ಕಿತ್ತು ತಿನ್ನುವ ಜನರೇ ಎಂದು ಹಾಡಿದ ರಘು ದೀಕ್ಷಿತ್
ಶಿವಣ್ಣನ ಮನ ಮೆಚ್ಚಿದ ಹುಡುಗಿ ಚಿತ್ರದ “ಬೆಂಕಿಯಲ್ಲಿ ತಂಪು ಕಂಡೆನು” ಹಾಡನ್ನೆ ಇಲ್ಲಿ ಬಳಕೆ ಮಾಡಿದ್ದರು. ಇದಕ್ಕೆ ಮ್ಯೂಸಿಕ್ ಡೈರೆಕ್ಟರ್ ಪೂರ್ಣಚಂದ್ರ ತೇಜಸ್ವಿ ಹೊಸ ಸ್ಪರ್ಶ ಕೊಟ್ಟಿದ್ದರು. ವಿನಯ್ ರಾಜ್‌ಕುಮಾರ್ ಹಾಗೂ ಮೇಘಾ ಶೆಟ್ಟಿ ಈ ಹಾಡಿಗೆ ಸಖತ್ ಆಗಿಯೇ ಕುಣಿದಿದ್ದರು. ಇದಕ್ಕೆ ಮಿಲಿಯನ್ ಗಟ್ಟಲೆ ವೀವ್ಸ್ ಕೂಡ ಬಂದಿವೆ.
ಇದೇ ಚಿತ್ರದ ಶತಶತಮಾನಗಳಿಂದ ಹಾಡು ರಿಲೀಸ್ ಆಗಿದೆ. ಇದನ್ನ ರಘು ದೀಕ್ಷಿತ್ ಹಾಡಿದ್ದಾರೆ. ಪವರ್ ಫುಲ್ ಆಗಿಯೇ ಇರೋ ಈ ಹಾಡನ್ನ ಪೂರ್ಣಚಂದ್ರ ತೇಜಸ್ವಿ ಅವರೇ ಬರೆದಿದ್ದಾರೆ.
ಇದರಲ್ಲಿ ಬರುವ ಪ್ರತಿ ಲೈನ್ ಕೂಡ ಅಷ್ಟೆ ಪವರ್ ಫುಲ್ ಆಗಿಯೇ ಇವೆ. ಇದನ್ನ ರಘು ದೀಕ್ಷಿತ್ ಅಷ್ಟೆ ಎನರ್ಜಿಯನ್ನೆ ಹಾಕಿದ್ದಾರೆ. ಆದರೆ, ಸದ್ಯ ಈ ಹಾಡಿನ ಲಿರಿಕಲ್ ವಿಡಿಯೋ ಮಾತ್ರ ರಿಲೀಸ್ ಆಗಿದೆ.
ಹಾಡಿನ ಸಾಲುಗಳು ಹೀಗಿವೆ
ಶತಶತಮಾನಗಳಿಂದ
ಮೊದಲ ಪಂಕ್ತಿಎಲೆ ಕೂತು
ತೆಗಿ ತೇಗಿ ಉಂಡವರೇ
ಶತಶತಮಾನಗಳಿಂದ…
ತಲೆ ತಲೆಮಾರುಗಳಿಂದ
ದುಡಿದು ಕೂಡ ಹಸಿದವರ
ಸರತಿ ಸಾಲು ದೊಡ್ಡದಿದೆ…
ಏಳಿ ಏಳಿ ಮೇಲೇಳಿ
ಬೆವರ ಸುರಿಸಿ ದುಡಿದವರ
ರಕುತ ಕುದಿಯುವ ಮುನ್ನ
ಕಿತ್ತು ತಿನ್ನುವ ಜನರೇ
ಈ ಎಲ್ಲ ಸಾಲುಗಳು ಇಡೀ ಚಿತ್ರದ ಒಂದು ಚಿತ್ರಣ ಕಟ್ಟಿಕೊಡುತ್ತವೆ. ಗ್ರಾಮಾಯಣ ಅಸಲಿಗೆ ಏನು ಕತೆ ಇದೆ ಅಂತಲೂ ಇವು ಸಂಕ್ಷಿಪ್ತವಾಗಿಯೇ ಹೇಳುತ್ತಿದೆ.
ಇಡೀ ಹಾಡನ್ನ ಗಮನಿಸ್ತಾ ಹೋದ್ರೆ ಇಲ್ಲಿ ಬರುವ ಲೈನ್ ಕಿಚ್ಚು ಹಚ್ಚುತ್ತವೆ. “ತೆಗಿ ತೇಗಿ ಉಂಡವರೇ ಸಾಕು ಸಾಕು ಎದ್ದೇಳಿ” ಅನ್ನುವ ಸಾಲು ಗಮನ ಸೆಳೆಯುತ್ತವೆ. ಕಿತ್ತು ತಿನ್ನುವ ಜನರೇ ಹುಡುಕಿ ನಿಮ್ಮ ಬಿಲವೆಲ್ಲಿ? ಅನ್ನೋದು ಉಳ್ಳವರಿಗೆ ಸಲಹೆ ಕೊಟ್ಟಂತೆನೂ ಇದೆ. ಇಡೀ ಹಾಡು ಚೆನ್ನಾಗಿ ಬಂದಿದೆ. ವಿಡಿಯೋ ಸಾಂಗ್ ಹೇಗೆ ಇರುತ್ತದೆ ಅನ್ನುವ ಕುತೂಹಲ ಈಗಲೇ ಹೆಚ್ಚಾಗಿದೆ.
ಗ್ರಾಮಾಯಣ ಸಿನಿಮಾದಲ್ಲಿ ಮೇಘಾ ಶೆಟ್ಟಿ ಮತ್ತು ವಿನಯ್ ರಾಜ್‌ಕುಮಾರ್ ಲೀಡ್ ಅಲ್ಲಿಯೇ ಇದ್ದಾರೆ. ಯೋಗೇಶ್, ಅಚ್ಯುತ್ ಕುಮಾರ್, ಗೋಪಾಲ್ ದೇಶಪಾಂಡೆ, ಅರುಣ್ ಸಾಗರ್ ಸೇರಿದಂತೆ ಇನ್ನು ಅನೇಕರು ಈ ಚಿತ್ರದಲ್ಲಿ ನಟಿಸಿದ್ದಾರೆ.
ಈ ಚಿತ್ರವನ್ನ ದೇವನೂರು ಚಂದ್ರು ಬರೆದಿದ್ದಾರೆ. ಇವರೇ ಡೈರೆಕ್ಷನ್ ಕೂಡ ಮಾಡಿದ್ದಾರೆ. ಈಗಾಗಲೇ ಹೇಳಿದಂತೆ ಪೂರ್ಣಚಂದ್ರ ತೇಜಸ್ವಿ ಸಂಗೀತ ಕೊಟ್ಟಿದ್ದಾರೆ. ಸಂತೋಷ್ ರೈ ಪಾತಾಜೆ ಕ್ಯಾಮರಾವರ್ಕ್ ಮಾಡಿದ್ದಾರೆ.
ಈ ಚಿತ್ರದ ರಿಲೀಸ್ ಯಾವಾಗ ಅನ್ನುವ ಕುತೂಹಲವೂ ಇದೆ. ಇದರೊಟ್ಟಿಗೆ ಈ ಸಿನಿಮಾದಲ್ಲಿ ವಿನಯ್ ರಾಜ್‌ಕುಮಾರ್ ಮತ್ತೊಂದು ಹೊಸ ಭರವಸೆ ಮೂಡಿಸಿದ್ದಾರೆ. ಚಿತ್ರದ ಪೋಸ್ಟರ್‌ಗಳು ಆ ಒಂದು ಭರವಸೆ ಮೂಡಿಸಿವೆ ಅಂತ ಹೇಳಬಹುದು.












