕ ಹೆಸರು ಫರ್ಹೀನ್ ಖಾನ್. ದಕ್ಷಿಣದಲ್ಲಿ ಈ ಹೆಸರನ್ನ ಉಚ್ಚರಿಸಲು ಕಷ್ಟ ಆಗಬಹುದು. ಅದಕ್ಕೇನೆ ನಿಮ್ಮ ಹೆಸರು ಬಿಂದಿಯಾ ಅಂತ ಇಡುತ್ತೇವೆ ಅಂತ ಹೇಳಿಯೇ ರವಿಚಂದ್ರನ್ ಈ ಹೆಸರು ಇಟ್ಟಿದ್ದರು.

ಹಳ್ಳಿ ಮೇಷ್ಟ್ರು ಯಾವ ಚಿತ್ರದ ರೀಮೇಕ್

ಹಳ್ಳಿ ಮೇಷ್ಟ್ರು ಚಿತ್ರ ತಮಿಳಿನ ಮುಂಡಾನೈ ಮುಡಿಚು ಚಿತ್ರದ ರೀಮೇಕ್ ಆಗಿತ್ತು. ಭಾಗ್ಯರಾಜ್ ಹಾಗೂ ಊರ್ವಶಿ ಈ ಚಿತ್ರದಲ್ಲಿ ನಟಿಸಿದ್ದರು.

ಇದೇ ಚಿತ್ರ ಹಿಂದಿಯಲ್ಲಿ ರೀಮೇಕ್ ಆಗಿತ್ತು. ಇದರಲ್ಲಿ ರಾಜೇಶ್ ಖನ್ನಾ ಹಾಗೂ ಶ್ರೀದೇವಿ ಅವರು ನಟಿಸಿದ್ದರು. ಇದಕ್ಕೇನೆ ಮಾಸ್ಟರ್‌ಜಿ ಅಂತ ಹೆಸರಿಟ್ಟಿದ್ದರು. ಈ ಚಿತ್ರದ ಕನ್ನಡ ರೀಮೇಕ್ ಅಲ್ಲಿ ನಟಿಸುತ್ತೇನೆ ಅನ್ನುವ ಕಾರಣಕ್ಕೇನೆ ರವಿಚಂದ್ರನ್ ಅವರ ಹಳ್ಳಿ ಮೇಷ್ಟ್ರು ಚಿತ್ರ ಒಪ್ಪಿಕೊಂಡೆ ಅಂತಲೇ ಬಿಂದಿಯಾ ಅವರು ಹೇಳಿಕೊಂಡಿದ್ದಾರೆ.

ಶ್ರೀದೇವಿ ಅವರು ಮೆಚ್ಚಿಕೊಂಡರು

ಶ್ರೀದೇವಿ ಅವರು ಹಳ್ಳಿ ಮೇಷ್ಟ್ರು ಯಶಸ್ಸಿನ ಬಳಿಕ ಹೇಳಿದ್ದರು. ನನ್ನ ಚಿತ್ರ ಅಷ್ಟೇನು ಗೆಲುವು ಕಾಣಲಿಲ್ಲ. ಆದರೆ, ನಿನ್ನ ಚಿತ್ರ ಗೆದ್ದಿರೋದಕ್ಕೆ ಖುಷಿ ಆಯಿತು ಅಂತಲೂ ಹೇಳಿಕೊಂಡಿದ್ದಾರೆ. ಶ್ರೀದೇವಿ ಅವರ ಈ ಮಾತನ್ನು ಬಿಂದಿಯಾ ಇಲ್ಲಿ ಹೇಳಿಕೊಂಡಿದ್ದಾರೆ. ಹಾಗೆ ನಟ-ನಿರ್ದೇಶಕ-ಕಂಟೆಂಟ್ ಕ್ರಿಯೇಟರ್ ರಘು ರಾಮ್ ಅವರ ನೂರೊಂದು ನೆನಪು ಸಂದರ್ಶನದಲ್ಲಿಯೇ ಬಿಂದಿಯಾ ಅವರು ಈ ಎಲ್ಲ ವಿಷಯಗಳನ್ನ ಹೇಳಿಕೊಂಡಿದ್ದಾರೆ ಅಂತ ಹೇಳಬಹುದು.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed