ಗಣೇಶ್ ಪಕ್ಕಾ ಕೃಷ್ಣನೆ ಅನಿಸ್ತಿದ್ದಾರೆ. ಸಾತ್ವಿಕತೆಯನ್ನ ಅಭಿನಯದಲ್ಲಿ ತಂದಿದ್ದಾರೆ ಅನ್ನುವ ಫೀಲ್ ಬರುತ್ತದೆ. ಮಾಡರ್ನ್ ಕೃಷ್ಣ ಅನಿಸುತ್ತಾರೆ. ವಿ.ನಾಗೇಂದ್ರ ಪ್ರಸಾದ್ ಅವರು ಬರೆದ ‘ಒಂದೇ ಒಂದು’ ಹಾಡಿನಲ್ಲಿ ಮೇಲೆ ಹೇಳಿದ ಭಾವನೆ ಮೂಡುತ್ತದೆ.
“ಪ್ರತಿ ಹೆಜ್ಜೆಯಲ್ಲೂ ಶ್ರೀಕೃಷ್ಣನ ಸ್ಮರಣೆ”
(ಚಿತ್ರ ಕೃಪೆ: ಗೊಲ್ಡನ್ ಸ್ಟಾರ್ ಗಣೇಶ್ ಇನ್ಸ್ಟಾಗ್ರಾಮ್)
ಚಿತ್ರಕ್ಕೆ ಬೃಂದಾವಿಹಾರಿ ಅಂತಲೇ ಹೆಸರಿಟ್ಟಿದ್ದಾರೆ. ಹಾಗಾಗಿಯೇ ಚಿತ್ರದಲ್ಲಿ ಶ್ರೀ ಕೃಷ್ಣನ ಛಾಯೆ ಇದ್ದೇ ಇರುತ್ತದೆ. ಅದು ಗಣೇಶ್ ರೂಪದಲ್ಲೂ ಈಗ ಹೊಳೆಯುತ್ತಿದೆ.
ಬೃಂದಾವಿಹಾರಿ ಸಿನಿಮಾ ಇನ್ನೇನು ರಿಲೀಸ್ ಆಗುತ್ತಿದೆ. ಅಕ್ಟೋಬರ್-16 ರಂದು ರಿಲೀಸ್ ಆಗುತ್ತಿದೆ. ಇದರ ನಡುವೆ ಗಣೇಶ್ ಒಂದು ಕೆಲಸ ಮಾಡಿದ್ದಾರೆ.
ಶ್ರೀಕೃಷ್ಣನ ಲೀಲಾಭೂಮಿ ಬೃಂದಾವನಕ್ಕೆ ಭೇಟಿ ನೀಡಿ, ಗೋವರ್ಧನಗಿರಿಯ ಪರಿಕ್ರಮ ಮಾಡಿದ್ದು ನನ್ನ ಮನಸ್ಸಿಗೆ ಅಪಾರ ಆನಂದ ಕೊಟ್ಟಿತು.
ಪ್ರತಿ ಹೆಜ್ಜೆಯಲ್ಲೂ ಕೃಷ್ಣನನ್ನು ಸ್ಮರಿಸುತ್ತಾ ಸಾಗಿದ ಈ ಯಾತ್ರೆ ಸದಾ ಮನಸ್ಸಿನಲ್ಲಿ ಉಳಿಯಲಿದೆ. ಎಲ್ಲವೂ ಅವನ ಕೃಪೆ ಜೈ ಶ್ರೀ ರಾಧೇ ಕೃಷ್ಣ ಅಂತಲೇ ಗಣೇಶ್ ಬರೆದುಕೊಂಡಿದ್ದಾರೆ.
ಗಣೇಶ್ ಅವರು ತಮ್ಮ ಈ ವಿಶೇಷ ಯಾತ್ರೆಯ ಒಂದು ವಿಡಿಯೋ ಕೂಡ ಹಂಚಿಕೊಂಡಿದ್ದಾರೆ. ಬೃಂದಾವನ ಮತ್ತು ಗೋವರ್ಧನಗಿರಿಯ ಕ್ಷಣದ ಚಿತ್ರಣವು ಈ ವಿಡಿಯೋದಲ್ಲಿ ಕಾಣಿಸುತ್ತದೆ.
ಗಣೇಶ್ ಈ ಸಲ ತಮ್ಮ ಅಭಿಮಾನಿಗಳಿಗೆ ವಿಶೇಷ ಅನುಭವ ಕೊಡಲಿದ್ದಾರೆ. ಬೃಂದಾವಿಹಾರಿ ಚಿತ್ರ ಆ ರೀತಿನೇ ಇದೆ. ಡೈರೆಕ್ಟರ್ ಶ್ರೀನಿವಾಸ್ ರಾಜು ಈ ಚಿತ್ರ ಮಾಡಿ ತೃಪ್ತರಾಗಿದ್ದಾರೆ.
ಬೃಂದಾವನ ವಿಶೇಷ ಅನುಭವ ಹಂಚಿಕೊಂಡ ಗೋಲ್ಡನ್ ಸ್ಟಾರ್ ಗಣೇಶ್!
(ಚಿತ್ರ ಕೃಪೆ: ಗೊಲ್ಡನ್ ಸ್ಟಾರ್ ಗಣೇಶ್ ಇನ್ಸ್ಟಾಗ್ರಾಮ್)
ಇನ್ನು ಇವರ ಜೊತೆಗೆ ಬೇರೆ ಚಿತ್ರ ಮಾಡದೇ ಇದ್ದರು ಪರವಾಗಿಲ್ಲ. ಅಷ್ಟು ತೃಪ್ತಿ ಈ ಚಿತ್ರದ ಕೆಲಸದಲ್ಲಿ ಸಿಕ್ಕಿದೆ ಅಂತಲೇ ಹೇಳಿದ್ದಾರೆ.
ಬೃಂದಾವಿಹಾರಿ ಸಿನಿಮಾದಲ್ಲಿ ಇಬ್ಬರು ನಾಯಕಿಯರು ಇದ್ದಾರೆ. ದೇವಿಕಾ ಭಟ್ ಹಾಗೂ ಮಾಳವಿಕಾ ಶರ್ಮಾ ಈ ಚಿತ್ರದಲ್ಲಿ ನಟಿಸಿದ್ದಾರೆ.
ಈ ಚಿತ್ರ ಈಗಾಗಲೇ ಹೇಳಿದಂತೆ ಅಕ್ಟೋಬರ್-16 ರಂದು ರಿಲೀಸ್ ಆಗುತ್ತಿದೆ. ದೊಡ್ಡ ಮಟ್ಟದಲ್ಲಿಯೇ ಈ ಚಿತ್ರವನ್ನ ರಿಲೀಸ್ ಮಾಡುವ ಪ್ಲಾನ್ ಕೂಡ ಚಿತ್ರ ತಂಡಕ್ಕೆ ಇದೆ.
ಈ ಚಿತ್ರದ ಹಾಡುಗಳು ಮೋಡಿ ಮಾಡುತ್ತಿವೆ. ಗಣೇಶ್ ಚಿತ್ರ ಜೀವನದಲ್ಲಿ ಈ ಸಿನಿಮಾ ಮತ್ತೊಂದು ಗೆಲುವಿನ ಭರವಸೆ ಮೂಡಿಸಿದೆ.
ಶ್ರೀನಿವಾಸ್ ರಾಜು ಅವರ ಜೊತೆಗಿನ ಈ ಹಿಂದಿನ ಕೃಷ್ಣಂ ಪ್ರಣಯ ಸಖಿ ಚಿತ್ರದ ಹಾಡು ಹಿಟ್ ಆಗಿದ್ದವು. ಸಿನಿಮಾ ಕೂಡ ಹಿಟ್ ಆಗಿತ್ತು ಅಂತ ಹೇಳಬಹುದು.













