Government Jobs: 19 ಸರ್ಕಾರಿ ಉದ್ಯೋಗಕ್ಕೆ ಆಯ್ಕೆಯಾದ 23 ವರ್ಷದ ಯುವತಿ; ಕೊನೆಗೆ ಆಯ್ದುಕೊಂಡಿದ್ದು ಯಾವ ಕೆಲಸ? | ಉದ್ಯೋಗ ಸುದ್ದಿ | ACTPnews

Government Jobs: 19 ಸರ್ಕಾರಿ ಉದ್ಯೋಗಕ್ಕೆ ಆಯ್ಕೆಯಾದ 23 ವರ್ಷದ ಯುವತಿ; ಕೊನೆಗೆ ಆಯ್ದುಕೊಂಡಿದ್ದು ಯಾವ ಕೆಲಸ? | ಉದ್ಯೋಗ ಸುದ್ದಿ


ಎಎನ್ಐ ಈ ಸಾಧನೆ ಸರ್ಕಾರಿ ಉದ್ಯೋಗದ ಆಕಾಂಕ್ಷಿಯಾದ ಚಾರು ಪಾಂಡೆ ಅವರದ್ದಾಗಿದೆ. ಭಾರತದ ಅತ್ಯಂತ ಸ್ಪರ್ಧಾತ್ಮಕ ಪರೀಕ್ಷಾ ವ್ಯವಸ್ಥೆಯ ಮೂಲಕ ಸುದೀರ್ಘ ವರ್ಷಗಳ ಈ ಪ್ರಯಾಣ ಪ್ರಶಂಸೆ ಮತ್ತು ಟೀಕೆಗೆ ಗುರಿಯಾಗಿದೆ. ಒಂದು ವಿಡಿಯೋವನ್ನು ಎಕ್ಸ್ (X)ನಲ್ಲಿ ಹಂಚಿಕೊಂಡ ನಂತರ ಅವರ ಯಶಸ್ಸಿನ ಕಥೆಯು ಬಾರಿ ಗಮನ ಸೆಳೆಯಿತು. ಅಂತಹ ಸಾಧನೆಯು ವೃತ್ತಿ ಗುರಿಗಳು, ಪರಿಶ್ರಮ ಮತ್ತು ದೇಶದ ನೇಮಕಾತಿಯ ಕುರಿತು ಏನು ಹೇಳುತ್ತದೆ ಎಂಬುದನ್ನು ಜನರು ಅಳೆಯುವಂತೆ ಪ್ರೇರೇಪಿಸಿತು.

ಬೆಂಬಲಿಗರು ಅವಳ ಯಶಸ್ಸನ್ನು ಅಸಾಧಾರಣ ಸಮರ್ಪಣೆಗೆ ಉದಾಹರಣೆ ಎಂದು ಹೋಗಳಿದರೆ, ನೇಮಕಾತಿ ಪರೀಕ್ಷೆಯಲ್ಲಿ ಪದೇ ಪದೇ ಉತ್ತೀರ್ಣ ಆಗುವುದನ್ನು ಸಾಧನೆಯ ಮಾನದಂಡ ಎಂದು ನೋಡಬೇಕೆ ಎಂದು ಟೀಕೆ ಮಾಡಿದರು.

ಒಂದು ಸರ್ಕಾರಿ ನೌಕರಿಯಿಂದ ಆರಂಭವಾದ ಗುರಿ

ಪಾಂಡೆ 23 ವರ್ಷದವರಿದ್ದಾಗ ಸರ್ಕಾರಿ ನೇಮಕಾತಿ ಪರೀಕ್ಷೆಗಳಿಗೆ ತಯಾರಿ ನಡೆಸಿದರು ಎಂದು ಅವರು ಹೇಳಿದ್ದಾರೆ. ಆ ಸಮಯದಲ್ಲಿ ಅವರ ಗುರಿ ಸರ್ಕಾರಿ ಉದ್ಯೋಗವನ್ನು ಪಡೆಯುವುದಾಗಿತ್ತು.

ವರ್ಷಗಳಲ್ಲಿ, ಅವಳು ಸಿಬ್ಬಂದಿ ಆಯ್ಕೆ ಆಯೋಗದ ಕಂಬೈನ್ಡ್ ಗ್ರಾಜುಯೇಟ್ ಲೆವೆಲ್ (SSC CGL), ಕಂಬೈನ್ಡ್ ಹೈಯರ್ ಸೆಕೆಂಡರಿ ಲೆವೆಲ್ (SSC CHSL) ಮತ್ತು ಮಲ್ಟಿ- ಟಾಸ್ಕಿಂಗ್ ಸ್ಟಾಫ್ (SSC MTS) ಪರೀಕ್ಷೆಗಳಿಗೆ ಹಾಜರಾಗಿದ್ದಳು. ರೈಲ್ವೆ ನೇಮಕಾತಿ ಬೋರ್ಡ್ (RRB), ದಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಮತ್ತು ದಿ ಇನ್ಸ್ಟಿಟ್ಯೂಟ್ ಆಫ್ ಬ್ಯಾಂಕಿಂಗ್ ಪರ್ಸನಲ್ ಸೆಲೆಕ್ಷನ್ (IBPS) ಪರೀಕ್ಷೆಗಳನ್ನು ಕೂಡ ಬರೆದಿದ್ದಾಳೆ. ಬಹು ನೇಮಕಾತಿಯಲ್ಲಿ ಅವಳು ಪದೇ ಪದೇ ಭಾಗವಹಿಸಿದ್ದರಿಂದ 19 ಕೇಂದ್ರ ಸರ್ಕಾರಿ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿದ್ದಾರೆ.

ಎಎನ್ಐ ಜೊತೆ ಮಾತನಾಡಿದ, ಸರ್ಕಾರಿ ಉದ್ಯೋಗಕ್ಕಾಗಿ ತಯಾರಿ ಪ್ರಾರಂಭಿಸಿದ ಸಮಯದಲ್ಲಿ ಇದನ್ನು ಊಹೆ ಮಾಡಿರಲಿಲ್ಲ ಎಂದಿದ್ದಾರೆ. ‘ನನ್ನ ಈ ಸಾಧನೆಯಿಂದ ನನ್ನ ಕುಟುಂಬದವರಿಗೆ ತುಂಬ ಖುಷಿಯಾಗಿದೆ. 19 ಕೇಂದ್ರ ಸರ್ಕಾರಿ ಪರೀಕ್ಷೆಗಳನ್ನು ಕ್ಲೀಯರ್ ಮಾಡಿರುವುದಕ್ಕೆ ನನಗೆ ಅವಾರ್ಡ್ ಪಡೆಯುತ್ತಿದ್ದೇನೆ. ಹೇಳಬೇಕೆಂದರೆ, ನಾನು ಇಷ್ಟೊಂದು ಪರೀಕ್ಷೆಗಳಲ್ಲಿ ಪ್ರಯತ್ನಿಸುತ್ತೇನೆ ಎಂದು ನಾನು ಭಾವಿಸಿರಲಿಲ್ಲ. ನನ್ನ ಒಂದೇ ಒಂದು ಗುರಿ ಎಂದರೆ ಅದು ಒಂದಾದರೂ ಸರ್ಕಾರಿ ಉದ್ಯೋಗ ಪಡೆದುಕೊಳ್ಳಬೇಕೆನ್ನುವುದು’ ಎಂದು ಹೇಳಿದ್ದಾರೆ.

ತನ್ನ ಶೈಕ್ಷಣಿಕ ಹಿನ್ನೆಲೆಯ ಆರಂಭದಲ್ಲಿ ತನ್ನ ಕುಟುಂಬವು ಬೇರೆ ವೃತ್ತಿ ಜೀವನದ ದಾರಿಯನ್ನು ಪಡೆದುಕೊಳ್ಳಲು ಕಾರಣವಾಯಿತು ಎಂದು ಬಹಿರಂಗ ಪಡಿಸಿದರು. ಪಾಂಡೆಯವರ ಪ್ರಕಾರ, ಗಣಿತದಲ್ಲಿ ಗಟ್ಟಿಯಾದ ಅಡಿಪಾಯ ಇರುವುದರಿಂದ ಅವಳ ಪಾಲಕರು ಬೋಧನೆ ಅಥವಾ ಶೈಕ್ಷಣಿಕ ಕ್ಷೇತ್ರದಲ್ಲಿ ಮುಂದುವರಿಯಲು ಪ್ರೋತ್ಸಾಹಿಸಿದರು. ಆದಾಗ್ಯೂ ಅಂತಿಮವಾಗಿ ಅವಳು ಸ್ಪರ್ಧಾತ್ಮಕ ಪರೀಕ್ಷೆಗಳ ಕಡೆ ಗಮನಹರಿಸಿದಳು. ಛತ್ತೀಸ್​ಗಢದ ರಾಯ್​ ಪುರ ಜಿಲ್ಲೆಯ ಟಿಲ್ಡಾ ನೆವ್ರಾ ನಿವಾಸಿಯಾಗಿದ್ದ ಚಾರು ಪಾಂಡೆ ಸದ್ಯ ಚೆನ್ನೈನ ಕಂಟ್ರೋಲರ್ ಮತ್ತು ಆಡಿಟರ್ ಜನರಲ್ (ಸಿಎಜಿ) ಕಚೇರಿಯಲ್ಲಿ ಸಹಾಯಕ ಲೆಕ್ಕಪರಿಶೋಧನಾ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಸೋಷಿಯಲ್ ಮೀಡಿಯಾ ಪ್ರತಿಕ್ರಿಯೆ; ಪ್ರಶಂಸೆ ಮತ್ತು ಟೀಕೆ

ಚಾರು ಪಾಂಡೆ ಸಾಧನೆಯ ಕುರಿತಾದ ಕ್ಲಿಪ್ಸ್ ಮತ್ತು ಪೋಸ್ಟ್ಸ್ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದ್ದಂತೆ, ಜನರಿಂದ ತೀವ್ರವಾದ ವಿಭಿನ್ನ ಪ್ರತಿಕ್ರಿಯೆಗಳು ಬಂದವು. ಭಾರತದ ಕಠಿಣ ಪರೀಕ್ಷೆಗಳಲ್ಲಿ ಪದೇ ಪದೇ ಸ್ಪರ್ಧಿಸಲು ದೃಢಸಂಕಲ್ಪ ಬೇಕು ಎಂದು ಹಲವರು ಹೊಗಳಿದರು. ಸ್ಥಾನಗಳು ನಿಯಮಿತದಲ್ಲಿ ಇದೆ ಸ್ಪರ್ಧೆ ಮಾತ್ರ ಲಕ್ಷಾಂತರ ಆಕಾಂಕ್ಷಿಗಳ ನಡುವೆ ನಡೆಯುತ್ತದೆ. ಆದಾಗ್ಯೂ, ಬಹು ಪರೀಕ್ಷೆಯಲ್ಲಿ ಪಾಸ್ ಆಗುವುದನ್ನು ಮೊದಲು ಆಚರಿಸಬೇಕೆ ಎಂದು ಇತರರು ಪ್ರಶ್ನಿಸಿದರು.

‘19 ಕೇಂದ್ರ ಸರ್ಕಾರಿ ಪರೀಕ್ಷೆಗಳಲ್ಲಿ ಉತ್ತೀರ್ಣವಾಗುವುದು ಸಮರ್ಪಣೆಯನ್ನು ತೋರಿಸುತ್ತದೆ. ಆದರೆ ಇದು ದೇಶದ ಪ್ರಗತಿಯ ಸಂಕೇತವಾಗಿ ಕೊಂಡಾಡಬೇಕಾದ ಸಾಧನೆಯಲ್ಲ’ ಎಂದು ಒಬ್ಬ ಯೂಸರ್ ಕಾಮೆಂಟ್ ಮಾಡಿದ್ದಾರೆ. ‘ಈ ಪ್ರಶಸ್ತಿಗೆ ಅರ್ಹರಾಗಲು ಎಂತಹ ಅಸಾಧಾರಣ ಕೊಡುಗೆ ನೀಡಿದ್ದಾರೆ. ರೆಕಗ್ನೈಸೇಶನ್ ಕೇವಲ ಪರೀಕ್ಷೆ ಪಾಲಿತಾಂಶಗಳ ಆಧಾರದ ಮೇಲೆ ಅಲ್ಲ, ನಿಜವಾದ ಸಾಧನೆ ಮತ್ತು ಸೇವೆಯ ಆಧಾರದ ಮೇಲೆ ಇರಬೇಕು’ ಎಂದು ಮತ್ತೊಬ್ಬ ಸಾಮಾಜಿಕ ಜಾಲತಾಣದ ಬಳಕೆದಾರ ಬರೆದುಕೊಂಡಿದ್ದಾರೆ.

ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿನ ಯಶಸ್ಸನ್ನು ಮಾತ್ರ ಪಬ್ಲಿಕ್ ಸಾಧನೆಯಾಗಿ ನೋಡಬೇಕೆ ಎನ್ನುವ ಕುರಿತ ವ್ಯಾಪಕ ಚರ್ಚೆಯನ್ನು ಈ ಕಾಮೆಂಟ್ಗಳು ಪ್ರತಿಬಿಂಬಿಸುತ್ತವೆ. ‘ಎಲ್ಲಾ ಸರ್ಕಾರಿ ಪರೀಕ್ಷೆಗಳಿಗೆ ಹಾಜರಾಗುವುದು ಮೂರ್ಖತನದ ಕೆಲಸ ಎಂದು ಹೇಳಬಹುದು. ಅವರಿಗೆ ನಿರ್ಧಿಷ್ಟವಾದ ವಲಯ ಆಯ್ಕೆ ಮಾಡಿಕೊಳ್ಳುವ ಉತ್ಸಾಹ ಇಲ್ಲ ಎಂದು ತೋರುತ್ತದೆ’ ಎಂದು ಕಾಮೆಂಟ್ ಮಾಡಿದ್ದಾರೆ.

ಇದನ್ನೂ ಓದಿ: Keep Snakes Away: ನೀವು ಮಾಡುವ ಈ ಸಣ್ಣ ತಪ್ಪುಗಳಿಂದ ಹಾವುಗಳು ನಿಮ್ಮ ಮನೆ ಅಂಗಳಕ್ಕೆ ಬರಬಹುದು, ಹುಷಾರ್!

ಈ ರೀತಿ ಪದೇ ಪದೇ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿ ಸೇರದಿರಲು ನಿರ್ಧರಿಸಿದರೆ ಇತರ ಅಭ್ಯರ್ಥಿಗಳಿಗೆ ಅವಕಾಶಗಳು ಕಡಿಮೆಯಾಗುವ ಸಾಧ್ಯತೆಯ ಕುರಿತು ಇತರರು ಕಳವಳ ವ್ಯಕ್ತಪಡಿಸಿದ್ದಾರೆ. ಭಾರತದ ಸ್ಪರ್ಧಾತ್ಮಕ ನೇಮಕಾತಿ ಎಕೋಸಿಸ್ಟಮ್ ಬಗ್ಗೆ ಆಗಾಗ ಉಂಟಾಗುವ ಕಳವಳಗಳನ್ನು ಈ ಟೀಕೆ ಎತ್ತಿ ತೋರಿಸಿದೆ, ಅಲ್ಲಿ ಅಭ್ಯರ್ಥಿಗಳು ವಿವಿಧ ವೃತ್ತಿ ಆಯ್ಕೆಗಳನ್ನು ಮೌಲ್ಯಮಾಪನ ಮಾಡುವಾಗ ಏಕಕಾಲದಲ್ಲಿ ಬಹು ಪರೀಕ್ಷೆಗಳನ್ನು ಬರೆಯುತ್ತಾರೆ.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports