Last Updated:
ಜೂನ್ 1 ರಿಂದ ಬೆಂಗಳೂರು ಮಂಗಳೂರು ವಂದೇ ಭಾರತ್ ಟೆಸ್ಟಿಂಗ್ ಶುರು, ಸಕಲೇಶಪುರ ಸುಬ್ರಹ್ಮಣ್ಯ ಘಾಟ್ ವಿದ್ಯುದ್ದೀಕರಣಕ್ಕೆ ₹729 ಕೋಟಿ, 120 ಕಿ.ಮೀ ವೇಗ, ಪ್ರಯಾಣ 5 ಗಂಟೆಗೆ ಇಳಿಕೆ
ಬೆಂಗಳೂರು: ಶಿರಾಡಿ ಘಾಟ್ ಟ್ರಾಫಿಕ್, ಬಸ್ಸುಗಳ (Bus) 8-10 ಗಂಟೆಗಳ ಸುದೀರ್ಘ ಹಾಗೂ ಆಯಾಸದ ಪ್ರಯಾಣ, ಇವೆಲ್ಲದಕ್ಕೂ ಗುಡ್ ಬೈ ಹೇಳುವ ಟೈಂ ಬಂದೇ ಬಿಡ್ತು! ಹೌದು, ಕರಾವಳಿ (Coastal) ಹಾಗೂ ಬೆಂಗಳೂರು (Bengaluru) ಜನರ ಬಹುದಿನಗಳ ಕನಸಾದ ‘ಬೆಂಗಳೂರು-ಮಂಗಳೂರು ವಂದೇ ಭಾರತ್ ಎಕ್ಸ್ಪ್ರೆಸ್’ ಊಹಿಸಿದ್ದಕ್ಕಿಂತ ವೇಗವಾಗಿ ಟ್ರ್ಯಾಕ್ (Track) ಏರಲು ಸಜ್ಜಾಗಿದೆ. ಈ ಬಗ್ಗೆ ಇಲ್ಲಿದೆ ಕಂಪ್ಲೀಟ್ ರೋಚಕ ಡಿಟೇಲ್ಸ್!
ಕಳೆದ ಮೇ 23 ರಂದು ಮಂಗಳೂರಿಗೆ ಭೇಟಿ ನೀಡಿದ್ದ ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಅವರು, “ಜೂನ್ನಲ್ಲೇ ವಂದೇ ಭಾರತ್ ಓಡಿಸುತ್ತೇವೆ” ಎಂದು ಕೊಟ್ಟಿದ್ದ ಭರವಸೆ ಇದೀಗ ನಿಜವಾಗುತ್ತಿದೆ. ನೈಋತ್ಯ ರೈಲ್ವೆಯ ಮೈಸೂರು ವಿಭಾಗದ ಡಿಆರ್ಎಂ ಮುದಿತ್ ಮಿತ್ತಲ್ ಅವರ ಮಾಹಿತಿ ಪ್ರಕಾರ, ಜೂನ್ 1 ರಿಂದಲೇ ರೈಲ್ವೆ ಇಲಾಖೆಯ ಉನ್ನತ ತಂಡ (RDSO) ಈ ಮಾರ್ಗದಲ್ಲಿ ಹೈಟೆಕ್ ಪರೀಕ್ಷೆಗಳನ್ನು ಆರಂಭಿಸಲಿದೆ. ವಿವಿಧ ಲೋಡ್ಗಳನ್ನು ಹಾಕಿ ಒಂದು ವಾರಗಳ ಕಾಲ ನಡೆಯುವ ಈ ಟೆಸ್ಟಿಂಗ್ ಸಕ್ಸಸ್ ಆದ ಬೆನ್ನಲ್ಲೇ ‘ವಂದೇ ಭಾರತ್’ ಸಂಚಾರಕ್ಕೆ ಅಂತಿಮ ಗ್ರೀನ್ ಸಿಗ್ನಲ್ ಸಿಗಲಿದೆ!
ಮೈಸೂರು-ಹಾಸನ-ಮಂಗಳೂರು ಸೇರಿದಂತೆ ಒಟ್ಟು 400 ಕಿ.ಮೀ ಮಾರ್ಗದ ವಿದ್ಯುದ್ದೀಕರಣಕ್ಕೆ ಮೊದಲು 461 ಕೋಟಿ ರೂ. ಅಂದಾಜಿಸಲಾಗಿತ್ತು. ಆದರೆ, ಈ ಮಾರ್ಚ್ 2026 ರ ಹೊತ್ತಿಗೆ ಬರೋಬ್ಬರಿ ₹729.28 ಕೋಟಿ ವ್ಯಯಿಸಲಾಗಿದೆ! ಈ ಮಾರ್ಗದಲ್ಲಿ ಗರಿಷ್ಠ 120 ಕಿ.ಮೀ ವೇಗದಲ್ಲಿ ವಂದೇ ಭಾರತ್ ನುಗ್ಗಲು ಅನುಕೂಲವಾಗುವಂತೆ ಅತ್ಯಾಧುನಿಕ ಓವರ್ಹೆಡ್ ವೈಯರಿಂಗ್ (OHE) ಅಳವಡಿಸಲಾಗಿದೆ.
ಮೊದಲು ರಸ್ತೆ ಮಾರ್ಗದಲ್ಲಿ 8-10 ಗಂಟೆ ಬೇಕಿದ್ದ ಪ್ರಯಾಣ, ವಂದೇ ಭಾರತ್ ಮೂಲಕ ಕೇವಲ 5 ಗಂಟೆಗಳಲ್ಲಿ (ಅಂದಾಜು) ಪೂರ್ಣಗೊಳ್ಳಲಿದೆ, ಮುಂದಿನ ದಿನಗಳಲ್ಲಿ ಈ ವಂದೇ ಭಾರತ್ ರೈಲನ್ನು ಮಂಗಳೂರಿನಿಂದ ಗೋವಾದ (ಮಡ್ಗಾಂವ್) ವರೆಗೆ ವಿಸ್ತರಿಸುವ ಮೆಗಾ ಪ್ಲ್ಯಾನ್ ಕೂಡ ಇದೆ. ಉಡುಪಿ, ಕಾರವಾರ, ಮಂಗಳೂರು ಪ್ರವಾಸೋದ್ಯಮಕ್ಕೆ ಇದು ದೊಡ್ಡ ಬೂಸ್ಟರ್ ಡೋಸ್. ಜೊತೆಗೆ ಐಟಿ-ಬಿಟಿ ಮಂದಿಗೆ ವೀಕೆಂಡ್ ಟ್ರಿಪ್ಗೆ ಇದು ಹೇಳಿ ಮಾಡಿಸಿದಂತಿದೆ. ಡೀಸಲ್ ಬದಲು ಎಲೆಕ್ಟ್ರಿಕ್ ರೈಲು ಓಡುವುದರಿಂದ ಪರಿಸರಕ್ಕೂ ಲಾಭ.
ವಂದೇ ಭಾರತ್ ರೈಲಿಗೆ ಹೆಚ್ಚಿದೆ ಸೆನ್ಸೇಶನ್!
Dakshina Kannada,Karnataka













