Greatest T20 Player: ಕೊಹ್ಲಿ, ಎಬಿಡಿ, ಗೇಲ್ ಅಲ್ಲ, ಭಾರತದ ಈ ಪ್ಲೇಯರ್ ಟಿ20 ಕ್ರಿಕೆಟ್​​ನ ಸಾರ್ವಕಾಲಿಕ ಶ್ರೇಷ್ಠ ಕ್ರಿಕೆಟರ್ ಎಂದ ರಶೀದ್ ಖಾನ್ | ಕ್ರೀಡಾ ಸುದ್ದಿ | ACTPnews

ರಶೀದ್ ಖಾನ್


Last Updated:


ಕ್ರಿಕ್‌ಇನ್ಫೋ (Cricinfo) ಶನಿವಾರ ಎಕ್ಸ್ (ಟ್ವಿಟರ್) ಖಾತೆಯಲ್ಲಿ ಹಂಚಿಕೊಂಡಿರುವ ವಿಶೇಷ ವಿಡಿಯೋ ಕ್ಲಿಪ್‌ನಲ್ಲಿ ರಶೀದ್ ಖಾನ್ ಅವರು ವಿವಿಧ ಸುತ್ತುಗಳಲ್ಲಿ ಆಟಗಾರರನ್ನು ಶಾರ್ಟ್‌ಲಿಸ್ಟ್ ಮಾಡುವ ಮೂಲಕ ಈ ಅಂತಿಮ ನಿರ್ಧಾರಕ್ಕೆ ಬಂದಿದ್ದಾರೆ.

 ರಶೀದ್ ಖಾನ್
ರಶೀದ್ ಖಾನ್

ಟಿ20 ಕ್ರಿಕೆಟ್ (T20 Cricket) ಇಂದು ಇತರೆ ಕ್ರಿಕೆಟ್​​ಗಿಂತ ಹೆಚ್ಚು ಪ್ರಸಿದ್ಧಿ ಪಡೆಯುತ್ತಿದೆ. ವಿಶ್ವದಾದ್ಯಂತ ಹಲವು ಟಿ20 ಲೀಗ್​ಗಳು ಹೊರಬಂದಿವೆ. ಏಷ್ಯನ್ ಗೇಮ್ಸ್, ಕಾಮನ್​ವೆಲ್ತ್ ಗೇಮ್ಸ್ ಹಾಗೂ ಒಲಿಂಪಿಕ್ಸ್ ವರೆಗೆ ಟಿ20 ಸೇರ್ಪಡೆಗೊಂಡಿವೆ. ಎರಡು ದಶಕಗಳಿರುವ ಈ ಚುಟುಕು ಕ್ರಿಕೆಟ್​​​ ನಿರೀಕ್ಷಿಸಿದಕ್ಕಿಂತಲೂ ವೇಗವಾಗಿ ಬೆಳೆಯುವುದಕ್ಕೆ ಹಲವಾರು ಸ್ಟಾರ್ ಕ್ರಿಕೆಟಿಗರ ಪಾತ್ರ ಮಹತ್ವವಾಗಿದೆ. ಅಂತಹವರಲ್ಲಿ ವಿರಾಟ್ ಕೊಹ್ಲಿ (Virat Kohli), ಕ್ರಿಸ್ ಗೇಲ್, ಎಬಿ ಡಿವಿಲಿಯರ್ಸ್, ರಶೀದ್ ಖಾನ್, ಎಂಎಸ್ ಧೋನಿ ಸೇರಿದಂತೆ ಹಲವರು ಹೆಸರುಗಳು ಮುಂಚೂಣಿಯಲ್ಲಿವೆ. ಇದರಲ್ಲಿ ಯಾರು ಶ್ರೇಷ್ಠ ( Greatest T20 Player) ಎಂದರೆ ತಟ್ ಅಂಥಾ ಹೇಳಲು ಸಾಧ್ಯವಿಲ್ಲ. ಆದರೆ ಅಫ್ಘಾನಿಸ್ತಾನ ತಂಡದ ಮಾಜಿ ಟಿ-20 ನಾಯಕ ಹಾಗೂ ಸ್ಟಾರ್ ಸ್ಪಿನ್ನರ್ ರಶೀದ್ ಖಾನ್ ಅವರು ಭಾರತ ಕ್ರಿಕೆಟ್ ಇತಿಹಾಸದ ಶ್ರೇಷ್ಠ ವೇಗಿಯನ್ನ ಸಾರ್ವಕಾಲಿಕ ಶ್ರೇಷ್ಠ ಟಿ-20 ಕ್ರಿಕೆಟಿಗ ಎಂದು ಹೆಸರಿಸಿದ್ದಾರೆ.

ರಶೀದ್ ಖಾನ್ ಹೆಸರಿಸಿದ ಕ್ರಿಕೆಟರ್ ಬೇರೆ ಯಾರೂ ಅಲ್ಲ, ಜಸ್ಪ್ರಿತ್ ಬುಮ್ರಾ. ಅಚ್ಚರಿ ಎಂದರೆ ಈ ಆಯ್ಕೆ ಮಾಡುವಾಗ ಅವರು ವಿರಾಟ್ ಕೊಹ್ಲಿ, ಎಂ.ಎಸ್. ಧೋನಿ ಅಥವಾ ಎಬಿ ಡಿವಿಲಿಯರ್ಸ್ ಅವರಂತಹ ದಿಗ್ಗಜ ಬ್ಯಾಟರ್‌ಗಳಲ್ಲದೆ, ತಮ್ಮನ್ನೂ ಬದಿಗಿಟ್ಟು ಬುಮ್ರಾ ಅವರನ್ನ ವಿಶ್ವಶ್ರೇಷ್ಠ ಎಂದು ಆಯ್ಕೆ ಮಾಡಿದ್ದಾರೆ.

ಮೂರು ಸುತ್ತಿನ ಸ್ಪರ್ಧೆಯಲ್ಲಿ ಬುಮ್ರಾ ವಿಜೇತ

ಕ್ರಿಕ್‌ಇನ್ಫೋ (Cricinfo) ಶನಿವಾರ ಎಕ್ಸ್ (ಟ್ವಿಟರ್) ಖಾತೆಯಲ್ಲಿ ಹಂಚಿಕೊಂಡಿರುವ ವಿಶೇಷ ವಿಡಿಯೋ ಕ್ಲಿಪ್‌ನಲ್ಲಿ ರಶೀದ್ ಖಾನ್ ಅವರು ವಿವಿಧ ಸುತ್ತುಗಳಲ್ಲಿ ಆಟಗಾರರನ್ನು ಶಾರ್ಟ್‌ಲಿಸ್ಟ್ ಮಾಡುವ ಮೂಲಕ ಈ ಅಂತಿಮ ನಿರ್ಧಾರಕ್ಕೆ ಬಂದಿದ್ದಾರೆ. ಆ ವರದಿಯ ಪ್ರಕಾರ ರಶೀದ್ ಖಾನ್ ಅವರ ಈ ರೋಮಾಂಚಕ ಆಯ್ಕೆಯ ಸಂಪೂರ್ಣ ವಿವರಗಳು ಇಲ್ಲಿವೆ:

ಮೊದಲ ಸುತ್ತಲ್ಲಿ ಸುನಿಲ್ ನರೈನ್ ವಿರುದ್ಧ ತಮ್ಮನ್ನು (ರಶೀದ್), ಆ್ಯಂಡ್ರೆ ರಸೆಲ್ ವಿರುದ್ಧ ಎಬಿ ಡಿವಿಲಿಯರ್ಸ್ ಅವರನ್ನು, ಕ್ರಿಸ್ ಗೇಲ್ ವಿರುದ್ಧ ವಿರಾಟ್ ಕೊಹ್ಲಿ ಅವರನ್ನು ಹಾಗೂ ಕೀರನ್ ಪೊಲಾರ್ಡ್ ವಿರುದ್ಧ ಜಸ್ಪ್ರಿತ್ ಬುಮ್ರಾ ಅವರನ್ನು ರಶೀದ್ ಆರಿಸಿಕೊಂಡರು.

ಎರಡನೇ ಸುತ್ತಿನಲ್ಲಿ ರಶೀದ್ vs ಡಿವಿಲಿಯರ್ಸ್ ಮುಖಾಮುಖಿಯಲ್ಲಿ ಅವರು ದಕ್ಷಿಣ ಆಫ್ರಿಕಾದ ಮಾಜಿ ನಾಯಕನನ್ನು ಆರಿಸಿದರು. ವಿರಾಟ್ ಕೊಹ್ಲಿ vs ಜಸ್ಪ್ರಿತ್ ಬುಮ್ರಾ ನಡುವಿನ ಹಣಾಹಣಿಯಲ್ಲಿ ಅವರು ಟೀಮ್ ಇಂಡಿಯಾದ ವೇಗಿಗೆ ಮಣೆ ಹಾಕಿದರು.

ಕೊನೆಯ ಸುತ್ತಿನಲ್ಲಿ ಎಬಿ ಡಿವಿಲಿಯರ್ಸ್ ಹಾಗೂ ಜಸ್ಪ್ರಿತ್ ಬುಮ್ರಾ ನಡುವೆ ಒಬ್ಬರನ್ನು ಆಯ್ಕೆ ಮಾಡಲು ಕೇಳಿದಾಗ, ರಶೀದ್ ಖಾನ್ ಯಾರ್ಕರ್ ಕಿಂಗ್ ಬುಮ್ರಾ ಸಾರ್ವಕಾಲಿಕ ಶ್ರೇಷ್ಠ ಎಂದು ಘೋಷಿಸಿದರು. ಈ ವೇಳೆ ಅವರು “ಬುಮ್ರಾ ನಿಜಕ್ಕೂ ಅದ್ಭುತ ಮತ್ತು ನಂಬಲಾಸಾಧ್ಯವಾದ ಬೌಲರ್” ಎಂದು ಹಾಡಿ ಹೊಗಳಿದ್ದಾರೆ.

ಬುಮ್ರಾ ಟಿ-20 ವೃತ್ತಿಜೀವನದ ಐತಿಹಾಸಿಕ ಸಾಧನೆ

ವಿಶ್ವಕಪ್ ಹೀರೋ: 32 ವರ್ಷದ ಬುಮ್ರಾ ಎರಡು ಬಾರಿ ಟಿ-20 ವಿಶ್ವಕಪ್ ವಿಜೇತ ತಂಡದ ಸದಸ್ಯರಾಗಿದ್ದಾರೆ. 2024 ರ ಟಿ-20 ವಿಶ್ವಕಪ್‌ನಲ್ಲಿ ‘ಪ್ಲೇಯರ್ ಆಫ್ ದಿ ಟೂರ್ನಮೆಂಟ್’ ಆಗಿದ್ದ ಅವರು, ಇತ್ತೀಚೆಗೆ ನಡೆದ 2026 ರ ಟಿ-20 ವಿಶ್ವಕಪ್ ಫೈನಲ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ 4 ವಿಕೆಟ್ ಪಡೆದು ‘ಪ್ಲೇಯರ್ ಆಫ್ ದಿ ಮ್ಯಾಚ್’ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದರು.

ಐಪಿಎಲ್ ಮತ್ತು ಅಂತರರಾಷ್ಟ್ರೀಯ ದಾಖಲೆ: ಮುಂಬೈ ಇಂಡಿಯನ್ಸ್ ಪರ ಐದು ಐಪಿಎಲ್ ಟ್ರೋಫಿ ಗೆದ್ದಿರುವ ಬುಮ್ರಾ, ಎಂಐ ತಂಡದ ಪರ ಗರಿಷ್ಠ ವಿಕೆಟ್ ಟೇಕರ್ ಹಾಗೂ ಭಾರತದ ಪರ ಟಿ-20 ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಎರಡನೇ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿದ್ದಾರೆ. 2013 ರ ಐಪಿಎಲ್ ಪದಾರ್ಪಣೆ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಅವರದ್ದೇ ವಿಕೆಟ್ ಪಡೆದು ಅವರು ವೃತ್ತಿಜೀವನ ಆರಂಭಿಸಿದ್ದರು. 2024 ರಲ್ಲಿ ಅವರು ‘ಐಸಿಸಿ ಪ್ಲೇಯರ್ ಆಫ್ ದಿ ಇಯರ್’ ಗೌರವಕ್ಕೂ ಪಾತ್ರರಾಗಿದ್ದರು.

ಬುಮ್ರಾ ಅವರ ಮುಂದಿನ ಕ್ರಿಕೆಟ್ ವೇಳಾಪಟ್ಟಿ

ಬುಮ್ರಾ ಅವರು ಇತ್ತೀಚೆಗೆ ಅಕ್ಟೋಬರ್ 3 ರಂದು ನಡೆದ ಏಷ್ಯನ್ ಗೇಮ್ಸ್ 2026 ರ ಫೈನಲ್‌ನಲ್ಲಿ ಪಾಕಿಸ್ತಾನವನ್ನು ಸೋಲಿಸಿ ಭಾರತ ತಂಡವು ಚಿನ್ನದ ಪದಕ ಗೆಲ್ಲಲು ಪ್ರಮುಖ ಪಾತ್ರ ವಹಿಸಿದ್ದರು. ಪ್ರಸ್ತುತ ನಡೆಯುತ್ತಿರುವ ವೆಸ್ಟ್ ಇಂಡೀಸ್ ವಿರುದ್ಧದ 5 ಪಂದ್ಯಗಳ ಟಿ-20 ಸರಣಿ ಹಾಗೂ ಈ ತಿಂಗಳ ಕೊನೆಯಲ್ಲಿ ನಡೆಯಲಿರುವ ನ್ಯೂಜಿಲೆಂಡ್ ವಿರುದ್ಧದ ಟಿ-20 ಸರಣಿಯಿಂದ ಅವರಿಗೆ ವಿಶ್ರಾಂತಿ ನೀಡಲಾಗಿದೆ. ಅವರು ಮುಂದಿನ ತಿಂಗಳು ನ್ಯೂಜಿಲೆಂಡ್ ವಿರುದ್ಧ ನಡೆಯಲಿರುವ 5 ಪಂದ್ಯಗಳ ಏಕದಿನ (ODI) ಸರಣಿಯ ಮೂಲಕ ಮತ್ತೆ ಭಾರತ ತಂಡದ ಪರ ಕಣಕ್ಕಿಳಿಯಲಿದ್ದಾರೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed