Last Updated:
ಇಂದಿನ ವೇಗದ ಜೀವನಶೈಲಿಯಲ್ಲಿ ಕೂದಲು ಉದುರುವ ಸಮಸ್ಯೆ ಹೆಚ್ಚಾಗುತ್ತಿದೆ. ಯೋಗಾಸನಗಳು ಈ ಸಮಸ್ಯೆಯನ್ನು ನೈಸರ್ಗಿಕವಾಗಿ ನಿಯಂತ್ರಿಸುವಲ್ಲಿ ಸಹಾಯ ಮಾಡುತ್ತವೆ.
ಇಂದಿನ ವೇಗದ ಜೀವನದಲ್ಲಿ ಕೆಟ್ಟ ಆಹಾರ, ಹೆಚ್ಚು ಒತ್ತಡ, ನಿದ್ರೆ ಇಲ್ಲದಿರುವುದು ಮತ್ತು ಹಾರ್ಮೋನ್‌ಗಳ ಅಸಮತೋಲನದಿಂದ ಕೂದಲು ಉದುರುವ ಸಮಸ್ಯೆ ಹೆಚ್ಚಾಗುತ್ತಿದೆ. ಕೂದಲು ಉದುರುವುದು ಕೇವಲ ಸೌಂದರ್ಯದ ಸಮಸ್ಯೆಯಲ್ಲ, ಅದು ದೇಹದ ಆರೋಗ್ಯದ ಸೂಚನೆಯೂ ಆಗಿದೆ. ಯೋಗಾಸನಗಳು ಈ ಸಮಸ್ಯೆಯನ್ನು ನೈಸರ್ಗಿಕವಾಗಿ ನಿಯಂತ್ರಿಸಲು ಸಹಾಯ ಮಾಡುತ್ತವೆ.
ಯೋಗಾಸನಗಳು ತಲೆಗೆ ರಕ್ತದ ಹರಿವನ್ನು ಹೆಚ್ಚಿಸಿ, ಕೂದಲಿನ ಬೇರುಗಳಿಗೆ ಪೋಷಕಾಂಶಗಳನ್ನು ತಲುಪಿಸಿ, ಒತ್ತಡವನ್ನು ಕಡಿಮೆ ಮಾಡಿ ಮತ್ತು ಹಾರ್ಮೋನ್‌ಗಳನ್ನು ಸರಿಪಡಿಸುತ್ತವೆ. ನಿಯಮಿತವಾಗಿ ಯೋಗ ಮಾಡಿದರೆ ಕೂದಲು ಉದುರುವುದನ್ನು ತಡೆದು ಆರೋಗ್ಯಕರ ಮತ್ತು ದಟ್ಟ ಕೂದಲನ್ನು ಬೆಳೆಸಬಹುದು ಎಂದು ಟಿವಿ ಕನ್ನಡ ಆ ಯೋಗಾಸನಗಳು ಯಾವುವು? ಎಂಬುದರ ಬಗ್ಗೆ ನೋಡೋಣ ಬನ್ನಿ.
ಅಧೋಮುಖ ಶ್ವಾನಾಸನ: ಈ ಆಸನ ದೇಹದಲ್ಲಿ ರಕ್ತ ಸರಿಯಾಗಿ ಹರಿಯಲು ಸಹಾಯ ಮಾಡುತ್ತದೆ. ತಲೆಗೆ ಹೆಚ್ಚು ರಕ್ತ ಹೋಗುತ್ತದೆ. ಅದರಿಂದ ನೆತ್ತಿಗೆ ಸಾಕಷ್ಟು ಗಾಳಿ ಮತ್ತು ಪೋಷಕಾಂಶ ಸಿಗುತ್ತದೆ. ಕೂದಲು ಉದುರುವ ಮುಖ್ಯ ಕಾರಣವಾದ ಒತ್ತಡವನ್ನು ಕಡಿಮೆ ಮಾಡುತ್ತದೆ ಎಂದು ತಜ್ಞರು ಹೇಳುತ್ತಾರೆ.
ಸರ್ವಾಂಗಾಸನ: ಈ ಆಸನ ಕೂದಲಿನ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ತಲೆ ಮತ್ತು ಕುತ್ತಿಗೆಗೆ ರಕ್ತ ಹೆಚ್ಚು ಹರಿಯುತ್ತದೆ. ನಿತ್ಯ ಅಭ್ಯಾಸ ಮಾಡಿದರೆ ಒತ್ತಡ ಕಡಿಮೆಯಾಗುತ್ತದೆ ಮತ್ತು ದೇಹದ ಸಮತೋಲನ ಚೆನ್ನಾಗುತ್ತದೆ. ತಲೆಗೆ ರಕ್ತ ಹೆಚ್ಚಿಸಲು ಇದು ಬಹಳ ಪರಿಣಾಮಕಾರಿ.
ವಜ್ರಾಸನ: ಊಟ ಮಾಡಿದ ನಂತರ ಈ ಸರಳ ಆಸನ ಮಾಡಬಹುದು. ಇದು ಜೀರ್ಣಕ್ರಿಯೆಯನ್ನು ಚೆನ್ನಾಗಿ ಮಾಡುತ್ತದೆ. ಹೊಟ್ಟೆಗೆ ರಕ್ತ ಹೆಚ್ಚು ಹರಿಯುತ್ತದೆ, ಆಹಾರ ಬೇಗ ಜೀರ್ಣವಾಗುತ್ತದೆ ಮತ್ತು ಗ್ಯಾಸ್, ಮಲಬದ್ಧತೆ ಕಡಿಮೆಯಾಗುತ್ತದೆ. ಆಹಾರದಿಂದ ಬರುವ ಪೋಷಕಾಂಶಗಳು ದೇಹಕ್ಕೆ ಸರಿಯಾಗಿ ಸೇರುತ್ತವೆ. ಇದರಿಂದ ಕೂದಲಿಗೂ ಒಳ್ಳೆಯ ಪರಿಣಾಮ ಬೀರುತ್ತದೆ ಎಂದು ತಜ್ಞರು ಹೇಳುತ್ತಾರೆ.
ಬಾಲಾಸನ: ಬಾಲಾಸನ ಮೆದುಳನ್ನು ಶಾಂತ ಮಾಡುತ್ತದೆ. ಆತಂಕ, ದಣಿವು ಮತ್ತು ಮಾನಸಿಕ ಒತ್ತಡವನ್ನು ಕಡಿಮೆ ಮಾಡುತ್ತದೆ. ಕಂಪ್ಯೂಟರ್ ಮುಂದೆ ಹೆಚ್ಚು ಹೊತ್ತು ಕುಳಿತು ಕೆಲಸ ಮಾಡುವವರಿಗೆ ಇದು ಒಳ್ಳೆಯದು. ಕೆಳಬೆನ್ನು, ಕುತ್ತಿಗೆ ಮತ್ತು ಹೆಗಲಿನ ಸ್ನಾಯುಗಳನ್ನು ಸಡಿಲ ಮಾಡುತ್ತದೆ. ಹೊಟ್ಟೆ ತೊಡೆಗಳ ಮೇಲೆ ಒತ್ತುವುದರಿಂದ ಒಳಗಿನ ಅಂಗಗಳಿಗೆ ಮಸಾಜ್ ಆಗುತ್ತದೆ. ತಲೆ ಕೆಳಗಿರುವುದರಿಂದ ಮೆದುಳಿಗೆ ಹೆಚ್ಚು ರಕ್ತ ಹರಿಯುತ್ತದೆ. ನಿರಾಸಕ್ತಿ ದೂರವಾಗುತ್ತದೆ. ಈ ಆಸನ ದೇಹ ಮತ್ತು ಮನಸ್ಸನ್ನು ವಿಶ್ರಾಂತಿ ಮಾಡುತ್ತದೆ. ಒತ್ತಡ ಮತ್ತು ಆತಂಕ ಕಡಿಮೆ ಮಾಡಿ ಕೂದಲು ಉದುರುವುದನ್ನು ನಿಯಂತ್ರಿಸುತ್ತದೆ.
ಶಿರ್ಶಾಸನ: ಶಿರ್ಶಾಸನವನ್ನು ತಜ್ಞರ ಮಾರ್ಗದರ್ಶನದಲ್ಲಿ ಮಾಡಬೇಕು. ಇದು ಸುಧಾರಿತ ಯೋಗ ಭಂಗಿ. ತಲೆಗೆ ಶುದ್ಧ ರಕ್ತ ಮತ್ತು ಆಮ್ಲಜನಕ ಸಿಗುವುದರಿಂದ ಜ್ಞಾಪಕ ಶಕ್ತಿ ಮತ್ತು ಏಕಾಗ್ರತೆ ಹೆಚ್ಚುತ್ತದೆ. ನರಮಂಡಲ ಶಾಂತವಾಗಿ ಮಾನಸಿಕ ಒತ್ತಡ, ಆತಂಕ ಮತ್ತು ನಿದ್ರಾಹೀನತೆ ದೂರವಾಗುತ್ತದೆ. ಹೆಗಲು, ಕುತ್ತಿಗೆ, ಬೆನ್ನು ಮತ್ತು ಹೊಟ್ಟೆಯ ಸ್ನಾಯುಗಳು ಬಲವಾಗುತ್ತವೆ. ತಲೆಗೆ ರಕ್ತ ಸಂಚಾರ ಸುಧಾರಿಸುವುದರಿಂದ ಕೂದಲು ಉದುರುವುದು ಕಡಿಮೆಯಾಗುತ್ತದೆ ಎಂದು ತಜ್ಞರು ತಿಳಿಸಿದ್ದಾರೆ.














