Nana Patekar: ನಾನಾ ಪಾಟೇಕರ್ ಸಾವಿನ ಕಾರಣ ಬಹಿರಂಗ! ಮರಣೋತ್ತರ ಪರೀಕ್ಷಾ ವರದಿಯಲ್ಲಿದೆ ಆ ಸಮಸ್ಯೆ ಬಗ್ಗೆ ಸುಳಿವು! | | ACTPnews

ನಾನಾ ಪಾಟೇಕರ್​


Last Updated:

ನಟ ನಾನಾ ಪಾಟೇಕರ್ ಅವರ ಅನಿರೀಕ್ಷಿತ ನಿಧನದ ಬಳಿಕ ಅವರ ಸಾವಿಗೆ ನಿಜವಾದ ಕಾರಣವೇನು ಎಂಬ ಬಗ್ಗೆ ಹರಿದಾಡುತ್ತಿದ್ದ ಎಲ್ಲಾ ಊಹಾಪೋಹಗಳಿಗೆ ತೆರೆಬಿದ್ದಿದೆ.

ನಾನಾ ಪಾಟೇಕರ್​
ನಾನಾ ಪಾಟೇಕರ್​

ನಾನಾ ಪಾಟೇಕರ್‌ (Nana Patekar). ಅಪ್ಪಟ ದೇಶ ಭಕ್ತ. ಕಲೆಯನ್ನೇ ಉಸಿರಾಗಿಸಿಕೊಂಡ ಅಪ್ರತಿಮ ಕಲಾವಿದ. ಒಮ್ಮೆ ಬಣ್ಣ ಹಚ್ಚಿ ನಿಂತ್ರೆ ಪಾತ್ರವೇ ತಾವಾಗ್ತಿದ್ದರು. ತಮಗೆ ಕೊಡೋ ಪಾತ್ರಗಳಿಗೆ ಪ್ರತಿ ಫ್ರೇಮ್‌ನಲ್ಲೂ ಜೀವ ತುಂಬ್ತಿದ್ದರು. ಹೀಗಾಗಿ ಮೂರು ಮೂರು ಬಾರಿ ರಾಷ್ಟ್ರೀಯ ಸಿನಿಮಾ (Cinema) ಪ್ರಶಸ್ತಿ ಅರಸಿಕೊಂಡು ಬಂದಿದ್ದು. ಇಂಥಾ ಮಹಾನ್‌ ನಟನೀಗ ಇಹಲೋಕದ ಯಾತ್ರೆ ಮುಗಿಸಿದ್ದಾರೆ. 75 ವರ್ಷದ ನಾನಾ ಪಾಟೇಕರ್‌‌ ಕಳೆದ ಗುರುವಾರದಂದು ಹೃದಯಾಘಾತದಿಂದ ನಿಧನರಾಗಿದ್ದಾರೆ.

ನಾನಾ ಪಾಟೇಕರ್ ಮರಣೋತ್ತರ ವರದಿ

ನಟ ನಾನಾ ಪಾಟೇಕರ್ ನಿಧನದ ಬಳಿಕ ಹೊರಬಂದ ಮರಣೋತ್ತರ ಪರೀಕ್ಷೆ (ಪೋಸ್ಟ್‌ಮಾರ್ಟಮ್) ವರದಿಯು ಅವರ ಸಾವಿಗೆ ನಿಜವಾದ ಕಾರಣವನ್ನು ಸ್ಪಷ್ಟಪಡಿಸಿದೆ. ಗೋವಾ ಮೆಡಿಕಲ್ ಕಾಲೇಜ್ (GMC), ಬಾಂಬೋಲಿಯ ವೈದ್ಯರ ವಿಶೇಷ ತಜ್ಞರ ಸಮಿತಿಯು ಬಿಡುಗಡೆ ಮಾಡಿದ ಅಧಿಕೃತ ಆಟೋಪ್ಸಿ ವರದಿಯ ಪ್ರಕಾರ, 75 ವರ್ಷದ ನಾನಾ ಪಾಟೇಕರ್ ಅವರ ಮರಣವು ಸಂಪೂರ್ಣವಾಗಿ ಸಹಜವಾಗಿದ್ದು (ನ್ಯಾಚುರಲ್), ಹೃದಯಾಘಾತ (ಮ್ಯಾಸಿವ್ ಹಾರ್ಟ್ ಅಟ್ಯಾಕ್) ಇದಕ್ಕೆ ಕಾರಣವಾಗಿದೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ: Nana Patekar-Tanushree Dutta: ನಾನಾ ಪಾಟೇಕರ್‌ ಮೇಲೆ ತನುಶ್ರೀ ದತ್ತಾ ಆರೋಪವೇನು? ಸಿನಿಮಾ ಸೆಟ್‌ನಲ್ಲಿ ಅಂದು ನಡೆದಿದ್ದೇನು?

ಪಣಜಿ ಪೊಲೀಸರು ಹಂಚಿಕೊಂಡ ವೈದ್ಯಕೀಯ ಮಾಹಿತಿಯ ಪ್ರಕಾರ, ನಾನಾ ಪಾಟೇಕರ್ ಅವರು ಕೊರೊನರಿ ಆರ್ಟರಿ ಡಿಸೀಸ್ (CAD) ಸಮಸ್ಯೆಯಿಂದ ಬಳಲುತ್ತಿದ್ದರು. ಇದೇ ಕಾಯಿಲೆಯಿಂದಾಗಿ ಅವರ ಹೃದಯಕ್ಕೆ ರಕ್ತವನ್ನು ಕೊಂಡೊಯ್ಯುವ ಮುಖ್ಯ ಧಮನಿಯು ಹಠಾತ್ತನೆ ರಕ್ತ ಹೆಪ್ಪುಗಟ್ಟುವಿಕೆಯಿಂದ ಮುಚ್ಚಲ್ಪಟ್ಟಿದ್ದು, ಇದರಿಂದ ಹೃದಯಕ್ಕೆ ರಕ್ತ ಮತ್ತು ಆಮ್ಲಜನಕ ಪೂರೈಕೆ ನಿಂತುಹೋಗಿದೆ. ಪರಿಣಾಮವಾಗಿ ಅವರಿಗೆ ತೀವ್ರ ಹೃದಯಾಘಾತ ಸಂಭವಿಸಿ ಪ್ರಾಣ ಕಳೆದುಕೊಂಡಿದ್ದಾರೆ. ಮೃತದೇಹವನ್ನು ಬಾಂಬೋಲಿಯಲ್ಲಿರುವ ಗೋವಾ ಮೆಡಿಕಲ್ ಕಾಲೇಜಿಗೆ ಕೊಂಡೊಯ್ದು, ಅಲ್ಲಿ ಕುಟುಂಬಸ್ಥರು ಹಾಗೂ ಸಾಕ್ಷಿಗಳ ಸಮ್ಮುಖದಲ್ಲಿ ಪಂಚನಾಮ ಪ್ರಕ್ರಿಯೆ ನಡೆಸಲಾಯಿತು. ಬಳಿಕ ಹಿರಿಯ ವೈದ್ಯರ ಸಮಿತಿಯು ಮರಣೋತ್ತರ ಪರೀಕ್ಷೆ ನಡೆಸಿ ತನ್ನ ವರದಿಯನ್ನು ಪೊಲೀಸರಿಗೆ ಸಲ್ಲಿಸಲಾಗಿದೆ ಎಂದು ಮಾಹಿತಿ ನೀಡಿದೆ.
ನಿಧನಕ್ಕೂ ಮುನ್ನ ನಾನಾ ಜೊತೆ ಏನೆಲ್ಲಾ ನಡೆಯಿತು?

ರಾತ್ರಿ ಸುಮಾರು 2:30 ರ ಸುಮಾರಿಗೆ ನಾನಾ ಪಾಟೇಕರ್ ಅವರಿಗೆ ಆತಂಕ ಮತ್ತು ಎದೆನೋವು ಕಾಣಿಸಿಕೊಂಡಿದೆ. ಅವರು ತಮ್ಮ ಆಪ್ತ ಸ್ನೇಹಿತ ಅಮೇಯ್ ನಾಯ್ಕ್‌ಗೆ ವಾಟ್ಸಾಪ್ ಮೆಸೇಜ್​ ಕಳುಹಿಸಿ ತಮಗೆ ಆರೋಗ್ಯ ಸರಿ ಇಲ್ಲವೆಂದು ತಿಳಿಸಿದ್ದರು. ತಡರಾತ್ರಿಯಾದ್ದರಿಂದ ಅಮೇಯ್ ನಾಯ್ಕ್ ಈ ಮೆಸೇಜ್​ ಅನ್ನು ಸುಮಾರು ಒಂದು ಗಂಟೆಯ ನಂತರ ನೋಡಿದ್ದಾರೆ. ಮೆಸೇಜ್​ ಓದಿದ ಕೂಡಲೇ ಡೋನಾ ಪೌಲಾ ಫ್ಲಾಟ್‌ಗೆ ತಲುಪಿದ್ದಾರೆ.

ಬಾಗಿಲು ತೆರೆದು ನೋಡಿದಾಗ ನಾನಾ ಪಾಟೇಕರ್ ಅವರು ಪ್ರಜ್ಞೆ ತಪ್ಪಿ ಬಿದ್ದಿದ್ದರು ಎನ್ನಲಾಗಿದೆ. ತದನಂತರ ಸುಮಾರು 4:30 ರ ಸುಮಾರಿಗೆ ಅಮೇಯ್ ನಾಯ್ಕ್, ಕೇರ್‌ಟೇಕರ್ ಸಹಾಯದಿಂದ ಹತ್ತಿರದ ಮಣಿಪಾಲ್ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ, ಅಲ್ಲಿ ವೈದ್ಯರು ಅವರನ್ನು ಮೃತಪಟ್ಟಿರುವುದಾಗಿ ಘೋಷಿಸಿದರು. ಬೆಳಿಗ್ಗೆ 5:30 ರ ಸುಮಾರಿಗೆ ಆಸ್ಪತ್ರೆ ಆಡಳಿತ ಮಂಡಳಿಯು ಪಣಜಿ ಪೊಲೀಸರಿಗೆ ನಾನಾ ಪಾಟೇಕರ್ ಅವರ ನಿಧನದ ಅಧಿಕೃತ ಮಾಹಿತಿಯನ್ನು ನೀಡಿತು.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed