Last Updated:
ಗಿಲ್ಲಿ ನಟನ ಪಳಾರ್ ಚಿತ್ರಕ್ಕೆ ಯಾರು ನಾಯಕಿ? ಕಾವ್ಯ ಶೈವನಾ? ಶ್ರೀಲೀಲಾನಾ? ಈ ಪ್ರಶ್ನೆಗೆ ಗಿಲ್ಲಿ ನಟ ಉತ್ತರ ಕೊಟ್ಟಿದ್ದಾರೆ. ಅದೇನು ಅನ್ನೋದು ಇಲ್ಲಿದೆ ಓದಿ.
ಗಿಲ್ಲಿ ನಟನ ಪಳಾರ್ (Palar Movie) ಟೈಟಲ್ನ ಅರ್ಥ ಏನು? ಇದನ್ನ ಕೊಟ್ಟವರು ಯಾರು? ಗಿಲ್ಲಿ ನಟ ಹೇಳೋದು ಏನು? ಈ ಚಿತ್ರದ ನಾಯಕಿ ಯಾರು? ಕಾವ್ಯ ಶೈವಾನೇನಾ (Kavya Shaiva) ಇಲ್ಲ ಶ್ರೀಲೀಲಾನಾ? (Sreeleela) ಈ ಎಲ್ಲ ಕುತೂಹಲಕ್ಕೆ ಸ್ವತಃ ಗಿಲ್ಲಿ ನಟ ಉತ್ತರ ಕೊಟ್ಟಿದ್ದಾರೆ. ಪಳಾರ್ ಚಿತ್ರದ (Palar Film) ಮುಹೂರ್ತದ ದಿನವೇ ಗಿಲ್ಲಿ ನಟ ಈ ಎಲ್ಲ ವಿಚಾರವನ್ನ ಹಂಚಿಕೊಂಡಿದ್ದಾರೆ. ಇದರ ಕಂಪ್ಲೀಟ್ ಡಿಟೈಲ್ಸ್ ಇಲ್ಲಿದೆ ಓದಿ.
ಚಿತ್ರಕ್ಕೆ ನಾಯಕಿ ಯಾರು
ಬಿಗ್ ಬಾಸ್ ಮನೆಯಲ್ಲಿದ್ದಾಗಲೆ ಗಿಲ್ಲಿ ಪಳಾರ್ ಅಂತ ಹೇಳಿರೋದು ಇದೆ. ಅದನ್ನೆ ಅದ್ಯಾರೋ ಅಭಿಮಾನಿ ನೆನಪಿಟ್ಟುಕೊಂಡಿದ್ದಾರೆ. ಗಿಲ್ಲಿ ನಟ ದೊಡ್ಮನೆಯಿಂದ ಹೊರ ಬಂದ್ಮಲೇ ಪಳಾರ್ ಗಿಲ್ಲಿ ಅಂತ ಬರೆದಿರೋ ಫೋಟೋ ಫ್ರೇಮ್ ಕೊಟ್ಟಿದ್ದಾರೆ. ಅದು ಇಂದಿಗೂ ಗಿಲ್ಲಿ ಆಫೀಸ್ ಅಲ್ಲಿದೆ.
ಆಫೀಸ್ ಅಲ್ಲಿರೋ ಆ ಫೋಟೋದ ಹೆಸರನ್ನೆ ಚಿತ್ರಕ್ಕೆ ಇಟ್ಟಿದ್ದಾರೆ. ಪಳಾರ್ ಅನ್ನೋದು ಈ ಚಿತ್ರಕ್ಕೆ ಇಟ್ಟ ಫೈನಲ್ ಟೈಟಲ್ ಆಗಿದೆ. ಚಿತ್ರದ ಪೋಸ್ಟರ್ ಅಲ್ಲೂ ಇದೇ ಟೈಟಲ್ ಇದೆ.
ಪಳಾರ್ ಚಿತ್ರದ ಮೂಲಕವೇ ಗಿಲ್ಲಿ ನಟ ನಾಯಕನಾಗುತ್ತಿದ್ದಾರೆ. ಈ ಒಂದು ಚಿತ್ರವನ್ನ ಚಂದ್ರಮೋಹನ್ ಡೈರೆಕ್ಷನ್ ಮಾಡುತ್ತಿದ್ದಾರೆ.
ಈ ಚಿತ್ರವನ್ನ ನವೀನ್ ಗೌಡ ಮತ್ತು ಸುಪ್ರೀತ್ ನಿರ್ಮಾಣ ಮಾಡುತ್ತಿದ್ದಾರೆ. ಕೆವಿಎನ್ ಈ ಚಿತ್ರವನ್ನ ಪ್ರಸೆಂಟ್ ಮಾಡ್ತಿದೆ. ಇದರ ಹೊರತಾಗಿ ಈ ಚಿತ್ರದ ನಾಯಕಿ ಯಾರು ಅನ್ನುವ ಪ್ರಶ್ನೆ ಇದೆ.
ಆ ಸೀಕ್ರೆಟ್ ಹಾಗೆ ಇರಲಿ
ಮುಹೂರ್ತದ ಮುಂಚೆ ಬಿಟ್ಟಿದ್ದ ಪ್ರೋಮೋದಲ್ಲಿ ಶ್ರೀಲೀಲಾ ಫೋಟೋ ಇತ್ತು. ಆದರೆ, ಈ ನಟಿ ನಮ್ಮ ಚಿತ್ರದ ನಾಯಕಿ ಅಲ್ಲ ಬಿಡಿ ಅಂತ ಡೈರೆಕ್ಟರ್ ಚಂದ್ರಮೋಹನ್ ಕೂಡ ಹೇಳಿಕೊಂಡಿದ್ದಾರೆ.
ಈ ಪಳಾರ್ ಚಿತ್ರದಲ್ಲಿ ಕಾವ್ಯ ಶೈವ ಮತ್ತು ಗಿಲ್ಲಿ ನಟ ಜೋಡಿ ಆಗ್ತಾರಾ? ಇವರೇ ಈ ಚಿತ್ರದ ಹೀರೋ ಮತ್ತು ಹೀರೋಯಿನ್ನಾ ಅನ್ನುವ ಪ್ರಶ್ನೆ ಕೂಡ ಮುಹೂರ್ತದ ದಿನ ನಡೆದ ಪ್ರೆಸ್ ಮೀಟ್ ಅಲ್ಲಿ ಪತ್ರಕರ್ತರು ಕೇಳಿದ್ದಾರೆ.
ಪಳಾರ್ ಚಿತ್ರದ ನಾಯಕಿಯ ವಿಚಾರ ಸೀಕ್ರೆಟ್ ಆಗಿಯೇ ಇರಲಿ ಬಿಡಿ. ಅದು ಯಾರು ಅನ್ನೊದನ್ನ ಹೇಳ್ತೀವಿ. ಸದ್ಯಕ್ಕೆ ಯಾರು ಅನ್ನೋದು ಫೈನಲ್ ಆಗಿಲ್ಲ.
ಆದರೆ, ಈ ಚಿತ್ರಕ್ಕೆ ಕಾವ್ಯ ಶೈವ ನಾಯಕಿ ಅಲ್ಲ ಅನ್ನೋದನ್ನ ಗಿಲ್ಲಿ ನಟ ಹೇಳಿದ್ದಾರೆ. ಆದರೆ, ಡೈರೆಕ್ಟರ್ ಚಂದ್ರಮೋಹನ್ ಈ ವಿಚಾರದಲ್ಲಿ ಸೈಲೆಂಟ್ ಆಗಿಯೇ ಇದ್ದರು.
ಅಂದ್ರೆ ಕಾವ್ಯ ಆದ್ರೂ ಆಗಬಹುದು ಅಂತಲೇ ಗೆಸ್ ಮಾಡಬಹುದು. ಆ ರೀತಿನೇ ಇವರ ಎಕ್ಸಪ್ರೆಷನ್ ಇತ್ತು. ಒಟ್ಟಾರೆ, ಈ ಒಂದು ಪಳಾರ್ ಚಿತ್ರ ಲಾಂಚ್ ಆಗಿದೆ. ನಾಯಕಿ ಯಾರು ಅನ್ನುವ ಕುತೂಹಲವೂ ಹೆಚ್ಚಾಗಿದೆ ಅಂತ ಹೇಳಬಹುದು.
Bangalore [Bangalore],Bangalore,Karnataka













