Last Updated:
ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಸೂಪರ್ ಮಾಮ್’ ಶೋಗೆ ಬೆಂಗಳೂರಿನಲ್ಲಿ ಆಡಿಷನ್. ಆಗಸ್ಟ್ 2, 2026 ರಂದು ಮಧು ಆಟ್ರ್ಸ್ ಸ್ಟುಡಿಯೋದಲ್ಲಿ ನಡೆಯಲಿದೆ. ಪಾಸ್‌ಪೋರ್ಟ್ ಫೋಟೋ, ವಿಳಾಸ ಪುರಾವೆ ಕಡ್ಡಾಯ.
ಬೆಂಗಳೂರು: ಕನ್ನಡದ ಟಿ.ವಿ ಇತಿಹಾಸದಲ್ಲೇ ಅತೀ ಹೆಚ್ಚು ಜನಮನ್ನಣೆ ಗಳಿಸಿರುವ ಜನಪ್ರಿಯ ರಿಯಾಲಿಟಿ ಶೋ ‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್’ (Dance Karnataka Dance) ಈಗ ಹೊಸ ರೂಪದಲ್ಲಿ ಮರಳಿದೆ. ಮಕ್ಕಳಿಂದ ಹಿಡಿದು ಸೆಲೆಬ್ರಿಟಿಗಳ ವರೆಗೆ ಎಲ್ಲರನ್ನು ರಂಜಿಸಿದ್ದ ಈ ವೇದಿಕೆಯಲ್ಲಿ ಈಗ ಕರ್ನಾಟಕದ ಅಮ್ಮಂದಿರ ಸರದಿ. ಕನ್ನಡಿಗರನ್ನು ಕುಣಿಸಿ ರಂಜಿಸಲು ಜೀಕನ್ನಡದ (ZEE Kannada) ‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಸೂಪರ್ ಮಾಮ್’ ಶೋ ಅತೀ ಶೀಘ್ರದಲ್ಲಿ ಆರಂಭವಾಗಲಿದ್ದು, ಇದರ ನೇರ ಆಡಿಷನ್ (Audition) ಇದೇ ಭಾನುವಾರದಂದು ಬೆಂಗಳೂರಿನಲ್ಲಿ (Bengaluru) ನಡೆಯಲಿದೆ.
ಮನೆ, ಆಫೀಸ್, ಗಂಡ, ಮಕ್ಕಳು, ಅತ್ತೆ-ಮಾವ ಎಂದು ಸದಾ ಕುಟುಂಬಕ್ಕಾಗಿ ಶ್ರಮಿಸುವ ಅಮ್ಮಂದಿರಿಗೆ ಇದು ತಮ್ಮ ಪ್ರತಿಭೆಯನ್ನು ಹೊರಹಾಕಲು ಸಿಕ್ಕಿರುವ ಬೆಸ್ಟ್ ಅವಕಾಶ. ಡ್ಯಾನ್ಸ್ ಮೇಲೆ ಆಸಕ್ತಿ ಇದ್ದು, ಚೆನ್ನಾಗಿ ಹೆಜ್ಜೆ ಹಾಕಬಲ್ಲ ಎಲ್ಲಾ ಅಮ್ಮಂದಿರು ಈ ಆಡಿಷನ್‍ನಲ್ಲಿ ಉತ್ಸಾಹದಿಂದ ಭಾಗವಹಿಸಬಹುದಾಗಿದೆ.
ಆಡಿಷನ್ ದಿನಾಂಕ: 2 ಆಗಸ್ಟ್ 2026, ಭಾನುವಾರ
ಸಮಯ: ಬೆಳಗ್ಗೆ 9 ಗಂಟೆಗೆ
ಸ್ಥಳ: ಮಧು ಆಟ್ರ್ಸ್ ಸ್ಟುಡಿಯೋ (ಅಬ್ಬಯ್ಯ ನಾಯ್ಡು ಸ್ಟುಡಿಯೋ), ನಾಯ್ಡು ಲೇಔಟ್, ಹನುಮಗಿರಿ, ಚಿಕ್ಕಲಸಂದ್ರ, ಉತ್ತರಹಳ್ಳಿ ಹೋಬಳಿ, ಬೆಂಗಳೂರು.
ಆಡಿಷನ್‍ನಲ್ಲಿ ಭಾಗವಹಿಸಲು ಇಚ್ಛಿಸುವವರು ತಮ್ಮೊಂದಿಗೆ ಪಾಸ್‍ಪೋರ್ಟ್ ಸೈಜ್ ಫೋಟೋ ಹಾಗೂ ವಿಳಾಸದ ಪುರಾವೆ (Address Proof) ಜೆರಾಕ್ಸ್ ಕಡ್ಡಾಯವಾಗಿ ತರಬೇಕು. ವಿಶೇಷ ಸೂಚನೆ ಏನೆಂದರೆ, ಈ ಆಡಿಷನ್‍ನಲ್ಲಿ ಭಾಗವಹಿಸಲು ಜೀ ಕನ್ನಡ ವಾಹಿನಿ ಯಾವುದೇ ರೀತಿಯ ಶುಲ್ಕವನ್ನು ಪಡೆಯುವುದಿಲ್ಲ,ಸಂಪೂರ್ಣ ಉಚಿತ.
Bangalore,Karnataka
Audition: ಕಿಚನ್ ಬಿಟ್ಟು ಸ್ಟೇಜ್ ಮೇಲೆ ಹೆಜ್ಜೆ ಹಾಕಲು ಬಂತು ಬಂಪರ್ ಚಾನ್ಸ್, ಬೆಂಗಳೂರಿನಲ್ಲಿ ಜೀ ಕನ್ನಡದ ‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಸೂಪರ್ ಮಾಮ್’ ಆಡಿಷನ್!














